Home Blog Page 308

Sidlaghatta Cocoon Market Watch – 13/10/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 13/10/2020

CB Lots: 417
Qty: 20802 Kgs
Max: 325
Min: 230
Avg: 279
BV Lots: 02
Qty: 126 Kgs
Max: 270
Min: 270
Avg: 270
 

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ (12/10/2020)

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಶಾಸಕ ವಿ.ಮುನಿಯಪ್ಪನವರು ಗುಣಮುಖರಾಗಲು ಕೋರಿ ವಿಶೇಷ ಪೂಜೆ

0

ಶಿಡ್ಲಘಟ್ಟ ಕ್ಷೇತ್ರದ ಶಾಸಕ ವಿ.ಮುನಿಯಪ್ಪನವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದ್ದು ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಅವರ ಅಭಿಮಾನಿಗಳು ಯಾರೂ ಆತಂಕ ಪಡುವುದು ಬೇಡಮುಂದಿನ ಕೆಲವೇ ದಿನಗಳಲ್ಲಿ ಕ್ಷೇತ್ರದಲ್ಲಿ ಸಂಚರಿಸಿ ಜನಸೇವೆ ಮಾಡಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಲ್.ಮಧುಸೂದನ್ ಹೇಳಿದರು.
ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯ ಹಾಗೂ ಶ್ರೀ ಸಾಯಿನಾಥ ಮಂದಿರದಲ್ಲಿ ಸೋಮವಾರ ವಿ.ಮುನಿಯಪ್ಪ ಅಭಿಮಾನಿಗಳ ಬಳಗ ಹಾಗೂ ಶ್ರೀ ವೇಣುಗೋಪಾಲಸ್ವಾಮಿ ಸೇವಾ ಮತ್ತು ಅಭಿವೃದ್ಧಿ ಟ್ರಸ್ಟ್ ನ ಪದಾಧಿಕಾರಿಗಳಿಂದ ಶಾಸಕ ವಿ.ಮುನಿಯಪ್ಪ ಚೇತರಿಕೆಗಾಗಿ ಏರ್ಪಡಿಸಲಾಗಿದ್ದ ಪೂಜೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಳೆದ ಕೆಲ ದಿನಗಳ ಹಿಂದೆ ನಮ್ಮ ಜನಪ್ರಿಯ ಶಾಸಕ ವಿ.ಮುನಿಯಪ್ಪ ಅನಾರೋಗ್ಯಕ್ಕೆ ತುತ್ತಾಗಿದ್ದು ಇದೀಗ ಚೇತರಿಕೆ ಕಂಡಿದೆ. ವಯೋಸಹಜ ಕಾರಣದಿಂದ ಸ್ವಲ್ಪ ಸುಸ್ತು ಇರುವುದರಿಂದ ಮತ್ತೆರಡು ದಿನಗಳ ವಿಶ್ರಾಂತಿ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಶಾಸಕರು ಕ್ಷೇತ್ರದಾಧ್ಯಂತ ಸಂಚರಿಸಿ ಜನಸೇವೆ ಆರಂಬಿಸಲಿದ್ದಾರೆ, ಹಾಗಾಗಿ ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಅವರ ಅಭಿಮಾನಿಗಳು ಆತಂಕಗೊಳ್ಳುವುದು ಬೇಡ ಎಂದರು.
ಶಾಸಕ ವಿ.ಮುನಿಯಪ್ಪ ಬೇಗ ಗುಣಮುಖರಾಗಿ ಎಂದಿನಂತೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಅವರ ಅಭಿಮಾನಿಗಳು ಸೇರಿದಂತೆ ಕಾರ್ಯಕರ್ತರು ಪ್ರಾರ್ಥಿಸಿ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀ ವೇಣುಗೋಪಾಲಸ್ವಾಮಿ ಸೇವಾ ಮತ್ತು ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷ ಬಿ.ಪಿ.ರಾಘವೇಂದ್ರ, ಪದಾಧಿಕಾರಿಗಳಾದ ಶ್ರೀನಾಥ್, ವಿ.ಮುನಿಯಪ್ಪ ಅಭಿಮಾನ ಬಳಗದ ಹಫೀಜ್‌ಪಾಷ, ಕೆ.ಎನ್.ಮುನೀಂದ್ರ, ನಿರಂಜನ್, ಮನೋಹರ್,  ಸಾದಿಕ್, ಮಂಜುನಾಥ್ ಹಾಜರಿದ್ದರು.

