Home Blog Page 320

Sidlaghatta Cocoon Market Watch – 20/08/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 20/08/2020

CB Lots: 497
Qty: 26607 Kgs
Max: 350
Min: 216
Avg: 284
BV Lots: 06
Qty: 330 Kgs
Max: 343
Min: 295
AVG: 323
 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ರೈತರ ಮನೆ ಬಾಗಿಲಿಗೆ ಸೌಲಭ್ಯಗಳು ತಲುಪಿಸಲು ಅಧಿಕಾರಿಗಳು ವಿಶೇಷ ಕಾರ್ಯಕ್ರಮ ರೂಪಿಸಿ

0

ನಗರದ ತಾಲ್ಲೂಕು ಕಚೇರಿಯ ಮುಂಭಾಗದ ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ 2020-21 ನೇ ಸಾಲಿನ ಮೊಬೈಲ್ ಆಪ್ ಮೂಲಕ ಬೆಳೆ ಸಮೀಕ್ಷೆ ಮಾಹಿತಿ ಜಾಥಗೆ ಹಸಿರು ನಿಶಾನೆ ತೋರಿ ಚಾಲನೆ ನೀಡಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ರಾಜ್ಯದಲ್ಲಿ ರೈತರ ಸಮಸ್ಯೆಗಳನ್ನು ಪರಿಹರಿಸಿ ಸೌಲಭ್ಯಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ವಿಶೇಷ ಕಾರ್ಯಕ್ರಮವನ್ನು ರೂಪಿಸಬೇಕಿದೆ ಎಂದು ಅವರು ತಿಳಿಸಿದರು.
ಸರ್ಕಾರ ರೈತರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತದೆ. ಅದರ ಕುರಿತು ವ್ಯಾಪಕ ಪ್ರಚಾರ ಮತ್ತು ಮಾಹಿತಿ ಕೊರತೆಯಿಂದ ಅರ್ಹ ರೈತರಿಗೆ ಸೌಲಭ್ಯಗಳು ಲಭಿಸುತ್ತಿಲ್ಲ. ಈ ನಿಟ್ಟಿನಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಹೋಬಳಿ ಮಟ್ಟದಲ್ಲಿರುವ ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು ಅರಿವು ಮತ್ತು ಜಾಗೃತಿ ಮೂಡಿಸಬೇಕೆಂದು ಹೇಳಿದರು.
ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಸ್.ವಿ.ಮಂಜುನಾಥ್ ಮಾತನಾಡಿ, ಬೆಳೆ ಸಮೀಕ್ಷೆಯಿಂದ ಆಗುವ ಪ್ರಯೋಜನ ಹಾಗೂ ಅನುಷ್ಠಾನದ ಕ್ರಮಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.
ತಹಶೀಲ್ದಾರ್ ಕೆ.ಅರುಂಧತಿ, ಕೋಚಿಮುಲ್ ನಿರ್ದೇಶಕ ಶ್ರೀನಿವಾಸ್, ಕೃಷಿ ಇಲಾಖೆಯ ಅಧಿಕಾರಿ ಶ್ರೀನಿವಾಸ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ರಾಮಕೃಷ್ಣಪ್ಪ, ನಗರಸಭಾ ಸದಸ್ಯ ಮುನಿರಾಜು, ಕೃಷಿ ಇಲಾಖೆಯ ಸಿಬ್ಬಂದಿ ಹಾಜರಿದ್ದರು.
ರೈತರ ಬೆಳೆ ಸಮೀಕ್ಷೆ ಆಪ್ ಕುರಿತು ಮಾಹಿತಿ ಹಾಗೂ ಬಳಕೆಯ ವಿಧಾನ: ರೈತರ ಬೆಳೆ ಸಮೀಕ್ಷೆ App ಅನ್ನು ರೈತರು ಸದುಪಯೋಗಪಡಿಸಿಕೊಳ್ಳಿ
 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ನರೇಗಾ ಯೋಜನೆ ಅನುಷ್ಟಾನದಲ್ಲಿ ಶಿಡ್ಲಘಟ್ಟ ಜಿಲ್ಲೆಗೆ ದ್ವಿತೀಯ, ಬದು ನಿರ್ಮಾಣದಲ್ಲೂ ಎರಡನೇ ಸ್ಥಾನ

0

ಲಾಕ್ ಡೌನ್ ಕಾಲದಲ್ಲಿ ಮತ್ತು ಕೊರೊನಾ ಸಂಕಷ್ಟದಲ್ಲಿ ಗ್ರಾಮೀಣ ಭಾಗದ ಜನರಿಗೆ ಉದ್ಯೋಗವನ್ನು ಕೊಟ್ಟಿದ್ದು ನರೇಗಾ ಯೋಜನೆ. ದುಡಿಯುವ ಕೈಗಳಿಗೆ ಉದ್ಯೋಗ ನೀಡುವ ಉದ್ದೇಶದಿಂದ ಪ್ರಾರಂಭವಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಮಾನವ ದಿನಗಳ ಸೃಜನೆಯಲ್ಲಿ ಮತ್ತು ಬದು ನಿರ್ಮಾಣದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಶಿಡ್ಲಘಟ್ಟ ತಾಲ್ಲೂಕು ಜಿಲ್ಲೆಯಲ್ಲಿ ಎರಡನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

 2020-21 ನೇ ಸಾಲಿಗೆ ತಾಲ್ಲೂಕಿನಲ್ಲಿ 18,12,500 ಮಾನವ ದಿನಗಳ ಸೃಜನೆಯ ಗುರಿಯನ್ನು ನಿಗದಿಪಡಿಸಲಾಗಿತ್ತು. ಅದರಲ್ಲಿ ಕೇವಲ ನಾಲ್ಕೇ ತಿಂಗಳ ಅವಧಿಯಲ್ಲಿ 7,50,821 ಮಾನವ ದಿನಗಳಷ್ಟು ಕೆಲಸವನ್ನು (ಶೇ 41.62) ತಾಲ್ಲೂಕಿನ 28 ಗ್ರಾಮ ಪಂಚಾಯಿತಿಗಳಲ್ಲಿ  ನೀಡುವ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಯಶಸ್ಸನ್ನು ಸಾಧಿಸಿದೆ.

 ಸಮರ್ಪಕವಾಗಿ ಮಳೆ ಬೀಳದೇ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ತಾಲ್ಲೂಕಿನ ಗ್ರಾಮೀಣ ಜನರಿಗೆ ಅದರಲ್ಲೂ ಸಣ್ಣ ರೈತರು ಮತ್ತು ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆ ಕೈ ಹಿಡಿದಿದೆ. ರೈತರು ತಮ್ಮ ಜಮೀನುಗಳಲ್ಲಿ ಬೆಳೆ ವಿಸ್ತರಣೆಗೆ, ಬದು ನಿರ್ಮಾಣಕ್ಕೆ ನರೇಗಾ ಯೋಜನೆಯಡಿ ಸಾಕಷ್ಟು ಧನ ಸಹಾಯ ಸಿಗುತ್ತಿದೆ. ಮಹಿಳೆಯರು ಸಹ ಪುರುಷರಷ್ಟೇ ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.

