Home Blog Page 5

102 ಫಲಾನುಭವಿಗಳಿಗೆ ₹1.98 ಕೋಟಿ ಮೌಲ್ಯದ ಕೆಎಂಡಿಸಿ ಮಂಜೂರಾತಿ ಪತ್ರ ವಿತರಣೆ

0
Sidlaghatta KMDC Sanction Letter Distribution 102 Beneficiaries

Sidlaghatta : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ಕೆಎಂಡಿಸಿ) ವತಿಯಿಂದ 2025–26ನೇ ಸಾಲಿನ ವಿವಿಧ ಸ್ವಯಂ ಉದ್ಯೋಗ ಯೋಜನೆಗಳಿಗೆ ಆಯ್ಕೆಯಾದ 102 ಫಲಾನುಭವಿಗಳಿಗೆ ₹1.98 ಕೋಟಿ ಮೌಲ್ಯದ ಮಂಜೂರಾತಿ ಪತ್ರಗಳನ್ನು ಮಂಗಳವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿತರಿಸಲಾಯಿತು.

ಮಂಜೂರಾತಿ ಪತ್ರಗಳನ್ನು ವಿತರಿಸಿ ಮಾತನಾಡಿದ ಶಾಸಕ ಬಿ.ಎನ್. ರವಿಕುಮಾರ್, ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಪಾರದರ್ಶಕವಾಗಿ ತಲುಪಬೇಕು ಎಂಬ ಉದ್ದೇಶದಿಂದ ಕ್ಷೇತ್ರದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲಾಗಿದ್ದು, ಅದರ ಫಲವಾಗಿ ಹೆಚ್ಚಿನ ಅನುದಾನ ದೊರೆತಿದೆ ಎಂದು ಹೇಳಿದರು.

ರೇಷ್ಮೆ ನೂಲು ಬಿಚ್ಚಾಣಿಕೆ (ಸಿಲ್ಕ್ ರೀಲಿಂಗ್) ಉದ್ಯಮದಲ್ಲಿ ತೊಡಗಿರುವ ಮುಸ್ಲಿಂ ಸಮುದಾಯದವರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದ ಹಿನ್ನೆಲೆಯಲ್ಲಿ, ರೇಷ್ಮೆ ನೂಲು ಬಿಚ್ಚಾಣಿಕೆ ಯೋಜನೆಯಡಿ 96 ಫಲಾನುಭವಿಗಳಿಗೆ ₹1.92 ಕೋಟಿ ಮಂಜೂರಾಗಿದೆ ಎಂದು ತಿಳಿಸಿದರು.

ಟ್ಯಾಕ್ಸಿ ಹಾಗೂ ಸರಕು ವಾಹನ ಖರೀದಿ ಯೋಜನೆಯಡಿ ಒಬ್ಬ ಫಲಾನುಭವಿಗೆ ₹3 ಲಕ್ಷ, ವೃತ್ತಿ ಪ್ರೋತ್ಸಾಹ ಯೋಜನೆಯಡಿ ಇಬ್ಬರಿಗೆ ₹2 ಲಕ್ಷ ಹಾಗೂ ಶ್ರಮಶಕ್ತಿ ಯೋಜನೆಯಡಿ ಮೂವರಿಗೆ ₹1.50 ಲಕ್ಷ ಮಂಜೂರಾಗಿದ್ದು, ಒಟ್ಟು 102 ಫಲಾನುಭವಿಗಳಿಗೆ ₹1.98 ಕೋಟಿ 50 ಸಾವಿರ ಮೌಲ್ಯದ ಮಂಜೂರಾತಿ ಪತ್ರಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.

ಅಧಿಕಾರಿಗಳು ಸರ್ಕಾರದ ಯೋಜನೆಗಳ ಸೌಲಭ್ಯಗಳು ನೈಜ ಫಲಾನುಭವಿಗಳಿಗೆ ತಲುಪುವಂತೆ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು. ಶಿಕ್ಷಣ, ಆರೋಗ್ಯ, ಸ್ವಯಂ ಉದ್ಯೋಗ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳನ್ನು ಕ್ಷೇತ್ರದ ಜನರಿಗೆ ತಲುಪಿಸಲು ಆದ್ಯತೆ ನೀಡಲಾಗುವುದು ಎಂದರು.

ಗಂಗಾ ಕಲ್ಯಾಣ ಯೋಜನೆಯಡಿ ಇನ್ನೂ ಸೌಲಭ್ಯ ಪಡೆಯದ ಅರ್ಹ ಫಲಾನುಭವಿಗಳ ಮಾಹಿತಿ ಸಂಗ್ರಹಿಸಿ, ಅಧಿಸೂಚನೆ ಹೊರಡಿಸಿ ಬೋರ್‌ವೆಲ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಇದೇ ವೇಳೆ, ಕೆಎಂಡಿಸಿ ಯೋಜನೆಯಡಿ ಸಾಲ ಪಡೆದು ಮೃತಪಟ್ಟ ಫಲಾನುಭವಿಗಳ ಕುಟುಂಬಗಳಿಗೆ ಸಾಲಮನ್ನಾ ಶಿಫಾರಸು ಆದೇಶ ಪತ್ರಗಳನ್ನು ವಿತರಿಸಲಾಯಿತು. ಆರು ಕುಟುಂಬಗಳಿಗೆ ಒಟ್ಟು ₹44.78 ಲಕ್ಷ ಸಾಲಮನ್ನಾ ಮಾಡಲಾಗಿದ್ದು, ಇದರಲ್ಲಿ ₹29.45 ಲಕ್ಷ ಮೂಲಸಾಲ ಹಾಗೂ ₹15.33 ಲಕ್ಷ ಬಡ್ಡಿ ಸೇರಿದೆ.

ಮುಂದಿನ ವರ್ಷವೂ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಸ್ವೀಕರಿಸಿ, ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನವನ್ನು ಪಾರದರ್ಶಕವಾಗಿ ತಲುಪಿಸುವ ಕಾರ್ಯ ಮುಂದುವರಿಸಲಾಗುವುದು ಎಂದು ಶಾಸಕ ಹೇಳಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಆರ್. ಹೇಮಾವತಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು, ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಮುಖಂಡರು ಹಾಗೂ ಫಲಾನುಭವಿಗಳು ಹಾಜರಿದ್ದರು.

In English: The Karnataka Minorities Development Corporation (KMDC) distributed sanction letters worth ₹1.98 crore to 102 beneficiaries selected under various self-employment schemes for 2025–26 at the Sidlaghatta taluk panchayat hall on Tuesday. MLA B.N. Ravikumar said 96 beneficiaries in the silk reeling sector received ₹1.92 crore, with further sanctions under taxi/goods vehicle, profession incentive and Shrama Shakti schemes. Loan waiver orders totalling ₹44.78 lakh were also handed to six families of deceased borrowers under the KMDC death-case scheme.

Sidlaghatta WhatsApp Channel Group

For Daily Updates WhatsApp ‘HI’ to 7406303366

ಜುಲೈ 11ರಂದು ರಾಷ್ಟ್ರೀಯ ಲೋಕ್ ಅದಾಲತ್; ರಾಜಿ ಮೂಲಕ ಪ್ರಕರಣ ಇತ್ಯರ್ಥಕ್ಕೆ ಅವಕಾಶ

0
Sidlaghatta National Lok Adalat July 11 Preparatory Meeting

Sidlaghatta : ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ವ್ಯಾಜ್ಯಗಳನ್ನು ಸೌಹಾರ್ದಯುತವಾಗಿ ಹಾಗೂ ಶೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳಲು ಲೋಕ್ ಅದಾಲತ್ ಅತ್ಯುತ್ತಮ ವೇದಿಕೆಯಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ಹೇಳಿದರು.

ನಗರದ ನ್ಯಾಯಾಲಯದ ಸಭಾಂಗಣದಲ್ಲಿ ಮಂಗಳವಾರ ಜುಲೈ 11ರಂದು ನಡೆಯಲಿರುವ ರಾಷ್ಟ್ರೀಯ ಲೋಕ್ ಅದಾಲತ್ ಸಂಬಂಧ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಲೋಕ್ ಅದಾಲತ್‌ನಲ್ಲಿ ರಾಜಿ ಮಾಡಿಕೊಳ್ಳಬಹುದಾದ ನಾಗರಿಕ, ಬ್ಯಾಂಕ್ ಸಾಲ, ಹಣ ವಸೂಲಿ, ಚೆಕ್ ಬೌನ್ಸ್, ಮೋಟಾರು ವಾಹನ ಅಪಘಾತ ಪರಿಹಾರ, ಕೌಟುಂಬಿಕ ವಿವಾದ ಸೇರಿದಂತೆ ವಿವಿಧ ಪ್ರಕರಣಗಳನ್ನು ಉಭಯ ಪಕ್ಷಗಳ ಪರಸ್ಪರ ಒಪ್ಪಿಗೆಯ ಮೇರೆಗೆ ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.

ಸಾಮಾನ್ಯ ನ್ಯಾಯಾಂಗ ಪ್ರಕ್ರಿಯೆಗೆ ಹೋಲಿಸಿದರೆ ಲೋಕ್ ಅದಾಲತ್‌ನಲ್ಲಿ ಪ್ರಕರಣಗಳು ಕಡಿಮೆ ಅವಧಿಯಲ್ಲಿ ಇತ್ಯರ್ಥವಾಗುವುದರಿಂದ ಸಮಯ ಮತ್ತು ಹಣ ಎರಡನ್ನೂ ಉಳಿತಾಯ ಮಾಡಬಹುದು. ಅಲ್ಲದೆ, ನ್ಯಾಯಾಲಯ ಶುಲ್ಕ ಮರುಪಾವತಿ ಸೇರಿದಂತೆ ಕಾನೂನಿನಲ್ಲಿ ಲಭ್ಯವಿರುವ ಸೌಲಭ್ಯಗಳನ್ನೂ ಪಕ್ಷಕಾರರು ಪಡೆಯಬಹುದು ಎಂದು ವಿವರಿಸಿದರು.

ಜುಲೈ 11ರಂದು ನಡೆಯುವ ಲೋಕ್ ಅದಾಲತ್‌ನಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ. ವಕೀಲರು, ಬ್ಯಾಂಕ್ ಅಧಿಕಾರಿಗಳು, ವಿವಿಧ ಇಲಾಖೆಗಳ ಪ್ರತಿನಿಧಿಗಳು ಹಾಗೂ ಪಕ್ಷಕಾರರು ಪರಸ್ಪರ ಸಹಕಾರ ನೀಡುವ ಮೂಲಕ ಲೋಕ್ ಅದಾಲತ್ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶೆ ಸಿ.ಎಸ್.ಸುಕನ್ಯಾ, ಅಪರ ಸಿವಿಲ್ ನ್ಯಾಯಾಧೀಶೆ ಭಾವನಾ, ಸರ್ಕಾರಿ ಸಹಾಯಕ ಅಭಿಯೋಜಕರಾದ ರೂಪಾ, ಮೊಹಮ್ಮದ್ ಖಾಜಾ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಕಾರ್ಯದರ್ಶಿ ಸಿ.ಜಿ.ಭಾಸ್ಕರ್, ಹಿರಿಯ ವಕೀಲ ಎಂ.ಪಾಪಿರೆಡ್ಡಿ ಹಾಜರಿದ್ದರು.

In English: A National Lok Adalat will be held at the Sidlaghatta court hall on July 11, 2026. Senior Civil Judge Mohammed Roshan Shah, chairing a preparatory meeting, said compoundable civil, bank loan, money recovery, cheque bounce, motor accident compensation and family dispute cases can be settled quickly by mutual consent, saving litigants time and money, with court-fee refunds available. Judges C.S. Sukanya and Bhavana, prosecutors, and Bar Association office-bearers attended.

FAQ

ಲೋಕ್ ಅದಾಲತ್‌ನಲ್ಲಿ ಯಾವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು? ರಾಜಿ ಮಾಡಿಕೊಳ್ಳಬಹುದಾದ ನಾಗರಿಕ, ಬ್ಯಾಂಕ್ ಸಾಲ, ಹಣ ವಸೂಲಿ, ಚೆಕ್ ಬೌನ್ಸ್, ಮೋಟಾರು ವಾಹನ ಅಪಘಾತ ಪರಿಹಾರ ಹಾಗೂ ಕೌಟುಂಬಿಕ ವಿವಾದ ಪ್ರಕರಣಗಳನ್ನು ಉಭಯ ಪಕ್ಷಗಳ ಒಪ್ಪಿಗೆಯ ಮೇರೆಗೆ ಇತ್ಯರ್ಥಪಡಿಸಿಕೊಳ್ಳಬಹುದು.