ಬಿಜೆಪಿ ನಗರ ಮಂಡಲ ವತಿಯಿಂದ ಚುನಾವಣಾ ಪೂರ್ವಭಾವಿ ಸಭೆ

0

ನಗರದ ಎಸ್.ಎಲ್.ಎನ್ ಪ್ಲಾಜಾದಲ್ಲಿ ಬಿಜೆಪಿ ನಗರ ಮಂಡಲ ವತಿಯಿಂದ ಏರ್ಪಡಿಸಲಾಗಿದ್ದ ಚುನಾವಣಾ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಬಿಜೆಪಿ ನಗರ ಮಂಡಲಾಧ್ಯಕ್ಷ ಎಸ್.ರಾಘವೇಂದ್ರ ಮಾತನಾಡಿದರು.
ಅಕ್ಟೋಬರ್ 28 ರಂದು ನಡೆಯಲಿರುವ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಚಿದಾನಂದಗೌಡರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಎಲ್ಲಾ ಕಾರ್ಯಕರ್ತರು ಶ್ರಮಿಸಬೇಕು ಎಂದು ಅವರು ಹೇಳಿದರು.
ಬಿಜೆಪಿಯಲ್ಲಿ ಯಾರು ಯಾರಿಗೂ ನಾಯಕರಲ್ಲ. ಪ್ರತಿಯೊಬ್ಬ ಕಾರ್ಯಕರ್ತರು ಇಲ್ಲಿ ನಾಯಕರೇ ಎಂಬ ಮನೋಭಾವನೆಯಲ್ಲಿ ದುಡಿಯಬೇಕು. ವಿಶೇಷವಾಗಿ ಇತ್ತೀಚೆಗಷ್ಟೇ ಆಯ್ಕೆಯಾಗಿರುವ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಸೇರಿದಂತೆ ನಗರ ಮಂಡಲದ ಪದಾಧಿಕಾರಿಗಳಿಗೆ ಇದು ಮೊದಲ ಚುನಾವಣೆಯಾಗಿದ್ದು ಪ್ರತಿಯೊಬ್ಬರೂ 50 ಜನ ಪದವೀಧರ ಮತದಾರರ ನಿರಂತರ ಸಂಪರ್ಕ ಸಾಧಿಸುವ ಜೊತೆಗೆ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ಎಂದರು.
ಸಭೆಗೂ ಮುನ್ನ ಇತ್ತೀಚೆಗಷ್ಟೇ ನಿಧನ ಹೊಂದಿದ ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ರಾಮ್ ವಿಲಾಸ್ ಪಾಸ್ವಾನ್ ರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಬಿಜೆಪಿ ಜಿಲ್ಲಾ ವಕ್ತಾರ ರಮೇಶ್ ಬಾಯರಿಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಸಿ.ನಂದೀಶ್ನಗರ ಮಂಡಲದ ಉಪಾಧ್ಯಕ್ಷ ಮಧುಕಾರ್ಯದರ್ಶಿಗಳಾದ ದೇವರಾಜ್ಮುಕೇಶ್ಸೇರಿದಂತೆ ವಿವಿಧ ಮೋರ್ಚಾ ಪದಾಧಿಕಾರಿಗಳು ಹಾಜರಿದ್ದರು.

Sidlaghatta Cocoon Market Watch – 12/10/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 12/10/2020

CB Lots: 490
Qty: 26400 Kgs
Max: 325
Min: 192
Avg: 279
BV Lots: 03
Qty:118 Kgs
Max: 297
Min: 277
Avg: 287
 

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ (11/10/2020)

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ನೀರಿನ ಸಮಸ್ಯೆಗೆ ಮಳೆಯ ಪರಿಹಾರ – ತುಂಬುತ್ತಿವೆ ತಾಲ್ಲೂಕಿನ ಕೆರೆಗಳು

0

ಯಾವುದೇ ನದಿ ನಾಲೆಗಳ ಆಸರೆಯಿಲ್ಲದ ಶಿಡ್ಲಘಟ್ಟ ತಾಲ್ಲೂಕಿನ ರೈತರು ಕೆರೆಗಳೇ ಜಲದ ಮೂಲಗಳು. ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗಿರುವುದರಿಂದ ತಾಲ್ಲೂಕಿನ ಹಲವು ಕೆರೆಗಳಲ್ಲಿ ನೀರು ತುಂಬಿಕೊಂಡಿದ್ದು, ರೈತರ ಮೊಗದಲ್ಲಿ ಮಂದಹಾಸವನ್ನು ತಂದಿದೆ.

 ಕೆರೆಗಳಲ್ಲಿ ನೀರು ಶೇಖರಣೆಯಾಗುವುದರಿಂದ ಸುತ್ತಲಿನ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಅಂತರ್ಜಲ ವೃದ್ಧಿಸುತ್ತದೆ. ತಾಲ್ಲೂಕಿನ ಅತಿದೊಡ್ಡ ಕೆರೆಗಳಾದ ರಾಮಸಮುದ್ರ ಕೆರೆ ಮತ್ತು ತಲಕಾಯಲಬೆಟ್ಟದ ವೆಂಕಟೇಶಸಾಗರ ಕೆರೆಯಲ್ಲಿ ನೀರು ತುಂಬಿಕೊಂಡಿದ್ದರೆ, ಗಂಜಿಗುಂಟೆ ಗ್ರಾಮ ಪಂಚಾಯಿತಿಯ ರೆಡ್ಡಿ ಕೆರೆ ತುಂಬಿ ಕೋಡಿ ಹರಿದಿದೆ. ರಾಮಸಮುದ್ರ ಕೆರೆಯ ನೀರನ್ನು ಕುಡಿಯುವ ನೀರಿಗಾಗಿ ಬಳಸುವ ಯೋಜನೆ ಇನ್ನೂ ಕುಂಟುತ್ತಿದೆ.

 ಬೆಂಗಳೂರು ನಗರದ ಹೆಬ್ಬಾಳ ಮತ್ತು ನಾಗವಾರ ಕೆರೆಗಳಿಂದ ಶುದ್ಧೀಕರಿಸಿದ ನೀರು ಜಿಲ್ಲೆಯ 44 ಕೆರೆಗಳಿಗೆ ಹರಿಸುವ ಎಚ್.ಎನ್.ವ್ಯಾಲಿ ಯೋಜನೆ ಪ್ರಗತಿಯಲ್ಲಿದ್ದು, ಜಿಲ್ಲೆಯ 16 ಕೆರೆಗಳು ಭಾಗಶಃ ತುಂಬಿದ್ದು, ತಾಲ್ಲೂಕಿನ ಕೆಲವು ಕೆರೆಗಳು ಈ ನೀರಿಗಾಗಿ ಎದುರುನೋಡುತ್ತಿವೆ.

 ಕೇಂದ್ರ ಸರ್ಕಾರದ ಅಟಲ್ ಭೂ ಜಲ ಯೋಜನೆಯಡಿ ತಾಲ್ಲೂಕಿನ ಕೆರೆಗಳ ಮರುಜೀವ ನೀಡುವ ಯೋಜನೆ ಸಹ ಪ್ರಗತಿಯಲ್ಲಿದೆ. ನರೇಗಾ ಯೋಜನೆಯಡಿ ಪುನರುಜ್ಜೀವಗೊಂಡಿರುವ ತಾಲ್ಲೂಕಿನ ಕಲ್ಯಾಣಿಗಳು, ನೀರಿನ ಹೊಂಡ, ಕುಂಟೆ, ಚೆಕ್ ಡ್ಯಾಮ್, ಗೋಕುಂಟೆಗಳಲ್ಲಿ ಮುಂತಾದವುಗಳಲ್ಲಿ ಜಲಮರುಪೂರಣಗೊಳ್ಳುತ್ತಿದೆ. ವಿವಿಧ ಸರ್ಕಾರಿ ಕಟ್ಟಡಗಳಿಗೆ ಅಳವಡಿಸಿರುವ ಮಳೆ ಕೊಯ್ಲು ಸಹ ನೀರು ಸಂಗ್ರಹಣೆಯಲ್ಲಿ ಮುಂದಿದೆ.

