ಎಲ್‌ಐಸಿ ಶಾಖೆಯ ಪ್ರತಿನಿಧಿಗಳಿಂದ ಗುರುವಂದನಾ ಕಾರ್ಯಕ್ರಮ

LIC Sidlaghatta Service Retirement Felicitation Guruvandana Program Farewell

ನಗರದ ಶ್ರೀ ವೇಣುಗೋಪಾಲ ಸ್ವಾಮಿ ದೇವಾಯದ ಆವರಣದಲ್ಲಿ ಭಾನುವಾರ ಎಲ್‌ಐಸಿ ಶಿಡ್ಲಘಟ್ಟ ಶಾಖೆಯ ಪ್ರತಿನಿಧಿಗಳಿಂದ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಎಲ್‌ಐಸಿಯ ಚಿಂತಾಮಣಿ ವಿಭಾಗದ ಅಭಿವೃದ್ದಿ ಅಧಿಕಾರಿ ಎಚ್.ಜಿ.ಮೋಹನ್‌ದಾಸ್ ಅವರು ಯಾವುದೇ ಒಂದು ಕೆಲಸದಲ್ಲಿ ಮೊದಲು ಶ್ರದ್ದೆ ಇರಬೇಕು ಮತ್ತು ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸಿದಾಗ ಪ್ರತಿಫಲ ಅದಾಗಿಯೇ ಬರುತ್ತದೆ ಎಂದರು.

ಸಮಾಜದಲ್ಲಿರುವ ಜನರಿಗೆ ಜೀವ ವಿಮೆ ಕಲ್ಪಿಸುವ ಜೊತೆಗೆ ಭ್ರಷ್ಟಚಾರ ರಹಿತ ವ್ಯವಸ್ಥೆಯಿರುವ ಏಕೈಕ ಸಂಸ್ಥೆಯೆಂದರೆ ಅದು ಭಾರತೀಯ ಜೀವ ವಿಮಾ ಸಂಸ್ಥೆ ಎಂದು ಅವರು ಹೇಳಿದರು.

 ಮನುಷ್ಯ ತನ್ನ ಜೀವನದಲ್ಲಿ ಸಂಪಾದನೆ ಮಾಡಲು ಹೇಗೆ ಆಸಕ್ತಿ ವಹಿಸುತ್ತಾನೋ ಅದರಂತೆಯೇ ಆತನನ್ನು ನಂಬಿಕೊಂಡಿರುವ ಸದಸ್ಯರ ಹಿತವನ್ನು ಸಹ ಕಾಪಾಡುವ ಜವಾಬ್ದಾರಿಯನ್ನು ಹೊಂದಿರುತ್ತಾನೆ. ಹೀಗಾಗಿ ಜೀವನದಲ್ಲಿ ಸಂಪಾದನೆ ಮಾಡುವ ಜೊತೆಗೆ ಜೀವ ವಿಮೆಯನ್ನು ಮಾಡಿಕೊಳ್ಳುವ ನಿಟ್ಟಿನಲ್ಲಿ ಆಸಕ್ತಿ ವಹಿಸಬೇಕಾಗಿದೆ ಇದರಿಂದ ಭವಿಷ್ಯದಲ್ಲಿ ಬಹಳ ಅನುಕೂಲಗಳು ಆಗುತ್ತದೆ ಎಂದರು.

 ಪ್ರತಿಯೊಂದು ಕ್ಷೇತ್ರದಲ್ಲಿ ಭ್ರಷ್ಟಚಾರ ತಾಂಡವಾಡುತ್ತಿದೆ ಆದರೆ ಎಲ್‌ಐಸಿ ಸಂಸ್ಥೆಯಲ್ಲಿ ಮಾತ್ರ ಜನರ ಆರೋಗ್ಯ ವಿಮೆ ಸೇವೆ ಒದಗಿಸುವ ಜೊತೆಗೆ ಪಾರದರ್ಶಕ ವ್ಯವಸ್ಥೆಯ ಮೂಲಕ ಭ್ರಷ್ಟಚಾರ ರಹಿತ ವ್ಯವಸ್ಥೆ ಇರುವ ಸಂಸ್ಥೆ ಎಂದರೆ ತಪ್ಪಾಗಲಾರದು. ನಾಗರಿಕರು ಉತ್ತಮ ಆರೋಗ್ಯ ಮತ್ತು ಭವಿಷ್ಯದ ಹಿತ ದೃಷ್ಟಿಯಿಂದ ಎಲ್‌ಐಸಿಯಲ್ಲಿ ವಿಮೆ ಮಾಡಿಸಿಕೊಂಡು ನೆಮ್ಮದಿಯ ಜೀವನ ನಡೆಸಬೇಕೆಂದು ಕರೆ ನೀಡಿದರು.

 ಚಿಂತಾಮಣಿ ವಿಭಾಗದಲ್ಲಿ ಎಲ್‌ಐಸಿಯ ಅಭಿವೃದ್ದಿ ಅಧಿಕಾರಿಯಾಗಿ 31 ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿ ಈ ತಿಂಗಳು 30 ರಂದು ನಿವೃತ್ತಿ ಆಗುತ್ತಿರುವ ಹೆಚ್‌ಜಿ ಮೋಹನ್‌ದಾಸ್ ಅವರನ್ನು ಎಲ್‌ಐಸಿಯ ಪ್ರತಿನಿಧಿಗಳು ಸನ್ಮಾನಿಸಿ ಗೌರವಿಸಿದರು. ಈ ಸಂಧರ್ಭದಲ್ಲಿ ಅವರ ಪತ್ನಿ ನಳಿನಾಕ್ಷಿ ಮಗ ವಿಜಯ್ ಉಪಸ್ಥಿತರಿದ್ದರು.

 ಕಾರ್ಯಕ್ರಮದಲ್ಲಿ ಎಲ್‌ಐಸಿ ಅಭಿವೃದ್ದಿ ಅಧಿಕಾರಿಗಳ ಸಂಘದ ಅಧ್ಯಕ್ಷ ಶ್ರೀನಿವಾಸ್, ಪದಾಧಿಕಾರಿಗಳಾದ ಅಶೋಕ್‌ಕುಮಾರ್, ಶಿವಕುಮಾರ್, ನರಸಿಂಹ, ಎಲ್‌ಐಸಿಯ ಶಾಖಾ ವ್ಯವಸ್ಥಾಪಕ ರಮೇಶ್, ಎಲ್‌ಐಸಿ ಪ್ರತಿನಿಧಿಗಳಾದ ಕೆಎಸ್ ಕನಕಪ್ರಸಾದ್, ನಾರಾಯಣಸ್ವಾಮಿ (ನಾಣಿ), ಸಾಬೀರ್, ಎಂ.ಎಸ್.ನಾಗರಾಜ್, ತಮ್ಮಣ್ಣ, ವೇಣು, ಜಯಂತಿ ಗ್ರಾಮ ದೇವು, ನಾಗರಾಜ್‌ರಾವ್, ರಾಮುಸ್ವಾಮಿ ಭಟ್ಟಚಾರಿ, ಸತೀಶ್, ರಮೇಶ್‌ಬಾಬು, ಚನ್ನಕೃಷ್ಣಪ್ಪ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!