ರಾಷ್ಟ್ರೀಯ ಲೋಕ್ ಅದಾಲತ್ ಯಾವಾಗ, ಎಲ್ಲಿ ನಡೆಯಲಿದೆ? ಜುಲೈ 11, 2026ರಂದು ಶಿಡ್ಲಘಟ್ಟ ನಗರದ ನ್ಯಾಯಾಲಯದ ಸಭಾಂಗಣದಲ್ಲಿ ನಡೆಯಲಿದೆ.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-07/07/2026

0
Sidlaghatta Silk Cocoon Market Rate 07 July 2026

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 07/07/2026

VarietyLotsQty (Kg)MaxMinAvg
Cross-Breed – ಮಿಶ್ರತಳಿ ರೇಷ್ಮೆ ಗೂಡು41622249763293668
Bi-Voltine – ದ್ವಿತಳಿ ರೇಷ್ಮೆ ಗೂಡು10595₹822₹722₹777

Summary: Sidlaghatta Government Cocoon Market rates for 07/07/2026 — Cross-Breed cocoon averaged ₹668/kg across 416 lots (22,249 kg total, price range ₹293–₹763); Bi-Voltine cocoon averaged ₹777/kg across 10 lots (595 kg total, price range ₹722–₹822).

ಹಿಂದಿನ ದಿನದ ದರಕ್ಕಾಗಿ 06/07/2026ರ ಮಾರುಕಟ್ಟೆ ದರ ವೀಕ್ಷಿಸಿ. ಎಲ್ಲಾ ದಿನಗಳ ದರಕ್ಕಾಗಿ ರೇಷ್ಮೆ ಗೂಡು ಮಾರುಕಟ್ಟೆ ವಿಭಾಗ ನೋಡಿ.


For Daily Updates WhatsApp ‘HI’ to 7406303366

ವಾಸವಿ ರಸ್ತೆ ಕಾಮಗಾರಿ ನಾಳೆಯಿಂದ ಪುನರಾರಂಭ : ಶಾಸಕ ಭರವಸೆ

0
Sidlaghatta Vasavi Road Repair Work MLA Inspection

Sidlaghatta : ಶಿಡ್ಲಘಟ್ಟದ ವಾಸವಿ ರಸ್ತೆಯಲ್ಲಿ ಹಲವು ದಿನಗಳಿಂದ ಕಾಮಗಾರಿ ನಡೆಸದೆ ನೆನೆಗುದಿಗೆ ಬಿದ್ದಿದ್ದ ಕಾರಣ ವ್ಯಾಪಾರ ವಹಿವಾಟು ಹಾಗೂ ದಿನನಿತ್ಯದ ಬದುಕಿಗೆ ತೊಂದರೆಯಾಗುತ್ತಿದೆ ಎಂದು ನಾಗರಿಕರು ದೂರಿದ ಹಿನ್ನೆಲೆಯಲ್ಲಿ ಶಾಸಕ ಬಿ.ಎನ್.ರವಿಕುಮಾರ್ ಅವರು ವಾಸವಿ ರಸ್ತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಗರಸಭೆ ಪೌರಾಯುಕ್ತೆ ಜಿ.ಅಮೃತ ಹಾಗೂ ಇತರೆ ಅಧಿಕಾರಿಗಳೊಂದಿಗೆ ವಾಸವಿ ರಸ್ತೆಗೆ ಭೇಟಿ ನೀಡಿದ ಶಾಸಕರ ಬಳಿ ಅಲ್ಲಿನ ವಾಸಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ರಸ್ತೆ ಅಭಿವೃದ್ಧಿಗೆಂದು ಇದ್ದ ರಸ್ತೆಯನ್ನು ಕಿತ್ತು ಹಾಕಿ ತಿಂಗಳುಗಳೇ ಕಳೆದಿವೆ.

ಕುಡಿಯುವ ನೀರಿನ ಪೈಪ್‌ಲೈನ್, ಚರಂಡಿ ಎಲ್ಲವನ್ನೂ ಕಿತ್ತು ಹಾಕಿದ ಕಾರಣ ಸಾರ್ವಜನಿಕರಿಗೆ ಹಲವು ಸಮಸ್ಯೆಗಳು ಎದುರಾಗಿವೆ. ಜಲ ಜೀವನ್ ಮಿಷನ್‌ನ ನೀರಿನ ಪೈಪು ಹಾಗೂ ಒಳಚರಂಡಿ ಪೈಪ್ ಅಳವಡಿಕೆ ಬಿಟ್ಟರೆ ಉಳಿದ ಕೆಲಸ ನಡೆಯದೆ ನೆನೆಗುದಿಗೆ ಬಿದ್ದಿತ್ತು.

ಇದರಿಂದ ಈ ರಸ್ತೆಯಲ್ಲಿನ ಎಲ್ಲ ಅಂಗಡಿಗಳು ತಿಂಗಳುಗಳಿಂದ ಬಾಗಿಲು ಹಾಕಿದ್ದವು. ಬಾಗಿಲು ತೆಗೆದರೂ ವ್ಯಾಪಾರಕ್ಕೆ ಯಾರೂ ಬರುತ್ತಿಲ್ಲ. ಮನೆ-ಅಂಗಡಿಗಳ ತ್ಯಾಜ್ಯ ನೀರು ಬೀದಿಗೆ ಹರಿದು ದುರ್ವಾಸನೆ ಬೀರುತ್ತಿದೆ ಎಂದು ನಿವಾಸಿಗಳು ದೂರಿದರು.

ನಾಗರಿಕರ ಸಮಸ್ಯೆಗಳನ್ನು ಆಲಿಸಿದ ಶಾಸಕ ಬಿ.ಎನ್.ರವಿಕುಮಾರ್ ಅವರು, ರಸ್ತೆ ಅಭಿವೃದ್ಧಿ ಮಾತ್ರವಲ್ಲದೆ ಒಳಚರಂಡಿ ಹಾಗೂ ಜಲ ಜೀವನ್ ಮಿಷನ್‌ನ ಕುಡಿಯುವ ನೀರಿನ ಯೋಜನೆಯನ್ನೂ ಏಕಕಾಲಕ್ಕೆ ಪೂರ್ಣಗೊಳಿಸಬೇಕಿದೆ ಎಂದು ತಿಳಿಸಿದರು.

ತಾಂತ್ರಿಕ ಸಮಸ್ಯೆಯ ಕಾರಣ ಕಾಮಗಾರಿ ವಿಳಂಬವಾಗಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಈಗಾಗಲೇ ಮಾತನಾಡಲಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿ ನಾಳೆಯಿಂದಲೇ ಕಾಮಗಾರಿ ಆರಂಭಿಸಿ ಶೀಘ್ರ ಮುಗಿಸುವಂತೆ ಸೂಚಿಸಲಾಗಿದೆ ಎಂದು ಶಾಸಕರು ಸ್ಥಳೀಯರಿಗೆ ಭರವಸೆ ನೀಡಿದರು.

In English: Sidlaghatta MLA B.N. Ravikumar inspected the stalled Vasavi Road repair works following complaints from residents and traders that the halted project — which had torn up the road for drinking water pipeline and drainage work under Jal Jeevan Mission — was disrupting business and daily life for months. The MLA assured that work would resume from tomorrow and be completed on priority, alongside the pending drainage and water supply components.

FAQ

ವಾಸವಿ ರಸ್ತೆ ಕಾಮಗಾರಿ ಯಾವಾಗ ಪುನರಾರಂಭವಾಗಲಿದೆ?
ಶಾಸಕ ಬಿ.ಎನ್.ರವಿಕುಮಾರ್ ಅವರ ಭರವಸೆಯಂತೆ ನಾಳೆಯಿಂದಲೇ ಕಾಮಗಾರಿ ಪುನರಾರಂಭವಾಗಲಿದೆ.

ಕಾಮಗಾರಿ ಏಕೆ ಸ್ಥಗಿತಗೊಂಡಿತ್ತು?
ಜಲ ಜೀವನ್ ಮಿಷನ್ ಕುಡಿಯುವ ನೀರಿನ ಪೈಪ್‌ಲೈನ್ ಹಾಗೂ ಒಳಚರಂಡಿ ಅಳವಡಿಕೆ ಕಾಮಗಾರಿ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿತ್ತು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಅರ್ಹ ಮತದಾರರು ಮತದಾರರ ಪಟ್ಟಿಯಿಂದ ತಪ್ಪಿ ಹೋಗದಂತೆ ಎಚ್ಚರಿಕೆ ವಹಿಸಬೇಕು

0
Sidlaghatta Congress SIR Voter Awareness Sadali

Sidlaghatta : ತಾಲ್ಲೂಕಿನ ಸಾದಲಿ ಹೋಬಳಿಯ ಹಲವು ಮತಗಟ್ಟೆಗಳಲ್ಲಿ ಮತಗಟ್ಟೆ ಅಧಿಕಾರಿಗಳು (BLO) ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯ ಎನ್ಯುಮರೇಷನ್ ಅರ್ಜಿಗಳನ್ನು ಮತದಾರರ ಮನೆಗೆ ಭೇಟಿ ನೀಡಿ ವಿತರಿಸದೆ ಗ್ರಾಮದ ಮುಖಂಡರ ಕೈಗೆ ನೀಡಲಾಗುತ್ತಿದೆ ಎಂದು SIR ಗೆ ನೇಮಕವಾಗಿರುವ ಕಾಂಗ್ರೆಸ್ ಪ್ರತಿನಿಧಿ BLA-1 ರಾಜೀವ್ ಗೌಡ ಆರೋಪಿಸಿದರು.

ತಾಲ್ಲೂಕಿನ ಸಾದಲಿಯಲ್ಲಿ ಶನಿವಾರ ಕಾಂಗ್ರೆಸ್ ನಿಂದ ಹಮ್ಮಿಕೊಂಡಿದ್ದ “ಕಾಂಗ್ರೆಸ್ ನಡೆ ಮತದಾರರ ರಕ್ಷಣೆಯ ಕಡೆ” ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯ ಜಾಗೃತಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹಾಗೂ BLA-2ಗಳನ್ನುದ್ದೇಶಿಸಿ ಅವರು ಮಾತನಾಡಿದರು.

SIR ಕಾರ್ಯಕ್ರಮಕ್ಕೆ ನಿಯೋಜನೆಗೊಂಡಿರುವ ಮತಗಟ್ಟೆ ಅಧಿಕಾರಿಗಳಲ್ಲಿ ಕೆಲವರು ತಾಲ್ಲೂಕು ಆಡಳಿತದ ಅಧಿಕಾರಿಗಳು, ಶಾಸಕರ ಮರ್ಜಿಗೆ ಕೆಲಸ ಮಾಡುತ್ತಿದ್ದು SIR ನ ಎನ್ಯುಮರೇಷನ್ ಅರ್ಜಿಗಳನ್ನು ಜೆಡಿಎಸ್ ಮತ್ತು ಬಿಜೆಪಿ ಮುಖಂಡರಿಗೆ ಕೈಗೆ ಒಪ್ಪಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಇದರಿಂದ ಅನೇಕರ ಹೆಸರು ಮತದಾರರ ಪಟ್ಟಿಯಿಂದ ಕೈ ಬಿಟ್ಟು ಹೋಗುವ ಆತಂಕ ವ್ಯಕ್ತಪಡಿಸಿದ ಅವರು, ಮತದಾರರ ಪಟ್ಟಿಯಿಂದ ಕೈ ಬಿಟ್ಟರೆ ರಾಜ್ಯ ಸರ್ಕಾರದ ಯಾವ ಗ್ಯಾರಂಟಿ ಯೋಜನೆಯೂ ಸಿಗದು ಎಂದು ಎಚ್ಚರಿಸಿ, ಅರ್ಹ ಮತದಾರರೂ ಕೈ ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಬೇಕೆಂದು ಹೇಳಿದರು.