  “ಶಿಡ್ಲಘಟ್ಟ ತಾಲ್ಲೂಕಿನ 203 ಕೆರೆಗಳನ್ನು ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದಿಂದ ನಿರ್ವಹಣೆ ಮಾಡಲಾಗುತ್ತಿದೆ. ಇವುಗಳ ಅಚ್ಚುಕಟ್ಟು ಪ್ರದೇಶ 3,406 ಎಕರೆಯಷ್ಟಿದೆ. ನಮ್ಮಲ್ಲಿ ಬಿದ್ದ ಮಳೆನೀರನ್ನು ನಾವು ಸಂಗ್ರಹಿಸುವ ಸಾಮರ್ಥ್ಯವನ್ನು ನಮ್ಮ ಜಲಮೂಲಗಳಿಗೆ ನೀಡಿದರೆ ಸಾಕು. ಅದು ನಮ್ಮನ್ನು ವರ್ಷ ಪೂರಾ ಸಲಹುತ್ತದೆ” ಎಂದು ತಾಲ್ಲೂಕು ಪಂಚಾಯಿತಿ ಇಒ ಶಿವಕುಮಾರ್ ತಿಳಿಸಿದರು.

ವಿಶ್ವ ಹೆಣ್ಣು ಮಕ್ಕಳ ದಿನಾಚರಣೆ

0

ಶಿಡ್ಲಘಟ್ಟ ತಾಲ್ಲೂಕಿನ ಕಂಬಾಲಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ಚೈಲ್ಡ್ ರೈಟ್ಸ್ ಟ್ರಸ್ಟ್, ಇಂಡಿಯಾ ಲಿಟ್ರಸಿ ಪ್ರಾಜೆಕ್ಟ್, ಟೆರೆಸ್ಡೇಸ್ ನೆದರ್ಲ್ಯಾಂಡ್ಸ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಕ್ಕಳ ಪ್ರತಿನಿಧಿ ಮೋನಿಕಾ ಮಾತನಾಡಿದರು.

ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಸಮಾನತೆ ಸಿಗಬೇಕಾದಲ್ಲಿ ಹೆಣ್ಣು ಮಕ್ಕಳ ಬಾಲ್ಯವಿವಾಹ, ಸಾಗಾಣಿಕೆ ಮತ್ತು ಲೈಂಗಿಕ ಶೋಷಣೆ ಮುಂತಾದ ದೌರ್ಜನ್ಯಗಳು ನಿಲ್ಲಲೇಬೇಕು ಎಂದು ಅವರು ಅಭಿಪ್ರಾಯಪಟ್ಟರು.

 ಹೆಣ್ಣು ಮಕ್ಕಳಿಗೆ ಸಮಾನ ಶಿಕ್ಷಣ, ಜೀವನ ಕೌಶಲ್ಯಗಳು ಸಿಗಬೇಕು ಮತ್ತು ಹೆಣ್ಣು ಮಕ್ಕಳ ವಿಚಾರಗಳ ಬಗ್ಗೆ ಗಂಡು ಮಕ್ಕಳಲ್ಲಿ ಅರಿವು ಮೂಡಿಸುವ ಪ್ರಯತ್ನ ಸಮುದಾಯ ಮತ್ತು ಸರ್ಕಾರಗಳ ಆದ್ಯ ಕರ್ತವ್ಯವಾಗಿದೆ ಎಂದು ನುಡಿದರು.

 ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮಿ ಬಾಲ್ಯವಿವಾಹದಿಂದ ಆಗುವ ದೈಹಿಕ ಮತ್ತು ಮಾನಸಿಕ ತೊಂದರೆ ಕುರಿತು ಹಾಗೂ ಆಶಾ ಕಾರ್ಯಕರ್ತೆ ಶೈಲಾ ಹೆಣ್ಣು ಮಕ್ಕಳ ಮುಟ್ಟು ಮತ್ತು ಲೈಂಗಿಕ ಆರೋಗ್ಯ ರಕ್ಷಣೆ ಕುರಿತು ಮಾಹಿತಿ ನೀಡಿದರು.

 ಚೈಲ್ಡ್ ರೈಟ್ಸ್ ಟ್ರಸ್ಟ್ ಬೆಂಗಳೂರು ಸಂಸ್ಥೆಯ ವೆಂಕಟೇಶ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಣ್ಣು ಮಕ್ಕಳ ದಿನಾಚರಣೆಯ ಹಿನ್ನೆಲೆ ಹಾಗೂ ಪ್ರಸಕ್ತವಾಗಿ ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳ ಶೋಷಣಾ ಪದ್ದತಿಗಳಾದ ಭ್ರೂಣ ಹತ್ಯೆಗಳು, ಹೆಣ್ಣು ಮಕ್ಕಳ ಸಂಖ್ಯೆ ಕ್ಷೀಣಿಕೆ ಮುಂತಾದ ಅವಾಂತರಗಳು ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ಯಾವ ರೀತಿ ದೌರ್ಜನ್ಯಗಳು ಹೆಚ್ಚಾಗಳು ಸಹಕಾರಿಯಾಗಿದೆ ಎಂದು ತಿಳಿಸಿ ಇಂತಹ ಸನ್ನಿವೇಶದಲ್ಲಿ ಸಮುದಾಯ ಮತ್ತು ಸರ್ಕಾರಗಳು ಹೆಣ್ಣು ಮಕ್ಕಳ ಉಳಿವಿಗಾಗಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೆಣ್ಣು ಮಕ್ಕಳ ದಿನಾಚರಣೆ ಮುಂತಾದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಬೇಕೆಂದು ಹೇಳಿದರು.

