17.1 C
Sidlaghatta
Thursday, December 25, 2025
Home Blog Page 4

ಸಹಕಾರ ಸಪ್ತಾಹ ಚರ್ಚಾ ಸ್ಪರ್ಧೆ ವಿಜೇತೆ ವೈ.ಎಂ. ಗಾನವಿಗೆ ಅಭಿನಂದನೆ

0
Debate Competition Winner Y M Ganavi Felicitation

Sidlaghatta : ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪಠ್ಯಕ್ಕೆ ನೀಡುವಷ್ಟೇ ಮಹತ್ವವನ್ನು ಪಠ್ಯೇತರ ಚಟುವಟಿಕೆಗಳಿಗೂ (Extracurricular Activities) ನೀಡಬೇಕು, ಏಕೆಂದರೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳನ್ನು ಪರಿಪೂರ್ಣವಾಗಿ ರೂಪಿಸಲು ಸಹಕಾರಿಯಾಗುತ್ತವೆ ಎಂದು ರಾಯಲ್ ಪಬ್ಲಿಕ್ ಸ್ಕೂಲ್ ಮತ್ತು ಪಿಯು ಕಾಲೇಜಿನ ಮುಖ್ಯೋಪಾಧ್ಯಾಯ ಮಂಜುನಾಥ್ ಅವರು ತಿಳಿಸಿದರು.

ಸಹಕಾರ ಸಪ್ತಾಹದ (Cooperation Week) ಅಂಗವಾಗಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ಹಾಗೂ ಜಿಲ್ಲಾ ಸಹಕಾರ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಶಾಲೆಯ ಪ್ರಥಮ ಪಿಯುಸಿ ವಿದ್ಯಾರ್ಥಿನಿ ವೈ.ಎಂ. ಗಾನವಿ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.

ಕೇವಲ ಅಂಕಗಳನ್ನು ಪಡೆಯುವುದನ್ನೇ ಗುರಿಯಾಗಿಸಿಕೊಂಡು ಓದುವುದು ಮತ್ತು ಬರೆಯುವುದು ಕೇವಲ ಅಂಕಗಳನ್ನು ಪಡೆಯಲು ಮಾತ್ರ ನೆರವಾಗಬಹುದು. ಆದರೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಯನ್ನು ದೈಹಿಕ ಮತ್ತು ಮಾನಸಿಕವಾಗಿ ಸದೃಢರನ್ನಾಗಿಸಿ ಪರಿಪೂರ್ಣವಾಗಿಸುತ್ತವೆ ಎಂದು ಮಂಜುನಾಥ್ ಹೇಳಿದರು. ಶಾಲಾ ಕಾಲೇಜು ಮಕ್ಕಳಲ್ಲಿ ಸಹಕಾರ ವ್ಯವಸ್ಥೆ ಬಗ್ಗೆ ಜಾಗೃತಿ ಮೂಡಿಸಲು ಸಹಕಾರ ಮಹಾ ಮಂಡಳವು ಚರ್ಚಾಸ್ಪರ್ಧೆಯನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದ ಅವರು, ವೈ.ಎಂ. ಗಾನವಿ ಅವರು ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿರುವುದು ಹರ್ಷ ತಂದಿದೆ ಎಂದು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-14/12/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 14/12/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 210
Qty: 9580 Kg
Mx : 755
Mn: 505
Avg: 667

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 08
Qty: 401 Kg
Mx : ₹ 843
Mn: ₹ 589
Avg: ₹ 773