ಮತಗಟ್ಟೆ ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯ, ಪಕ್ಷಪಾತ ಧೋರಣೆ ವಿರುದ್ಧ ಜಿಲ್ಲಾಧಿಕಾರಿಗಳಿಗೆ, ಚುನಾವಣಾ ಆಯೋಗ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೂ ದೂರು ಸಲ್ಲಿಸಿ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಮನವಿ ಮಾಡುವುದಷ್ಟೆ ಅಲ್ಲ, ಸಸ್ಪೆಂಡ್ ಮಾಡಿಸುವ ತನಕ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಪಕ್ಷದಿಂದ SIR ಕಾರ್ಯಕ್ಕೆ ನೇಮಕಗೊಂಡಿರುವ ಎಲ್ಲ BLA-2ಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು, ಯಾವುದೇ ಕಾರಣಕ್ಕೂ ಅರ್ಹ ಮತದಾರರೂ ಮತದಾರರ ಪಟ್ಟಿಯಿಂದ ತಪ್ಪಿ ಹೋಗದಂತೆ ಎಚ್ಚರಿಕೆ ವಹಿಸಬೇಕು. ಕರ್ತವ್ಯ ನಿರ್ಲಕ್ಷ್ಯ ಅಥವಾ ಪಕ್ಷಪಾತಿ ಧೋರಣೆಯ BLOಗಳು ಕಂಡುಬಂದಲ್ಲಿ ತಿಳಿಸುವಂತೆ ಕೋರಿದರು. SIR ಕಾರ್ಯದ ಬಗ್ಗೆ ಸಂದೇಹ, ಗೊಂದಲ ಅಥವಾ ದೂರು ನೀಡಲು ಕಾಂಗ್ರೆಸ್ ಭವನದಲ್ಲಿ ಸಹಾಯವಾಣಿ ಆರಂಭಿಸಲಾಗಿದ್ದು 9739720505 ಸಂಪರ್ಕಿಸಲು ಕೋರಿದರು.

SIR ನ ಕಾಂಗ್ರೆಸ್ ಉಸ್ತುವಾರಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಉದಯಕುಮಾರ್ ಮಾತನಾಡಿ, SIR ಪ್ರಕ್ರಿಯೆಯನ್ನು ಕಾಂಗ್ರೆಸ್ ಪಕ್ಷ ಬಹಳ ಗಂಭೀರವಾಗಿ ಪರಿಗಣಿಸಿದ್ದು, ಯಾವುದೇ ಅರ್ಹ ಮತದಾರರೂ ಮತದಾರರ ಪಟ್ಟಿಯಿಂದ ತಪ್ಪುವಂತಾಗಬಾರದು, ಇಲ್ಲದಿದ್ದರೆ ಗ್ಯಾರಂಟಿ ಯೋಜನೆಯಿಂದ ವಂಚಿತರಾಗುತ್ತಾರೆ ಎಂದು ಎಚ್ಚರಿಸಿ, SIR ಕಾರ್ಯಕ್ಕೆ ನೇಮಕಗೊಂಡ ಪಕ್ಷದ ಎಲ್ಲರೂ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕೆಂದು ಮನವಿ ಮಾಡಿದರು.

ಸಾದಲಿ, ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು, ಕೋಟೆ ವ್ರುತ್ತ ಸೇರಿದಂತೆ ತಾಲ್ಲೂಕಿನ ಹಲವು ಕಡೆ SIR ಕುರಿತು ಮತದಾರರು, ಕಾಂಗ್ರೆಸ್ ಕಾರ್ಯಕರ್ತರು, BLA-2ಗಳಿಗೆ ಜಾಗ್ರುತಿ ಮೂಡಿಸುವ ಕಾರ್ಯ ನಡೆಯಿತು. ಈ ಹಿಂದೆ SIR ಎನ್ಯುಮರೇಷನ್ ನಮೂನೆ ವಿತರಣೆ ಕುರಿತೂ ವರದಿಯಾಗಿತ್ತು.

ಈ ಮೊದಲು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಬಿಎಲ‌ೊಗಳಿಗೆ ನೀಡಲಾಗಿದ್ದ ತರಬೇತಿ ಕುರಿತೂ ವರದಿಯಾಗಿತ್ತು.

In English: Congress BLA-1 representative Rajeev Gowda alleged that BLOs in Sidlaghatta’s Sadali hobli are handing SIR (Special Intensive Revision) enumeration forms to village leaders instead of visiting voters’ homes directly, risking eligible voters being dropped from rolls. Congress has set up a helpline (9739720505) and urged all BLA-2 volunteers to actively verify the process.

FAQ

SIR (ವಿಶೇಷ ಸಮಗ್ರ ಪರಿಷ್ಕರಣೆ) ಎಂದರೇನು?
ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣಾ ಪ್ರಕ್ರಿಯೆಯಾಗಿದ್ದು, ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿ ಉಳಿಯುವಂತೆ ಖಚಿತಪಡಿಸುತ್ತದೆ.

ದೂರು ಇದ್ದಲ್ಲಿ ಯಾರನ್ನು ಸಂಪರ್ಕಿಸಬೇಕು?
ಕಾಂಗ್ರೆಸ್ ಭವನದಲ್ಲಿ ಆರಂಭಿಸಲಾದ ಸಹಾಯವಾಣಿ 9739720505ಗೆ ಕರೇ ಮಾಡಬಹುದು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಶಿಕ್ಷಣ, ಜ್ಞಾನ, ಸಂಸ್ಕಾರ ಬದುಕನ್ನು ಸಮಾಜಮುಖಿಯಾಗಿಸುತ್ತದೆ

0
Sidlaghatta BGS School Aksharabhyasa Program Handiganala

Sidlaghatta : ನಾವು ಪಡೆಯುವ ಶಿಕ್ಷಣ, ಜ್ಣಾನ, ಸಂಸ್ಕಾರವು ನಮ್ಮ ಬದುಕನ್ನು ಸಮಾಜಮುಖಿಯಾಗಿ ಬೆಳೆಸುತ್ತದೆ. ಸಮಾಜ ನಮ್ಮನ್ನು ಗೌರವಿಸುವ, ಪ್ರೀತಿ ಅಕ್ಕರೆಯಿಂದ ಕಾಣುವ ಸ್ಥಾನ ಮಾನವನ್ನು ನೀಡುತ್ತದೆ ಎಂದು ಆದಿಚುಂಚನಗಿರಿ ಮಹಾಪೀఠದ ಚಿಕ್ಕಬಳ್ಳಾಪುರ ಶಾಖೆಯ ಶ್ರೀಮಂಗಳನಾಥಸ್ವಾಮೀಜಿ ತಿಳಿಸಿದರು.

ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳದ ಕೆವಿ ಭವನದಲ್ಲಿ ಸೋಮವಾರ ನಡೆದ ಬಿಜಿಎಸ್ ಶಾಲೆಯ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ ಜ್ಣಾನಾಂಕುರ ಅಕ್ಷರಾಭ್ಯಾಸ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿ ಅವರು ಮಾತನಾಡಿದರು.

ಮಕ್ಕಳು ಶಾಲೆ ಕಾಲೇಜುಗಳಲ್ಲಿ ಕಲಿಯುವುದಕ್ಕಿಂತಲೂ ಮನೆಯಲ್ಲಿ, ಸುತ್ತ ಮುತ್ತಲ ಪರಿಸರದಲ್ಲಿ ಕಲಿಯುವೆ ಹೆಚ್ಚು. ತಾಯಿ ಜತೆ ಕಳೆಯುವಷ್ಟು ಸಮಯ ಮತ್ತಾರ ಬಳಿಯೂ ಕಳೆಯುವುದಿಲ್ಲ. ಹಾಗಾಗಿ ಮಗುವಿನ ಮೊದಲ ಪಾఠ ಶಾಲೆ ಮನೆಯೆ ಆಗಿರುವದರಿಂದ ಹೆತ್ತವರು ಮಕ್ಕಳಿಗೆ ಮಾದರಿಯಾದ ಬದುಕನ್ನು ನಡೆಸಬೇಕೆಂದರು.

ಮಕ್ಕಳು ಕೇಳಿಸಿಕೊಂಡಿದ್ದನ್ನು, ಹೇಳಿಕೊಟ್ಟಿದ್ದನ್ನು ಕಲಿಯುವುದಕ್ಕಿಂತಲೂ ನೋಡಿದ್ದು ಹೆಚ್ಚು ಪರಿಣಾಮ ಬೀರುತ್ತದೆ ಮತ್ತು ಅದನ್ನೆ ಹೆಚ್ಚು ಕಲಿಯುತ್ತದೆ. ಆದ್ದರಿಂದ ತಂದೆ ತಾಯಿ ಅಣ್ಣ ತಮ್ಮ ಅಕ್ಕ ತಂಗಿಯರು ಮಕ್ಕಳ ಮದ೦ೇ ಉತ್ತಮ ನಡೆ ನುಡಿ ಉತ್ತಮವಾಗಿರುವಂತೆ ನಡೆದುಕೊಳ್ಳಿ ಎಂದು ಮನವಿ ಮಾಡಿದರು.

ತಹಶೀಲ್ದಾರ್ ಎನ್.ಗಗನಸಿಂಧು ಮಾತನಾಡಿ, ಯಾವ ಮಗು ಏನು ಸಾಧನೆ ಮಾಡಲಿದೆಯೋ ಯಾರಿಗೂ ತಿಳಿಯದು. ಆದರೆ ಮಗುವಿಗೆ ಉತ್ತಮ ಶಿಕ್ಷಣ ನೀಡಿ ಅವರ ಪ್ರತಿಭೆಗೆ ಅನುಗುಣವಾಗಿ ಅವಕಾಶಗಳನ್ನು ಒದಗಿಸಿಕೊಡುವ ಕೆಲಸ ಸರ್ಕಾರ, ಸಂಘ ಸಂಸ್ಥೆ ಮತ್ತು ಸಮುದಾಯದಿಂದ ಆಗಬೇಕಿದೆ ಎಂದರು.

ಮಕ್ಕಳ ಪೋಷಕರು ಪಂಚೆ ಷರ್ಟು, ಸೀರೆ ಉಟ್ಟು ಸಾಂಪ್ರದಾಯಿಕ ಉಡುಗೆ ತೊಟ್ಟು ಬಂದಿದ್ದರು. ಮಕ್ಕಳಿಗೆ ಓಂಕಾರ ಹೇಳಿಕೊಟ್ಟು ಅಕ್ಷರಾಭ್ಯಾಸವನ್ನು ಮಾಡಿಸಲಾಯಿತು. ಮఠದ ಭಕ್ತರು ಮఠಕ್ಕೆ ಅಕ್ಕಿ ಬೇಳೆಯನ್ನು ಕಾಣಿಕೆಯಾಗಿ ನೀಡಿದರು.

ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ ನ ಆಡಳಿತಾಧಿಕಾರಿ ಡಾ.ಎನ್.ಶಿವರಾಮರೆಡ್ಡಿ, ಬಿಜಿಎಸ್ ಶಾಲೆಯ ಪ್ರಿನ್ಸಿಪಲ್ ಕೆ.ಮಹದೇವ್, ಕೆವಿ ಟ್ರಸ್ಟ್‌ ನ ಉಪಾಧ್ಯಕ್ಷ ಬಿಳಿಶಿವಾಲೆ ರವಿ, ಟ್ರಸ್ಟ್‌ ನ ಖಜಾಂಚಿ ಮುನಿಶಾಮಿಗೌಡ ಸೇರಿದಂತೆ ಹಲವರು ಹಾಜರಿದ್ದರು.

ಇತ್ತೀಚೆಗೆ ತಾಲ್ಲೂಕಿನಲ್ಲಿ ನಡೆದ ಜ್ಣಾನ ಆವಿಷ್ಕಾರ್ ವಸ್ತು ಪ್ರದರ್ಶನದಂತಹ ಶಿಕ್ಷಣ ಕಾರ್ಯಕ್ರಮಗಳೂ ಸುದ್ದಿಯಾಗಿದ್ದವು.

In English: Sri Mangalanathaswamiji of Adichunchanagiri Mahapeetha’s Chikkaballapur branch spoke at a Jnanankura Aksharabhyasa (initiation-to-letters) program for BGS School pre-primary children at Handiganala, Sidlaghatta taluk, emphasizing that education and values shape children into socially responsible individuals, with parents’ own conduct as the first lesson.