ಗ್ರಾಮದ ಹೆಣ್ಣು ಮಕ್ಕಳು, ಮಹಿಳೆಯರು, ಅಂಗನವಾಡಿ ಕಾರ್ಯಕರ್ತೆಯರು, ಚೈಲ್ಡ್ ರೈಟ್ಸ್ ಟ್ರಸ್ಟ್ ಸಂಸ್ಥೆಯ ಶಿಡ್ಲಘಟ್ಟ ಸಿಬ್ಬಂದಿ ಸತೀಶ್, ರಾಮಕೃಷ್ಣ, ಸುಜಾತ ಹಾಜರಿದ್ದರು.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಭಾನುವಾರ 20 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಭಾನುವಾರ 20 ಮಂದಿಗೆ ಕೊರೊನಾ ಸೋಂಕು ತಗುಲಿದೆ.

  1. ನಗರದ ಮಯೂರ ವೃತ್ತದ 45 ವರ್ಷದ ಗಂಡಸು,
  2. ಕುಂಬಾರಪೇಟೆಯ 33 ವರ್ಷದ ಗಂಡಸು,
  3. ಉಲ್ಲೂರುಪೇಟೆಯ 36 ವರ್ಷದ ಗಂಡಸು,
  4. ದೇಶದಪೇಟೆಯ 38 ವರ್ಷದ ಗಂಡಸು,
  5. ರಾಜೀವ್ ಗಾಂಧಿ ಲೇಔಟ್ ನ 45 ವರ್ಷದ ಗಂಡಸು,
  6. ಸಂತೋಷನಗರಾದ 32 ವರ್ಷದ ಮಹಿಳೆ, 16 ವರ್ಷದ ಗಂಡಸು,
  7. T ಹೊಸಹಳ್ಳಿಯ 27 ವರ್ಷದ ಗಂಡಸು,
  8. T ಪೆದ್ದನಹಳ್ಳಿಯ 28 ವರ್ಷದ ಮಹಿಳೆ,
  9. ಮೇಲೂರಿನ 55 ವರ್ಷದ ಮಹಿಳೆ,
  10. T ವೆಂಕಟಾಪುರದ 51 ವರ್ಷದ ಗಂಡಸು, 48 ವರ್ಷದ ಮಹಿಳೆ,
  11. ನೇರಳೇಮರದಹಳ್ಳಿಯ 75 ವರ್ಷದ ಗಂಡಸು,
  12. ತಲಕಾಯಲಾಬೆಟ್ಟದ 30 ವರ್ಷದ ಗಂಡಸು,
  13. ಬ್ರಾಹ್ಮಣರಹಳ್ಳಿಯ 35 ವರ್ಷದ ಮಹಿಳೆ,
  14. ಹಳೇಹಳ್ಳಿಯ 32 ವರ್ಷದ ಮಹಿಳೆ, 14 ವರ್ಷದ ಮಹಿಳೆ,
  15. ಮಳ್ಳೂರಿನ 46 ವರ್ಷದ ಗಂಡಸು,
  16. ಬೆಳ್ಳೂಟಿಯ 14 ವರ್ಷದ ಮಹಿಳೆ,
  17. ಬೈಲಹಳ್ಳಿ ಕೈವಾರದ 25 ವರ್ಷದ ಗಂಡಸಿಗೆ ಸೋಂಕು ತಗುಲಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Sidlaghatta Cocoon Market Watch – 11/10/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 11/10/2020

CB Lots: 332
Qty: 16759 Kgs
Max: 330
Min: 200
Avg: 275
BV Lots: 02
Qty: 132 Kgs
Max: 325
Min: 324
Avg: 325
 

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ (10/10/2020)

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಬೊಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

0

ತಾಲ್ಲೂಕಿನ ಬೊಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಬಿ.ಎಂ.ದೇವರಾಜ್ ಹಾಗೂ ಉಪಾಧ್ಯಕ್ಷರಾಗಿ ಎಂ.ಮುನಿರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕೆ.ಎಸ್.ಭಾಸ್ಕರ್ ತಿಳಿಸಿದ್ದಾರೆ.

 ಸಂಘದ ಆಡಳಿತ ಮಂಡಳಿಯ ನಿರ್ದೇಶಕರಾಗಿ ಆವಲಪ್ಪ, ಬಿ.ಜಿ.ಆನಂದ್, ವಿ.ಆಂಜಿನೇಯರೆಡ್ಡಿ, ಬಿ.ಎಂ.ರಮೇಶ್, ಬಿ.ಎನ್.ಚನ್ನಕೃಷ್ಣಪ್ಪ, ಬಿ.ಎಂ.ನಾರಾಯಣಸ್ವಾಮಿ, ಬಿ.ವಿ.ಶ್ರೀನಿವಾಸಮೂರ್ತಿ, ಕೆ.ಮುನಿಶಾಮಪ್ಪ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಶನಿವಾರ 7 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಶನಿವಾರ 7 ಮಂದಿಗೆ ಕೊರೊನಾ ಸೋಂಕು ತಗುಲಿದೆ.

  1. ನಗರದ ಗಾಂಧಿನಗರದ 8 ವರ್ಷದ ಹುಡುಗಿ,
  2. ಮಳ್ಳೂರಿನ 27 ವರ್ಷದ ಗಂಡಸು, 45 ವರ್ಷದ ಮಹಿಳೆ,
  3. ಮೇಲೂರಿನ 60 ವರ್ಷದ ಮಹಿಳೆ, 55 ವರ್ಷದ ಮಹಿಳೆ,
  4. ಹನುಮಂತಪುರದ 72 ವರ್ಷದ ಗಂಡಸು,
  5. ಗೊರ್ಲಗುಮ್ಮನಹಳ್ಳಿಯ 42 ವರ್ಷದ ಗಂಡಸಿಗೆ ಸೋಂಕು ತಗುಲಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Sidlaghatta Cocoon Market Watch – 10/10/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 10/10/2020

CB Lots: 489
Qty: 25888 Kgs
Max: 330
Min: 198
Avg: 281
BV Lots: 01
Qty: 71 kgs
Max: 330
Min: 330
Avg: 330
 

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ (9/10/2020)

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಶುಕ್ರವಾರ 35 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಶುಕ್ರವಾರ 35 ಮಂದಿಗೆ ಕೊರೊನಾ ಸೋಂಕು ತಗುಲಿದೆ.