  ಅಂತರ್ಜಲ ವೃದ್ಧಿಸಲು ನರೇಗಾ ಯೋಜನೆಯಡಿ ಪ್ರಾಜೆಕ್ಟ್ 100 ಯೋಜನೆ ಮೂಲಕ ಸರ್ಕಾರಿ ಶಾಲೆಗೆ ಕಾಂಪೌಂಡ್, ಅಂಗನವಾಡಿ ಕಟ್ಟಡಗಳ ನಿರ್ಮಾಣ, ಮಳೆ ನೀರು ಸಂಗ್ರಹಿಸಲು ಮತ್ತು ಭೂಮಿಯ ಫಲವತ್ತತೆ ಹೆಚ್ಚಿಸಲು ಬದುಗಳ ನಿರ್ಮಾಣ ನಡೆದಿದೆ. ರೈತರಿಂದ ರೈತರಿಗಾಗಿ ರೈತರಿಗೋಸ್ಕರ ಎಂಬ ಧ್ಯೇಯ ವಾಕ್ಯದಡಿ ಕಳೆದ ಮೂರು ತಿಂಗಳ ಅವಧಿಯಲ್ಲಿ ರೈತರ ಹೊಲಗಳಲ್ಲಿ ನಿರ್ಮಾಣವಾದ ಬದುಗಳ ಸಂಖ್ಯೆಯಲ್ಲಿ ಶಿಡ್ಲಘಟ್ಟ ತಾಲ್ಲೂಕು ಜಿಲ್ಲೆಯಲ್ಲಿ ಎರಡನೇ ಸ್ಥಾನದಲ್ಲಿದೆ (1624). ಕೊರೊನಾ ಸಂಕಷ್ಟದಲ್ಲಿ ಕೂಲಿಕಾರ್ಮಿಕರಿಗೆ ಉದ್ಯೋಗ ನೀಡಿದ ನರೇಗಾ ಯೋಜನೆ ಬದುಗಳ ನಿರ್ಮಾಣಕ್ಕೆ ನೆರವಾಗುವ ಮೂಲಕ ರೈತರ ಪಾಲಿಗೂ ವರದಾನವಾಗಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ರೈತರ ಬೆಳೆ ಸಮೀಕ್ಷೆ App ಅನ್ನು ರೈತರು ಸದುಪಯೋಗಪಡಿಸಿಕೊಳ್ಳಿ

0

ರೈತರು ಸ್ವತಃ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರಗಳನ್ನು ದಾಖಲಿಸಲು ಅವಕಾಶ ಕಲ್ಪಿಸಿ “ರೈತರ ಬೆಳೆ ಸಮೀಕ್ಷೆ” ಆಪ್ ‌ತಯಾರಿಸಲಾಗಿದೆ. ಇದನ್ನು ಉಪಯೋಗಿಸಿ ರೈತರು ತಾವು ಬೆಳೆದ ಬೆಳೆಯನ್ನು ಸರಿಯಾದ ರೀತಿಯಲ್ಲಿ ನೋಂದಾಯಿಸಿ ಸರ್ಕಾರದ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಶಿಡ್ಲಘಟ್ಟ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್ ತಿಳಿಸಿದ್ದಾರೆ.
ಆಪ್ ಮೂಲಕ ಬೆಳೆಯನ್ನು ನೊಂದಾಯಿಸಿಕೊಳ್ಳಲು ಕಡೆಯ ದಿನಾಂಕ 24 ಆಗಸ್ಟ್ 2020.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಛಾಯಾಗ್ರಾಹಕರ ಸ್ವರ್ಗ ನಂದಿಬೆಟ್ಟ