For Daily Updates WhatsApp ‘HI’ to 7406303366

‘ಗುಣಿ’ ಪದ್ಧತಿ ರಾಗಿ; ಸಾಂಪ್ರದಾಯಿಕ ವಿಧಾನಕ್ಕಿಂತಲೂ ಹೆಚ್ಚು ಇಳುವರಿ: ಕೃಷಿ ಇಲಾಖೆ

0
Sidlaghatta Finger Millet High Yield Crop

Sidlaghatta : ಸಾಂಪ್ರದಾಯಿಕ ಪದ್ಧತಿಗಿಂತಲೂ ಕೂರಿಗೆ ಅಥವಾ ಗುಣಿ ಪದ್ಧತಿಯಲ್ಲಿ ರಾಗಿ (Finger Millet) ಬೆಳೆಯುವುದರಿಂದ ಹೆಚ್ಚು ಇಳುವರಿ ಪಡೆಯಬಹುದು ಎಂದು ಕೃಷಿ ಸಹಾಯಕ ನಿರ್ದೇಶಕ ಪಿ. ರವಿ ಅವರು ತಿಳಿಸಿದರು. ತಾಲ್ಲೂಕಿನ ಬೂದಾಳ ಗ್ರಾಮದ ರೈತ ರಾಮಾಂಜಿನಪ್ಪ ಅವರ ಗುಣಿ ಪದ್ಧತಿಯಲ್ಲಿ ಬೆಳೆದ ರಾಗಿ ಹೊಲದಲ್ಲಿ ಕೃಷಿ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ರಾಗಿ ಬೆಳೆ ಕ್ಷೇತ್ರೋತ್ಸವದಲ್ಲಿ (Field Day) ಅವರು ಈ ವಿಷಯ ತಿಳಿಸಿ, ಗುಣಿ ಪದ್ಧತಿಯಿಂದ ಆಗುವ ಉಪಯೋಗಗಳ ಬಗ್ಗೆ ರೈತರಿಗೆ ವಿವರಿಸಿದರು. ಕಡಿಮೆ ಪ್ರಮಾಣದ ಮಳೆ ಬಿದ್ದರೂ ಸಾಕು ರಾಗಿ ಬೆಳೆ ಫಸಲು ಸಿಗುತ್ತದೆ ಎಂದು ತಿಳಿಸಿದ ಅವರು, ಮುಂಗಾರು ಮಳೆ ಮತ್ತು ನೀರಾವರಿ ಆಶ್ರಯದಲ್ಲೂ ರಾಗಿ ಬೆಳೆ ಬೆಳೆಯಬಹುದು ಮತ್ತು ಸಾಮಾನ್ಯ ಪದ್ಧತಿಗಿಂತಲೂ ಗುಣಿ ಪದ್ಧತಿಯಲ್ಲಿ ಬೆಳೆಯುವುದರಿಂದ ಹೆಚ್ಚು ಫಸಲು ಸಿಗಲಿದೆ ಎಂದು ಒತ್ತಿ ಹೇಳಿದರು.

ಸಾಮಾನ್ಯವಾಗಿ ರಾಗಿ ಬೆಳೆಗೆ ಹೆಚ್ಚು ಬಂಡವಾಳ ಹಾಕುವ ಅಥವಾ ಔಷಧ ಸಿಂಪಡಣೆ ಮಾಡುವ ಅಗತ್ಯವಿಲ್ಲ. ಮುಂಗಾರು ಮಳೆಗಾಲದಲ್ಲಿ ಭೂಮಿಯನ್ನು ಉಳುಮೆ ಮಾಡಿ ಹದಗೊಳಿಸಿ ಜೂನ್-ಜುಲೈನಿಂದ ಆಗಸ್ಟ್ ಎರಡನೇ ವಾರದವರೆಗೂ ರಾಗಿ ಬಿತ್ತನೆ ಮಾಡಬಹುದು. ನೀರಿನ ಅನುಕೂಲ ಇದ್ದವರು ವರ್ಷದ ಯಾವ ಸಮಯದಲ್ಲಾದರೂ ರಾಗಿ ಬಿತ್ತನೆ ಮಾಡಬಹುದಾದರೂ, ಜಡಿ ಮಳೆಗೆ ಫಸಲು ಸಿಗದಂತೆ ಹವಾಮಾನ ನೋಡಿಕೊಂಡು ಉಳುಮೆ ಮಾಡಬಹುದು. ರಾಗಿ ಕೇವಲ ಮೂರು ತಿಂಗಳ ಬೆಳೆಯಾಗಿದ್ದು, ಉತ್ತಮ ಫಸಲು ಸಿಗಲಿದೆ. ರೈತರು ಕೃಷಿ ಕುರಿತಾಗಿ ಸಾಕಷ್ಟು ಜ್ಞಾನ ಹೊಂದಿದ್ದರೂ, ಇಲಾಖೆಯ ತಜ್ಞರು, ಹಿರಿಯ ಅಧಿಕಾರಿಗಳ ಸಲಹೆ, ಸೂಚನೆ ಮತ್ತು ಮಾರ್ಗದರ್ಶನ ಪಡೆದು, ಹವಾಮಾನ ಹಾಗೂ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಬೆಳೆಗಳನ್ನು ಬೆಳೆಯುವುದು ಸೂಕ್ತ. ಕಾಲ ಕಾಲಕ್ಕೆ ಮಣ್ಣಿನ ಪರೀಕ್ಷೆ ಮಾಡಿಸುವುದು ಒಳ್ಳೆಯದು ಎಂದು ಕೃಷಿ ಸಹಾಯಕ ನಿರ್ದೇಶಕರು ಸಲಹೆ ನೀಡಿದರು.