  1. ನಗರದ 58 ವರ್ಷದ ಮಹಿಳೆ,
  2. KK ಪೇಟೆಯ 45 ವರ್ಷದ ಮಹಿಳೆ,
  3. ನಲ್ಲಿಮರದಹಳ್ಳಿಯ 50 ವರ್ಷದ ಗಂಡಸು, 40 ವರ್ಷದ ಮಹಿಳೆ, 50 ವರ್ಷದ ಮಹಿಳೆ,
  4. ಸಂತೋಷನಗರದ 24 ವರ್ಷದ ಗಂಡಸು,
  5. ದೇಶದಪೇಟೆಯ 26 ವರ್ಷದ ಮಹಿಳೆ, 4 ವರ್ಷದ ಹುಡುಗಿ, 45 ವರ್ಷದ ಮಹಿಳೆ, 8 ವರ್ಷದ ಹುಡುಗ,
  6. ಕುರುಬರಪೇಟೆಯ 58 ವರ್ಷದ ಗಂಡಸು,
  7. ವಿಜಯಲಕ್ಷ್ಮೀ Talkies ಬಳಿಯ 58 ವರ್ಷದ ಮಹಿಳೆ, 42 ವರ್ಷದ ಗಂಡಸು,
  8. ದೊಡ್ಡತೇಕಹಳ್ಳಿಯ 35 ವರ್ಷದ ಗಂಡಸು,
  9. K ಮುತ್ತುಕದಹಳ್ಳಿಯ 25 ವರ್ಷದ ಗಂಡಸು,
  10. ಆನೂರಿನ 11 ವರ್ಷದ ಹುಡುಗಿ, 20 ವರ್ಷದ ಮಹಿಳೆ, 1 ವರ್ಷದ ಹುಡುಗ, 36 ವರ್ಷದ ಗಂಡಸು, 25 ವರ್ಷದ ಮಹಿಳೆ, 32 ವರ್ಷದ ಮಹಿಳೆ, 38 ವರ್ಷದ ಮಹಿಳೆ, 66 ವರ್ಷದ ಗಂಡಸು,
  11. ಮೇಲೂರಿನ 34 ವರ್ಷದ ಗಂಡಸು, 33 ವರ್ಷದ ಗಂಡಸು,
  12. ಕಾಚಹಳ್ಳಿಯ 39 ವರ್ಷದ ಮಹಿಳೆ,
  13. ಸಾದಲಿಯ 25 ವರ್ಷದ ಮಹಿಳೆ,
  14. ನಲ್ಲಪ್ಪನಹಳ್ಳಿಯ 3 ವರ್ಷದ ಹುಡುಗಿ,
  15. ಕಂಬದಹಳ್ಳಿಯ 37 ವರ್ಷದ ಮಹಿಳೆ,
  16. ಮಳ್ಳೂರಿನ 72 ವರ್ಷದ ಗಂಡಸು,
  17. ಕಂಬದಹಳ್ಳಿಯ 45 ವರ್ಷದ ಮಹಿಳೆ,
  18. ದಿಬ್ಬೂರಹಳ್ಳಿಯ 25 ವರ್ಷದ ಗಂಡಸು, 33 ವರ್ಷದ ಗಂಡಸು, 20 ವರ್ಷದ ಮಹಿಳೆ,
  19. ಹುಜುಗೂರಿನ 55 ವರ್ಷದ ಗಂಡಸಿಗೆ ಸೋಂಕು ತಗುಲಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Sidlaghatta Cocoon Market Watch – 9/10/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 9/10/2020

CB Lots: 716
Qty: 38012 kgs
Max: 325
Min: 150
Avg: 273
BV Lots: 03
Qty: 162 kgs
Max: 231
Min: 228
Avg: 230
 

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ (8/10/2020)

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಸ್ಥಳೀಯ ಸಂಸ್ಥೆಗಳ ಬಲವರ್ಧನೆಯಿಂದ ಗ್ರಾಮೀಣಾಭಿವೃದ್ಧಿ ಸಾಧ್ಯ

0

ಸ್ಥಳೀಯ ಸಂಸ್ಥೆಗಳ ಸಾಮರ್ಥ್ಯವನ್ನು ವೃದ್ಧಿಸುವುದು, ಜನರ ಅವಶ್ಯಕತೆಗಳನ್ನು ಮನಗಂಡು ಆಯಾ ಸೌಲಭ್ಯಗಳನ್ನು ಅವರಿಗೆ ತಲುಪಿಸುವುದು ಬಹಳ ಮುಖ್ಯ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಪಿ.ಶಿವಶಂಕರ್ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ‌ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ನರೇಗಾ ತಾಂತ್ರಿಕ ಸಿಬ್ಬಂದಿ, ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿಗಳು ಹಾಗೂ ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಪ್ರಗತಿಯ ವರದಿಯನ್ನು ಪಡೆದು ಅವರು ಮಾತನಾಡಿದರು.

 ಶಿಕ್ಷಣ, ಅಂಗನವಾಡಿ, ನೀರನ್ನು ಸಂಗ್ರಹಿಸುವುದು, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯಾವುದೇ ರೀತಿಯಲ್ಲಿ ಹಣದ ಖರ್ಚಿಲ್ಲದೇ ಮಾಡಬಹುದಾದ 80 ಕಾಮಗಾರಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಅದಕ್ಕೆ ಪ್ರಾಮುಖ್ಯತೆಯನ್ನು ಕೊಡಬೇಕಿದೆ. ಗ್ರಾಮ ಸಭೆ, ಸಾಮಾನ್ಯ ಸಭೆ, ಮಕ್ಕಳ ಸಭೆ, ಮಹಿಳಾ ಸಭೆ, ರೈತರ ಸಭೆ, ಕೆ.ಡಿ.ಪಿ ಸಭೆಗಳನ್ನು ಕಾಲಕಾಲಕ್ಕೆ ನಡೆಸುತ್ತಾ, ಎಲ್ಲಾ ಇಲಾಖೆಗಳನ್ನು ಜೊತೆಗೂಡಿಸಿಕೊಂಡು ಸಮನ್ವಯತೆಯಿಂದ ಕೆಲಸಗಳನ್ನು ಮಾಡಬೇಕಿದೆ. ಸಮಗ್ರ ಅಭಿವೃದ್ಧಿಯತ್ತ ಚಿಂತನೆ ನಡೆಸಿದ್ದು, ಜಿಲ್ಲೆಯನ್ನು ಮಾದರಿಯಾಗಿ ರೂಪಿಸುವುದಾಗಿ ಹೇಳಿದರು.