0

ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟ ಛಾಯಾಗ್ರಾಹಕರ ನೆಚ್ಚಿನ ತಾಣ. ಕೆಲವರು ಇಲ್ಲಿನ ಹಕ್ಕಿಗಳ ಫೋಟೋ ತೆಗೆಯಲು ಬಂದರೆ, ಇನ್ನು ಕೆಲವರು ಮಂಜು ಮುಸುಕಿರುವ ಮನೋಹರ ದೃಶ್ಯಾವಳಿಗಳನ್ನು ಸೆರೆಹಿಡಿಯಲು ಬರುತ್ತಾರೆ. ಪ್ರಿ ವೆಡ್ಡಿಂಗ್ ಫೋಟೋಗ್ರಫಿಗಾಗಿಯೂ ಹಲವಾರು ಮಂದಿ ಆಗಮಿಸುತ್ತಾರೆ. ಈಗ ಎಲ್ಲರ ಅಂಗೈನಲ್ಲಿ ಮೊಬೈಲ್ ಇರುವುದರಿಂದ ಎಲ್ಲರೂ ಫೋಟೋ ತೆಗೆಯುವವರೇ…
“ನಂದಿಬೆಟ್ಟದ ಮೇಲೆ ಹಗಲಿನ ಹವಾಮಾನ ಥೇಟ್ ಯೂರೋಪ್ ನಂತೆ ಇರುತ್ತದೆ. ರಾತ್ರಿ ವೇಳೆಯಲ್ಲಿ ಮಂಜಿನಿಂದ ಕೂಡಿದ ಮೋಡವನ್ನು ಗಾಳಿಯು ಹೊತ್ತು ತರುತ್ತದೆ. ಶ್ರೀರಂಗಪಟ್ಟಣದಲ್ಲಿ ಒಂದು ತಿಂಗಳ ಕಾಲ ಅನಾರೋಗ್ಯದಿಂದ ನರಳಿದ ನಾನು ಆರೋಗ್ಯ ಸುಧಾರಣೆಗಾಗಿ ರಜೆ ಪಡೆದು ನಂದಿದುರ್ಗಕ್ಕೆ ಬಂದೆ. ಇಲ್ಲಿನ ಒಳ್ಳೆಯ ಹವೆ ನನ್ನ ಆರೋಗ್ಯವನ್ನು ಸರಿಮಾಡುತ್ತದೆ. ಇಲ್ಲಿ ಗಾಳಿ ಬೀಸುವ ಸದ್ದು ಕೇಳಿದಾಗ ನಾವು ನಮ್ಮ ಸ್ಕಾಟ್ ಲೆಂಡ್ ನಲ್ಲಿರುವಂತೆ ಭಾಸವಾಗುತ್ತದೆ”.
ಈ ಮೇಲಿನ ಮಾತುಗಳನ್ನು ಬರೆದವರು ಜೇಮ್ಸ್ ವೆಲ್ಷ್ ಎಂಬ ಬ್ರಿಟಿಷ್ ಜನರಲ್. ಈತ ಈಸ್ಟ್ ಇಂಡಿಯಾ ಕಂಪೆನಿಯ ಮದ್ರಾಸ್ ಆರ್ಮಿಯಲ್ಲಿ 1790 ರಿಂದ 1848 ವರೆಗೂ ಸೇವೆ ಸಲ್ಲಿಸಿದ್ದರು. ಅವರು ತಮ್ಮ 40 ವರ್ಷಗಳ ಮಿಲಿಟರಿ ಸೇವೆಯ ಕುರಿತು ಬರೆದಿರುವ “ಮಿಲಿಟರಿ ರೆಮಿನಸೆನ್ಸಸ್” ಪುಸ್ತಕದಲ್ಲಿ ನಂದಿಬೆಟ್ಟದಲ್ಲಿ ಅವರು ತಂಗಿದ್ದು ಆರೋಗ್ಯ ಸುಧಾರಿಸಿಕೊಂಡಿದ್ದರ ಕುರಿತು ಹಾಗೂ ನಂದಿ ಬೆಟ್ಟದ ಸೌಂದರ್ಯದ ಬಗ್ಗೆ ಬರೆದಿದ್ದಾರೆ.
ಬೆಳಗಿನ ಕೆಲ ಗಂಟೆಗಳು ಸೂರ್ಯನ ಶಾಖ ತಟ್ಟಬಾರದು, ವಾಹನ ಮಾಲಿನ್ಯದಿಂದ ದೂರವಿರಬೇಕು, ಮನಸ್ಸಿಗೆ ಮುದನೀಡುವ ತಂಪಾದ ವಾತಾವರಣ ಬೇಕು, ಉಲ್ಲಾಸ ಮತ್ತು ಜೀವನೋತ್ಸಾಹವನ್ನು ತುಂಬಿಕೊಳ್ಳಬೇಕು, ಎಲ್ಲ ಜಂಜಡಗಳಿಂದ ದೂರವುಳಿಯಬೇಕು ಎಂದಿರುವವರು ನಂದಿಬೆಟ್ಟಕ್ಕೆ ಭೇಟಿ ನೀಡಬಹುದು. ಮಂಜು ಮುಸುಕಿದ ಬೆಟ್ಟದಲ್ಲಿ ಗಿಡಮರಗಳ ನಡುವೆ ಹೆಜ್ಜೆಯಿಡುತ್ತಾ ಸಾಗುತ್ತಿದ್ದರೆ ಮನಸ್ಸಿಗೆ ಆನಂದ, ಸಂಭ್ರಮ, ಹಿತವಾದ ಅನುಭವ ಉಂಟಾಗುತ್ತದೆ.
ನಂದಿಬೆಟ್ಟದಲ್ಲಿ ಬೆಳಗಿನ ಸಮಯದಲ್ಲಿ ಒಂದೊಂದೇ ಹೆಜ್ಜೆ ಇಡುತ್ತಾ ಸಾಗುವುದು ಪುಟ್ಟಪುಟ್ಟ ಸಂಭ್ರಮಕ್ಕೆ ಕಾರಣವಾಗುತ್ತದೆ. ಜೇಮ್ಸ್ ವೆಲ್ಷ್ ಬರೆದಂತೆ ನಂದಿಬೆಟ್ಟ ಅಕ್ಷರಶಃ ಸ್ಕಾಟ್ ಲೆಂಡ್ ರೀತಿಯೇ ಈಗಲೂ ಇದೆ. ಮುಂಜಾವಿನಲ್ಲಿ ಆವರಿಸಿಕೊಂಡ ದಟ್ಟ ಮಂಜಿನ ನಡುವೆ ಅಸ್ಪಷ್ಟ ದಾರಿಯಲ್ಲಿ ಸಾಗಿದಂತೆ ನಿಗೂಢ ಸ್ಥಳದಲ್ಲಿ ಸಂಚರಿಸುವಂತೆ ಭಾಸವಾಗುತ್ತದೆ. ಮಂಜು ಕರಗಿ ಗಿಡಮರಗಳ ಎಲೆಗಳಿಂದ ಉದುರುವ ನೀರಹನಿಗಳು ನಮ್ಮನ್ನು ತೋಯಿಸುತ್ತಾ ನಿಸರ್ಗದೊಳಗೆ ಸೆಳೆದುಕೊಳ್ಳುತ್ತವೆ. ಹಕ್ಕಿಗಳ ಚಿಲಿಪಿಲಿ ನಾದ ಸಮ್ಮೋಹನಗೊಳಿಸುತ್ತವೆ.
ಕುವೆಂಪು ಅವರು ತಮ್ಮ ಆತ್ಮಕಥೆ “ನೆನಪಿನ ದೋಣಿಯಲ್ಲಿ” ನಂದಿಬೆಟ್ಟದ ಬಗ್ಗೆ – “ನಂದಿಬೆಟ್ಟವು ರಮಣೀಯವೂ ಶಾಂತವೂ ಆದ ಸ್ಥಳ. ಅಮೃತಸರೋವರವು ಆದರ್ಶವಾಗಿದೆ. ಕಿನ್ನರ ಪ್ರಪಂಚದಲ್ಲಿ ಇದ್ದಂತೆ! ಸುತ್ತಲೂ ಅನೇಕ ನೂರು ಮೈಲಿಗಳ ವಿಸ್ತಾರವಾದ ಬಯಲುಸೀಮೆಯ ದೃಶ್ಯ. ಇದೊಂದು ಮಾತ್ರ ಮಲೆನಾಡಿನ ಒಂದು “ದ್ವೀಪದಂತೆ!” ಅಲ್ಲಲ್ಲಿ ಗುಡ್ಡಗಳು ಬೆಳ್ಳಗೆ ಕೆಂಪಗೆ ಹೊಳೆಯುವ ಕೆರೆಗಳು. ಮಂಜು ಕವಿದು ಸುತ್ತಲೂ ಲೋಕವೂ ನಾಕವೂ ಭೂಮಿಯೂ ಆಕಾಶವೂ ಒಂದು ಹಾಲ್ಗಡಲಂತೆ ತೋರಿತು” ಎಂದು ಬರೆದಿದ್ದಾರೆ.
ಬ್ರಿಟಿಷ್ ಜನರಲ್ ಜೇಮ್ಸ್ ವೆಲ್ಷ್ ರೀತಿಯಲ್ಲೇ ತಮ್ಮ ಆರೋಗ್ಯವನ್ನು ಸುಧಾರಣೆಗಾಗಿ ಗಾಂಧೀಜಿ 1927 ರಲ್ಲಿ ಮತ್ತು 1936 ರಲ್ಲಿ ಎರಡು ಬಾರಿ ನಂದಿಬೆಟ್ಟದಲ್ಲಿ ತಂಗಿದ್ದರು.
1834ರಿಂದ 1860ರವರೆಗೆ ಮೈಸೂರು ರಾಜ್ಯದ ಬ್ರಿಟಿಷ್ ಕಮೀಷನರ್ ಆಗಿದ್ದ ಮಾರ್ಕ್ ಕಬ್ಬನ್ ನಂದಿಬೆಟ್ಟದ ಮೇಲೆ ಬಂಗಲೆಯನ್ನು ನಿರ್ಮಿಸಿ ವರ್ಷದಲ್ಲಿ ಬೇಸಿಗೆಯ ಮೂರು ತಿಂಗಳ ಕಾಲ ಇಲ್ಲಿಂದಲೇ ಆಡಳಿತ ನಡೆಸುತ್ತಿದ್ದರು. ಈಗ ಆ ಬಂಗಲೆಯನ್ನು ನೆಹರೂ ಭವನವೆನ್ನುತ್ತಾರೆ. ಪ್ರವಾಸಿಗರು ಅದರಲ್ಲಿನ ಕೋಣೆಗಳನ್ನು ಆನ್ ಲೈನ್ ಮೂಲಕ ಕಾದಿರಿಸಿ ತಂಗಬಹುದಾಗಿದೆ.
ನಂದಿಬೆಟ್ಟದ ಸಮಗ್ರ ಅಭಿವೃದ್ಧಿಗಾಗಿ ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಪ್ರವಾಸೋದ್ಯಮ ಇಲಾಖೆಯು ವಿವಿಧ ಅಬಿವೃದ್ಧಿ ಕಾರ್ಯಗಳನ್ನು ನಡೆಸಿದೆ.
-ಡಿ.ಜಿ.ಮಲ್ಲಿಕಾರ್ಜುನ

Sidlaghatta Cocoon Market Watch – 19/08/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 19/08/2020

CB Lots: 564
Qty: 28458 Kgs
Max: 350
Min: 225
Avg: 297
BV Lots: 02
Qty: 124 Kgs
Max: 290
Min: 290
AVG: 290
 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ತಾಲ್ಲೂಕು ಕೇಂದ್ರ ಸ್ಥಾನದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಿ – ಕದಸಂಸ

0

ನಗರದ ತಾಲ್ಲೂಕು ಕಚೇರಿಯಲ್ಲಿ ಮಂಗಳವಾರ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಕದಸಂಸ ಪದಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಕದಸಂಸ ಜಿಲ್ಲಾ ಸಂಘಟನಾ ಸಂಚಾಲಕ ದಡಂಘಟ್ಟ ತಿರುಮಲೇಶ್ ಮಾತನಾಡಿದರು.