ರೈತ ಬೂದಾಳ ರಾಮಾಂಜಿನಪ್ಪ ಅವರು ಮಾತನಾಡಿ, ತಾವು ಗುಣಿ ಪದ್ಧತಿಯಲ್ಲಿ ಹಲವು ವರ್ಷಗಳಿಂದಲೂ ರಾಗಿ ಬೆಳೆ ಬೆಳೆಯುತ್ತಿದ್ದು, ಸಾಮಾನ್ಯ ಪದ್ಧತಿಗಿಂತಲೂ ಈ ಪದ್ಧತಿಯಿಂದ ಹೆಚ್ಚು ಪ್ರಮಾಣದಲ್ಲಿ ಇಳುವರಿ ಪಡೆಯುತ್ತಿರುವುದಾಗಿ ವಿವರಿಸಿದರು. ಗುಣಿ ಪದ್ಧತಿಯಲ್ಲಿ ರಾಗಿ ಬಿತ್ತನೆ ಮಾಡಲು ಕೈಗೊಳ್ಳಬೇಕಾದ ತಯಾರಿ, ಕ್ರಮಗಳ ಬಗ್ಗೆ ತಮ್ಮ ಅನುಭವವನ್ನು ರೈತರಿಗೆ ತಿಳಿಸಿಕೊಟ್ಟರು. ಈ ವೇಳೆ ಬೂದಾಳ ರಾಮಾಂಜಿನಪ್ಪ ಅವರು ಬೆಳೆದಿದ್ದ ಗುಣಿ ಪದ್ಧತಿಯ ರಾಗಿ ಬೆಳೆಯನ್ನು ಎಲ್ಲಾ ರೈತರು ಮತ್ತು ಅಧಿಕಾರಿಗಳು ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಸುನಿಲ್, ಆತ್ಮ ಯೋಜನೆಯ ಅಂಬರೀಷ್, ತಾಂತ್ರಿಕ ಅಧಿಕಾರಿ ರಾಧಕೃಷ್ಣ, ದೇವರಮಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪವಿತ್ರದೇವರಾಜ್, ಕೃಷಿ ಪಂಡಿತ ಪುರಸ್ಕೃತ ಗೋಪಾಲಗೌಡ, ಬೋದಗೂರು ವೆಂಕಟಸ್ವಾಮಿರೆಡ್ಡಿ, ಮಳ್ಳೂರು ಗೋಪಾಲ, ರಾಮಮೂರ್ತಿ, ವೀರಾಪುರ ಮುನಿರೆಡ್ಡಿ, ರಾಮಣ್ಣ, ನಂದಿನಿ, ರಾಚಹಳ್ಳಿ ಶೈಲಜ ಮತ್ತು ತುಳಸಮ್ಮ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ 498 ಪ್ರಕರಣಗಳು ಇತ್ಯರ್ಥ

0
Sidlaghatta National Loka Adalat 498 Cases

Sidlaghatta : ಶಿಡ್ಲಘಟ್ಟದ ನ್ಯಾಯಾಲಯದಲ್ಲಿ ಶನಿವಾರ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಆದೇಶದ ಮೇರೆಗೆ ಶಿಡ್ಲಘಟ್ಟ ತಾಲ್ಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಒಟ್ಟು 498 ಪ್ರಕರಣಗಳು ಇತ್ಯರ್ಥಗೊಂಡು 3 ಕೋಟಿ 8 ಲಕ್ಷ 94 ಸಾವಿರ 753 ರೂ ಪಾವತಿಸಲಾಗಿದೆ.

ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರು, ಹಿರಿಯ ಸಿವಿಲ್ ನ್ಯಾಯಾಧೀಶ ಮಹಮ್ಮದ್ ರೋಷನ್ ಷಾ, ಪ್ರಧಾನ ಸಿವಿಲ್ ನ್ಯಾಯಾಧೀಶೆ ಸುಕನ್ಯಾ.ಸಿ.ಎಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಲೋಕ್ ಅದಾಲತ್ ವಿವಿಧ ರೀತಿ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲಾಯಿತು

ಸಂಧಾನಕಾರರಾಗಿ ವಕೀಲರಾದ ಬಿ.ಎನ್.ವೇಣುಗೋಪಾಲ್ ಮತ್ತು ಸಿ.ಲಕ್ಷ್ಮಮ್ಮ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಕಾರ್ಯದರ್ಶಿ ಸಿ.ಜಿ.ಭಾಸ್ಕರ್ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-13/12/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 13/12/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 329
Qty: 16650 Kg
Mx : 764
Mn: 400
Avg: 676

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 22
Qty: 1506 Kg
Mx : ₹ 868
Mn: ₹ 715
Avg: ₹ 803

Sidlaghatta WhatsApp Channel Group

For Daily Updates WhatsApp ‘HI’ to 7406303366

ಶಿಡ್ಲಘಟ್ಟದಲ್ಲಿ ಹೆಲ್ಮೆಟ್ ಕಡ್ಡಾಯ ಕಟ್ಟುನಿಟ್ಟಿನ ಜಾರಿ; ಪೊಲೀಸ್ ಪೇದೆಗೂ ದಂಡ

0
Sidlaghatta Helmet Compulsory strict action

Sidlaghatta : ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯ ನಿಯಮ ಡಿಸೆಂಬರ್ 12, ಶುಕ್ರವಾರದಿಂದ ಕಟ್ಟುನಿಟ್ಟಾಗಿ ಜಾರಿಯಾಗಿದ್ದು, ಶಿಡ್ಲಘಟ್ಟ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊದಲ ದಿನವೇ ಬಿಗಿ ಕ್ರಮಗಳು ಕಂಡುಬಂದವು. ಬೆಳಿಗ್ಗೆಯಿಂದಲೇ ನಗರದಲ್ಲಿ ಜಾಗೃತಿ ಅಭಿಯಾನ ಮತ್ತು ರ್ಯಾಲಿ ನಡೆಸಿದ ಪೊಲೀಸ್ ಸಿಬ್ಬಂದಿ, ಸ್ವತಃ ಹೆಲ್ಮೆಟ್ ಧರಿಸಿ ಸಾರ್ವಜನಿಕರಿಗೆ ಮಾದರಿ ಪ್ರದರ್ಶನ ನೀಡಿದರು. ಆದಾಗ್ಯೂ, ಮೊದಲ ದಿನ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ನಿಯಮ ಪಾಲನೆ ಮಾಡಿದರೆ, ಹಲವರು ನಿರ್ಲಕ್ಷ್ಯ ವಹಿಸಿರುವುದು ಪೊಲೀಸರ ಗಮನಕ್ಕೆ ಬಂದಿತು.

ಆರಂಭಿಕ ಅವಧಿಯಲ್ಲಿ ಪೊಲೀಸರು ಎಚ್ಚರಿಕೆ ನೀಡಿ ಜಾಗೃತಿ ಮೂಡಿಸಿದರು. ಆದರೆ ಸಂಜೆ 5 ಗಂಟೆಯ ನಂತರ, ನಗರ ಪೊಲೀಸ್ ಠಾಣೆ ಎದುರು ವಿಶೇಷ ತಪಾಸಣಾ ನಿಗಾ ಹಮ್ಮಿಕೊಳ್ಳಲಾಯಿತು. ಈ ವೇಳೆ ಹೆಲ್ಮೆಟ್ ಇಲ್ಲದೇ ಬಂದ ಸವಾರರಿಗೆ ಕಾನೂನುನ್ವಯ ದಂಡ ವಿಧಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಈ ಕಟ್ಟುನಿಟ್ಟಿನ ತಪಾಸಣಾ ಸಮಯದಲ್ಲಿ ಹೆಲ್ಮೆಟ್ ಧರಿಸದೇ ಬೈಕ್‌ನಲ್ಲಿ ಬರುತ್ತಿದ್ದ ಪೊಲೀಸ್ ಪೇದೆ ಒಬ್ಬರನ್ನು ನೋಡಿದ ಎಸ್.ಐ. ವೇಣುಗೋಪಾಲ್ ಅವರು ತಕ್ಷಣವೇ ವಾಹನವನ್ನು ತಡೆದರು. “ನಿಯಮ ಎಲ್ಲರಿಗೂ ಒಂದೇ” ಎಂಬ ಸ್ಪಷ್ಟ ಸಂದೇಶದೊಂದಿಗೆ ಅವರು ಅದೇ ಪೊಲೀಸ್ ಪೇದೆಗೆ ಮೊದಲ ದಂಡವನ್ನು ವಿಧಿಸಿದರು. ಪೊಲೀಸರೂ ನಿಯಮ ಪಾಲಿಸಬೇಕು ಎಂದು ಸಾರ್ವಜನಿಕರಿಗೆ ನೀಡಿದ ಈ ಸಂದೇಶ ಸ್ಥಳೀಯರಲ್ಲಿ ನಿಯಮ ಪಾಲನೆಯ ಬಗ್ಗೆ ಮತ್ತಷ್ಟು ಎಚ್ಚರಿಕೆ ಮೂಡಿಸಿತು ಮತ್ತು ಪೊಲೀಸ್ ಇಲಾಖೆಯ ಮೇಲೆ ವಿಶ್ವಾಸ ಹೆಚ್ಚಿಸಿತು.

ಜಿಲ್ಲಾ ಮಟ್ಟದಲ್ಲಿ ಹೆಲ್ಮೆಟ್ ಕಡ್ಡಾಯ ಜಾರಿಯ ಹಿನ್ನೆಲೆ, ಶಿಡ್ಲಘಟ್ಟದಲ್ಲಿ ಮೊದಲ ದಿನದಲ್ಲೇ ಅನೇಕ ಸವಾರರಿಗೆ ದಂಡ ವಿಧಿಸಲಾಯಿತು. ಸ್ಥಳದಲ್ಲೇ ದಂಡದ ರಸೀದಿ ನೀಡುತ್ತಾ, ಹೆಲ್ಮೆಟ್ ಧರಿಸುವಿಕೆಯ ಅಗತ್ಯತೆ ಮತ್ತು ಜೀವ ರಕ್ಷಣೆಯ ಮಹತ್ವದ ಕುರಿತು ವಾಹನ ಸವಾರರಿಗೆ ಪೊಲೀಸರಿಂದ ಅರಿವು ಮೂಡಿಸಲಾಯಿತು. ಈ ಹಿಂದಿನಿಂದಲೂ ಇದ್ದ ನಾಮಕಾವಸ್ತೆ ನಿಯಮಕ್ಕೆ ಬದಲಾಗಿ, ಈಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಪೊಲೀಸ್ ಇಲಾಖೆ ಎಚ್ಚರಿಸಿದ್ದು, ನಗರದಲ್ಲಿ ಸಂಚರಿಸುವ ಬೈಕ್ ಸವಾರರು ಮಾತ್ರವಲ್ಲದೆ ನಿತ್ಯ ರೇಷ್ಮೆ ಗೂಡು ಮಾರುಕಟ್ಟೆಗೆ ಬೈಕ್‌ನಲ್ಲಿ ಬರುವ ರೈತರು ಸಹ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಸೂಚಿಸಲಾಗಿದೆ. ಹೆಲ್ಮೆಟ್ ಇಲ್ಲದೆ ಸಂಚರಿಸುವ ಬೈಕ್ ಸವಾರರ ಬಗ್ಗೆ ತೀವ್ರ ನಿಗಾ ಇಟ್ಟು ದಂಡ ವಿಧಿಸುವ ಕಾರ್ಯಕ್ಕೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-12/12/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 12/12/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 334
Qty: 17078 Kg
Mx : 795
Mn: 555
Avg: 687

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 15
Qty: 1069 Kg
Mx : ₹ 823
Mn: ₹ 739
Avg: ₹ 795


For Daily Updates WhatsApp ‘HI’ to 7406303366

ಒಂದೇ ನಿವೇಶನವನ್ನು ಇಬ್ಬರಿಗೆ ಮಂಜೂರು: ವಿಕಲಚೇತನರಿಂದ ಅನಿರ್ದಿಷ್ಟ ಧರಣಿ

0
Sidlaghatta Kundalagurki Physically Disabled Protest

Kundalagurki, Sidlaghatta : ಗ್ರಾಮ ಪಂಚಾಯಿತಿಯಿಂದ ಒಂದೇ ನಿವೇಶನವನ್ನು ಇಬ್ಬರಿಗೆ ಮಂಜೂರು ಮಾಡಿ, ಇಬ್ಬರ ನಡುವೆ ಜಗಳವಿಟ್ಟು ಇಬ್ಬರಿಗೂ ನಿವೇಶನ ಇಲ್ಲದಂತೆ ಮಾಡಿದ್ದಾರೆ ಎಂದು ಆರೋಪಿಸಿ ವಿಕಲಚೇತನ ಸಂತೋಷ್ ಕುಮಾರ್ ಅವರು ಕುಂದಲಗುರ್ಕಿ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಗುರುವಾರದಿಂದ ಅನಿರ್ಧಿಷ್ಟಾವಧಿ ಧರಣಿಯನ್ನು ಆರಂಭಿಸಿದ್ದಾರೆ. ಸಂತೋಷ್ ಅವರು ಮಹಾತ್ಮಗಾಂಧಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಇಟ್ಟುಕೊಂಡು ಒಬ್ಬಂಟಿಯಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

2013ರಲ್ಲಿ ಗ್ರಾಮ ಪಂಚಾಯಿತಿಯು ಸಂತೋಷ್ ಕುಮಾರ್ ಅವರ ತಾಯಿ ಆಂಜಿನಮ್ಮ ಅವರ ಹೆಸರಿಗೆ ನಿವೇಶನವನ್ನು ಮಂಜೂರು ಮಾಡಿತ್ತು. ಇಂದಿರಾ ಆವಾಜ್ ವಸತಿ ಯೋಜನೆಯಡಿ ಮನೆ ಕೂಡ ಮಂಜೂರಾಗಿದ್ದು, ಆಂಜಿನಮ್ಮ ಅವರು ಮನೆ ನಿರ್ಮಿಸಲು ಪಾಯ ಹಾಕಿ, ಮೊದಲ ಬಿಲ್ ಮೊತ್ತವಾದ ₹29,800 ಅನ್ನು ಪಡೆದುಕೊಂಡಿದ್ದರು.

ಆದರೆ, ಅದೇ ನಿವೇಶನವು ತಮಗೂ ಮಂಜೂರು ಆಗಿದೆ ಎಂದು ಗ್ರಾಮದ ಪ್ರಭಾವಿ ವ್ಯಕ್ತಿಯೊಬ್ಬರು ಗ್ರಾಮ ಪಂಚಾಯಿತಿ ನೀಡಿದ ದಾಖಲೆಗಳೊಂದಿಗೆ ಬಂದು ತಗಾದೆ ತೆಗೆದಿದ್ದಾರೆ. ಇದರಿಂದ ಇಬ್ಬರ ನಡುವೆ ದೊಡ್ಡ ಜಗಳ ಮತ್ತು ವಾದ ವಿವಾದ ನಡೆದು, ಅಂತಿಮವಾಗಿ ಸಂತೋಷ್ ಕುಮಾರ್ ಅವರು ನಿರ್ಮಿಸಿದ್ದ ಪಾಯವನ್ನು ಕಿತ್ತು ಹಾಕಲಾಯಿತು.

ಅಂದಿನಿಂದ ಇಂದಿನವರೆಗೂ ನಿವೇಶನಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಗಲಾಟೆ ನಡೆಯುತ್ತಿದ್ದರೂ, ಸಮಸ್ಯೆ ಬಗೆಹರಿಸಬೇಕಿದ್ದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸುಮ್ಮನಿದ್ದಾರೆ. ಇದರಿಂದ ರೋಸಿಹೋದ ಸಂತೋಷ್ ಕುಮಾರ್ ಅವರು, ತಮ್ಮ ಕುಟುಂಬಕ್ಕೆ ಸದರಿ ನಿವೇಶನವನ್ನು ಪಕ್ಕಾ ಮಾಡಿಕೊಡಬೇಕು, ಇಲ್ಲವೇ ಬೇರೆ ನಿವೇಶನವನ್ನಾದರೂ ನೀಡಬೇಕು ಎಂದು ಆಗ್ರಹಿಸಿ ಧರಣಿ ಆರಂಭಿಸಿದ್ದಾರೆ. ಮೊದಲ ದಿನವಾದ ಗುರುವಾರ ಯಾರೊಬ್ಬರೂ ಧರಣಿ ನಿರತರನ್ನು ಭೇಟಿ ಮಾಡಿಲ್ಲವಾದರೂ, ಪ್ರತಿಭಟನೆ ಮುಂದುವರೆದಿದೆ.

Sidlaghatta WhatsApp Channel Group

For Daily Updates WhatsApp ‘HI’ to 7406303366

ಗ್ರಂಥಾಲಯ ಸಪ್ತಾಹ ಬಹುಮಾನ ವಿತರಣೆ

0
Sidlaghatta Vasavi School National Library Week

Sidlaghatta : ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ (National Library Week) ಅಂಗವಾಗಿ ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲಾ ವಿದ್ಯಾರ್ಥಿಗಳಿಗೆ ಗುರುವಾರ ನಗರದ ಶ್ರೀ ವಾಸವಿ ವಿದ್ಯಾಸಂಸ್ಥೆಯ ಆವರಣದಲ್ಲಿ ಪ್ರಮಾಣಪತ್ರ ಮತ್ತು ಪುಸ್ತಕಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಕೆ.ಎನ್. ಸುಬ್ಬಾರೆಡ್ಡಿ ಅವರು, ಪ್ರತಿಭಾವಂತ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಓದಲು ಪ್ರೇರೇಪಿಸುವ ಇಂತಹ ಸ್ಪರ್ಧೆಗಳಲ್ಲಿ ಮಕ್ಕಳು ಪಾಲ್ಗೊಳ್ಳುವುದರಿಂದ ಅವರಲ್ಲಿ ಸ್ಪರ್ಧಾತ್ಮಕ ಮನೋಭಾವ ಮತ್ತು ಮನೋವಿಕಾಸ ಬೆಳೆಯಲು ದಾರಿಯಾಗುತ್ತದೆ ಎಂದು ಹೇಳಿದರು.

ಸಾರ್ವಜನಿಕ ಗ್ರಂಥಾಲಯ ಇಲಾಖೆ ಮತ್ತು ಸರ್. ಎಂ. ವಿಶ್ವೇಶ್ವರಯ್ಯ ಜಿಲ್ಲಾಕೇಂದ್ರ ಗ್ರಂಥಾಲಯಗಳ ಸಂಯುಕ್ತ ಆಶ್ರಯದಲ್ಲಿ ನಡೆಯುವ ಈ ಸ್ಪರ್ಧೆಗಳಿಂದಾಗಿ ಗ್ರಾಮಾಂತರ ಪ್ರದೇಶದ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳ ಅನಾವರಣವಾಗುತ್ತದೆ ಎಂದು ವಾಸವಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ರೂಪಸಿ ರಮೇಶ್ ಅಭಿಪ್ರಾಯಪಟ್ಟರು.

ಇದರಿಂದ ಮಕ್ಕಳಿಗೆ ಶಿಕ್ಷಣದ ಜೊತೆಯಲ್ಲಿ ವಿವಿಧ ಬಗೆಯ ವಿಷಯಗಳ ಬಗ್ಗೆ ಆಸಕ್ತಿ ಮೂಡಿ, ಹೆಚ್ಚಿನ ಅಧ್ಯಯನ ಮಾಡಲು ಉತ್ತಮ ಅವಕಾಶಗಳು ದೊರೆಯುತ್ತವೆ ಎಂದರು.

ಈ ಸಂದರ್ಭದಲ್ಲಿ ಗ್ರಂಥ ಪಾಲಕಿ ರಾಮಲೀಲ, ಸಹಾಯಕಿ ಬಾಂಧವ್ಯ, ಪ್ರಗತಿ ಪರ ರೈತ ಸೊಣ್ಣಪ್ಪ ರೆಡ್ಡಿ, ಶಾಲಾ ಮುಖ್ಯ ಶಿಕ್ಷಕ ಶಿವಕುಮಾರ್ ಮತ್ತು ಸಿ. ರವಿ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-11/12/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 11/12/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 249
Qty: 12884 Kg
Mx : 785
Mn: 546
Avg: 707

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 10
Qty: 560 Kg
Mx : ₹ 925
Mn: ₹ 669
Avg: ₹ 841


For Daily Updates WhatsApp ‘HI’ to 7406303366

error: Content is protected !!