 ಜಿಲ್ಲೆಯ ಸರ್ವತೋಮುಖ ಅಭಿವೃದ್ದಿಗೆ ಎಲ್ಲರೂ ಜವಬ್ದಾರಿಯುತವಾಗಿ ಕೆಲಸ ಮಾಡಬೇಕಿದೆ. ನರೇಗಾ ಯೋಜನೆಯ ಮೂಲ ಉದ್ದೇಶ ಗ್ರಾಮಾಭಿವೃದ್ದಿ ಜೊತೆಗೆ ಉದ್ಯೋಗ ಕಲ್ಪಿಸುವುದು, ಉದ್ಯೋಗ ಸೃಷ್ಟಿ ಮಾಡುವುದು, ಮೂಲಭೂತ ಸೌಕರ್ಯಗಳನ್ನು ಒದಗಿಸುವುದು. ಯಾವುದೇ ಅಕ್ರಮ, ಭ್ರಷ್ಟಾಚಾರಕ್ಕೆ ಉತ್ತೇಜನ ನೀಡುವುದಿಲ್ಲ. ಅಧಿಕಾರಿಗಳ ವಿರುದ್ದ ಆರೋಪಗಳು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

 ಸ್ವಚ್ಚ ಭಾರತ್ ಮಿಷನ್ ಅಭಿಯಾನದಲ್ಲಿ ಘನ ತ್ಯಾಜ್ಯ ವಿಲೆವಾರಿ ಘಟಕಗಳನ್ನು ನಿರ್ಮಾಣ ಮಾಡಲು ಈಗಾಗಲೇ 14 ಪಂಚಾಯಿತಿ ಗಳಲ್ಲಿ 89 ಎಕರೆ ಪ್ರದೇಶದಲ್ಲಿ ಸ್ಥಳ ಗುರ್ತಿಸಲಾಗಿದೆ. ಇನ್ನೂ ಉಳಿದ 14 ಪಂಚಾಯಿತಿಗಳಲ್ಲಿ ನಿವೇಶನಗಳ ಗುರ್ತಿಸಲು ಆಗಿಲ್ಲ. ಅಲ್ಲಿನ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಿ ಘಟಕಗಳನ್ನು ನಿರ್ಮಾಣ ಮಾಡಲಾಗುವುದೆಂದರು.

 ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ನೋಮೇಶ್ ಕುಮಾರ್, ತಾಲ್ಲೂಕು ಪಂಚಾಯಿತಿ ಇಒ ಶಿವಕುಮಾರ್, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ ಹಾಜರಿದ್ದರು. ‌

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಗುರುವಾರ 36 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಗುರುವಾರ 36 ಮಂದಿಗೆ ಕೊರೊನಾ ಸೋಂಕು ತಗುಲಿದೆ.

  1. ನಗರದ 46 ವರ್ಷದ ಗಂಡಸು,
  2. VGT ರಸ್ತೆಯ 25 ವರ್ಷದ ಗಂಡಸು,
  3. ದೇಶದಪೇಟೆಯ 50 ವರ್ಷದ ಮಹಿಳೆ, 50 ವರ್ಷದ ಮಹಿಳೆ,
  4. ಸಿದ್ಧಾರ್ಥನಗರದ 5 ವರ್ಷದ ಹುಡುಗ
  5. ಕುರುಬರಪೇಟೆಯ 36 ವರ್ಷದ ಗಂಡಸು,
  6. KK ಪೇಟೆಯ 62 ವರ್ಷದ ಗಂಡಸು, 74 ವರ್ಷದ ಮಹಿಳೆ,
  7. ವಾಸವಿ ರಸ್ತೆಯ 25 ವರ್ಷದ ಮಹಿಳೆ, 50 ವರ್ಷದ ಗಂಡಸು, 27 ವರ್ಷದ ಗಂಡಸು, 21 ವರ್ಷದ ಗಂಡಸು, 38 ವರ್ಷದ ಮಹಿಳೆ,
  8. ಮುತ್ತೂರು ಬೀದಿಯ 25 ವರ್ಷದ ಗಂಡಸು,
  9. ಜೌಗುಪೇಟೆಯ 32 ವರ್ಷದ ಗಂಡಸು, 25 ವರ್ಷದ ಮಹಿಳೆ,
  10. ದರ್ಗಾ ಮೊಹಲ್ಲಾದ 50 ವರ್ಷದ ಗಂಡಸು,
  11. ಪೊಲೀಸ್ ಕ್ವಾರ್ಟರ್ಸ್ ನ 44 ವರ್ಷದ ಗಂಡಸು,
  12. ಗಾಂಧಿನಗರದ 55 ವರ್ಷದ ಮಹಿಳೆ, 34 ವರ್ಷದ ಗಂಡಸು,
  13. ಕೋಟೆ ವೃತ್ತದ 65 ವರ್ಷದ ಗಂಡಸು,
  14. ಕಾರ್ಮಿಕ ನಗರದ 35 ವರ್ಷದ ಮಹಿಳೆ,
  15. ನಲ್ಲಿಮರದಹಳ್ಳಿಯ 36 ವರ್ಷದ ಗಂಡಸು,
  16. ಶೆಟ್ಟಿಹಳ್ಳಿಯ 60 ವರ್ಷದ ಗಂಡಸು,
  17. ಅಚ್ಚಕದಿರೇನಹಳ್ಳಿಯ 68 ವರ್ಷದ ಗಂಡಸು,
  18. ಚೀಮನಹಳ್ಳಿಯ 63 ವರ್ಷದ ಗಂಡಸು,
  19. ಜಂಗಮಕೋಟೆಯ 58 ವರ್ಷದ ಗಂಡಸು,
  20. ಕಲಿನಾಯಕನಹಳ್ಳಿಯ 65 ವರ್ಷದ ಗಂಡಸು,
  21. E ತಿಮ್ಮಸಂದ್ರದ 70 ವರ್ಷದ ಮಹಿಳೆ,
  22. ರಾಗಿಮಾಕಲಹಳ್ಳಿಯ 65 ವರ್ಷದ ಮಹಿಳೆ,
  23. ಕಾಕಚೊಕ್ಕಂಡಹಳ್ಳಿಯ 85 ವರ್ಷದ ಗಂಡಸು,
  24. ಬಸವಾಪಟ್ಟಣದ 30 ವರ್ಷದ ಗಂಡಸು, 40 ವರ್ಷದ ಗಂಡಸು, 45 ವರ್ಷದ ಗಂಡಸು,
  25. ಹಿತ್ತಲಹಳ್ಳಿಯ 30 ವರ್ಷದ ಗಂಡಸಿಗೆ ಸೋಂಕು ತಗುಲಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Sidlaghatta Cocoon Market Watch – 8/10/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 8/10/2020