 ತಾಲ್ಲೂಕು ಕೇಂದ್ರ ಸ್ಥಾನದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಈಗಾಗಲೇ ಗುರುತಿಸಲಾಗಿರುವ ನಾಲ್ಕು ಸ್ಥಳಗಳ ಪೈಕಿ ಒಂದನ್ನು ಆಯ್ಕೆ ಮಾಡಿ, ಕೂಡಲೇ ಸರ್ಕಾರಕ್ಕೆ ಕಳುಹಿಸುವಂತೆ ಅವರು ಒತ್ತಾಯಿಸಿದರು.

 ಕಳೆದ ಕೆಲ ವರ್ಷಗಳಿಂದ ದಲಿತರ ಏಳಿಗೆಗಾಗಿ ಸ್ವಾತಂತ್ರ್ಯ ದಿನಾಚರಣೆ ವಿರೋಧಿಸಿ ಸಂಘಟನೆಯಿಂದ ನಡೆಸುತ್ತಾ ಬಂದಿದ್ದ ಪ್ರತಿಭಟನೆಯನ್ನು ಈ ಬಾರಿ ನಡೆಸಲಿಲ್ಲ. ನಮ್ಮ ಬೇಡಿಕೆಗಳನ್ನು ತಾಲ್ಲೂಕು ಆಡಳಿತಕ್ಕೆ ನೀಡಿದಲ್ಲಿ ಬಗೆಹರಿಸಲಾಗುವುದು ಎಂಬ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ತಹಶೀಲ್ದಾರ್‌ರನ್ನು ಭೇಟಿ ಮಾಡಿ ಈಗಾಗಲೇ ಕೇಂದ್ರ ಸ್ಥಾನದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ನಾಲ್ಕು ಸ್ಥಳಗಳನ್ನು ಗುರುತಿಸಲಾಗಿದ್ದು ಸೂಕ್ತ ಸ್ಥಳವನ್ನು ಆಯ್ಕೆ ಮಾಡಿ ತಾಲ್ಲೂಕು ಆಡಳಿತ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದರು.

 ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ಸೀತಹಳ್ಳಿ ಗ್ರಾಮದ ಸರ್ವೇ ನಂ 29 ರಲ್ಲಿರುವ 23 ಗುಂಟೆ ಸರ್ಕಾರಿ ಗೋಮಾಳ ಜಮೀನಿನಲ್ಲಿ ಮೂರು ವರ್ಷಗಳಿಮದ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿರುವವರಿಗೆ ಕೂಡಲೇ ಮನೆ ನಿರ್ಮಾಣ ಮಾಡಿಕೊಡಬೇಕು. ತಾಲ್ಲೂಕಿನಾದ್ಯಂತ ಒತ್ತುವರಿಯಾಗಿರುವ ಪರಿಶಿಷ್ಠ ಜಾತಿ ಹಾಗೂ ಪಂಗಡದ ಸ್ಮಶಾನಗಳನ್ನು ಕೂಡಲೇ ತೆರವುಗೊಳಿಸಬೇಕು. ದಲಿತ ಕೇರಿಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

 ತಹಶೀಲ್ದಾರ್ ಕೆ.ಅರುಂಧತಿ ಮಾತನಾಡಿ, ಅಂಬೇಡ್ಕರ್ ಭವನ ನಿರ್ಮಾಣ ಹಾಗೂ ಗುಡಿಸಲು ವಾಸಿಗಳಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.

 ಈ ಸಂದರ್ಭದಲ್ಲಿ ಕದಸಂಸ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್, ತಾಲ್ಲೂಕು ಸಂಘಟನಾ ಸಂಚಾಲಕ ಯಣ್ಣಂಗೂರು ಸುಬ್ರಮಣಿ, ಪದಾಧಿಕಾರಿಗಳಾದ ದಿಬ್ಬೂರಹಳ್ಳಿ ಗೊರ‍್ಲಪ್ಪ, ಲೋಕೆಶ್, ಚಂದಗಾನಹಳ್ಳಿ ವೆಂಕಟೇಶ್, ದಬರಗಾನಹಳ್ಳಿ ರಾಜಪ್ಪ ಹಾಜರಿದ್ದರು.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮಂಗಳವಾರ 8 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ನಗರ ಮತ್ತು ತಾಲ್ಲೂಕಿನಲ್ಲಿ ಮಂಗಳವಾರ 8 ಮಂದಿಗೆ ಕೊರೊನಾ ಸೋಂಕು ತಗುಲಿದೆ. ನಗರದ

  1. 2ನೇ ನಗರ್ತಪೇಟೆಯ 60 ವರ್ಷದ ಗಂಡಸು,
  2. ಹಂಡಿಗನಾಳದ 30 ವರ್ಷದ ಗಂಡಸು,
  3. ದನಮಿಟ್ಟೇನಹಳ್ಳಿಯ 22 ವರ್ಷದ ಮಹಿಳೆ,
  4. ಮಾರ್ಗಾನಪರ್ತಿಯ 25 ವರ್ಷದ ಮಹಿಳೆ,
  5. ಅಂಬಿಗನಹಳ್ಳಿಯ 45 ವರ್ಷದ ಗಂಡಸು , 47 ವರ್ಷದ ಗಂಡಸು
  6. ಮುತ್ತೂರಿನ 70 ವರ್ಷದ ಗಂಡಸು ,
  7. ಚೌಡಸಂದ್ರದ 30 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Sidlaghatta Cocoon Market Watch – 18/08/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 18/08/2020

CB Lots: 508
Qty: 26586 Kgs
Max: 350
Min: 200
Avg: 298
BV Lots: 03
Qty: 116 Kgs
Max: 350
Min: 250
AVG: 305
 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ರೇಷ್ಮೆ ಕೃಷಿಯಲ್ಲಿ ಊಜಿ ನಿರ್ವಹಣೆ ಕುರಿತು ಕಾರ್ಯಾಗಾರ

0

ತಾಲ್ಲೂಕಿನ ಬೋದಗೂರು ಗ್ರಾಮದಲ್ಲಿ ಪ್ರಗತಿಪರ ರೇಷ್ಮೆ ಬೆಳೆಗಾರ ನಾಗೇಶ್ ಅವರ ಹುಳು ಸಾಕಾಣಿಕೆಯ ಮನೆಯಲ್ಲಿ ಚಿಂತಾಮಣಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡದಿಂದ ಊಜಿನೊಣದ ನಿರ್ವಹಣೆಯಲ್ಲಿ ಲಿಂಗಾಕರ್ಷಕ ಬಲೆಯ ಬಳಕೆಯ ಕುರಿತು ರೇಷ್ಮೆಕೃಷಿಕರಿಗೆ ಹೊರಾಂಗಣ ತರಬೇತಿ ಕಾರ್ಯಾಗಾರದಲ್ಲಿ ಪ್ರಾತ್ಯಕ್ಷಿಕೆ ನೀಡಿ ಕುರುಬೂರಿನ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ವಿನೋದ ಮಾತನಾಡಿದರು.