Sidlaghatta WhatsApp Channel Group

For Daily Updates WhatsApp ‘HI’ to 7406303366

ದಲಿತರ ಬೇಡಿಕೆ ಈಡೇರಿಸಲು ಆಗ್ರಹ; ಕದಸಂಸ ಪದಾಧಿಕಾರಿಗಳಿಂದ ಧರಣಿ

0
Sidlaghatta Dalit Sangharsha Samiti Protest Taluk Office

Sidlaghatta : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗೆ ಸಂವಿಧಾನಬದ್ಧ ಹಕ್ಕುಗಳು ಹಾಗೂ ಮೀಸಲಾತಿ ಸೌಲಲ್ಲಭ್ಯಗಳನ್ನು ಸಮರ್ಪಕವಾಗಿ ತಲುಪಿಸುವಲ್ಲಿ ಶಿಡ್ಲಘಟ್ಟ ತಾಲ್ಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಕದಸಂಸ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್ ಆರೋಪಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ತಾಲ್ಲೂಕು ಕಚೇರಿ ಮುಂಭಾಗ ಸೋಮವಾರ ಹಮ್ಮಿಕೊಂಡಿದ್ದ ಧರಣಿಯ ನೇತ್ರೃತ್ವ ವಹಿಸಿ ಅವರು ಮಾತನಾಡಿದರು.

ಕ್ಷೇತ್ರದಲ್ಲಿ ಶೇ 36ರಷ್ಟು ಎಸ್.ಸಿ, ಎಸ್.ಟಿ ಜನಸಂಖ್ಯೆ ಇದ್ದರೂ ರಾಜಕೀಯ ಪಕ್ಷಗಳು ಅವರನ್ನು ಮತ ಬ್ಯಾಂಕ್ ನಂತೇ ಬಳಸಿಕೊಳ್ಳುತ್ತಿವೆ. ಎಸ್.ಸಿ.ಪಿ ಹಾಗೂ ಟಿ.ಎಸ್.ಪಿ ಯೋಜನೆಗಳ ಅನುದಾನವನ್ನು ಮೂಲ ಉದ್ದೇಶಗಳಿಗೆ ಬಳಸದೆ ಬೇರೆ ಯೋಜನೆಗಳಿಗೆ ವರ್ಗಾವಣೆ ಮಾಡುತ್ತಿರುವುದರಿಂದ ದಲಿತ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ದೂರಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 80 ವರ್ಷಗಳು ಆಗುತ್ತಿದೆಯಾದರೂ ನಿವೇಶನ, ಮನೆ, ಕೃಷಿ ಭೂಮಿ ಮತ್ತು ಸ್ಮಶಾನದಂತಹ ಮೂಲಭೂತ ಸೌಲಲ್ಲಭ್ಯಗಳಿಗಾಗಿ ದಲಿತರು ಇನ್ನೂ ಹೋರಾಟ ನಡೆಸಬೇಕಾದ ಪರಿಸ್ಥಿತಿ ಇದೆ. ಫಾರಂ ಸಂಖ್ಯೆ 50, 53 ಹಾಗೂ 57ರಡಿ ಸಲ್ಲಿಕೆಯಾಗಿರುವ ಸಾವಿರಾರು ಬಗರ್ ಹುಕುಂ ಅರ್ಜಿಗಳು ಸಾಕಷ್ಟು ವರ್ಷಗಳಿಂದ ಬಾಕಿ ಉಳಿದಿದ್ದು, ದರಖಾಸ್ತು ಸಮಿತಿ ರಚನೆಯಾಗದ ಕಾರಣ ಭೂ ಮಂಜೂರಾತಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯ ದೋರೆಯುತ್ತಿಲ್ಲ ಎಂದು ಟೀಕಿಸಿದರು.

ತಾಲ್ಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದ್ದು, ಸಾರ್ವಜನಿಕರು ಸಣ್ಣ ಕೆಲಸಗಳಿಗೂ ಅಲೇದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಬೇಕು ಎಂದು ಆಗ್ರಹಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಖಾಸಗೀಕರಣ ನೀತಿಯಿಂದ ವಿದ್ಯಾವಂತ ದಲಿತ ಯುವಕರು ಉದ್ಯೋಗವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗುತ್ತಿದ್ದು, ದಲಿತ ಯುವಜನತೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ.

ತೋಕಲಹಳ್ಳಿ ಗ್ರಾಮದ ಸರ್ವೇ ನಂ.1ರಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ವಿತರಿಸುವುದು, ಬಾಕಿ ಇರುವ ಬಗರ್ ಹುಕುಂ ಅರ್ಜಿಗಳನ್ನು ಇತ್ಯರ್ಥಪಡಿಸುವುದು, ತಾಲ್ಲೂಕು ದರಖಾಸ್ತು ಸಮಿತಿ ರಚಿಸುವುದು, ದಲಿತರಿಗೆ ನಿವೇಶನ, ಮನೆ ಹಾಗೂ ಸ್ಮಶಾನ ಭೂಮಿ ಒದಗಿಸುವುದು, ಗ್ರಾಮ ಪಂಚಾಯಿತಿಗಳಲ್ಲಿ ಶೇ 22.5 ಮೀಸಲಾತಿ ಅನುದಾನದ ದುರುಪಯೋಗ ಕುರಿತು ತನಿಖೆ ನಡೆಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ತ್ವರಿತವಾಗಿ ಬಗೆಹರಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ಗಗನಸಿಂಧೂ.ಎನ್ ರವರ ಮೂಲಕ ಅಪರ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದರು.

ಜಿಲ್ಲಾ ಸಂಘಟನಾ ಸಂಚಾಲಕ ಧಡಂಘಟ್ಟ ತಿರುಮಲೇಶ್, ತಾಲ್ಲೂಕು ಸಂಚಾಲಕ ಎ.ಎಲ್. ನಾರಾಯಣಸ್ವಾಮಿ, ತಾಲ್ಲೂಕು ಸಂಘಟನಾ ಸಂಚಾಲಕ ಯಣ್ಣಂಗೂರು ಸುಬ್ರಮಣಿ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಧರಣಿಯಲ್ಲಿ ಭಾಗವಹಿಸಿದ್ದರು. ಈ ಸಂಬಂಧ ಜುಲೈ 4ರಂದೇ ಧರಣಿಯ ಪ್ರಕಟಣೆ ಹೋರಡಿಸಲಾಗಿತ್ತು.

In English: Karnataka Dalit Sangharsha Samiti held a protest in front of the Sidlaghatta taluk office demanding faster resolution of long-pending SC/ST welfare issues — land grants, Bagar Hukum applications, and misuse of SCP/TSP funds. A memorandum was submitted to the Additional Deputy Commissioner through the Tahsildar.

FAQ

ಕದಸಂಸ ಪ್ರಮುಖ ಬೇಡಿಕೆಗಳೇನು?
ಸಾಗುವಳಿ ಚೀಟಿ ವಿತರಣೆ, ಬಾಕಿ ಬಗರ್ ಹುಕುಂ ಅರ್ಜಿ ಇತ್ಯರ್ಥ, ದಲಿತರಿಗೆ ನಿವೇಶನ-ಮನೆ-ಸ್ಮಶಾನ ಭೂಮಿ ಒದಗಿಸುವಿಕೆ ಹಾಗೂ ಮೀಸಲಾತಿ ಅನುದಾನ ದುರುಪಯೋಗ ತನಿಖೆ.

ಮನವಿ ಪತ್ರ ಯಾರಿಗೆ ಸಲ್ಲಿಸಲಾಗಿದೆ?
ತಹಶೀಲ್ದಾರ್ ಮೂಲಕ ಅಪರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-06/07/2026

0
Sidlaghatta Silk Cocoon Market Rate 06 July 2026

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 06/07/2026

VarietyLotsQty (Kg)MaxMinAvg
Cross-Breed – ಮಿಶ್ರತಳಿ ರೇಷ್ಮೆ ಗೂಡು51827956723500657
Bi-Voltine – ದ್ವಿತಳಿ ರೇಷ್ಮೆ ಗೂಡು332064₹812₹650₹761

Summary: Sidlaghatta Government Cocoon Market rates for 06/07/2026 — Cross-Breed cocoon averaged ₹657/kg across 518 lots (27,956 kg total, price range ₹500–₹723); Bi-Voltine cocoon averaged ₹761/kg across 33 lots (2,064 kg total, price range ₹650–₹812).

ಹಿಂದಿನ ದಿನದ ದರಕ್ಕಾಗಿ 05/07/2026ರ ಮಾರುಕಟ್ಟೆ ದರ ವೀಕ್ಷಿಸಿ. ಎಲ್ಲಾ ದಿನಗಳ ದರಕ್ಕಾಗಿ ರೇಷ್ಮೆ ಗೂಡು ಮಾರುಕಟ್ಟೆ ವಿಭಾಗ ನೋಡಿ.


For Daily Updates WhatsApp ‘HI’ to 7406303366

ಭೂಸ್ವಾಧೀನ ನೀತಿ ಮರುಪರಿಶೀಲಿಸಿ, ರೈತರಿಗೆ ನ್ಯಾಯ ಒದಗಿಸಿ: ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಆಗ್ರಹ

0
Sidlaghatta Land Acquisition Policy Justice Gopalagowda

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರಿನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ, ಸರ್ಕಾರದ ಭೂಸ್ವಾಧೀನ ನೀತಿಯನ್ನು ಮರುಪರಿಶೀಲಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಬಹುರಾಷ್ಟ್ರೀಯ ಕಂಪೆನಿಗಳಿಗೆ ರೈತರ ಜಮೀನುಗಳನ್ನು ಒದಗಿಸುವ ಸರ್ಕಾರದ ಧೋರಣೆಯನ್ನು ಅವರು ತೀವ್ರವಾಗಿ ಟೀಕಿಸಿದರು. ರೈತರ ಬದುಕು ಮತ್ತು ಕೃಷಿ ಉಳಿಯಬೇಕಾದರೇ ಭೂಸ್ವಾಧೀನ ಪ್ರಕ್ರಿಯೆಯನ್ನು ಮರುಪರಿಶೀಲಿಸಬೇಕು ಎಂದು ಅವರು ಹೇಳಿದರು.

ತಾಲ್ಲೂಕಿನ ಮಳ್ಳೂರಿನಲ್ಲಿ ಮಾಜಿ ಶಾಸಕ, ಸಹಕಾರ ರತ್ನ ಪುರಸ್ಕೃತ ದಿವಂಗತ ಕಾಮ್ರೇಡ್ ಜಿ. ಪಾಪಣ್ಣ ಅವರ ಸ್ಮಾರಕ ಭವನ ಉದ್ಘಾಟನೆ ಹಾಗೂ ಶಿಲಾಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಂಗಮಕೋಟೆ ಭಾಗದ ಸಾವಿರಾರು ಎಕರೆ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿದ್ದು, ಬಿಡದಿಯಲ್ಲಿಯೂ ಇದೇ ರೀತಿಯ ಪ್ರಕ್ರಿಯೆ ಆರಂಭವಾಗಿದೆ ಎಂದು ಅವರು ತಿಳಿಸಿದರು. ರೈತರು ಬೆಳೆಯುವ ಬೆಳೆಗೆ ಸಮರ್ಪಕ ಬೆಲೆ ದೋರೆಯುತ್ತಿಲ್ಲ ಎಂದೂ, ಕೃಷಿಕರು ಹಾಗೂ ಕೃಷಿ ಕಾರ್ಮಿಕರು ಆರ್ಥಿಕ ಸಂಕಷ್ಟದಲ್ಲಿದ್ದಾರೆ ಎಂದೂ ಅವರು ಬೇಸರ ವ್ಯಕ್ತಪಡಿಸಿದರು.

ಪಾಪಣ್ಣರ ಬದುಕು ಇಂದಿನ ಪೀಳಿಗೆಗೆ ಮಾದರಿ

ಶಾಸಕ ಬಿ.ಎನ್. ರವಿಕುಮಾರ್ ಮಾತನಾಡಿ, ಮಳ್ಳೂರು ಜಿ. ಪಾಪಣ್ಣ ಅವರು 1952ರ ಚುನಾವಣೆಯಲ್ಲಿ ಕ್ಷೇತ್ರದ ಮೊದಲ ಶಾಸಕರಾಗಿ ಆಯ್ಕೆಯಾಗಿದ್ದರು ಎಂದು ಸ್ಮರಿಸಿದರು. ಆಗ ಶಿಡ್ಲಘಟ್ಟ ಮತ್ತು ಚಿಕ್ಕಬಳ್ಳಾಪುರ ಸೇರಿ 0c92ಂದೇ ವಿಧಾನಸಭಾ ಕ್ಷೇತ್ರವಾಗಿತ್ತು ಎಂದು ಅವರು ತಿಳಿಸಿದರು. ಜನಪರ ಚಿಂತನೆ, ಸರಳತೆ ಹಾಗೂ ರೈತರ ಪರ ಹೋರಾಟಗಳ ಮೂಲಕ ಪಾಪಣ್ಣ ಅವರು ಜನಮನದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದರು ಎಂದು ಶಾಸಕರು ಸ್ಮರಿಸಿದರು. ಸ್ಮರಣಾರ್ಥ ಮಳ್ಳೂರಿನಲ್ಲಿ ಉದ್ಯಾನ ನಿರ್ಮಾಣಕ್ಕೆ ಅಗತ್ಯ ಸರ್ಕಾರಿ ಜಾಗ ಒದಗಿಸುವುದರ ಜೊತೆಗೆ ಶಾಸಕರ ಅನುದಾನದಿಂದ ಅಗತ್ಯ ನೆರವು ನೀಡಲು ಬದ್ಧನಾಗಿರುವುದಾಗಿ ಅವರು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ವಿವಿಧ ಗಣ್ಯರು, ಜಿ. ಪಾಪಣ್ಣ ಅವರು ಅಧಿಕಾರವನ್ನು ವೈಯಕ್ತಿಕ ಲಾಭಕ್ಕಾಗಿ ಬಳಸದೆ ಜನಸೇವೆಯನ್ನೇ ರಾಜಕಾರಣದ ಧ್ಯೇಯವನ್ನಾಗಿಸಿಕ್ಕೊಂಡಿದ್ದ ಅಪರೂಪದ ನಾಯಕರು ಎಂದು ಸ್ಮರಿಸಿದರು. ರೈತರು, ಕಾರ್ಮಿಕರು ಮತ್ತು ಸಹಕಾರ ಕ್ಷೇತ್ರದ ಅಭಿವೃದ್ಧಿಗಾಗಿ ಅವರು ಸಲ್ಲಿಸಿದ ಸೇವೆ ಇಂದಿಗೂ ಪ್ರಸ್ತುತವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ, ಸಹಕಾರ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಬಲಪಡಿಸುವಲ್ಲಿ ಪಾಪಣ್ಣ ಅವರ ಕೊಡುಗೆ ಮಹತ್ವದ್ದಾಗಿದೆ ಎಂದು ಗಣ್ಯರು ಅಭಿಪ್ರಾಯಪಟ್ಟರು. ಸ್ಮಾರಕ ಭವನ ಹಾಗೂ ಶಿಲಾಮೂರ್ತಿ ಮುಂದಿನ ಪೀಳಿಗೆಗೆ ಅವರ ಸೇವೆ ಮತ್ತು ಹೋರಾಟಗಳನ್ನು ಪರಿಚಯಿಸುವ ಕೇಂದ್ರವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಳ್ಳೂರು ಸಿ.ಎನ್. ಪಿಳ್ಳವೆಂಕಟಸ್ವಾಮಿ, ಹಿರಿಯ ವಕೀಲ್ ಕೆ.ಟಿ. ನಂಜುಂಡಗೌಡ, ನಾಗರಾಜ್, ಕುಂದಲಗುರ್ಕಿ ಕೆ.ಎಮ್. ವೆಂಕಟೇಶ್, ಸಿಪಿಎಮ್ ಮುಖಂಡರಾದ ಜಿ.ಎನ್. ನಾಗರಾಜ್, ಲಕ್ಷ್ಮಯ್ಯ, ಗೀತಾ, ಮಳ್ಳೂರು ಹರೀಶ್ ಸೇರಿದಂತೆ ಗ್ರಾಮಸ್ಥರು, ರೈತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

ಜಂಗಮಕೋಟೆ ಭೂಸ್ವಾಧೀನ ವಿಚಾರವಾಗಿ ಕೇಂದ್ರ ಸಚಿವ ಕುಮಾರಸ್ವಾಮಿ ರೈತರಿಗೆ ಬೆಂಬಲ ಸೂಚಿಸಿದ್ದ ವರದಿಯನ್ನೂ ಗಮನಿಸಿ.

In English: At a memorial hall inauguration for late MLA Comrade G. Pappanna in Mallur (Sidlaghatta taluk), retired Justice Gopalagowda urged the state government to review its land acquisition policy and ensure justice for farmers, criticizing the practice of acquiring farmland for multinational companies and citing ongoing acquisitions near Jangamakote and Bidadi. MLA B.N. Ravikumar recalled Pappanna’s legacy as the constituency’s first elected MLA (1952) and pledged support for a memorial garden. Local leaders, lawyers, and farmer representatives attended.

FAQ

ನ್ಯಾಯಮೂರ್ತಿ ಗೋಪಾಲಗೌಡ ಅವರ ಪ್ರಮುಖ ಆಗ್ರಹವೇನು?
ಬಹುರಾಷ್ಟ್ರೀಯ ಕಂಪೆನಿಗಳಿಗೆ ರೈತರ ಭೂಮಿ ನೀಡುವ ಸರ್ಕಾರದ ಭೂಸ್ವಾಧೀನ ನೀತಿಯನ್ನು ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದು ಯಾವ ಪ್ರದೇಶಗಳಿಗೆ ಸಂಬಂಧಿಸಿದೆ?
ಜಂಗಮಕೋಟೆ ಹಾಗೂ ಬಿಡದಿ ಭಾಗದಲ್ಲಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಗಳಿಗೆ ಸಂಬಂಧಿಸಿದೆ.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-05/07/2026

0

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 05/07/2026

VarietyLotsQty (Kg)MaxMinAvg
Cross-Breed – ಮಿಶ್ರತಳಿ ರೇಷ್ಮೆ ಗೂಡು35319142718550654
Bi-Voltine – ದ್ವಿತಳಿ ರೇಷ್ಮೆ ಗೂಡು271612₹800₹555₹709

Summary: Sidlaghatta Government Cocoon Market rates for 05/07/2026 — Cross-Breed cocoon averaged ₹654/kg across 353 lots (19,142 kg total, price range ₹550–₹718); Bi-Voltine cocoon averaged ₹709/kg across 27 lots (1,612 kg total, price range ₹555–₹800).


For Daily Updates WhatsApp ‘HI’ to 7406303366

ಭೂಸ್ವಾಧೀನ ಹೋರಾಟಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಬೆಂಬಲ; ರೈತರಲ್ಲಿ ಹೊಸ ಭರವಸೆ

0
Sidlaghatta Jangamakote Kumaraswamy Land Acquisition Support

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ವ್ಯಾಪ್ತಿಯ 13 ಹಳ್ಳಿಗಳಲ್ಲಿ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕಾಗಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರಿಗೆ ಹೊಸ ಆಶಾಭಾವ ಮೂಡಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಬೆಂಗಳೂರಿನ ಜೆ.ಪಿ. ಭವನದಲ್ಲಿ ನಡೆದ ಸಭೆಯಲ್ಲಿ ರೈತರ ಅಹವಾಲು ಆಲಿಸಿ, ಹೋರಾಟಕ್ಕೆ ಬೆಂಬಲ ಸೂಚಿಸಿರುವುದು ರೈತರಲ್ಲಿ ವಿಶ್ವಾಸ ಹೆಚ್ಚಿಸಿದೆ.

ಸಭೆಯಲ್ಲಿ ಶಿಡ್ಲಘಟ್ಟ ಶಾಸಕ ಬಿ.ಎನ್. ರವಿಕುಮಾರ್, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಕೆ. ಕೃಷ್ಣಾರೆಡ್ಡಿ ಸೇರಿದಂತೆ ಪಕ್ಷದ ಮುಖಂಡರು ಭಾಗವಹಿಸಿದ್ದರು. ಕೃಷಿ ಭೂಮಿಯಲ್ಲಿ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಹಾಗೂ ರೈತರ ಪರವಾಗಿ ನಿಲ್ಲುವುದಾಗಿ ಶಾಸಕ ಭರವಸೆ ನೀಡಿದರು ಎಂದು ಸಭೆಯಲ್ಲಿ ಪಾಲ್ಗೊಂಡ ರೈತರು ತಿಳಿಸಿದ್ದಾರೆ.

ಜಂಗಮಕೋಟೆ ವ್ಯಾಪ್ತಿಯ 13 ಹಳ್ಳಿಗಳ 2,823 ಎಕರೆ ಭೂಮಿಯನ್ನು ಕೈಗಾರಿಕಾ ಪ್ರದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಗೆ ವಿರೋಧವಾಗಿ ರೈತರು ಕಳೆದ 112 ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಈವರೆಗೆ ಅಧಿಕಾರಿಗಳಿಂದ ಸಮರ್ಪಕ ಸ್ಪಂದನೆ ದೊರಕಿರಲಿಲ್ಲ ಎನ್ನುವುದು ರೈತರ ಆರೋಪವಾಗಿದೆ.

ಭೂಸ್ವಾಧೀನ ವಿಚಾರವಾಗಿ ಈ ಹಿಂದೆ ಪರ–ವಿರೋಧ ಚರ್ಚೆಗಳು ನಡೆದಿದ್ದವು. ಕೆಐಎಡಿಬಿ ಮೂಲಕ ಭೂಸ್ವಾಧೀನ ಪ್ರಕ್ರಿಯೆ ಮುಂದುವರಿದಿದ್ದು, ಭೂಮಾಲೀಕರಿಗೆ ನೋಟಿಸ್ ನೀಡಿ ದರ ನಿಗದಿ ಸಭೆಗಳನ್ನೂ ನಡೆಸಲಾಗಿತ್ತು. ನೋಟಿಫಿಕೇಷನ್ ಆಗಿದ್ದ 2,823 ಎಕರೆ ಪ್ರದೇಶದಲ್ಲಿ ಕೆಲ ಭೂಮಿಯನ್ನು ಕೈಬಿಟ್ಟು ಉಳಿದ ಭೂಮಿಯ ಸ್ವಾಧೀನ ಪ್ರಕ್ರಿಯೆ ಮುಂದುವರಿದಿತ್ತು.

ಈ ನಡುವೆ ರೈತರ ಮನವಿಯ ಮೇರೆಗೆ ಜೆಡಿಎಸ್ ನಾಯಕರು ಸಭೆ ಆಯೋಜಿಸಿ, ಸಮಸ್ಯೆ ಕುರಿತು ಚರ್ಚಿಸಿದರು. ಹೋರಾಟಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರೂ ನೇರವಾಗಿ ಭಾಗವಹಿಸುವುದಾಗಿ ಭರವಸೆ ನೀಡಿರುವುದು ರೈತರಲ್ಲಿ ನಿರೀಕ್ಷೆ ಮೂಡಿಸಿದೆ.

ರೈತರಲ್ಲಿ ವಿಶ್ವಾಸ ಹೆಚ್ಚಿದೆ

“ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಶಾಸಕ ಬಿ.ಎನ್. ರವಿಕುಮಾರ್ ರೈತರ ಭೂಮಿ ಉಳಿಸುವ ಕುರಿತು ಭರವಸೆ ನೀಡಿದ್ದಾರೆ. ನಮ್ಮ ಮನವಿಗೆ ಸ್ಪಂದಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿರುವುದು ರೈತರಲ್ಲಿ ಹೊಸ ವಿಶ್ವಾಸ ಮೂಡಿಸಿದೆ” ಎಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಹೇಳಿದರು.

ರೈತರು ತಮ್ಮ ಸಮಸ್ಯೆಗಳನ್ನು ನೇರವಾಗಿ ಜನಪ್ರತಿನಿಧಿಗಳ ಗಮನಕ್ಕೆ ತಂದಿರುವ ಹಿನ್ನೆಲೆಯಲ್ಲಿ, ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪರಿಹಾರ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.

In English: Union Minister H.D. Kumaraswamy has extended support to farmers protesting the acquisition of 2,823 acres across 13 villages in Sidlaghatta’s Jangamakote region for an industrial area, at a meeting held in Bengaluru. Farmers have been protesting outside the Deputy Commissioner’s office for 112 days; local MLA B.N. Ravikumar reaffirmed he would stand by farmers and oppose converting agricultural land for industrial use.

Sidlaghatta WhatsApp Channel Group

For Daily Updates WhatsApp ‘HI’ to 7406303366

ರಸಗೊಬ್ಬರ, ಬಿತ್ತನೆ ಬೀಜ ಸಮರ್ಪಕ ಲಭ್ಯ; ಬೆಳೆ ವಿಮೆ ಮಾಡಿಸಿಕೊಳ್ಳಲು ರೈತರಿಗೆ ಸೂಚನೆ

0
Sidlaghatta Fertilizer Seed Availability Crop Insurance

Sidlaghatta : ಮುಂಗಾರು ಮಳೆ ಇನ್ನೂ ಸಮರ್ಪಕವಾಗಿ ಆರಂಭವಾಗದ ಹಿನ್ನೆಲೆಯಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ರೈತರು ಮಳೆಯ ನಿರೀಕ್ಷೆಯಲ್ಲೇ ಕೃಷಿ ಚಟುವಟಿಕೆಗಳಿಗೆ ಸಿದ್ಧತೆ ನಡೆಸಿದ್ದಾರೆ. ಈ ನಡುವೆ, 2026-27ನೇ ಸಾಲಿನ ಮುಂಗಾರು ಹಂಗಾಮಿಗೆ ಅಗತ್ಯವಿರುವ ರಸಗೊಬ್ಬರ ಹಾಗೂ ಪ್ರಮಾಣೀಕೃತ ಬಿತ್ತನೆ ಬೀಜಗಳನ್ನು ಸಮರ್ಪಕ ಪ್ರಮಾಣದಲ್ಲಿ ದಾಸ್ತಾನು ಮಾಡಲಾಗಿದ್ದು, ರೈತರು ಯಾವುದೇ ಆತಂಕವಿಲ್ಲದೆ ಇಲಾಖೆಯ ಮಾರ್ಗದರ್ಶನದಂತೆ ಕೃಷಿ ಕಾರ್ಯ ಕೈಗೊಳ್ಳಬೇಕು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರವಿ ತಿಳಿಸಿದರು.

ಹೊಸ ತಳಿಗಳ ಬೆಳೆ ವಿಸ್ತೀರ್ಣ ಹೆಚ್ಚಿಸುವ ಉದ್ದೇಶದಿಂದ ಕೃಷಿ ಇಲಾಖೆಯಿಂದ ರೈತರಿಗೆ ಉಚಿತವಾಗಿ ತೊಗರಿ, ಉದ್ದು ಹಾಗೂ ಅವರೆ ಬೆಳೆಗಳ ಹೊಸ ತಳಿಗಳ ಬೀಜಗಳ ಕಿರುಚೀಲಗಳನ್ನು ವಿತರಿಸಿ ಅವರು ಮಾತನಾಡಿದರು.

ಮುಂಗಾರು ಹಂಗಾಮಿಗೆ ಅಗತ್ಯವಿರುವ ಯೂರಿಯಾ, ಡಿ.ಎ.ಪಿ., ಎಂ.ಒ.ಪಿ. ಹಾಗೂ ವಿವಿಧ ಕಾಂಪ್ಲೆಕ್ಸ್ (ಸಂಯುಕ್ತ) ರಸಗೊಬ್ಬರಗಳನ್ನು ಕೃಷಿ ಸೇವಾ ಕೇಂದ್ರಗಳಲ್ಲಿ ಸಮರ್ಪಕ ಪ್ರಮಾಣದಲ್ಲಿ ದಾಸ್ತಾನು ಮಾಡಲಾಗಿದೆ. ಹಂಗಾಮಿನ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ಸರಬರಾಜು ಹಾಗೂ ವಿತರಣೆ ನಿರಂತರವಾಗಿ ನಡೆಯುತ್ತಿದೆ. ಅಗತ್ಯ ಪ್ರಮಾಣದ ರಸಗೊಬ್ಬರ ಲಭ್ಯವಿರುವುದರಿಂದ ರೈತರು ಅನಗತ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡದೆ, ಇಲಾಖೆ ಶಿಫಾರಸು ಮಾಡಿದ ಪ್ರಮಾಣದಲ್ಲಿಯೇ ಬಳಸಬೇಕು ಎಂದು ತಿಳಿಸಿದರು.

ತಾಲ್ಲೂಕಿನಲ್ಲಿ ವಿವಿಧ ಬೆಳೆಗಳಿಗೆ ಅಗತ್ಯವಿರುವ ಪ್ರಮಾಣೀಕೃತ ಬಿತ್ತನೆ ಬೀಜಗಳೂ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿವೆ. ಇಲಾಖೆ ಹಾಗೂ ಅಧಿಕೃತ ಮಾರಾಟ ಕೇಂದ್ರಗಳ ಮೂಲಕ ಗುಣಮಟ್ಟದ ಬೀಜಗಳನ್ನು ರೈತರಿಗೆ ವಿತರಿಸಲಾಗುತ್ತಿದೆ. ರೈತರು ಖಾಸಗಿ ಮೂಲಗಳಿಂದ ಬೀಜ ಖರೀದಿಸುವ ಬದಲು ಇಲಾಖೆ ಶಿಫಾರಸು ಮಾಡಿದ ಅಧಿಕೃತ ಮಾರಾಟ ಕೇಂದ್ರಗಳಿಂದಲೇ ಪ್ರಮಾಣೀಕೃತ ಬೀಜಗಳನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಾಲಿನ ಮುಂಗಾರು ಹಂಗಾಮಿಗೆ ವಿವಿಧ ಬೆಳೆಗಳ ವಿಸ್ತೀರ್ಣ ಗುರಿ ನಿಗದಿಪಡಿಸಲಾಗಿದ್ದು, ಮಳೆ ವಿಳಂಬವಾಗಿರುವ ಕಾರಣ ಬಿತ್ತನೆ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ಆರಂಭವಾಗಿಲ್ಲ. ಮಳೆಯ ಸ್ಥಿತಿಗತಿಗಳನ್ನು ಗಮನಿಸಿ, ಸ್ಥಳೀಯ ಹವಾಮಾನ ಹಾಗೂ ಮಣ್ಣಿನ ಗುಣಲಕ್ಷಣಗಳಿಗೆ ಅನುಗುಣವಾಗಿ ಇಲಾಖೆ ಶಿಫಾರಸು ಮಾಡಿದ ಬೆಳೆಗಳನ್ನಷ್ಟೇ ಬೆಳೆಯುವಂತೆ ರೈತರಿಗೆ ಸೂಚಿಸಿದರು.

ಡಿ.ಎ.ಪಿ. ರಸಗೊಬ್ಬರದ ಮೇಲಿನ ಅವಲಂಬನೆ ಕಡಿಮೆ ಮಾಡುವ ಉದ್ದೇಶದಿಂದ ರೈತರು 20:20:0:13, 15:15:15, 12:32:16 ಸೇರಿದಂತೆ ವಿವಿಧ ಕಾಂಪ್ಲೆಕ್ಸ್ (ಸಂಯುಕ್ತ) ರಸಗೊಬ್ಬರಗಳನ್ನು ಮಣ್ಣಿನ ಪರೀಕ್ಷಾ ವರದಿಗೆ ಅನುಗುಣವಾಗಿ ಬಳಸಬೇಕು. ಇದರಿಂದ ಬೆಳೆಗಳಿಗೆ ಸಮತೋಲನ ಪೋಷಕಾಂಶ ದೊರೆಯುವುದರ ಜೊತೆಗೆ ಉತ್ಪಾದನಾ ವೆಚ್ಚವೂ ನಿಯಂತ್ರಣದಲ್ಲಿರುತ್ತದೆ ಎಂದು ವಿವರಿಸಿದರು.

ಮಣ್ಣಿನ ಪರೀಕ್ಷೆ ಆಧರಿಸಿ ರಸಗೊಬ್ಬರ ಬಳಕೆ ಮಾಡಬೇಕು. ಜೈವಿಕ ಗೊಬ್ಬರ, ಸಾವಯವ ಗೊಬ್ಬರ ಹಾಗೂ ಸೂಕ್ಷ್ಮ ಪೋಷಕಾಂಶಗಳ ಬಳಕೆಗೆ ಆದ್ಯತೆ ನೀಡಬೇಕು. ಮಳೆಯ ಪರಿಸ್ಥಿತಿಯನ್ನು ಗಮನಿಸಿ ಬಿತ್ತನೆ ಕೈಗೊಳ್ಳುವುದರ ಜೊತೆಗೆ ಕೀಟ ಹಾಗೂ ರೋಗ ನಿರ್ವಹಣೆ ಕುರಿತು ಕೃಷಿ ಇಲಾಖೆಯ ಅಧಿಕಾರಿಗಳ ಸಲಹೆ ಪಡೆದು ವೈಜ್ಞಾನಿಕ ಪದ್ಧತಿಗಳನ್ನು ಅನುಸರಿಸಬೇಕು ಎಂದು ಹೇಳಿದರು.

ಬರದ ಛಾಯೆ: ಬೆಳೆ ವಿಮೆ ಮಾಡಿಸಿಕೊಳ್ಳಲು ಮನವಿ

ತಾಲ್ಲೂಕಿನಲ್ಲಿ ಇನ್ನೂ ಸಮರ್ಪಕ ಮಳೆಯಾಗದ ಕಾರಣ ಬರದ ಛಾಯೆ ಆವರಿಸಿದೆ. ಈ ಹಿನ್ನೆಲೆಯಲ್ಲಿ ಸಂಭವನೀಯ ಬೆಳೆ ನಷ್ಟದಿಂದ ಆರ್ಥಿಕ ರಕ್ಷಣೆ ಪಡೆಯಲು ಎಲ್ಲ ರೈತರೂ ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಿಕೊಳ್ಳಬೇಕು. ನಿಗದಿತ ಅವಧಿಯೊಳಗೆ ವಿಮೆ ನೋಂದಣಿ ಪೂರ್ಣಗೊಳಿಸಿ, ಅಗತ್ಯ ದಾಖಲೆಗಳೊಂದಿಗೆ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಯ ಕಚೇರಿಯನ್ನು ಸಂಪರ್ಕಿಸುವಂತೆ ಅವರು ಮನವಿ ಮಾಡಿದರು.

ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹೋಬಳಿ ವ್ಯಾಪ್ತಿಯ ಕೃಷಿ ಅಧಿಕಾರಿಗಳು, ರೈತ ಸಂಪರ್ಕ ಕೇಂದ್ರಗಳು ಅಥವಾ ಶಿಡ್ಲಘಟ್ಟ ಕೃಷಿ ಇಲಾಖೆಯ ಕಚೇರಿಯನ್ನು ಸಂಪರ್ಕಿಸಿ ಸರ್ಕಾರದ ವಿವಿಧ ಯೋಜನೆಗಳು, ಬಿತ್ತನೆ ಬೀಜಗಳ ವಿತರಣೆ, ರಸಗೊಬ್ಬರ ಲಭ್ಯತೆ ಹಾಗೂ ಬೆಳೆ ನಿರ್ವಹಣೆಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದು ಸದುಪಯೋಗಪಡಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.

In English: Sidlaghatta’s Agriculture Department has stocked adequate fertilizers (urea, DAP, MOP, complex fertilizers) and certified seeds for the 2026-27 kharif season, Assistant Director Ravi said, urging farmers to buy only recommended quantities and prefer soil-test-based complex fertilizers over DAP. With monsoon rains delayed, he also appealed to all farmers to mandatorily enrol in crop insurance to safeguard against possible crop loss.

Sidlaghatta WhatsApp Channel Group

For Daily Updates WhatsApp ‘HI’ to 7406303366

ಇಸ್ಪೀಟ್ ಅಡ್ಡೆ ಮೇಲೆ ಪೊಲೀಸ್ ದಾಳಿ: 7 ಮಂದಿ ಬಂಧನ, ₹2 ಲಕ್ಷಕ್ಕೂ ಹೆಚ್ಚು ನಗದು ಜಪ್ತಿ

0
Sidlaghatta Police Raid Card Gambling Den Basavapattana

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬಸವಾಪಟ್ಟಣ ಗ್ರಾಮದ ಸಮೀಪ ನಡೆಯುತ್ತಿದ್ದ ಇಸ್ಪೀಟ್ ಅಡ್ಡೆಯ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (ಎಸ್‌.ಪಿ) ವಿಶೇಷ ತಂಡ ದಾಳಿ ನಡೆಸಿ 7 ಮಂದಿಯನ್ನು ಬಂಧಿಸಿದೆ.

ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ತಂಡವು ₹2,02,800 ನಗದು, 7 ಮೊಬೈಲ್ ಫೋನ್‌ಗಳು ಹಾಗೂ 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದೆ. ಬಂಧಿತರು ಹಾಗೂ ಜಪ್ತಿ ಮಾಡಿದ ವಸ್ತುಗಳನ್ನು ಮುಂದಿನ ಕ್ರಮಕ್ಕಾಗಿ ಶಿಡ್ಲಘಟ್ಟ ಗ್ರಾಮಾಂತರ ಠಾಣೆಗೆ ಹಸ್ತಾಂತರಿಸಲಾಗಿದೆ. ಠಾಣೆಯ ಪಿ.ಎಸ್‌.ಐ ಸುನೀಲ್ ಕುಮಾರ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಬಂಧಿತರೆಂದು ಗುರುತಿಸಲಾದವರು: ದೇವರಾಜ್ ಕೆ. (43, ಚನ್ನರಾಯಪಟ್ಟಣ, ದೇವನಹಳ್ಳಿ ತಾಲ್ಲೂಕು); ಮುನಿಕೃಷ್ಣ ಕೆ.ಎಂ. (53, ಕಸಗುಟ್ಟಹಳ್ಳಿ, ಚಿಕ್ಕಬಳ್ಳಾಪುರ ತಾಲ್ಲೂಕು); ಶ್ರೀನಿವಾಸ (27, ದಿನ್ನಹಳ್ಳಿ, ಗುಡಿಬಂಡೆ ತಾಲ್ಲೂಕು); ಮಂಜುನಾಥರೆಡ್ಡಿ ಕೆ.ಆರ್. (46, ಕೊನಂಪಲ್ಲಿ, ಚಿಂತಾಮಣಿ ತಾಲ್ಲೂಕು); ಮನೋಜ್ (27, ಹನುಮಂತಪುರ, ಶಿಡ್ಲಘಟ್ಟ ತಾಲ್ಲೂಕು); ಗೋವಿಂದಪ್ಪ (65, ವೆಂಕಟಗಿರಿಕೋಟೆ, ದೇವನಹಳ್ಳಿ ತಾಲ್ಲೂಕು); ಮತ್ತು ನಿಖಿಲ್ (31, ತಾತಹಳ್ಳಿ, ಹಾಲಿ ವಾಸ ಬಸವಾಪಟ್ಟಣ).

In English: A special team led by the district Superintendent of Police raided an illegal card-gambling operation near Basavapattana village in Shidlaghatta taluk, arresting seven men and seizing over ₹2 lakh in cash along with mobile phones and two-wheelers. A case has been registered at Shidlaghatta Rural Police Station and the investigation is underway.

Sidlaghatta WhatsApp Channel Group

For Daily Updates WhatsApp ‘HI’ to 7406303366

ಶಾಸಕ ವೇತನದಿಂದ 9,600 ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್, ಲೇಖನ ಸಾಮಗ್ರಿ ವಿತರಣೆ

0
Sidlaghatta MLA BN Ravikumar Free Notebook Distribution Students Sadali

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಉತ್ತೇಜನ ನೀಡುವ ಉದ್ದೇಶದಿಂದ ಶಾಸಕರ ವೇತನದ ಹಣವನ್ನು ಬಳಸಿ ಸರ್ಕಾರಿ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜುಗಳ ಒಟ್ಟು 9,600 ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಬಿ.ಎನ್. ರವಿಕುಮಾರ್, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾದ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ನೆರವು ನೀಡಲು ಸದಾ ಸಿದ್ಧನಿದ್ದೇನೆ ಎಂದು ತಿಳಿಸಿದರು.

“ನಾನು ಹೆಚ್ಚು ಓದಿಲ್ಲ. ಆದರೆ ಸರ್ಕಾರಿ ಶಾಲೆಗಳ ಮಕ್ಕಳು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂಬುದು ನನ್ನ ಆಶಯ” ಎಂದು ಅವರು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸ್ವಾಮಿ ಮಾತನಾಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ವಿಶೇಷ ಕಾಳಜಿ ವಹಿಸಿರುವ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು. ಶಿಕ್ಷಣದ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸಲು ಶಿಕ್ಷಣ ಇಲಾಖೆ ಎಲ್ಲ ರೀತಿಯ ಪ್ರಯತ್ನಗಳನ್ನು ಕೈಗೊಳ್ಳಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಪ್ರಸನ್ನ ಕುಮಾರ್, ಸಾದಲಿ ಪಿಯು ಕಾಲೇಜಿನ ಪ್ರಾಂಶುಪಾಲ ಶಿವಮೂರ್ತಿ, ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸ್, ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ನರಸಪ್ಪ ಸೇರಿದಂತೆ ಇಲಾಖೆ ಅಧಿಕಾರಿಗಳು, ಮುಖಂಡರು ಮತ್ತು ಸಾರ್ವಜನಿಕರು ಹಾಜರಿದ್ದರು.

In English: MLA B.N. Ravikumar distributed free notebooks and stationery to 9,600 government primary, high school, and college students at Sadali Government High School in Shidlaghatta taluk, funded entirely from his own MLA salary. He said the initiative aims to ensure financially weaker students are not deprived of education, and pledged continued support for deserving students pursuing higher studies.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-04/07/2026

0
Sidlaghatta Silk Cocoon Market Rate 04 July 2026

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 04/07/2026

VarietyLotsQty (Kg)MaxMinAvg
Cross-Breed – ಮಿಶ್ರತಳಿ ರೇಷ್ಮೆ ಗೂಡು52028179745344648
Bi-Voltine – ದ್ವಿತಳಿ ರೇಷ್ಮೆ ಗೂಡು12755₹821₹668₹753

Summary: Sidlaghatta Government Cocoon Market rates for 04/07/2026 — Cross-Breed cocoon averaged ₹648/kg across 520 lots (28,179 kg total, price range ₹344–₹745); Bi-Voltine cocoon averaged ₹753/kg across 12 lots (755 kg total, price range ₹668–₹821).


For Daily Updates WhatsApp ‘HI’ to 7406303366

ಜುಲೈ 6ರಂದು ಧರಣಿ: ದಲಿತ ಸಂಘರ್ಷ ಸಮಿತಿ ಪ್ರಕಟಣೆ

0
Sidlaghatta Dalit Sangharsh Samiti Press Conference July 6 Protest Announcement

Sidlaghatta : ಶಿಡ್ಲಘಟ್ಟ ತಾಲ್ಲೂಕು ಆಡಳಿತದ ದಲಿತ ವಿರೋಧಿ ಧೋರಣೆ, ಭ್ರಷ್ಟಾಚಾರ ಹಾಗೂ ಆಡಳಿತ ವೈಫಲ್ಯಗಳನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಿ.ಎಸ್‌.ಎಸ್) ತಾಲ್ಲೂಕು ಘಟಕದ ವತಿಯಿಂದ ಜುಲೈ 6ರಂದು ತಾಲ್ಲೂಕು ಕಚೇರಿ ಎದುರು ಒಂದು ದಿನದ ಧರಣಿ ನಡೆಸಲಾಗುವುದು ಎಂದು ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗೆ ಸಂವಿಧಾನಬದ್ಧ ಹಕ್ಕುಗಳು ಹಾಗೂ ಮೀಸಲಾತಿ ಸೌಲಭ್ಯಗಳು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಎಂದು ಆರೋಪಿಸಿದರು.

ಶಿಡ್ಲಘಟ್ಟ ಕ್ಷೇತ್ರದಲ್ಲಿ ಶೇ.36ರಷ್ಟು ಎಸ್‌.ಸಿ–ಎಸ್‌.ಟಿ ಜನಸಂಖ್ಯೆ ಇದ್ದರೂ ರಾಜಕೀಯ ಪಕ್ಷಗಳು ಅವರನ್ನು ಮತ ಬ್ಯಾಂಕ್ ನಂತೆ ಬಳಸಿಕೊಳ್ಳುತ್ತಿವೆ. ಎಸ್‌.ಸಿ.ಪಿ ಹಾಗೂ ಟಿ.ಎಸ್‌.ಪಿ ಯೋಜನೆಗಳ ಅನುದಾನವನ್ನು ಮೂಲ ಉದ್ದೇಶಗಳಿಗೆ ಬಳಸದೆ ಬೇರೆ ಯೋಜನೆಗಳಿಗೆ ವರ್ಗಾವಣೆ ಮಾಡುತ್ತಿರುವುದರಿಂದ ದಲಿತ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ದೂರಿದರು.

ನಿವೇಶನ, ಮನೆ, ಕೃಷಿ ಭೂಮಿ ಮತ್ತು ಸ್ಮಶಾನದಂತಹ ಮೂಲಭೂತ ಸೌಲಭ್ಯಗಳಿಗಾಗಿ ದಲಿತರು ಇನ್ನೂ ಹೋರಾಟ ನಡೆಸಬೇಕಾದ ಪರಿಸ್ಥಿತಿ ಇದೆ. ಫಾರಂ ಸಂಖ್ಯೆ 50, 53 ಹಾಗೂ 57ರಡಿ ಸಲ್ಲಿಕೆಯಾಗಿರುವ ಸಾವಿರಾರು ಬಗರ್ ಹುಕುಂ ಅರ್ಜಿಗಳು ವರ್ಷಗಳಿಂದ ಬಾಕಿ ಉಳಿದಿದ್ದು, ದರಖಾಸ್ತು ಸಮಿತಿ ರಚನೆಯಾಗದ ಕಾರಣ ಭೂ ಮಂಜೂರಾತಿ ಪ್ರಕ್ರಿಯೆ ಸ್ಥಗಿತಗೊಂಡಿದೆ ಎಂದು ಹೇಳಿದರು.

ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯ ದೊರೆಯುತ್ತಿಲ್ಲ. ದೂರುದಾರರ ಮೇಲೆಯೇ ಪ್ರತಿದೂರು ದಾಖಲಿಸುವ ಪ್ರವೃತ್ತಿ ಹೆಚ್ಚಾಗಿದೆ. ತಹಶೀಲ್ದಾರ್ ಸಮಸ್ಯೆ ಪರಿಹಾರದ ಭರವಸೆ ನೀಡಿದ್ದರೂ ಕಳೆದ ಒಂದು ವರ್ಷದಿಂದ ದಲಿತರ ಸಮಸ್ಯೆಗಳ ಕುರಿತು ಯಾವುದೇ ಸಭೆ ನಡೆಸಿಲ್ಲ ಎಂದು ಟೀಕಿಸಿದರು.

ತಾಲ್ಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದ್ದು, ಸಾರ್ವಜನಿಕರು ಸಣ್ಣ ಕೆಲಸಗಳಿಗೂ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಬೇಕು ಎಂದು ಆಗ್ರಹಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಖಾಸಗೀಕರಣ ನೀತಿಯಿಂದ ವಿದ್ಯಾವಂತ ದಲಿತ ಯುವಕರು ಉದ್ಯೋಗವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗುತ್ತಿದ್ದು, ದಲಿತ ಯುವಜನತೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ದಲಿತರಿಗೆ ಸಮರ್ಪಕ ರಕ್ಷಣೆ ದೊರೆಯುತ್ತಿಲ್ಲ ಎಂದು ಆರೋಪಿಸಿದರು.

ತೋಕಲಹಳ್ಳಿ ಗ್ರಾಮದ ಸರ್ವೆ ನಂ.1ರಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ವಿತರಿಸುವುದು, ಬಾಕಿ ಇರುವ ಬಗರ್ ಹುಕುಂ ಅರ್ಜಿಗಳನ್ನು ಇತ್ಯರ್ಥಪಡಿಸುವುದು, ತಾಲ್ಲೂಕು ದರಖಾಸ್ತು ಸಮಿತಿ ರಚಿಸುವುದು, ದಲಿತರಿಗೆ ನಿವೇಶನ, ಮನೆ ಹಾಗೂ ಸ್ಮಶಾನ ಭೂಮಿ ಒದಗಿಸುವುದು, ಗ್ರಾಮ ಪಂಚಾಯಿತಿಗಳಲ್ಲಿ ಶೇ.22.5 ಮೀಸಲಾತಿ ಅನುದಾನದ ದುರುಪಯೋಗ ಕುರಿತು ತನಿಖೆ ನಡೆಸುವುದು, ಎಸ್‌.ಸಿ.ಪಿ–ಟಿ.ಎಸ್‌.ಪಿ ಅನುದಾನವನ್ನು ಸಮುದಾಯದ ಅಭಿವೃದ್ಧಿಗೆ ಮಾತ್ರ ಬಳಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಧಡಂಘಟ್ಟ ತಿರುಮಲೇಶ್, ತಾಲ್ಲೂಕು ಸಂಚಾಲಕ ಎ.ಎಲ್. ನಾರಾಯಣಸ್ವಾಮಿ, ತಾಲ್ಲೂಕು ಸಂಘಟನಾ ಸಂಚಾಲಕ ಯಣ್ಣಂಗೂರು ಸುಬ್ರಮಣಿ, ದಿಬ್ಬೂರಹಳ್ಳಿ ಚಿಕ್ಕನರಸಿಂಹಯ್ಯ, ದಬರಗಾನಹಳ್ಳಿ ರಾಜಪ್ಪ, ಕೆ.ಎಂ. ನಾರಾಯಣಸ್ವಾಮಿ, ಹೇಮಾರ್ಲಹಳ್ಳಿ ಮುನಿಯಪ್ಪ, ಜಿ. ಕುರುಬರಹಳ್ಳಿ ವೆಂಕಟಸ್ವಾಮಿ ಹಾಜರಿದ್ದರು.

In English: The Karnataka Dalit Sangharsh Samiti’s Sidlaghatta taluk unit has announced a one-day protest on July 6 in front of the taluk office, alleging an anti-Dalit attitude, corruption, and administrative failures. At a press conference, district convener Meloor Manjunath said SC/ST welfare fund allocations are being diverted from their intended purpose and thousands of land-grant applications remain pending for years. The Samiti has demanded a taluk-level grievance committee, pending land titles, and proper utilisation of SCP-TSP funds for community development.

Sidlaghatta WhatsApp Channel Group

For Daily Updates WhatsApp ‘HI’ to 7406303366

ಪದ್ಮಶಾಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ: ಜುಲೈ 25ರೊಳಗೆ ಅರ್ಜಿ ಆಹ್ವಾನ

0
Sidlaghatta Padmashali Students Felicitation Scholarship

Sidlaghatta : ಚಿಕ್ಕಬಳ್ಳಾಪುರ ಜಿಲ್ಲಾ ಪದ್ಮಶಾಲಿ ನೌಕರರ ಸ್ವಯಂ ಸೇವಾ ಬಳಗ ಶಿಡ್ಲಘಟ್ಟ ಘಟಕದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.

2025-2026ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಗಳಲ್ಲಿ ಶೇ 85 ಕ್ಕಿಂತಲೂ ಹೆಚ್ಚಿನ ಅಂಕಗಳನ್ನು ಗಳಿಸಿರುವ ಪದ್ಮಶಾಲಿ ಜನಾಂಗದ ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯ ವಿದ್ಯಾರ್ಥಿಗಳು ಜುಲೈ 25 ರೊಳಗೆ ನಿಗಧಿತ ಅರ್ಜಿ ನಮೂನೆಯಲ್ಲಿ ಅಂಕಪಟ್ಟಿಯ ಪ್ರತಿಯೊಂದಿಗೆ ಎರಡು ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳ ಸಮೇತ ಅರ್ಜಿ ಸಲ್ಲಿಸಬೇಕು.

ಎಂ.ಶ್ರೀನಿವಾಸಮೂರ್ತಿ, ಅಧ್ಯಕ್ಷರು, ಚಿಕ್ಕಬಳ್ಳಾಪುರ ಜಿಲ್ಲಾ ಪದ್ಮಶಾಲಿ ನೌಕರರ ಸ್ವಯಂ ಸೇವಾ ಬಳಗ ಶಿಡ್ಲಘಟ್ಟ ಇವರಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9242327071, 6361160262, 9110629276 ಸಂಪರ್ಕಿಸಬಹುದು.

In English: The Chikkaballapura District Padmashali Naukara Swayam Seva Sangha, Sidlaghatta unit, is organising a felicitation programme for Padmashali-community students in Chikkaballapura district who scored above 85% in the 2025-26 SSLC and PUC examinations. Interested students should submit an application with two passport-size photographs and a copy of the marksheet to President M. Shrinivasamurthy by July 25. Contact: 9242327071, 6361160262, 9110629276.

Sidlaghatta WhatsApp Channel Group

For Daily Updates WhatsApp ‘HI’ to 7406303366

ಕಲುಷಿತ ನೀರು ಸೇವನೆ ಶಂಕೆ: 20 ಮಂದಿ ಅಸ್ವಸ್ಥ, ಆರೋಗ್ಯ ಇಲಾಖೆ ತಪಾಸಣೆ

0
Sidlaghatta Chikkatekahalli Water Contamination Health Checkup

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಚಿಕ್ಕತೇಕಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿದ ಶಂಕೆಯಿಂದ ಸುಮಾರು 20 ಮಂದಿ ವಾಂತಿ-ಭೇದಿಯಿಂದ ಅಸ್ವಸ್ಥಗೊಂಡಿದ್ದು, ಆರೋಗ್ಯ ಇಲಾಖೆಯು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ಆರಂಭಿಸಿದೆ.

ಕಳೆದ ಮಂಗಳವಾರದಿಂದ ಗ್ರಾಮದಲ್ಲಿ ಹಲವರಿಗೆ ವಾಂತಿ ಹಾಗೂ ಭೇದಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ್ ಕುಮಾರ್, ಸರ್ವೇಕ್ಷಣಾಧಿಕಾರಿ ಕೃಷ್ಣಪ್ರಸಾದ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶಮೂರ್ತಿ, ಬಶೆಟ್ಟಹಳ್ಳಿ ಆರೋಗ್ಯ ಕೇಂದ್ರದ ಡಾ. ಸುಷ್ಮಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹೇಮಾವತಿ ಹಾಗೂ ಆರೋಗ್ಯ ನಿರೀಕ್ಷಕ ದೇವರಾಜ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗ್ರಾಮದಲ್ಲಿ 165 ಮನೆಗಳಿದ್ದು, ಸುಮಾರು 720 ಜನಸಂಖ್ಯೆ ಇದೆ. ಗ್ರಾಮಕ್ಕೆ ಎರಡು ಮೂಲಗಳಿಂದ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಗ್ರಾಮ ಪಂಚಾಯಿತಿಯ ಕೊಳವೆಬಾವಿಯಿಂದ ನೀರು ಸರಬರಾಜಾಗುತ್ತಿದ್ದು, ಖಾಸಗಿಯಾಗಿ ಗಂಜಿಗುಂಟೆಯ ಶುದ್ಧೀಕರಿಸಿದ ನೀರಿನ ಘಟಕದಿಂದಲೂ ಕುಡಿಯುವ ನೀರನ್ನು ತಂದು ಮಾರಾಟ ಮಾಡಲಾಗುತ್ತಿದೆ.

ಕುಡಿಯುವ ನೀರಿನ ಪೈಪ್ ಒಡೆದು ಚರಂಡಿ ನೀರು ಮಿಶ್ರಣವಾಗಿರುವುದೇ ಗ್ರಾಮಸ್ಥರ ಆರೋಗ್ಯ ಸಮಸ್ಯೆಗೆ ಕಾರಣವಾಗಿರಬಹುದು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಕುರಿತು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶಮೂರ್ತಿ ಮಾತನಾಡಿ, “ಯಾವುದೇ ಆತಂಕದ ಪರಿಸ್ಥಿತಿ ಇಲ್ಲ. ಅಸ್ವಸ್ಥಗೊಂಡಿರುವ ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಅಂಗನವಾಡಿ ಕೇಂದ್ರದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಸ್ಥಾಪಿಸಲಾಗಿದ್ದು, ವೈದ್ಯರು ಮತ್ತು ಸಿಬ್ಬಂದಿ ಸ್ಥಳದಲ್ಲಿಯೇ ಚಿಕಿತ್ಸೆ ನೀಡುತ್ತಿದ್ದಾರೆ. ಕುಡಿಯುವ ನೀರಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಗ್ರಾಮ ಪಂಚಾಯಿತಿಯಿಂದ ಒಡೆದಿದ್ದ ನೀರಿನ ಪೈಪ್ ದುರಸ್ತಿಪಡಿಸಲಾಗಿದೆ” ಎಂದು ತಿಳಿಸಿದರು.

In English: Around 20 residents of Chikkatekahalli village in Sidlaghatta taluk fell ill with vomiting and diarrhoea after suspected consumption of contaminated water, following a burst drinking-water pipe mixing with drainage water. District Health Officer Dr. Mahesh Kumar and a team inspected the village, set up a temporary treatment camp at the anganwadi centre, repaired the damaged pipeline, and sent water samples for testing. Taluk Health Officer Dr. Venkateshamurthy said the situation is under control and all affected persons are receiving treatment.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-03/07/2026

0
Sidlaghatta Silk Cocoon Market-03/07/2026

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 03/07/2026

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 535
Qty: 29119 Kg
Mx : 740
Mn: 444
Avg: 654

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 11
Qty: 626 Kg
Mx : ₹ 815
Mn: ₹ 711
Avg: ₹ 751


For Daily Updates WhatsApp ‘HI’ to 7406303366

ಶಿಕ್ಷಣದಿಂದ ಸಮಾಜ ಸುಧಾರಣೆ ಸಾಧ್ಯ: ರಾತ್ರಿ ಶಾಲಾ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣೆ

0
Sidlaghatta Gnana Academy Night School Students Mallur

Sidlaghatta : ಶಿಕ್ಷಣದ ಮೂಲಕವೇ ಸಮಾಜದಲ್ಲಿ ಶಾಶ್ವತ ಬದಲಾವಣೆ ಸಾಧ್ಯವಾಗುತ್ತದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯಗಳನ್ನು ಸಾಕಾರಗೊಳಿಸಲು ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಡಾ.ಬಿ.ಆರ್.ಜ್ಞಾನ ಅಕಾಡೆಮಿಯ ಅಧ್ಯಕ್ಷ ಡಿ. ರವಿಕುಮಾರ್ ಹೇಳಿದರು.

ಮಳ್ಳೂರು ಗ್ರಾಮದ ಡಾ. ಅಂಬೇಡ್ಕರ್ ಭವನದಲ್ಲಿ ರಾತ್ರಿ ಶಾಲೆಯ ವಿದ್ಯಾರ್ಥಿಗಳಿಗೆ ಅಕಾಡೆಮಿಯ ವತಿಯಿಂದ ಶಾಲಾ ಬ್ಯಾಗ್, ನೋಟ್‌ಪುಸ್ತಕ, ಚಪ್ಪಲಿ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.

ಗ್ರಾಮದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕುವ ಉದ್ದೇಶದಿಂದ ಶಿಕ್ಷಕಿಯನ್ನು ನೇಮಿಸಿ ವೇತನ, ಪೌಷ್ಟಿಕ ಆಹಾರ ಹಾಗೂ ಅಗತ್ಯ ಸೌಲಭ್ಯಗಳನ್ನು ಅಕಾಡೆಮಿಯೇ ಒದಗಿಸುತ್ತಿದೆ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮುನಿಯಪ್ಪ ಮಾತನಾಡಿ, ಮಕ್ಕಳಿಗೆ ಆಸ್ತಿಗಿಂತ ಶಿಕ್ಷಣ ನೀಡುವುದು ಮುಖ್ಯ. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದು ಸಲಹೆ ನೀಡಿದರು.

ವೆಂಕಟರೋಣಪ್ಪ, ವಕೀಲ ಎನ್. ಅಶೋಕ್, ಮೂರ್ತಿ, ಕುಮಾರ್, ನಾರಾಯಣಸ್ವಾಮಿ, ಪವನ್, ರಾಜೇಶ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366