CB Lots: 634
Qty: 33309 Kgs
Max: 328
Min: 191
Avg: 281
BV Lots: 14
Qty: 1105 Kgs
Max: 312
Min: 225
Avg:262
 

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ (7/10/2020)

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಶ್ರೀ ಗುಟ್ಟಾಂಜನೇಯ ಸ್ವಾಮಿ ದೇವಾಲಯದ ನವೀಕರಣ ಕಾಮಗಾರಿಗೆ ಚಾಲನೆ

0

ತಾಲ್ಲೂಕಿನ ಆನೂರು ಗ್ರಾಮ ಪಂಚಾಯಿತಿಯ ಬೆಳ್ಳೂಟಿ ಗೇಟ್ ಬಳಿಯ ಶ್ರೀ ಗುಟ್ಟಾಂಜನೇಯ ಸ್ವಾಮಿ ದೇವಾಲಯದ ನವೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಕೆ.ಎಂ.ಎಫ್ ಹಾಗೂ ಕೋಚಿಮುಲ್ ನಿರ್ದೇಶಕ ಶ್ರೀನಿವಾಸ್ ರಾಮಯ್ಯ ಮಾತನಾಡಿದರು.

ಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲಿ ನೆಮ್ಮದಿಯ ತಾಣಗಳಾಗಿರುವ ಧಾರ್ಮಿಕ ಕ್ಷೇತ್ರಗಳ ಅಭಿವೃದ್ದಿಯನ್ನು ಎಲ್ಲರೂ ಒಗ್ಗೂಡಿ ಮಾಡಬೇಕು. ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಯನ್ನು ಕಾಲಕಾಲಕ್ಕೆ ಮಾಡುತ್ತಿರಬೇಕು. ನಮ್ಮ ಸಮಾಜದ ಸಾಂಸ್ಕೃತಿಕ ಮತ್ತು ಸಾಮಾಜಿಕ ಕೇಂದ್ರಗಳಾದ ದೇವಾಲಯಗಳ ನವೀಕರಣ ಅತ್ಯಗತ್ಯ ಎಂದು ಅವರು ತಿಳಿಸಿದರು.

 ಯುವ ಕಾಂಗ್ರೆಸ್ ಮುಖಂಡ ಸಂತೋಷ್ ಬೆಳ್ಳೂಟಿ ಮಾತನಾಡಿ, ಶಾಸಕ ವಿ.ಮುನಿಯಪ್ಪನವರ ಸಹಕಾರದಿಂದ ಆರಾಧನೆ ಇಲಾಖೆಯಿಂದ ಮಂಜೂರಾಗಿರುವ ಅನುದಾನದಲ್ಲಿ ದೇವಾಲಯದ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗಿದೆ. ಧಾರ್ಮಿಕ ಕೇಂದ್ರಗಳ ಅಭಿವೃದ್ದಿಗಾಗಿ ಸರ್ಕಾರದ ಜೊತೆಗೆ ಸಮುದಾಯದ ಸಹಕಾರ ಅಗತ್ಯವಾಗಿದ್ದು ಬೆಳ್ಳೂಟಿ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ಭಕ್ತಾದಿಗಳು ನೆರವು ನೀಡಲು ಮುಂದಾಗಿದ್ದಾರೆ. ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ದಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.

 ಈ ಸಂದರ್ಭದಲ್ಲಿ ಎಪಿಎಂಸಿ ಉಪಾಧ್ಯಕ್ಷ ಬೆಳ್ಳೂಟಿ ವೆಂಕಟೇಶ್, ನಾಗೇಶ್, ಸವಿತಾ ಸಮಾಜದ ರಮೇಶ್, ಮಳಮಾಚನಹಳ್ಳಿ ಎಸ್‍ಎಫ್‍ಸಿಎಸ್ ಬ್ಯಾಂಕಿನ ಮಾಜಿ ಅಧ್ಯಕ್ಷ ರಾಮಕೃಷ್ಣ, ರೇಷ್ಮೆ ಉತ್ಪಾದಕರ ಕಂಪನಿಯ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಿರೆಡ್ಡಿ, ಬಿ.ಎನ್.ಮುನಿರಾಜು, ಹಿತ್ತಲಹಳ್ಳಿ ಎಚ್.ಕೆ.ಸುರೇಶ್. ರಾಮಾಂಜಿನಪ್ಪ, ಮುನಿರಾಜು, ಶಿರಸ್ತೆದಾರ್ ಮಂಜುನಾಥ್ ಹಾಜರಿದ್ದರು.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಬುಧವಾರ 9 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಬುಧವಾರ 9 ಮಂದಿಗೆ ಕೊರೊನಾ ಸೋಂಕು ತಗುಲಿದೆ.

  1. ನಗರದ VGT ರಸ್ತೆಯ 50 ವರ್ಷದ ಗಂಡಸು, 45 ವರ್ಷದ ಮಹಿಳೆ, 19 ವರ್ಷದ ಮಹಿಳೆ, 55 ವರ್ಷದ ಗಂಡಸು,
  2. ದೇಶದಪೇಟೆಯ 68 ವರ್ಷದ ಗಂಡಸು,
  3. CR ಲೇಔಟ್ನ 42 ವರ್ಷದ ಗಂಡಸು,
  4. ವಲ್ಲಪನಹಳ್ಳಿ, ಹೇಮರ್ಲಹಳ್ಳಿಯ 26 ವರ್ಷದ ಮಹಿಳೆ, 45 ವರ್ಷದ ಮಹಿಳೆ,
  5. ಸುಗಟೂರು, ಜಂಗಮಕೋಟೆಯ 33 ವರ್ಷದ ಗಂಡಸಿಗೆ ಸೋಂಕು ತಗುಲಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Sidlaghatta Cocoon Market Watch – 7/10/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 7/10/2020

CB Lots: 469
Qty: 24245 Kgs
Max: 323
Min: 209
Avg: 284
BV Lots: 07
Qty: 405 Kgs
Max: 286
Min: 260
Avg: 272
 

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ (6/10/2020)

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಆರೋಗ್ಯ ಇಲಾಖೆಯ ಹೊರಗುತ್ತಿಗೆ ನೌಕರರ ಮನವಿ

0

ಸಮಾನ ವೇತನ ಮತ್ತು ಸೇವಾ ಭದ್ರತೆ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿ ಕಳೆದ 14 ದಿನಗಳಿಂದ ಶಾಂತಿಯುತ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಈವರೆಗೂ ಸಂಬಂದಪಟ್ಟ ಇಲಾಖೆ ಅಥವ ಸರ್ಕಾರದಿಂದ ಯಾವುದೇ ಭರವಸೆ ಸಿಕ್ಕಿಲ್ಲ ಎಂದು ನಗರ ಆರೋಗ್ಯ ಕೇಂದ್ರದ ವೈದ್ಯ ಡಾ.ಗುರು ಹೇಳಿದರು.

 ಆರೋಗ್ಯ ಇಲಾಖೆಯ ಹೊರಗುತ್ತಿಗೆ ನೌಕರರು ಮಂಗಳವಾರ ನಗರದ ಸಾರ್ವಜನಿಕ ಆಸ್ಪತ್ರೆಯಿಂದ ತಾಲ್ಲೂಕು ಕಚೇರಿಯವರೆಗೂ ಏರ್ಪಡಿಸಲಾಗಿದ್ದ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿ ಮಾತನಾಡಿದರು.

 

 ಕಳೆದ 2019 ರ ಫೆಬ್ರುವರಿಯಿಂದ ನಾವುಗಳು ಪ್ರತಿಭಟನೆ ನಡೆಸಿ ನಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದೆವು. ಆದರೆ ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸಲಿಲ್ಲ. ಕಳೆದ ಜೂನ್ ತಿಂಗಳಿನಲ್ಲಿ ನಾವು ಪ್ರತಿಭಟನೆಗೆ ಮುಂದಾದಾಗ, ಸರ್ಕಾರ ಸಮಿತಿಯೊಂದನ್ನು ರಚಿಸುವುದಾಗಿ ಭರವಸೆ ನೀಡಿದ್ದರು. ಮೂರು ತಿಂಗಳಾದರೂ ನಮಗೆ ಸಮಾನ ವೇತನ ಮತ್ತು ಸೇವಾ ಭದ್ರತೆ ನೀಡಿಲ್ಲ.

 ಸುಮಾರು 10-15 ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಜೊತೆಗೆ ಕಳೆದ ಏಳು ತಿಂಗಳುಗಳಿಂದ ಕೊರೊನಾ ಸಾಂಕ್ರಾಮಿಕ ರೋಗ ತಡೆಗಟ್ಟಲು ನಮ್ಮ ಜೀವವನ್ನೇ ಮುಡಿಪಾಗಿಟ್ಟಿದ್ದೇವೆ. ಇಷ್ಟಾದರೂ ಈವರೆಗೂ ನಮಗೆ ಸಮಾನ ವೇತನ ಸೇರಿದಂತೆ ಸೇವಾ ಭದ್ರತೆ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ. ಸಾಲದ್ದಕ್ಕೆ ಹೊರಗುತ್ತಿಗೆ ಸಂಸ್ಥೆಯವರು ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸುವ ಬೆದರಿಕೆ ಹಾಕುತ್ತಿರುವುದರಿಂದ ಮತ್ತಷ್ಟು ಹಿಂಸೆಗೊಳಗಾಗಿದ್ದೇವೆ.

ಹಾಗಾಗಿ ಸರ್ಕಾರ ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲವಾದಲ್ಲಿ ರಾಜ್ಯಾಧ್ಯಂತ ಉಗ್ರ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಒತ್ತಾಯಿಸಿ ಶಿರಸ್ತೇದಾರ್ ಕೆ.ಎನ್.ಮಂಜುನಾಥ್‌ರ ಮೂಲಕ ತಹಶೀಲ್ದಾರ್‌ರಿಗೆ ಮನವಿ ಪತ್ರ ಸಲ್ಲಿಸಿದರು.

 ಆರೋಗ್ಯ ಇಲಾಖೆಯ ಹೊರಗುತ್ತಿಗೆ ನೌಕರರಾದ ಶ್ರೀನಿವಾಸ್, ಮಂಜುನಾಥ್, ಕೀರ್ತಿ, ಮಂಗಳಾ, ಸುನೀತ, ಪ್ರತಿಭ, ಕವಿತ, ಸರಿತ, ಶೃತಿ, ಮಮತ.ಕೆ.ಎಸ್, ನಾಗಮಣಿ, ವಿಜಯಾ, ಮಮತಾ, ಚೈತ್ರಾ, ಭಾಗ್ಯಮ್ಮ ಹಾಜರಿದ್ದರು.