 ರೇಷ್ಮೆ ಬೆಳೆಯಲ್ಲಿ ಊಜಿ ನೊಣಗಳ ನಿಯಂತ್ರಣಕ್ಕೆ ಹೊಸ ತಂತ್ರಜ್ಞಾನವನ್ನು ಅವಿಷ್ಕರಿಸಿದ್ದು, ಅದರಿಂದ ರೇಷ್ಮೆ ಬೆಳೆಗಾರರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.

ರೇಷ್ಮೆ ಬೆಳೆಯಲ್ಲಿ ಊಜಿ ನೊಣಗಳ ನಿಯಂತ್ರಣ ರೈತರಿಗೆ ಈಗಾಗಲೇ ಚಿರಪರಿಚಿತವಾದ ತಂತ್ರಜ್ಞಾನಗಳಾದ ಹುಳುಸಾಕಾಣಿಕಾ ಮನೆಯಲ್ಲಿ ಸೊಳ್ಳೆಪರದೆ ಅಳವಡಿಕೆ, ಆಸಿಫೋರ್, ಊಜಿಮಾತ್ರೆಯ ಬಳಕೆ, ಪರತಂತ್ರ ಜೀವಿಬಳಕೆಯ ಹೊರತಾಗಿಯೂ ಊಜಿ ನಿರ್ವಹಣೆ ಕಷ್ಟಸಾಧ್ಯವಾಗುತ್ತಿರುವುದಂತೂ ಸತ್ಯ. ಇತ್ತೀಚಿನ ಸಂಶೋಧನೆಯಾದ ಲಿಂಗಾಕರ್ಷಕ ಬಲೆಯ ಬಳಕೆ ಊಜಿನಿರ್ವಹಣೆಯಲ್ಲಿ ಖಂಡಿತವಾಗಿಯೂ ರೈತರಿಗೆ ಬಹಳ ಉಪಯೋಗಕರವೆಂದು ಹೇಳಿದರು.

 ಪ್ರತಿ ಕೀಟವೂ ತನ್ನದೇ ಆದ ಫೆರಮೋನ್‌ಗಳನ್ನು ಸ್ರವಿಸಿ ವಿರುದ್ಧ ಲಿಂಗಿ ಜೀವಿಗಳನ್ನು ತನ್ನತ್ತ ಸೆಳೆದು ಅದರೊಡನೆ ಸಂಯೋಜನೆ ಹೊಂದಿ ವಂಶಾಭಿವೃದ್ಧಿ ಮಾಡುತ್ತದೆ. ಹಾಗೆಯೇ ಊಜಿಯಲ್ಲಿಯೂ ಸಹ ಹೆಣ್ಣುನೊಣ ಸ್ರವಿಸುವ ಫೆರಮೋನ್‌ನ್ನು ಹಳದಿ ಅಂಟುಪಟ್ಟಿಯ ಜೊತೆ ಬಳಸಿದಾಗ ಆಕರ್ಷಿತವಾಗುವ ಗಂಡುನೊಣಗಳು ಅಂಟುಪಟ್ಟಿಗೆ ಸಿಲುಕಿ ಸಾಯುತ್ತವೆ. ಆಗ ಒಂದೊಮ್ಮೆ ಹೆಣ್ಣುನೊಣಗಳು ಹುಳುಮನೆಯ ಒಳಹೊಕ್ಕಿ ಮೊಟ್ಟೆಯಿಟ್ಟರೂ ಅವು ಫಲಿತಗೊಳ್ಳದೆ ಇರುವುದರಿಂದ ಮುಂದೆ ವಂಶಾಭಿವೃದ್ಧಿಯಾಗುವುದಕ್ಕೆ ತಡೆ ಬೀಳುವುದು. ಇದರಿಂದ ಊಜಿ ನಿರ್ವಹಣೆ ತುಂಬಾ ಪರಿಣಾಮಕಾರಿಯಾಗಿ ಆಗುತ್ತದೆ ಎಂದು ತಿಳಿಸಿಕೊಟ್ಟರು.

 ರೈತರಿಗೆ ಪ್ರಾತ್ಯಕ್ಷಿಕೆ ವಸ್ತುಗಳನ್ನು ನೀಡಿ, ಊಜಿ ನಿಯಂತ್ರಣದ ಕುರಿತಾದ ವರದಿಯನ್ನು ನೀಡುವಂತೆ ವಿಜ್ಞಾನಿಗಳು ವಿನಂತಿಸಿದರು.

 ಬೋದಗೂರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಬೇಸಾಯಶಾಸ್ತ್ರ ತಜ್ಞ ವಿಶ್ವನಾಥ್, ವಿಸ್ತರಣಾ ವಿಜ್ಞಾನಿ ಡಾ.ತನ್ವೀರ್ ಅಹಮದ್, ರೇಷ್ಮೆ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ವೆಂಕಟಸ್ವಾಮಿರೆಡ್ಡಿ, ಸಿ.ಇ.ಓ. ಜನಾರ್ಧನ್‌ಮೂರ್ತಿ, ಎಚ್.ಕೆ ಸುರೇಶ್‌,‌ ಬಿ.ಎನ್.ಮುನಿರಾಜು, ಪ್ರಭಾಕರ್, ಎಚ್.ಕೆ.ಸುರೇಶ್, ಬಿ.ಎನ್.ಸುರೇಶ್, ಅಭಿಲಾಶ್ ಹಾಜರಿದ್ದರು.

 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಒಂದೂಕಾಲು ಕೋಟಿ ರೂ ವೆಚ್ಚದಲ್ಲಿ ರಂಗಧಾಮ ಕಾಲುವೆಯ ದುರಸ್ತಿ – ಶಾಸಕ ವಿ.ಮುನಿಯಪ್ಪ

0

ಚಿಕ್ಕಬಳ್ಳಾಪುರ ತಾಲೂಕಿನ ಹೊಸಹುಡ್ಯದಿಂದ ಹಂಡಿಗನಾಳ ಮಾರ್ಗವಾಗಿ ನಿರ್ಮಿಸಿರುವ ರಂಗಧಾಮ ಕಾಲುವೆಯನ್ನು ಸೋಮವಾರ ಉಪ ವಿಭಾಗಾಧಿಕಾರಿ ರಘುನಂದನ್, ಸಣ್ಣ ನೀರಾವರಿ ಇಲಾಖೆಯ (ಎಚ್.ಎನ್. ವ್ಯಾಲಿ) ಎಂಜಿನಿಯರ್ ಪ್ರದೀಪ್ ಮತ್ತು ತಹಶೀಲ್ದಾರ್ ಕೆ.ಅರುಂಧತಿ ಅವರೊಂದಿಗೆ ಪರಿಶೀಲಿಸಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.

 ಮುವ್ವತ್ತು ವರ್ಷಗಳ ಹಿಂದೆ ಕೆಲವು ಲಕ್ಷ ರೂಪಾಯಿ ವೆಚ್ಚದಲ್ಲಿ ನಡೆದ ರಂಗಧಾಮ ಕಾಲುವೆಯ ಗರಿಯು ಒತ್ತುವರಿಯಾಗಿರುವುದನ್ನು ತೆರವುಗೊಳಿಸಿ ಕಾಲುವೆಯ ದುರಸ್ತಿ ಕಾಮಗಾರಿ ನಡೆಸಲು ಈಗ ಒಂದೂಕಾಲು ಕೋಟಿ ರೂ ವೆಚ್ಚವಾಗುತ್ತಿದೆ ಎಂದು ಅವರು ತಿಳಿಸಿದರು.

 ಸುಮಾರು 30 ವರ್ಷಗಳ ಹಿಂದೆ ನಿರ್ಮಿಸಿರುವ ರಂಗಧಾಮ ಕಾಲುವೆಯನ್ನು ಅಭಿವೃದ್ಧಿಗೊಳಿಸಲು ಇದೀಗ ಕಾಲ ಕೂಡಿ ಬಂದಿದೆ. ಈಗಾಗಲೇ ರಂಗಧಾಮ ಕಾಲುವೆಯಲ್ಲಿ ತುಂಬಿದ್ದ ಗಿಡ ಗಂಟೆಗಳನ್ನು ತೆರವುಗೊಳಿಸುವ ಕಾರ್ಯಚರಣೆ ನಡೆಯುತ್ತಿದೆ. ಸತತ ಬರಗಾಲದಿಂದ ತತ್ತರಿಸುತ್ತಿರುವ ಶಿಡ್ಲಘಟ್ಟ ತಾಲೂಕಿಗೆ ಎತ್ತಿನ ಹೋಳೆ ಮತ್ತು ಎಚ್ ಎನ್ ವ್ಯಾಲಿ ಯೋಜನೆಗಳ ಮೂಲಕ ಕೆರೆಗಳಿಗೆ ನೀರು ಹರಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿದರು.

 ಶಾಸಕರು ಮತ್ತು ಅಧಿಕಾರಿಗಳ ಭೇಟಿಯ ವೇಳೆಯಲ್ಲಿ ನೆರೆದಿದ್ದ ಗ್ರಾಮಸ್ಥರು, ರಂಗಧಾಮ ಕಾಲುವೆಯನ್ನು ಕೆಲವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಅದನ್ನು ತೆರವುಗೊಳಿಸಿ ಜೊತೆಗೆ ಕಾಲುವೆಯಲ್ಲಿ ತುಂಬಿರುವ ಹೂಳನ್ನು ತೆಗೆದು ನೀರು ಹರಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದರು.

 ಕ್ಷೇತ್ರದ ಅಭಿವೃದ್ದಿಗಾಗಿ ಈ ಹಿಂದೆ ಬಿಡುಗಡೆಯಾಗಿದ್ದ 23  ಕೋಟಿ ರೂ.ಗಳ ಅನುದಾನವನ್ನು ಸರ್ಕಾರ ತಡೆ ಹಿಡಿದಿರುವುದರಿಂದ ಅಭಿವೃದ್ದಿ ಕೆಲಸಗಳಿಗೆ ಹಿನ್ನಡೆಯಾಗಿದೆ. ಈ ವಿಚಾರವನ್ನು ಮುಂದಿಟ್ಟು ಸರ್ಕಾರಕ್ಕೆ ಈಗಾಗಲೇ ಪತ್ರ ವ್ಯವಹಾರ ನಡೆಸಿದರೂ ಸೂಕ್ತ ರೀತಿಯ ಸ್ಪಂದನೆ ಸಿಗಲಿಲ್ಲ. ಹೀಗಾಗಿ ಮುಂದಿನ ಅಧಿವೇಶನದಲ್ಲಿ ಸರ್ಕಾರದ ನಿರ್ಲಕ್ಷ್ಯ ಧೋರಣೆ ವಿರುದ್ದ ದನಿ ಎತ್ತುವುದಾಗಿ ನುಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಸುಬ್ರಮಣಿ, ಗ್ರಾಮ ಪಂಚಾಯಿತಿ ಸದಸ್ಯ ಜಯರಾಂ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಮುನಿ ನಂಜಪ್ಪ, ವೇಣು ಹಾಜರಿದ್ದರು.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸೋಮವಾರ 4 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ನಗರ ಮತ್ತು ತಾಲ್ಲೂಕಿನಲ್ಲಿ ಸೋಮವಾರ 4 ಮಂದಿಗೆ ಕೊರೊನಾ ಸೋಂಕು ತಗುಲಿದೆ. ನಗರದ

  1. ದರ್ಗಾ ಮೊಹಲ್ಲಾದ 24 ವರ್ಷದ ಮಹಿಳೆ,
  2. ಹಾರಡಿಯ 25 ವರ್ಷದ ಮಹಿಳೆ,
  3. ಚೀಮಂಗಲದ 23 ವರ್ಷದ ಮಹಿಳೆ, 75 ವರ್ಷದ ಗಂಡಸಿಗೆ ಸೋಂಕು ತಗುಲಿದೆ.

 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Sidlaghatta Cocoon Market Watch – 17/08/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 17/08/2020

CB Lots: 442
Qty: 22880 Kgs
Max: 350
Min: 100
Avg: 305
BV Lots: 07
Qty: 382 Kgs
Max: 316
Min: 265
AVG: 302
 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಅರಣ್ಯ ಭೂಮಿ ಒತ್ತುವರಿ ಪ್ರಯತ್ನ – ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ

0

ತಾಲ್ಲೂಕಿನ ವಿವಿದೆಡೆ ಅರಣ್ಯಭೂಮಿಯನ್ನು ನಿರಾತಂಕವಾಗಿ ಒತ್ತುವರಿ ಮಾಡಿಕೊಳ್ಳುತ್ತಿದ್ದು, ಅಡೆತಡೆಯಾಗಲೀ ನಿಲ್ಲಿಸುವುದಾಗಲೀ ಅರಣ್ಯ ಇಲಾಖೆಯವರು ಮಾಡುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

 ತಾಲ್ಲೂಕಿನ ಪೂಲಕುಂಟಹಳ್ಳಿಯ ಹಕ್ಕಿಪಿಕ್ಕಿ ಕಾಲೋನಿಯ ಬಳಿ ಜೆಸಿಬಿ ಬಳಸಿ ಅರಣ್ಯ ಭೂಮಿಯಲ್ಲಿ ಕಾಮಗಾರಿ ನಡೆಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಇದ್ದಾರೆಯೇ, ಇದ್ದರೂ ಕೆಲಸ ಮಾಡುತ್ತಿರುವರೇ ಎಂದು ಅನೇಕರು ಪ್ರಶ್ನಿಸಿದ್ದಾರೆ. ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ಎ.ನಕ್ಕಲಹಳ್ಳಿಯ ಅರಣ್ಯ ಪ್ರದೇಶದಲ್ಲಿ ಸುಮಾರು 150 ಎಕರೆಯಷ್ಟು ಒತ್ತುವರಿ ಆಗಿದೆ. ಅಜ್ಜಕದಿರೇನಹಳ್ಳಿ ಅರಣ್ಯ ಪ್ರದೇಶದಲ್ಲಿಯೂ ಒತ್ತುವರಿ ನಿರಾತಂಕವಾಗಿ ಸಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಅರಣ್ಯ ಪ್ರದೇಶವನ್ನು ಉಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಭಾನುವಾರ 12 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ನಗರ ಮತ್ತು ತಾಲ್ಲೂಕಿನಲ್ಲಿ ಭಾನುವಾರ 12 ಮಂದಿಗೆ ಕೊರೊನಾ ಸೋಂಕು ತಗುಲಿದೆ. ನಗರದ

  1. ಗ್ರಾಮಾಂತರ ಪೊಲೀಸ್ ಠಾಣೆಯ 29 ವರ್ಷದ ಮಹಿಳೆ,
  2. ತಾಲ್ಲೂಕಿನ ಸಾದಲಿಯ 16 ವರ್ಷದ ಯುವತಿ,
  3. ಹಾರಡಿಯ 55 ವರ್ಷದ ಮಹಿಳೆ, 33 ವರ್ಷದ ಗಂಡಸು,
  4. ಸುಂಡ್ರಹಳ್ಳಿಯ 30 ವರ್ಷದ ಗಂಡಸು, 38 ವರ್ಷದ ಗಂಡಸು, 43 ವರ್ಷದ ಗಂಡಸು,
  5. ಕನ್ನಪ್ಪನಹಳ್ಳಿಯ 23 ವರ್ಷದ ಗಂಡಸು, 33 ವರ್ಷದ ಗಂಡಸು, 35 ವರ್ಷದ ಗಂಡಸು, 60 ವರ್ಷದ ಗಂಡಸು, 55 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Sidlaghatta Cocoon Market Watch – 16/08/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 16/08/2020

CB Lots: 569
Qty:. 29891 Kgs
Max: 351
Min: 195
Avg: 296
BV Lots: 08
Qty: 494 Kgs
Max: 322
Min: 121
AVG: 304
 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಚಿಕ್ಕಬಳ್ಳಾಪುರ ಜಿಲ್ಲೆಯ ಮಣ್ಣಿಗೆ ಧೀಶಕ್ತಿಯ ಗುಣವಿದೆ

0

ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ವಿಶ್ಲೇಷಣೆ, ವಿದ್ಯಾಗಮ ಯೋಜನೆಯ ಅನುಷ್ಟಾನದ ಪ್ರಗತಿಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಜಿ.ನಾಗೇಶ್ ಮಾತನಾಡಿದರು.

ಭೌಗೋಳಿಕವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯು ಬಯಲುಸೀಮೆ ಪ್ರದೇಶವಾದರೂ ಇಲ್ಲಿನ ಮಣ್ಣಿಗೆ ಧೀಶಕ್ತಿಯ ಗುಣವಿದೆ. ಇಲ್ಲಿನ ರೈತರು ಶ್ರಮಜೀವಿಗಳು, ಮಿಲ್ಕ್ ಮತ್ತು ಸಿಲ್ಕ್ ಗೆ ಜಾಗತಿಕಮಟ್ಟದಲ್ಲಿ ಖ್ಯಾತಿ ಪಡೆದಿದ್ದು, ಜಿಲ್ಲೆಯ ಸರ್.ಎಂ.ವಿಶ್ವೇಶ್ವರಯ್ಯರಂತಹ ಧೀಮಂತರನ್ನು ನೀಡಿದೆ ಎಂದು ಅವರು ತಿಳಿಸಿದರು.

ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯು ರಾಜ್ಯಕ್ಕೇ ಪ್ರಥಮಸ್ಥಾನದಲ್ಲಿದ್ದು ಒಂದು ಮೈಲಿಗಲ್ಲು ಸ್ಥಾಪಿಸಿದೆ. ಪ್ರತಿವರ್ಷದಂತೆ ಕೇವಲ ಒಟ್ಟಾರೆ ಫಲಿತಾಂಶದ ಆಧಾರದ ಮೇಲೆ ರಾಜ್ಯಮಟ್ಟದ ಗ್ರೇಡ್ ನೀಡಿಲ್ಲ. ವಿದ್ಯಾರ್ಥಿಗಳ ಎಲ್ಲಾ ಶ್ರೇಣಿಯ ಫಲಿತಾಂಶದ ಸರಾಸರಿ ಪಡೆದು ಪ್ರಥಮಸ್ಥಾನ ನೀಡಿರುವುದರಿಂದ ಶಿಕ್ಷಕರ, ಅಧಿಕಾರಿಗಳ, ಜನಪ್ರತಿನಿಧಿಗಳ ಪ್ರಾಮಾಣಿಕ ಪ್ರಯತ್ನದ ಫಲವಾಗಿದೆ ಎಂದರು.

 ಕೊರೋನಾ ಸಂಕಷ್ಟದ ನಡುವೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದು ಒಂದು ಸವಾಲಾಗಿತ್ತು. ಆ ವೇಳೆ ಇಲಾಖೆಯು ಕೈಗೊಂಡ ರಕ್ಷಣಾ ಕಾರ್ಯಾಚರಣಾ ತಂತ್ರಗಳು ಉತ್ತಮವಾಗಿ ಅನುಷ್ಟಾನಗೊಂಡವು. ಅಂತಿಮವಾಗಿ ಪರೀಕ್ಷೆಯ ವೇಳಾಪಟ್ಟಿ ಪ್ರಕಟವಾದ ತಕ್ಷಣವೇ ಜಿಲ್ಲಾಡಳಿತದ ಸಹಕಾರದಲ್ಲಿ ಪ್ರತಿವಿದ್ಯಾರ್ಥಿಗಳ ದೂರವಾಣಿ ಸಂಖ್ಯೆ ಸಂಗ್ರಹಿಸಿ ಪ್ರತಿಶಾಲೆಯ ಶಿಕ್ಷಕರೂ ಮನೆಮನೆಗೆ ತೆರಳಿ ಮಕ್ಕಳನ್ನು ಪರೀಕ್ಷೆಗೆ ಸಿದ್ಧಗೊಳಿಸಿದ್ದಕ್ಕೆ ಫಲ ಸಿಕ್ಕಿದೆ. ಇದೇ ರೀತಿಯ ಫಲಿತಾಂಶವನ್ನು ಮುಂದಿನ ವರ್ಷಗಳಲ್ಲಿಯೂ ಉಳಿಸಿಕೊಳ್ಳಲಾಗುವುದು ಎಂದರು.

ಕ್ಷೇತ್ರಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಮಾತನಾಡಿ, ಕೋವಿಡ್-19 ಹಿನ್ನೆಲೆಯಲ್ಲಿ ಶಾಲಾ ಭೋಧನೆಗೆ ಅಡ್ಡಿಯಾಗಿರುವುದರಿಂದ ಆನ್‌ಲೈನ್, ಆಫ್‌ಲೈನ್ ಅಥವಾ ಮತ್ತಿತರ ಮಾರ್ಗಗಳನ್ನು ಅನುಸರಿಸಿ ಕಲಿಕೆಯಲ್ಲಿ ಉಂಟಾಗಬಹುದಾದ ತಡೆಯನ್ನು ಹೋಗಲಾಡಿಸಬೇಕಿದೆ. ಪ್ರತಿ ತರಗತಿಯ ಮಕ್ಕಳ ಕಲಿಕೆಯಲ್ಲಿನ ಅಂತರವನ್ನು ಕ್ಷೀಣಿಸಲು ವಿದ್ಯಾಗಮ ನಿರಂತರ ಕಲಿಕಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಬೇಕಿದೆ ಎಂದರು.

 ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದ ಶಾಲಾವಾರು ವಿಶ್ಲೇಷಣೆ, ವಿದ್ಯಾಗಮ ಯೋಜನೆಯ ಪ್ರಗತಿ ಕುರಿತು ಪರಿಶೀಲನೆ ನಡೆಯಿತು. ಉಪನಿರ್ದೇಶಕ ಎಸ್.ಜಿ.ನಾಗೇಶ್, ಬಿಇಒ ಆರ್.ಶ್ರೀನಿವಾಸ್, ಅಕ್ಷರದಾಸೋಹ ಸಹಾಯಕನಿರ್ದೇಶಕ ಆಂಜನೇಯ, ಇಒ ಶಿವಲಿಂಗಯ್ಯ, ಶಿಕ್ಷಣಸಂಯೋಜಕ ಭಾಸ್ಕರಗೌಡ, ವಿಷಯಪರಿವೀಕ್ಷಕಿ ಕೃಷ್ಣಕುಮಾರಿ ಅವರನ್ನು ಸನ್ಮಾನಿಸಲಾಯಿತು.

ಶಿಕ್ಷಣಾಧಿಕಾರಿ ಶಿವಲಿಂಗಯ್ಯ, ತಾಲ್ಲೂಕು ಅಕ್ಷರದಾಸೋಹ ಸಹಾಯಕ ನಿರ್ದೇಶಕ ಆಂಜನೇಯ, ವಿಷಯಪರಿವೀಕ್ಷಕಿ ಕೃಷ್ಣಕುಮಾರಿ, ಶಿಕ್ಷಕರಾದ ಬೈರಾರೆಡ್ಡಿ, ಎಲ್.ವೆಂಕಟರೆಡ್ಡಿ, ಎಚ್.ಎಸ್.ರುದ್ರೇಶಮೂರ್ತಿ, ಗೋಪಿನಾಥ್, ಡಿ.ಸಿ.ಗೋಪಿನಾಥ್, ಶಿಕ್ಷಣಸಂಯೋಜಕ ಭಾಸ್ಕರಗೌಡ, ಕೆಂಪಣ್ಣ, ಸಿದ್ಧರಾಜು, ಸತ್ಯನಾರಾಯಣ್ ಹಾಜರಿದ್ದರು.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಶನಿವಾರ 2 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ತಾಲ್ಲೂಕಿನಲ್ಲಿ August 15 ಶನಿವಾರ ಇಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ನಗರದ

  1. ರಹಮತ್ ನಗರ – 45(ಹೆಂ)
  2. ಕೆ ಕೆ ಪೇಟೆ – 54(ಗಂ) ಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಕೊರೊನಾ ಎಂಬ ಖಾಯಿಲೆ ಮನುಕುಲಕ್ಕೆ ದೊಡ್ಡ ಪಾಠ ಕಲಿಸಿದೆ – ಶಾಸಕ ವಿ.ಮುನಿಯಪ್ಪ

0

ಕೊರೊನಾ ಎಂಬ ಖಾಯಿಲೆ ಮನುಕುಲಕ್ಕೆ ದೊಡ್ಡ ಪಾಠ ಕಲಿಸಿದೆ. ಮಾನಸಿಕ ಶಕ್ತಿಯನ್ನು ಒಗ್ಗೂಡಿಸಿಕೊಂಡು, ಸರಳತೆಯನ್ನು ಮೈಗೂಡಿಸಿಕೊಂಡು, ಒಗ್ಗಟ್ಟಿನಿಂದ ಬದುಕಬೇಕು ಮತ್ತು ಸಮಾಜವನ್ನು ಕಟ್ಟಬೇಕು ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ 74 ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಆರ್ಥಿಕ ಪರಿಸ್ಥಿತಿ ಈಗ ಹದಗೆಟ್ಟಿದ್ದು, ಎಲ್ಲರೂ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು. ಕಷ್ಟದಲ್ಲಿರುವವರಿಗೆ ನೆರವಾಗಬೇಕು. ಇದುವೇ ಸ್ವಾತಂತ್ರ್ಯ ದಿನಾಚರಣೆಯ ನಿಜವಾದ ಅರ್ಥ ಎಂದರು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳು, ಉತ್ತಮ ಶಿಕ್ಷಕರು, ಕೊರೊನಾ ವಾರಿಯರ್ ಗಳಾಗಿ ದುಡಿದ ಆರೋಗ್ಯ ಇಲಾಖೆ ಸಿಬ್ಬಂದಿ, ನಗರಸಭೆ, ಪೊಲೀಸ್, ಶಿಕ್ಷಣ, ಕಂದಾಯ ಇಲಾಖೆಗಳ ಸಿಬ್ಬಂದಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕೊರೊನಾ ರೋಗದಿಂದ ಗುಣಮುಖರಾದವರು, ಯೋಧರು, ನರೇಗಾ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.
ತಹಶಿಲ್ದಾರ್ ಕೆ.ಅರುಂಧತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜಶೇಖರ್, ಸದಸ್ಯೆ ಪಂಕಜಾ ನಿರಂಜನ್, ಇಒ ಶಿವಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ ಮೂರ್ತಿ, ಆಡಳಿತ ವೈದ್ಯಾಧಿಕಾರಿ ಡಾ.ವಾಣಿ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ಸಿಡಿಪಿಒ ನಾಗಮಣಿ, ಆರ್.ಐ ಪ್ರಶಾಂತ್, ನಗರಸಭಾ ಸದಸ್ಯರಾದ ಅನಿಲ್ ಕುಮಾರ್, ಮುನಿರಾಜು ಹಾಜರಿದ್ದರು.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಮಕ್ಕಳು ಸಮಾಜಕ್ಕೆ ಆಸ್ತಿಯಾಗುವಂತೆ ಬೆಳೆಸಿ

0

ತಾಲ್ಲೂಕಿನ ಬಸವಾಪಟ್ಟಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆಯೋಜಿಸಿದ್ದ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಸನ್ಮಾನವನ್ನು ಸ್ವೀಕರಿಸಿ ನಿವೃತ್ತ ಶಿಕ್ಷಕ ಕೆಂಪೇಗೌಡ ಮಾತನಾಡಿದರು.

 ಮಕ್ಕಳಿಗೆ ಜ್ಞಾನವನ್ನು ನೀಡಿ, ಒಳಿತು ತಪ್ಪುಗಳ ಬಗ್ಗೆ ತಿಳುವಳಿಕೆ ಮೂಡಿಸಿ. ಮಾನವತ್ವ ಅವರ ಬದುಕಿನ ಭಾಗವಾಗಲಿ. ಅಂತಹ ಮಕ್ಕಳೇ ನಿಜವಾದ ಆಸ್ತಿ. ಅವರಿಗಾಗಿ ಪೋಷಕರು ಬೇರೆ ಆಸ್ತಿ ಕೂಡಿಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದರು.

 ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸಿ ಮತ್ತು ಸರ್ಕಾರಿ ಶಾಲೆಗಳನ್ನು ಉತ್ತಮಪಡಿಸಲು ಎಲ್ಲರೂ ಕೈಜೋಡಿಸಿ. ಪರಿಸರ ಉಳಿಸಿ ಬೆಳೆಸಲು ಎಲ್ಲರಲ್ಲೂ ಕಾಳಜಿ ಮೂಡಬೇಕಿದೆ. ನಮ್ಮ ಮನೆಗಳ ಸುತ್ತಮುತ್ತ, ಗ್ರಾಮಗಳಲ್ಲಿ ಹಸಿರನ್ನು ಬೆಳೆಸೋಣ. ಹನಿಗೂಡಿದರೆ ಹಳ್ಳ ಎಂಬಂತೆ, ಸಣ್ಣ ಸಣ್ಣ ಪ್ರಗತಿಯುತ ಕಾರ್ಯಗಳು ಮುಂದೆ ಹಿರಿದಾಗುತ್ತವೆ ಎಂದರು.

 ಗ್ರಾಮ ಪಂಚಾಯಿತಿ ಸದಸ್ಯ ಲೋಕೇಶ್, ತಾಲ್ಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಲಕ್ಷ್ಮಿ, ರೇಖಾ, ಸೇವಾಪ್ರತಿನಿಧಿ ಚೈತ್ರಾ ಹಾಜರಿದ್ದರು.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi