Home Blog Page 4

ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಶಿಕ್ಷಣದ ಆಸರೆ

0
Sidlaghatta Sugatur Government School Out of School Children Education Rudreshamurthy

Sidlaghatta : ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಚ್.ಎಸ್. ರುದ್ರೇಶಮೂರ್ತಿ ಅವರು ಶಾಲೆಯಿಂದ ಹೊರಗುಳಿಯುವ ಅಪಾಯದಲ್ಲಿರುವ ಬಡ ಹಾಗೂ ವಲಸೆ ಕಾರ್ಮಿಕರ ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ತರುವ ಕಾರ್ಯದಲ್ಲಿ ತೊಡಗಿದ್ದಾರೆ.

ಈ ಶೈಕ್ಷಣಿಕ ವರ್ಷದಲ್ಲಿ ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹನುಮಂತ ಹರಿಜನ ಹಾಗೂ ಹರೀಶ್ ಹರಿಜನ ಅವರನ್ನು ಜಂಗಮಕೋಟೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಕ್ಕೆ ದಾಖಲಿಸಿ, ಸುಗಟೂರು ಸರ್ಕಾರಿ ಶಾಲೆಯ 4 ಮತ್ತು 5ನೇ ತರಗತಿಗಳಿಗೆ ದಾಖಲಾತಿ ಮಾಡಿಸಿದ್ದಾರೆ. ವಿದ್ಯಾರ್ಥಿನಿಲಯದಿಂದ ಶಾಲೆಗೆ ಮಕ್ಕಳನ್ನು ಕರೆತರುವುದು ಹಾಗೂ ವಾಪಸ್ ಕರೆದೊಯ್ಯುವುದು ಸೇರಿದಂತೆ ಅವರ ಕಲಿಕೆ, ಹಾಜರಾತಿ ಮತ್ತು ಆರೋಗ್ಯದ ಬಗ್ಗೆ ನಿಗಾ ವಹಿಸುತ್ತಿದ್ದಾರೆ. ಮಕ್ಕಳ ಕುಟುಂಬದವರೊಂದಿಗೂ ನಿರಂತರ ಸಂಪರ್ಕದಲ್ಲಿದ್ದು ಶಿಕ್ಷಣ ಮುಂದುವರಿಸುವ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದಾರೆ.

ಕಳೆದ ಹಲವು ವರ್ಷಗಳಿಂದ ಶಾಲೆ ಬಿಟ್ಟ ಮಕ್ಕಳು, ಬಡತನದಿಂದ ಶಿಕ್ಷಣದಿಂದ ದೂರವಾಗುವ ಪರಿಸ್ಥಿತಿಯಲ್ಲಿದ್ದ ವಿದ್ಯಾರ್ಥಿಗಳನ್ನು ಗುರುತಿಸಿ ಶಾಲೆಗೆ ದಾಖಲಿಸುವ ಕಾರ್ಯದಲ್ಲೂ ಅವರು ತೊಡಗಿದ್ದಾರೆ. ಅಗತ್ಯವಿದ್ದಲ್ಲಿ ವಸತಿ, ಶಾಲಾ ಬ್ಯಾಗ್‌, ನೋಟ್‌ ಪುಸ್ತಕ ಸೇರಿದಂತೆ ಕಲಿಕಾ ಸಾಮಗ್ರಿಗಳನ್ನು ದಾನಿಗಳ ನೆರವಿನಿಂದ ಒದಗಿಸುತ್ತಿದ್ದಾರೆ. ಇದರಿಂದ ಶಾಲೆಯ ದಾಖಲಾತಿ ಹೆಚ್ಚಳಕ್ಕೂ ನೆರವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ರುದ್ರೇಶಮೂರ್ತಿ, “ಉತ್ತರ ಕರ್ನಾಟಕ ಸೇರಿದಂತೆ ವಿವಿಧ ಭಾಗಗಳಿಂದ ಮಕ್ಕಳ ಶಿಕ್ಷಣಕ್ಕಾಗಿ ಪೋಷಕರು ಸಂಪರ್ಕಿಸುತ್ತಾರೆ. ಅಂತಹ ಮಕ್ಕಳಿಗೆ ವಸತಿ ಹಾಗೂ ಶಿಕ್ಷಣದ ವ್ಯವಸ್ಥೆ ಕಲ್ಪಿಸಿ, ಅವರು ವಿದ್ಯಾಭ್ಯಾಸ ಮುಂದುವರಿಸುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ವಿದ್ಯಾರ್ಥಿನಿಲಯದ ಸಿಬ್ಬಂದಿಯ ಸಹಕಾರವೂ ಇದಕ್ಕೆ ನೆರವಾಗಿದೆ” ಎಂದು ಹೇಳಿದರು.

In English: Teacher H.S. Rudreshamurthy of Sugatur Government Higher Primary School in Sidlaghatta taluk has been bringing poor and migrant labourers’ children back into mainstream education. This year he enrolled two children from Savanur taluk, Haveri district into a pre-matric hostel and Sugatur school, arranging transport, learning materials and hostel support through donors.

Sidlaghatta WhatsApp Channel Group

For Daily Updates WhatsApp ‘HI’ to 7406303366

ವಿದ್ಯಾರ್ಥಿಗಳಲ್ಲಿ ಅಧ್ಯಯನಾಸಕ್ತಿ ಬೆಳೆಸಲು ಪ್ರೇರಣಾದಾಯಕ ಉಪನ್ಯಾಸ

0
Sidlaghatta Study Motivation Lecture Shreyostu 2026 ARM PU College Winners Bright Academy

Sidlaghatta : ವಿದ್ಯಾರ್ಥಿಗಳು ತಮ್ಮ ಊರಿನ ಇತಿಹಾಸವನ್ನು ಅರಿತುಕೊಳ್ಳಬೇಕು, ಸುತ್ತಮುತ್ತಲಿನ ಸಾಧಕರ ಸಾಧನೆಯನ್ನು ಓದಿ ತಿಳಿಯಬೇಕು. ಪ್ರತಿದಿನ 6 ರಿಂದ 7 ಗಂಟೆಗಳ ಕಾಲ ಗುಣಮಟ್ಟದ ನಿದ್ರೆ ಮಾಡುವುದು, ಬೆಳಗಿನ ಜಾವ ಬೇಗ ಎದ್ದು ಅಧ್ಯಯನ ಮಾಡುವುದರಿಂದ ಸ್ಮರಣಾಶಕ್ತಿ ವೃದ್ಧಿಯಾಗುತ್ತದೆ ಎಂದು ನಿವೃತ್ತ ಮನೋವೈದ್ಯಶಾಸ್ತ್ರದ ಹಿರಿಯ ಪ್ರಾಧ್ಯಾಪಕ ಡಾ. ಸಿ.ಆರ್. ಚಂದ್ರಶೇಖರ್ ತಿಳಿಸಿದರು.

ನಗರದ ಶ್ರೀ ಶಾರದಾ ಎಜುಕೇಷನಲ್ ಟ್ರಸ್ಟ್‌ ನ ಎ.ಆರ್.ಎಂ. ಪಿಯು ಕಾಲೇಜಿನ ವಿನ್ನರ್ಸ್ ಬ್ರೈಟ್ ಅಕಾಡೆಮಿ ವತಿಯಿಂದ ಶನಿವಾರ ಬಾಲಾಜಿ ಕನ್ವೆನ್ಷನ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ “ಶ್ರೇಯೋಸ್ತು–2026” ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

ಮೆದುಳಿಗೆ ನಿರಂತರವಾಗಿ ಕೆಲಸ ನೀಡಬೇಕು. ಸ್ಮರಣೆ ಮತ್ತು ಪುನಃಸ್ಮರಣೆ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಬಹಳ ಸಹಕಾರಿಯಾಗುತ್ತದೆ. ಮಾನವನ ಮೆದುಳಿನಲ್ಲಿ ಕೋಟ್ಯಂತರ ನರಕೋಶಗಳಿದ್ದು, ಬಲ ಮತ್ತು ಎಡಭಾಗದ ಮೆದುಳಿನ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಪ್ರತಿದಿನ ಕನಿಷ್ಠ ಒಂದು ಗಂಟೆಯಾದರೂ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಬೆಳಗಿನ ವೇಳೆಯಲ್ಲಿ ಅಧ್ಯಯನ ಮಾಡಿದರೆ ಏಕಾಗ್ರತೆ ಹಾಗೂ ಕಲಿಕೆಯ ಸಾಮರ್ಥ್ಯ ಹೆಚ್ಚುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪವರ್‌ ಪಾಯಿಂಟ್ (ಪಿಪಿಟಿ) ಪ್ರದರ್ಶನದ ಮೂಲಕ ವಿದ್ಯಾರ್ಥಿಗಳಿಗೆ ಅಧ್ಯಯನ, ಸ್ಮರಣಾಶಕ್ತಿ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಹಲವು ಉಪಯುಕ್ತ ಮಾಹಿತಿಗಳನ್ನು ತಿಳಿಸಿಕೊಟ್ಟರು. ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿ, ಸರಿಯಾದ ಉತ್ತರ ನೀಡಿದ ವಿದ್ಯಾರ್ಥಿಗಳಿಗೆ ಹೂಗುಚ್ಚ ನೀಡಿ ಅಭಿನಂದಿಸಿದರು.

2026ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ವಿವಿಧ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಡಾ. ಕೆ. ಮಧುಸೂದನ್ ಉದ್ಘಾಟಿಸಿದರು. ಹೈಕೋರ್ಟ್ ವಕೀಲ ಎ. ಹರಿರಾಮ್ ಮಾತನಾಡಿದರು.

ಶಾರದಾ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎ.ಆರ್. ಮುನಿರತ್ನಂ, ಕಾರ್ಯದರ್ಶಿ ಎ.ಎಂ. ಶ್ರೀಕಾಂತ್, ಆಡಳಿತಾಧಿಕಾರಿ ವಂದನಾ, ಎ.ಆರ್.ಎಂ. ಪಿಯು ಕಾಲೇಜಿನ ಪ್ರಾಂಶುಪಾಲ ಕೆ. ಮೂರ್ತಿ ಸಾಮ್ರಾಟ್, ಕಸಾಪ ನಿಕಟಪೂರ್ವ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಸಾಹಿತಿ ಪಾ.ಮು.ಚಲಪತಿಗೌಡ, ವಿದ್ಯಾಜ್ಯೋತಿ ಪಿ.ಯು ಕಾಲೇಜು ಪ್ರಾಂಶುಪಾಲ ಟಿ.ವೈ.ಮುನಿರಾಜು, ಉಪನ್ಯಾಸಕರಾದ ದೇವರಾಜ್, ರವಿ, ನಾಗೇಶ್ ಮೌರ್ಯ ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.

In English: Retired psychiatry professor Dr. C.R. Chandrashekar delivered a motivational lecture on study habits and memory-building at the “Shreyostu-2026” event organized by Winners Bright Academy at ARM PU College, Sidlaghatta. Top PUC scorers of 2026 were also felicitated at the event held at Balaji Convention Hall.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-11/07/2026

0
Sidlaghatta Silk Cocoon Market Rate 11-07-2026

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 11/07/2026

VarietyLotsQty (Kg)MaxMinAvg
Cross-Breed – ಮಿಶ್ರತಳಿ ರೇಷ್ಮೆ ಗೂಡು44324054753300670
Bi-Voltine – ದ್ವಿತಳಿ ರೇಷ್ಮೆ ಗೂಡು17994₹845₹549₹794

Summary: Sidlaghatta Government Cocoon Market rates for 11/07/2026 — Cross-Breed cocoon averaged ₹670/kg across 443 lots (24,054 kg total, price range ₹300–₹753); Bi-Voltine cocoon averaged ₹794/kg across 17 lots (994 kg total, price range ₹549–₹845).

ಹಿಂದಿನ ದಿನದ ದರಕ್ಕಾಗಿ 10/07/2026ರ ಮಾರುಕಟ್ಟೆ ದರ ವೀಕ್ಷಿಸಿ. ಎಲ್ಲಾ ದಿನಗಳ ದರಕ್ಕಾಗಿ ರೇಷ್ಮೆ ಗೂಡು ಮಾರುಕಟ್ಟೆ ವಿಭಾಗ ನೋಡಿ.


For Daily Updates WhatsApp ‘HI’ to 7406303366

ಶಾಲಾ ಸಂಸತ್ ಚುನಾವಣೆ: ಮಕ್ಕಳಲ್ಲಿ ಉತ್ಸಾಹದ ಮತದಾನ

0
Sidlaghatta Meluru Government High School Parliament Election

Sidlaghatta : ತಾಲ್ಲೂಕಿನ ಮೇಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಶಾಲಾ ಸಂಸತ್ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಮತದಾನ ಮಾಡಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅನುಭವಾತ್ಮಕವಾಗಿ ಅರಿತುಕೊಂಡರು.

ಪ್ರಜಾಪ್ರಭುತ್ವ ವ್ಯವಸ್ಥೆ, ಮತದಾನದ ಮಹತ್ವ ಹಾಗೂ ನಾಯಕತ್ವದ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಉದ್ದೇಶದಿಂದ ಚುನಾವಣೆ ಆಯೋಜಿಸಲಾಗಿತ್ತು. ಬೆಳಿಗ್ಗೆ 8.30ರಿಂದ 10 ಗಂಟೆಯವರೆಗೆ ಮತದಾನ ನಡೆಯಿತು. 8ರಿಂದ 10ನೇ ತರಗತಿಯ 170 ವಿದ್ಯಾರ್ಥಿಗಳು ಆರು ಕ್ಷೇತ್ರಗಳ 12 ಅಭ್ಯರ್ಥಿಗಳ ಆಯ್ಕೆಗಾಗಿ ಮತ ಚಲಾಯಿಸಿದರು.

ಪ್ರಧಾನಮಂತ್ರಿ, ಶಿಕ್ಷಣ, ಕ್ರೀಡಾ ಹಾಗೂ ಸಾಂಸ್ಕೃತಿಕ ಸಚಿವ ಸ್ಥಾನಗಳಿಗೆ ಸ್ಪರ್ಧೆ ನಡೆದಿದ್ದು, ನೈಜ ಚುನಾವಣೆಯ ಮಾದರಿಯಲ್ಲಿ ಇವಿಎಂ ಮೂಲಕ ಮತದಾನ ವ್ಯವಸ್ಥೆ ಮಾಡಲಾಗಿತ್ತು. ಮತದಾರರಿಗೆ ಶಾಯಿ ಗುರುತು ಹಾಕಲಾಗಿದ್ದು, ಶಿಕ್ಷಕರು ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.

ಎಂಟನೇ ತರಗತಿಯ ವಿದ್ಯಾರ್ಥಿನಿ ಪ್ರಿಯಾ ಎಂ. ಮಾತನಾಡಿ, “ಮೊದಲ ಬಾರಿಗೆ ಮತ ಚಲಾಯಿಸಿದ್ದು ಸಂತಸ ತಂದಿದೆ. ಜನಪ್ರತಿನಿಧಿಗಳನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೇಗೆ ಆಯ್ಕೆ ಮಾಡುತ್ತಾರೆ ಎಂಬುದನ್ನು ಶಿಕ್ಷಕರು ತಿಳಿಸಿಕೊಟ್ಟರು. ಮತದಾನ ಹೊಸ ಅನುಭವ ನೀಡಿತು” ಎಂದರು.

ಮುಖ್ಯಶಿಕ್ಷಕ ಎಚ್.ಎಂ. ಭಾಸ್ಕರ್ ಮಾತನಾಡಿ, “ಪಠ್ಯದ ಜೊತೆಗೆ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ನಾಯಕತ್ವದ ಗುಣಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದು ನಮ್ಮ ಉದ್ದೇಶ. ವಿಧಾನಸಭೆ, ವಿಧಾನಪರಿಷತ್, ಲೋಕಸಭೆ ಹಾಗೂ ರಾಜ್ಯಸಭೆಯ ಚುನಾವಣಾ ಪ್ರಕ್ರಿಯೆ, ಒಂದು ಮತದ ಮಹತ್ವ, ಮತದಾನ, ಮತ ಎಣಿಕೆ, ಸಚಿವ ಸಂಪುಟ ರಚನೆ ಮತ್ತು ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ಕುರಿತು ಮಾಹಿತಿ ನೀಡಲಾಗಿದೆ. ವಿದ್ಯಾರ್ಥಿಗಳು ಪ್ರಣಾಳಿಕೆ ಮಂಡಿಸಿ, ಮತ ಯಾಚಿಸಿ, ಭಾಷಣ ಮಾಡುವ ಮೂಲಕ ಆತ್ಮವಿಶ್ವಾಸ ಬೆಳೆಸಿಕೊಂಡಿದ್ದಾರೆ” ಎಂದು ಹೇಳಿದರು.

ಚುನಾವಣೆಯ ಬಳಿಕ ಶಾಲಾ ಸಂಸತ್ತಿನ ಪದಾಧಿಕಾರಿಗಳನ್ನು ಘೋಷಿಸಿ ಪ್ರಮಾಣ ವಚನ ಬೋಧಿಸಲಾಯಿತು. ಕ್ರಿಷ್ಮಿತಾ ಆರ್. ಸ್ಪೀಕರ್, ಚೇತನ್ ಕುಮಾರ್ ಎಂ.ಎ. ಪ್ರಧಾನಮಂತ್ರಿಯಾಗಿ, ಚಂದನಾ ಗೃಹ ಸಚಿವೆ, ಭಾವನಾ ತೋಟಗಾರಿಕೆ ಸಚಿವೆ, ಮೇಘನಾ ಶಿಕ್ಷಣ ಸಚಿವೆ, ಹೇಮಶ್ರೀ ಪರಿಸರ ಸಚಿವೆ, ನಂದೀಶ್ ಕಾನೂನು ಸಚಿವ, ಘನಕೀರ್ತನ್ ಆಹಾರ ಸಚಿವ, ಹರ್ಷ ಹೆಚ್.ಆರ್. ಕ್ರೀಡಾ ಸಚಿವ, ಮದನ್ ನೀರಾವರಿ ಸಚಿವ, ಹಾರಿಕಾ ಸಾಂಸ್ಕೃತಿಕ ಸಚಿವೆ, ಲಿಖಿತ್ ಆರೋಗ್ಯ ಸಚಿವ ಹಾಗೂ ಅಭಿನವ್ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದರು.

ಶಾಲಾ ಸಂಸತ್ ಚುನಾವಣೆ ಮಕ್ಕಳಲ್ಲಿ ನಾಯಕತ್ವ, ಜವಾಬ್ದಾರಿ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬೆಳೆಸುವಲ್ಲಿ ಯಶಸ್ವಿಯಾಗಿದೆ ಎಂದು ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

In English: Students at Meluru Government High School, Sidlaghatta taluk, enthusiastically voted in a mock School Parliament election held on Saturday using EVMs, ink marking and teacher-run polling booths. 170 students from classes 8-10 elected 12 candidates across six ministerial posts including Prime Minister, Education, Sports and Culture. Headmaster H.M. Bhaskar said the exercise introduces students to India’s democratic and legislative processes.

Sidlaghatta WhatsApp Channel Group

For Daily Updates WhatsApp ‘HI’ to 7406303366

ಪಿಎಂಶ್ರೀ ಶಾಲೆಯಲ್ಲಿ ಶಾರದಾದೇವಿ ವಿಗ್ರಹ ಪ್ರತಿಷ್ಠಾಪನೆ

0
Sidlaghatta Cheemangala PM Shri School Sharadadevi Idol Installation

Sidlaghatta : ತಾಲ್ಲೂಕಿನ ಚೀಮಂಗಲ ಗ್ರಾಮದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶನಿವಾರ ಶ್ರೀ ಶಾರದಾದೇವಿ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು.

ಶಾಲೆಯ ಹಳೆಯ ವಿದ್ಯಾರ್ಥಿಗಳು, ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರತಿಷ್ಠಾಪನೆ ಅಂಗವಾಗಿ ಗಣಪತಿ ಪೂಜೆ, ವಾಸ್ತು ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ವೇದಮೂರ್ತಿ ಅಭಿಲಾಷ್ ಅವರ ನೇತೃತ್ವದಲ್ಲಿ ಮಂತ್ರಘೋಷಗಳ ನಡುವೆ ಶಾರದಾದೇವಿ ವಿಗ್ರಹ ಪ್ರತಿಷ್ಠಾಪನೆ ಹಾಗೂ ವಿಶೇಷ ಪೂಜೆಗಳನ್ನು ಶಾಸ್ತ್ರೋಕ್ತವಾಗಿ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸ್ವಾಮಿ ಮಾತನಾಡಿ, “ಶಾಲೆಗಳು ಕೇವಲ ಶಿಕ್ಷಣ ನೀಡುವ ಕೇಂದ್ರಗಳಷ್ಟೇ ಅಲ್ಲ, ಉತ್ತಮ ಸಂಸ್ಕಾರ ರೂಪಿಸುವ ಪವಿತ್ರ ತಾಣಗಳಾಗಬೇಕು. ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ಕಲಿಕೆಯ ಆಸಕ್ತಿ, ಗುರುಹಿರಿಯರ ಬಗ್ಗೆ ಗೌರವ ಹಾಗೂ ಸನ್ಮಾರ್ಗದಲ್ಲಿ ಸಾಗುವ ಮೌಲ್ಯಗಳನ್ನು ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ” ಎಂದು ಹೇಳಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಕೆ.ಎನ್. ಸುಬ್ಬಾರೆಡ್ಡಿ, ಮುಖ್ಯಶಿಕ್ಷಕ ಎಂ. ನಾಗರಾಜು, ಎಸ್.ಡಿ.ಎಂ.ಸಿ ಅಧ್ಯಕ್ಷ ಆದರ್ಶ್ ರವಿ, ಸಮಾಜ ಸೇವಕ ಶ್ರೀನಿವಾಸ್, ನಿವೃತ್ತ ಮುಖ್ಯಶಿಕ್ಷಕ ಸಿ.ಎಂ. ಮುನಿರಾಜು, ಮಧು, ಗ್ರಾಮದ ಮುಖಂಡರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.

In English: A Sharadadevi idol installation ceremony was held on Saturday at the PM Shri Government Higher Primary School in Cheemangala village, Sidlaghatta taluk, with full religious rites led by Vedic scholar Abhilash. Block Education Officer P. Swamy said such programmes help build discipline, learning interest and values among students. Former students, teachers, SDMC members and villagers attended.

Sidlaghatta WhatsApp Channel Group

For Daily Updates WhatsApp ‘HI’ to 7406303366

ಶೇ 98.67 ಮತದಾರರಿಗೆ ಗಣತಿ ನಮೂನೆ ವಿತರಣೆ, 1151 ಮಂದಿ ಅನರ್ಹ ಮತದಾರರ ಗುರುತು: ಎಸ್.ಐ.ಆರ್ ಕಾರ್ಯ

0

Sidlaghatta : ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು ಮ್ಯಾಪಿಂಗ್ ಮಾಡಿರುವ 2,09,793 ಮಂದಿ ಮತದಾರರ ಪೈಕಿ 2,06,963(ಎರಡು ಲಕ್ಷ ಆರು ಸಾವಿರದ ಒಂಬೈನೂರ ಅರವತ್ತ ಮೂರು) ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸಲಾಗಿದೆ ಎಂದು ಮತದಾರ ನೋಂದಣಾಧಿಕಾರಿ ಎಸ್.ಎಸ್.ಅಬೀದ್ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜೂನ್ 16ಕ್ಕೆ ಅನ್ವಯವಾಗುವಂತೆ ಕ್ಷೇತ್ರದಲ್ಲಿ 2,09,793 ಮಂದಿ ಮತದಾರರಿದ್ದು ಈ ಪೈಕಿ 2,03,213 ಮಂದಿ ಮತದಾರ ಮ್ಯಾಪಿಂಗ್(ಶೇ 96.86) ಕಾರ್ಯ ಮಾಡಲಾಗಿದೆ. ಜೂನ್ 10 ರಂದು ಸಂಜೆ 6 ಗಂಟೆ ಸಮಯದ ಅಂಕಿ ಅಂಶಗಳಂತೆ 2,06,963 ಗಣತಿ ನಮೂನೆಗಳನ್ನು ಮತದಾರರಿಗೆ ವಿತರಿಸಲಾಗಿದೆ.

ಶೇ 98.67ರಷ್ಟು ಗಣತಿ ನಮೂನೆಗಳನ್ನು ಈಗಾಗಲೇ ವಿತರಿಸಿದ್ದು ಈ ಪೈಕಿ 75,931(ಶೇ36.20)ರಷ್ಟು ಮತದಾರರಿಂದ ಭರ್ತಿ ಮಾಡಿದ ಗಣತಿ ನಮೂನೆಗಳನ್ನು ಸಂಬಂಧಿಸಿದ ಬಿ.ಎಲ್‌.ಓಗಳು ಕ್ರೂಡೀಕರಿಸಿದ್ದು ಗಣಕೀಕರಣಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಪೈಕಿ ಗಣತಿ ನಮೂನೆಗಳನ್ನು ಪಡೆಯದ, ಶಾಶ್ವತವಾಗಿ ಸ್ಥಳಾಂತರಗೊಂಡ, ಮೃತಪಟ್ಟ, ಹೆಚ್ಚು ಮತಗಟ್ಟೆಗಳಲ್ಲಿ ಮತದಾರರಾಗಿರುವ ಹಾಗೂ ಇತರೆ ಕಾರಣಗಳಿಗಾಗಿ 1151 ಮಂದಿ ಮತದಾರರನ್ನು ಅನರ್ಹ ಮತದಾರರೆಂದು ಗುರ್ತಿಸಲಾಗಿದೆ.

ಎಸ್‌.ಐ.ಆರ್ ಕಾರ್ಯ ಮುಗಿಯುವ ಅವಧಿಯೊಳಗೆ ಈ 1151 ಮಂದಿ ಮತದಾರ ವಾಸ್ತವ ಸ್ಥಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಅಂತಿಮವಾಗಿ ಅನರ್ಹಗೊಳಿಸಲಾಗುವುದು. ಎಸ್‌.ಐ.ಆರ್ ಕಾರ್ಯವು ಜಿಲ್ಲೆ ಹಾಗೂ ಈ ಕ್ಷೇತ್ರದಲ್ಲಿ ಉತ್ತಮವಾಗಿ ನಡೆಯುತ್ತಿದ್ದು ಎಲ್ಲರೂ ಇನ್ನಷ್ಟು ಸಹಕಾರ ನೀಡಿ ಎಸ್‌.ಐ.ಆರ್ ಕಾರ್ಯವನ್ನು ಸುಸೂತ್ರವಾಗಿ ಯಶಸ್ವಿ ಮಾಡಲು ಅವರು ಕೋರಿದ್ದಾರೆ.

In English: Sidlaghatta Assembly constituency’s Special Intensive Revision (SIR) of the voter list has distributed enumeration forms to 2,06,963 of 2,09,793 mapped voters (98.67%), with 75,931 forms already filled and digitised. Electoral Registration Officer S.S. Abeed said 1,151 voters have been identified as ineligible (relocated, deceased, or duplicate registrations) and will be reviewed once more before final removal.

ಸಂಬಂಧಿತ ಸುದ್ದಿಗಾಗಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(SIR) ಕಾರ್ಯ ವೀಕ್ಷಿಸಿ.

FAQ

ಎಸ್.ಐ.ಆರ್ ಎಂದರೇನು?
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision) ಎಂದರೆ ಅನರ್ಹ, ಮೃತಪಟ್ಟ ಅಥವಾ ಸ್ಥಳಾಂತರಗೊಂಡ ಮತದಾರರನ್ನು ಗುರುತಿಸಿ ಪಟ್ಟಿ ಪರಿಷ್ಕರಿಸುವ ಪ್ರಕ್ರಿಯೆ.

1151 ಮಂದಿ ಮತದಾರರ ಮುಂದಿನ ಹಂತ ಏನು?
ಎಸ್.ಐ.ಆರ್ ಕಾರ್ಯ ಮುಗಿಯುವ ಅವಧಿಯೊಳಗೆ ಅವರ ವಾಸ್ತವ ಸ್ಥಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಅಂತಿಮವಾಗಿ ಅನರ್ಹಗೊಳಿಸಲಾಗುವುದು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಸಂಗೀತ–ಸಾಹಿತ್ಯ ಸಾಧಕರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸನ್ಮಾನ

0

Sidlaghatta : ಶಿಡ್ಲಘಟ್ಟ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಂಗೀತ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ಜಿ.ಎನ್. ಶಾಮಸುಂದರ್ ಗಂಜಿಗುಂಟೆ ಹಾಗೂ ಅವರ ಪತ್ನಿ ಗಿರಿಜಾ ಅವರನ್ನು ಗುರುವಾರ ಸಂಜೆ ಸನ್ಮಾನಿಸಿ ಗೌರವಿಸಲಾಯಿತು.

ನಗರದ ವಿ. ಕೃಷ್ಣ ಅವರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕನ್ನಡಾಭಿಮಾನಿಗಳು ದಂಪತಿಯನ್ನು ಶಾಲು ಹೊದಿಸಿ, ಫಲ-ಪುಷ್ಪ ನೀಡಿ ಅಭಿನಂದಿಸಿದರು.

ಜಿ.ಎನ್. ಶಾಮಸುಂದರ್ ಅವರು ಗಣಿತ ಶಿಕ್ಷಕರಾಗಿ, ಸಂಗೀತ ಶಿಕ್ಷಕರಾಗಿ ಹಾಗೂ ಪಿಟೀಲು ವಿದ್ವಾಂಸರಾಗಿ ಸೇವೆ ಸಲ್ಲಿಸಿದ್ದು, ಅನೇಕ ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣ ನೀಡಿ ಕಲಾವಿದರನ್ನಾಗಿ ರೂಪಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯೂ ಕವನಗಳು, ಚುಟುಕುಗಳು ಹಾಗೂ ಹಳೆಗನ್ನಡದ ಷಟ್ಪದಿಗಳನ್ನು ರಚಿಸಿದ್ದು, ಶ್ಯಾಮಗಾನ, ಮುಕ್ತಕ ಮಂದಾರ, ಶಾಮ ಲಹರಿ ಸೇರಿದಂತೆ ಹಲವು ಕೃತಿಗಳನ್ನು ಪ್ರಕಟಿಸಿ ಕನ್ನಡ ಸಾಹಿತ್ಯಕ್ಕೆ ಮೌಲಿಕ ಕೊಡುಗೆ ನೀಡಿದ್ದಾರೆ ಎಂದು ಕಾರ್ಯಕ್ರಮದಲ್ಲಿ ಪ್ರಶಂಸಿಸಲಾಯಿತು.

ಈ ಸಂದರ್ಭದಲ್ಲಿ ವಿ. ಕೃಷ್ಣ ಮತ್ತು ವಿಜಯಲಕ್ಷ್ಮಿ, ಎಸ್.ವಿ. ನಾಗರಾಜರಾವ್, ರೂಪಸಿ ರಮೇಶ್, ಮುನಿ ನಾರಾಯಣಪ್ಪ, ಎನ್. ಸುಂದರನ್, ಟಿ.ಟಿ. ನರಸಿಂಹಪ್ಪ, ಕಲಾವಿದ ಮುನಿರಾಜು, ಶ್ರೀನಿವಾಸ್ ವಿಶ್ವಕರ್ಮ, ಡಿ.ಎಸ್. ಸತ್ಯನಾರಾಯಣ್ ರಾವ್, ಪುಷ್ಪಾವತಿ, ಶಶಿಧರ್ ಮತ್ತು ಕುಟುಂಬ, ಸವಿತಾ, ನಂಜುಂಡಮೂರ್ತಿ ಹಾಜರಿದ್ದರು.

In English: The Taluk Kannada Sahitya Parishat felicitated G.N. Shamasundar of Ganjigunte and his wife Girija for their notable contributions to music and literature. Shamasundar, a mathematics and music teacher and violin scholar, has trained many students in music and authored several Kannada literary works including Shyamagana and Muktaka Mandara.

Sidlaghatta WhatsApp Channel Group

For Daily Updates WhatsApp ‘HI’ to 7406303366

ಸರ್ಕಾರಿ ಶಾಲಾ ಶಿಕ್ಷಣ ಬಲಪಡಿಸುವುದು ನಮ್ಮ ಆದ್ಯತೆ: ಶಾಸಕ ರವಿಕುಮಾರ್

0

Sidlaghatta : ಶಿಡ್ಲಘಟ್ಟ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ನೋಡಿಕೊಳ್ಳುವುದು ಸಮಾಜದ ಜವಾಬ್ದಾರಿಯಾಗಿದ್ದು, ಹಣದ ಕೊರತೆಯಿಂದ ಯಾವುದೇ ವಿದ್ಯಾರ್ಥಿ ಶಿಕ್ಷಣದಿಂದ ವಂಚಿತನಾಗಬಾರದು ಎಂದು ಶಾಸಕ ಬಿ.ಎನ್. ರವಿಕುಮಾರ್ ಹೇಳಿದರು.

ತಾಲ್ಲೂಕಿನ ಗಂಜಿಗುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಹುತೇಕ ಮಕ್ಕಳು ಆರ್ಥಿಕವಾಗಿ ದುರ್ಬಲ ಕುಟುಂಬಗಳಿಂದ ಬಂದವರಾಗಿದ್ದು, ಪ್ರತಿಭೆ ಇದ್ದರೂ ಆರ್ಥಿಕ ಸಂಕಷ್ಟದಿಂದ ಕೆಲವರು ಓದನ್ನು ಅರ್ಧದಲ್ಲೇ ಮೊಟಕುಗೊಳಿಸುತ್ತಾರೆ ಅಥವಾ ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಾರೆ. ಇಂತಹ ಪರಿಸ್ಥಿತಿ ಕ್ಷೇತ್ರದ ಯಾವುದೇ ವಿದ್ಯಾರ್ಥಿಗೆ ಎದುರಾಗಬಾರದು ಎಂಬ ಉದ್ದೇಶದಿಂದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಅಗತ್ಯ ಶೈಕ್ಷಣಿಕ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.

ಶಾಸಕರಿಗೆ ವಾರ್ಷಿಕವಾಗಿ ಲಭ್ಯವಾಗುವ ₹32 ಲಕ್ಷ ಅನುದಾನವನ್ನು ತಾಲ್ಲೂಕಿನ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಲೇಖನಿ ಸಾಮಗ್ರಿಗಳ ವಿತರಣೆಗೆ ಬಳಸಲಾಗುತ್ತಿದೆ. ಅಲ್ಲದೆ, ಉದ್ಯಮಿಗಳು, ಸರ್ಕಾರಿ ನೌಕರರು, ಜನಪ್ರತಿನಿಧಿಗಳು ಮತ್ತು ಸಮಾಜಸೇವಕ ಸಹಕಾರದ ಮೂಲಕ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ಒದಗಿಸುವ ಪ್ರಯತ್ನವೂ ನಡೆಯುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕಲಿಗರ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಪೂಲಕುಂಟಹಳ್ಳಿ ರಘುನಾಥರೆಡ್ಡಿ ಅವರು ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್‌ ಗಳನ್ನು ವಿತರಿಸಿದರು.

ಬಿಇಓ ಪಿ. ಸ್ವಾಮಿ, ಚಿಮುಲ್ ನಿರ್ದೇಶಕರಾದ ಬಂಕ್ ಮುನಿಯಪ್ಪ ಹಾಗೂ ಹುಜಗೂರು ರಾಮಣ್ಣ, ಪೂಲಕುಂಟಹಳ್ಳಿ ರಘುನಾಥರೆಡ್ಡಿ, ನರಸಿಂಹಮೂರ್ತಿ, ನಂದನವನಂ ಶ್ರೀರಾಮರೆಡ್ಡಿ, ಕುಂದಲಗುರ್ಕಿ ಚಂದ್ರು, ಎಸ್‌.ಡಿ.ಎಂ.ಸಿ ಅಧ್ಯಕ್ಷೆ ಸಮ್ರೀಮ್ ತಾಜ್, ಎಲ್.ವಿ. ವೆಂಕಟರೆಡ್ಡಿ, ಮುಖ್ಯ ಶಿಕ್ಷಕ ಒಬಯ್ಯ, ಶ್ರೀರಾಮ್, ನಾರಾಯಣಸ್ವಾಮಿ, ಮಂಜುನಾಥರೆಡ್ಡಿ, ಅಶೋಕ್ ಬಾಬು, ಚಂದ್ರಶೇಖರ್‌ ರೆಡ್ಡಿ ಹಾಜರಿದ್ದರು.

In English: MLA B.N. Ravikumar inaugurated an educational materials distribution program at Ganjigunte Government Higher Primary School in Sidlaghatta taluk, distributing notebooks and stationery to students. He said strengthening government school education and ensuring no student is denied education due to financial hardship is a key priority, funded partly through his annual MLA grant and community support.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-10/07/2026

0

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 10/07/2026

VarietyLotsQty (Kg)MaxMinAvg
Cross-Breed – ಮಿಶ್ರತಳಿ ರೇಷ್ಮೆ ಗೂಡು47525421745432673
Bi-Voltine – ದ್ವಿತಳಿ ರೇಷ್ಮೆ ಗೂಡು231415₹835₹522₹774

Summary: Sidlaghatta Government Cocoon Market rates for 10/07/2026 — Cross-Breed cocoon averaged ₹673/kg across 475 lots (25,421 kg total, price range ₹432–₹745); Bi-Voltine cocoon averaged ₹774/kg across 23 lots (1,415 kg total, price range ₹522–₹835).

ಹಿಂದಿನ ದಿನದ ದರಕ್ಕಾಗಿ 09/07/2026ರ ಮಾರುಕಟ್ಟೆ ದರ ವೀಕ್ಷಿಸಿ. ಎಲ್ಲಾ ದಿನಗಳ ದರಕ್ಕಾಗಿ ರೇಷ್ಮೆ ಗೂಡು ಮಾರುಕಟ್ಟೆ ವಿಭಾಗ ನೋಡಿ.


For Daily Updates WhatsApp ‘HI’ to 7406303366

ಮತದಾರರ ಜಾಗೃತಿಗೆ ಬೈಕ್ ರ‍್ಯಾಲಿ ಸದ್ದು

0
Sidlaghatta Voter Awareness Bike Rally SIR

Sidlaghatta : ತಾಲ್ಲೂಕು ಪಂಚಾಯಿತಿ, ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ನಗರದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಬೈಕ್ ರ‍್ಯಾಲಿ ಗಮನ ಸೆಳೆಯಿತು.

ನಗರದ ತಾಲ್ಲೂಕು ಆಡಳಿತ ಭವನದಿಂದ ಹೊರಟ ಬೈಕ್ ರ‍್ಯಾಲಿಯಲ್ಲಿ ಮಾನ್ಯ ಆಡಳಿತಾಧಿಕಾರಿಗಳು, ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಸಹ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ತಾಲ್ಲೂಕು ಆಡಳಿತ ಭವನದಿಂದ ಆರಂಭಗೊಂಡ ಬೈಕ್ ರ‍್ಯಾಲಿಯು ದಿಬ್ಬೂರಹಳ್ಳಿ ಜೋಡಿ ರಸ್ತೆ ಮೂಲಕ ಕೋಟೆ ಸರ್ಕಲ್ ತೆರಳಿ ಅಲ್ಲಿಂದ ಮಯೂರ ಸರ್ಕಲ್, ಚಿಂತಾಮಣಿ ಚಿಕ್ಕಬಳ್ಳಾಪುರ ಜೋಡಿ ರಸ್ತೆಯಿಂದ ಸರ್ಕಲ್ ಮೂಲಕ ಬೈಪಾಸ್ ರಸ್ತೆಯಿಂದ ತಾಲ್ಲೂಕು ಆಡಳಿತ ಭವನದಲ್ಲಿ ಮುಕ್ತಾಯವಾಯಿತು.

ಇದೇ ವೇಳೆ ಮಾನ್ಯ ಆಡಳಿತಾಧಿಕಾರಿಯವರಾದ ಶ್ರೀ ಆಬಿದ ಎಸ್.ಎಸ್ ರವರು ಮಾತನಾಡಿ, ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯವನ್ನು ಕೈಗೊಳ್ಳಲು ಅಧಿಸೂಚನೆ ಹೊರಡಿಸಿ ವೇಳಾಪಟ್ಟಿ ಪ್ರಕಟಿಸಿದೆ. ಈ ಸಂಬಂಧ ಸ್ವೀಪ್ ಜಾಗೃತಿ ಅಭಿಯಾನ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದು, ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮಪಂಚಾಯತಿ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಎಸ್‌ಐಆರ್ ಪ್ರಕ್ರಿಯೆಯು ಎಲ್ಲ ಅರ್ಹ ನಾಗರಿಕರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವುದು ಆಗಿದೆ. ಈ ವಿಶೇಷ ಸಮಗ್ರ ಪರಿಷ್ಕರಣೆಯ ಅವಧಿಯಲ್ಲಿ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳುವ ಮೂಲಕ ಬಿಎಲ್‌ಓ ಗಳಿಗೆ ಅಗತ್ಯ ಸಹಕಾರ ನೀಡಬೇಕು ಎಂದು ತಿಳಿಸಿದರು.

ನಂತರ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ಹೇಮಾವತಿ.ಆರ್ ರವರು ಮಾತನಾಡಿ, ತಾಲ್ಲೂಕಿನಲ್ಲಿ ಜಾಗೃತಿ ಮೂಡಿಸಲಾಗಿದೆ. ಶಾಲಾ ಕಾಲೇಜುಗಳು, ಗ್ರಾಮೀಣ ಪ್ರದೇಶದಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ನಿಖರ ಮತದಾರರ ಪಟ್ಟಿಯೇ ಪ್ರಜಾಪ್ರಭುತ್ವದ ಭದ್ರ ಅಡಿಪಾಯ, ಪ್ರತಿಯೊಬ್ಬ ಅರ್ಹ ನಾಗರಿಕರು ಬಿಎಲ್‌ಓ ಗಳಿಗೆ ಅಗತ್ಯ ಮಾಹಿತಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆಗೆ ಸಹಕರಿಸಬೇಕು ಎಂದರು.

ಈ ಸಂದರ್ಭದಲ್ಲಿ ಮಾನ್ಯ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿಯವರಾದ ಶ್ರೀ ಆಬಿದ ಎಸ್.ಎಸ್ ರವರು, ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಯವರು, ಮಾನ್ಯ ನರೇಗಾ ಸಹಾಯಕ ನಿರ್ದೇಶಕರವರು, ತಾಲ್ಲೂಕು ಯೋಜನಾಧಿಕಾರಿಯವರು, ವಿವಿಧ ಇಲಾಖೆಗಳ ತಾಲ್ಲೂಕು ಅಧಿಕಾರಿಯವರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು, ಪೊಲೀಸ್ ಇಲಾಖೆಯವರು, ತಾಲ್ಲೂಕು ಕಚೇರಿ ಸಿಬ್ಬಂದಿ, ನರೇಗಾ ಮತ್ತು ಎನ್.ಆರ್.ಎಲ್.ಎಂ ಸಿಬ್ಬಂದಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಸೇರಿದಂತೆ ಇತರರು ಹಾಜರಿದ್ದರು.

In English: Sidlaghatta’s Taluk Panchayat, Taluk Administration and SVEEP Committee organized a bike rally in town on Friday to raise public awareness about the Special Intensive Revision (SIR) of the voters’ list ordered by the Election Commission of India. Administrator Abid S.S. and Executive Officer Hemavathi R. led the rally through the town’s main circles and urged eligible citizens to verify their names on the electoral roll and cooperate with Booth Level Officers (BLOs) during the revision period.

Sidlaghatta WhatsApp Channel Group

For Daily Updates WhatsApp ‘HI’ to 7406303366

ತಾಲ್ಲೂಕಿನ 24 ಗ್ರಾಮ ಪಂಚಾಯಿತಿ ಕ್ಷೇತ್ರ ವಿಭಜನೆ, ಮೀಸಲಾತಿ ಪಟ್ಟಿ ಪ್ರಕಟ

0
Sidlaghatta Taluk Grama Panchayat Office Leaders Reservation

Sidlaghatta : ಶಿಡ್ಲಘಟ್ಟ ತಾಲ್ಲೂಕಿನ 24 ಗ್ರಾಮ ಪಂಚಾಯಿತಿಗಳ ಕ್ಷೇತ್ರ ವಿಭಜನೆ ಹಾಗೂ ಮೀಸಲಾತಿ ಪಟ್ಟಿಯನ್ನು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪ್ರಭು.ಜಿ (ಭಾ.ಆ.ಸೇ.) ಅವರು ಪ್ರಕಟಿಸಿದ್ದಾರೆ.

ಕರ್ನಾಟಕ ಸರ್ಕಾರವು ಹೊರಡಿಸಿರುವ ವಿಶೇಷ ರಾಜ್ಯಪತ್ರದ ಅಧಿಸೂಚನೆ (ಸಂಖ್ಯೆ: ಡಿಸಿ/ಚು(2)/ಸಿಆರ್-02/2026-27) ಯನ್ವಯ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಅಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕ್ಷೇತ್ರ ಮರುವಿಂಗಡಣೆ ಹಾಗೂ ಸ್ಥಾನಗಳ ಹಂಚಿಕೆಯನ್ನು ಮಾಡಲಾಗಿದೆ.

ತಾಲ್ಲೂಕಿನ ಆರು ಗ್ರಾಮ ಪಂಚಾಯಿತಿಗಳ ಕ್ಷೇತ್ರವಾರು ವಿವರ ಈ ಕೆಳಗಿನಂತಿದೆ: ಅಬ್ಲೂಡು (ಒಟ್ಟು 3 ಸ್ಥಾನ), ಚಾಗೆ (1), ಶೆಟ್ಟಿಹಳ್ಳಿ (3), ಚೀಮನಹಳ್ಳಿ (2), ಗುಡಿಹಳ್ಳಿ (2), ಕೋಟಹಳ್ಳಿ (1), ಕೆಂಪನಹಳ್ಳಿ (1), ಸಾದಹಳ್ಳಿ (1) ಹಾಗೂ ತಾತಹಳ್ಳಿ (2) ಸೇರಿ ಅಬ್ಲೂಡು ಗ್ರಾ.ಪಂ.ಗೆ ಒಟ್ಟು 09 ಕ್ಷೇತ್ರ, 16 ಸ್ಥಾನಗಳಿವೆ. ಇದೇ ರೀತಿ ವೈ.ಹುಣಸೇನಹಳ್ಳಿ ಗ್ರಾ.ಪಂ.ಗೆ 08 ಕ್ಷೇತ್ರ 17 ಸ್ಥಾನ, ದೇವರಮಳ್ಳೂರು ಗ್ರಾ.ಪಂ.ಗೆ 07 ಕ್ಷೇತ್ರ 16 ಸ್ಥಾನ, ಕೊತ್ತನೂರು ಗ್ರಾ.ಪಂ.ಗೆ 05 ಕ್ಷೇತ್ರ 11 ಸ್ಥಾನ, ತುಮ್ಮನಹಳ್ಳಿ ಗ್ರಾ.ಪಂ.ಗೆ 10 ಕ್ಷೇತ್ರ 17 ಸ್ಥಾನ ಹಾಗೂ ಆನೂರು ಗ್ರಾ.ಪಂ.ಗೆ 07 ಕ್ಷೇತ್ರ 16 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ.

ತಾಲ್ಲೂಕಿನ ಇತರೆ ಪ್ರಮುಖ ಗ್ರಾಮ ಪಂಚಾಯಿತಿಗಳ ಒಟ್ಟು ಕ್ಷೇತ್ರ ಮತ್ತು ಸ್ಥಾನಗಳ ವಿವರ ಕೆಳಗಿನ ಪಟ್ಟಿಯಲ್ಲಿದೆ:

ಗ್ರಾಮ ಪಂಚಾಯಿತಿಕ್ಷೇತ್ರಗಳುಒಟ್ಟು ಸ್ಥಾನಗಳು
ಹಂಡಿಗನಾಳ715
ಮೇಲೂರು615
ಮಳ್ಳೂರು615
ಜೆ.ವೆಂಕಟಾಪುರ717
ಜಂಗಮಕೋಟೆ617
ಕುಂಭಿಗಾನಹಳ್ಳಿ1020
ಚೀಮಂಗಲ816
ದೊಡ್ಡತೇಕಹಳ್ಳಿ717
ಬಶೆಟ್ಟಿಹಳ್ಳಿ917
ದಿಬ್ಬರಹಳ್ಳಿ615
ತಿಮ್ಮನಾಯಕನಹಳ್ಳಿ814
ಗಂಜಿಗುಂಟೆ1016
ಈ.ತಿಮ್ಮಸಂದ್ರ816
ಸಾದಲಿ617
ಎಸ್.ದೇವಗಾನಹಳ್ಳಿ815
ಪಲಿಚೇರ್ಲು613
ಕುಂದಲಗುರ್ಕಿ512
ತಲಕಾಯಲಬೆಟ್ಟ814

ಜಿಲ್ಲಾಡಳಿತವು ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಹಿಂದುಳಿದ ವರ್ಗ ‘ಅ’ ಮತ್ತು ‘ಬ’ ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಸ್ಥಾನಗಳನ್ನು ಕಾಯ್ದಿರಿಸಿದೆ. ವಿಶೇಷವಾಗಿ, ಪ್ರತಿಯೊಂದು ಪಂಚಾಯಿತಿಯಲ್ಲೂ ಮಹಿಳಾ ಪ್ರಾತಿನಿಧ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಬಹುತೇಕ ಕ್ಷೇತ್ರಗಳಲ್ಲಿ ‘ಮಹಿಳಾ ಮೀಸಲಾತಿ’ಯನ್ನು ಪ್ರತ್ಯೇಕವಾಗಿ ನಿಗದಿಪಡಿಸಲಾಗಿದೆ.

ಜಿಲ್ಲಾಡಳಿತವು ಅಧಿಕೃತವಾಗಿ ಕ್ಷೇತ್ರವಾರು ವಿಭಜನೆ ಹಾಗೂ ಮೀಸಲಾತಿ ಪಟ್ಟಿಯನ್ನು ಗಂಟೆಗಳ ಹಿಂದೆಯಷ್ಟೇ ಅಂತಿಮಗೊಳಿಸಿರುವುದರಿಂದ, ಹಳ್ಳಿಗಳ ಮಟ್ಟದಲ್ಲಿ ಈಗಲೇ ಚುನಾವಣಾ ಕಣ ಕಾವೇರಲಾರಂಭಿಸಿದೆ. ಆಯಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಆಕಾಂಕ್ಷಿ ಅರಸುತ್ತಿದ್ದ ಸ್ಥಳೀಯ ನಾಯಕರು ತಮ್ಮ ತಮ್ಮ ಕ್ಷೇತ್ರಗಳ ಮೀಸಲಾತಿ ನೋಡಿ ಮುಂದಿನ ರಾಜಕೀಯ ತಂತ್ರಗಾರಿಕೆಗೆ ಅಖಾಡ ಸಿದ್ಧಪಡಿಸುತ್ತಿದ್ದಾರೆ. ನಿಮ್ಮ ಗ್ರಾಮದ ವಾರ್ಡ್ ಯಾರಿಗೆ ಮೀಸಲಾಗಿದೆ ಎಂಬ ಸಂಪೂರ್ಣ ವಿವರ ತಿಳಿಯಲು ಸ್ಥಳೀಯ ಗ್ರಾಮ ಪಂಚಾಯಿತಿ ಕಾರ್ಯಾಲಯ ಅಥವಾ ಜಿಲ್ಲಾ ವೆಬ್‌ಸೈಟ್ ಸಂಪರ್ಕಿಸಬಹುದು.

In English: The Chikkaballapura district administration has officially finalized the ward delimitation and reservation list for member seats across 24 grama panchayats in Sidlaghatta taluk, under the Karnataka Gram Swaraj and Panchayat Raj Act, 1993. The list allocates seats among SC, ST, backward classes A and B, general category, and women candidates. With the notification issued just hours ago, prospective candidates at the village level have begun consulting political leaders based on their ward’s reservation status ahead of the upcoming grama panchayat elections. Full ward-wise details are available at respective panchayat offices or the district website.

FAQ

ಪ್ರಶ್ನೆ 1: ಇತ್ತೀಚಿನ ಅಧಿಸೂಚನೆಯಲ್ಲಿ ಏನನ್ನು ಪ್ರಕಟಿಸಲಾಗಿದೆ?
ಚಿಕ್ಕಬಳ್ಳಾಪುರ ಜಿಲ್ಲಾಡಳಿತವು ಶಿಡ್ಲಘಟ್ಟ ತಾಲ್ಲೂಕಿನ 24 ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನಗಳ ಕ್ಷೇತ್ರ ವಿಭಜನೆ ಹಾಗೂ ಮೀಸಲಾತಿ ಪಟ್ಟಿಯನ್ನು ಅಂತಿಮಗೊಳಿಸಿ ಪ್ರಕಟಿಸಿದೆ.

ಪ್ರಶ್ನೆ 2: ನನ್ನ ಗ್ರಾಮದ ವಾರ್ಡ್ ಮೀಸಲಾತಿ ವಿವರ ಎಲ್ಲಿ ಸಿಗುತ್ತದೆ?
ಸಂಪೂರ್ಣ ಕ್ಷೇತ್ರವಾರು ಮೀಸಲಾತಿ ಪಟ್ಟಿ ಸ್ಥಳೀಯ ಗ್ರಾಮ ಪಂಚಾಯಿತಿ ಕಾರ್ಯಾಲಯ ಅಥವಾ ಜಿಲ್ಲಾ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

Sidlaghatta WhatsApp Channel Group

For Daily Updates WhatsApp ‘HI’ to 7406303366

ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಿ: ವಿಜಯಶ್ರೀ

0
Sidlaghatta Indira Gandhi Residential School Sports Day

Sidlaghatta : ಕ್ರೀಡೆಗಳು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಸದೃಢತೆ, ನಾಯಕತ್ವದ ಗುಣ ಹಾಗೂ ಶಿಸ್ತು ಬೆಳೆಸಲು ಸಹಕಾರಿಯಾಗುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಕ್ರೀಡೆಗಳನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು ಎಂದು ಅಪ್ಪೇಗೌಡನಹಳ್ಳಿಯ ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಂಶುಪಾಲೆ ವಿಜಯಶ್ರೀ ಹೇಳಿದರು.

ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ರೀಡಾಕೂಟಗಳು ಕಲಿಕೆಯ ಅವಿಭಾಜ್ಯ ಭಾಗವಾಗಿದ್ದು, ಒತ್ತಡದ ಸಂದರ್ಭಗಳನ್ನು ಹೇಗೆ ಎದುರಿಸಬೇಕು ಹಾಗೂ ಮಾನಸಿಕವಾಗಿ ಹೇಗೆ ಸದೃಢವಾಗಿರಬೇಕು ಎಂಬುದನ್ನು ಕ್ರೀಡೆಗಳು ಕಲಿಸುತ್ತವೆ. ಪಠ್ಯಚಟುವಟಿಕೆಗಳಲ್ಲಿ ಹಿಂದುಳಿದಿದ್ದರೂ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿ ಉತ್ತಮ ಸಾಧನೆ ಮಾಡಿದ ಅನೇಕ ಉದಾಹರಣೆಗಳಿವೆ ಎಂದು ಹೇಳಿದರು.

ಸಾಧನೆಗೆ ನಿರ್ದಿಷ್ಟ ಕ್ಷೇತ್ರ ಎಂಬುದಿಲ್ಲ. ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬಹುದು. ಅದಕ್ಕಾಗಿ ಶಿಸ್ತು, ಸಂಯಮ, ಏಕಾಗ್ರತೆ ಮತ್ತು ಗುರಿ ತಲುಪುವ ಛಲ ಅಗತ್ಯ. ಸೋಲು-ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಒಂದು ಸೋಲು ನೂರಾರು ಗೆಲುವುಗಳಿಗೆ ದಾರಿಯಾಗಬಹುದು. ಆದ್ದರಿಂದ ಸೋತ ಮಾತ್ರಕ್ಕೆ ನಿರುತ್ಸಾಹಗೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕ್ರೀಡಾಕೂಟದಲ್ಲಿ ಕಬ್ಬಡ್ಡಿ, ಖೋ-ಖೋ, ವಾಲಿಬಾಲ್, ಥ್ರೋಬಾಲ್, ಗುಂಡು ಎಸೆತ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು.

ಉಪಪ್ರಾಂಶುಪಾಲ ಮುರಳೀಧರ್, ಶಿಕ್ಷಕರಾದ ಪ್ರಸಾದ್ ಎಸ್‌.ಎ., ಸಹನ ಟಿ., ಶಶಿದೀಪಿಕಾ ಜಿ., ನರೇಶ್ ಜಿ.ಎನ್., ಸಹನಾ ಎ., ರಾಮಪ್ಪ, ಸಿದ್ಧಪ್ಪ ಶಿವರಾಯಿ, ತ್ರಿವೇಣಿ ಕೆ.ಪಿ., ಶ್ರೀಲಕ್ಷ್ಮೀ, ಯಲ್ಲಪ್ಪ ಗದ್ದಿನಕೇರಿ, ಸಿದ್ಧು ಹುಣಸೀಕಟ್ಟಿ ಹಾಗೂ ಸುಂಡ್ರಹಳ್ಳಿಯ ದೈಹಿಕ ಶಿಕ್ಷಣ ಶಿಕ್ಷಕ ಗಂಗಾಧರ್ ಹಾಜರಿದ್ದರು.

In English: Indira Gandhi residential school principal Vijayashree inaugurated the school’s annual sports day at Appegowdanahalli in Sidlaghatta taluk, urging students to treat wins and losses equally and pursue excellence with discipline. Events included kabaddi, kho-kho, volleyball and throwball.

Sidlaghatta WhatsApp Channel Group

For Daily Updates WhatsApp ‘HI’ to 7406303366

ಗಡಿ ಭಾಗದಲ್ಲಿ ಕನ್ನಡ ಜಾಗೃತಿಗೆ ಕಸಾಪ ಹೆಜ್ಜೆ: ಹೊಸ ಹೋಬಳಿ ಘಟಕದ ಅಧ್ಯಕ್ಷರಾಗಿ ಎಚ್.ಎನ್. ಶಿವಣ್ಣ ನೇಮಕ

0
Sidlaghatta Kannada Sahitya Parishat Sadali Hobali Unit

Sidlaghatta : ಗಡಿ ಭಾಗದಲ್ಲಿ ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಉಳಿವು ಮತ್ತು ಬೆಳವಣಿಗೆಗೆ ಒತ್ತು ನೀಡುವ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಶಿಡ್ಲಘಟ್ಟ ತಾಲ್ಲೂಕು ಘಟಕವು ಹಮ್ಮಿಕೊಂಡಿರುವ “ಕನ್ನಡ ಸಾಹಿತ್ಯ ಪರಿಷತ್ತಿನ ನಡೆ ಗಡಿ ನಾಡ ಶಾಲೆಗಳ ಕಡೆ” ಅಭಿಯಾನದ ಅಂಗವಾಗಿ ಬುಧವಾರ ಸಾದಲಿ ಗ್ರಾಮದ ಶಾಲವಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಎಚ್.ಎನ್. ಶಿವಣ್ಣ ಅವರನ್ನು ಸಾದಲಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು. ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ ನೇಮಕಾತಿ ಪತ್ರ ಹಾಗೂ ನಾಡಧ್ವಜವನ್ನು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಸಾಪ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ಶಿಡ್ಲಘಟ್ಟ ತಾಲ್ಲೂಕಿನ ಗಡಿ ಭಾಗಗಳಲ್ಲಿ ತೆಲುಗು ಭಾಷೆಯ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕನ್ನಡ ಭಾಷೆಯ ಸಂರಕ್ಷಣೆ ಮತ್ತು ಪ್ರೋತ್ಸಾಹಕ್ಕೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು. ಶಾಲಾ ಮಕ್ಕಳಲ್ಲಿ ಕನ್ನಡದ ಬಗ್ಗೆ ಅಭಿಮಾನ ಬೆಳೆಸುವುದು ಹಾಗೂ ನಾಡು–ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವುದು ಪರಿಷತ್ತಿನ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.

ಕಸಾಪ ಮಾಜಿ ಅಧ್ಯಕ್ಷ ವಿ. ಕೃಷ್ಣಾ ಮಾತನಾಡಿ, ಗಡಿ ಪ್ರದೇಶಗಳಲ್ಲಿ ಕನ್ನಡದ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಲು ಸಾಹಿತ್ಯ, ಸಾಂಸ್ಕೃತಿಕ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲಾಗುವುದು ಎಂದು ಹೇಳಿದರು. ಯುವಜನರಲ್ಲಿ ಸಾಹಿತ್ಯಾಸಕ್ತಿ ಬೆಳೆಸುವ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದರು.

ನೂತನ ಸಾದಲಿ ಹೋಬಳಿ ಘಟಕದ ಕಸಾಪ ಅಧ್ಯಕ್ಷ ಎಚ್.ಎನ್. ಶಿವಣ್ಣ ಮಾತನಾಡಿ, ಗಡಿ ಭಾಗದಲ್ಲಿ ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಗಾಗಿ ಸಾಹಿತ್ಯ ಹಾಗೂ ಸಮಾಜಮುಖಿ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಡಿ.ಎ. ಸತ್ಯನಾರಾಯಣರಾವ್ ಅವರು ಜಿ.ಪಿ. ರಾಜರತ್ನಂ ಅವರ ಕನ್ನಡ ಗೀತೆಗಳನ್ನು ಹಾಡಿದರು. ಶಾಲೆಯ ಏಳು ವಿದ್ಯಾರ್ಥಿಗಳಿಗೆ ಉತ್ತಮ ಕನ್ನಡ ಲಿಪಿಗಾಗಿ ಪ್ರಶಂಸನಾ ಪತ್ರ ನೀಡಿ ಸನ್ಮಾನಿಸಲಾಯಿತು.

ಕಸಾಪ ಜಂಟಿ ಕಾರ್ಯದರ್ಶಿ ಮುನಿನಾರಾಯಪ್ಪ, ನಿವೃತ್ತ ಶಿಕ್ಷಕ ಎನ್. ಸುಂದರನ್, ಶಾಲೆಯ ಮುಖ್ಯ ಶಿಕ್ಷಕ ಎಚ್.ಎಸ್. ರಾಜೇಶ್, ಎಂ. ಲೀಲಾ, ಆನಂದಮೂರ್ತಿ, ಶ್ರೀನಿವಾಸ್, ಸುಶೀಲಮ್ಮ, ಹರ್ಷಿತ, ಜ್ಯೋತಿ, ಅನುಪಮ, ಕನ್ನಡ ಸಾಹಿತ್ಯ ಪರಿಷತ್ತಿನ ಶಿಡ್ಲಘಟ್ಟ ತಾಲ್ಲೂಕು ಘಟಕದ ಪದಾಧಿಕಾರಿಗಳು, ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಜರಿದ್ದರು.

In English: Kannada Sahitya Parishat’s Sidlaghatta taluk unit appointed H.N. Shivanna as president of its new Sadali hobli unit as part of its border-area school outreach campaign, aimed at strengthening Kannada language and culture in areas seeing increasing Telugu usage. Seven students were felicitated for good Kannada handwriting.

Sidlaghatta WhatsApp Channel Group

For Daily Updates WhatsApp ‘HI’ to 7406303366

ಸರ್ಕಾರಿ ಶಾಲೆಗೆ ಎರಡು ಹೈಟೆಕ್ ಕೊಠಡಿ ಕೊಡುಗೆ ನೀಡಿದ ಮಾಪಲ್ ಟ್ರೀ ಸಂಸ್ಥೆ

0
Sidlaghatta Maple Tree Foundation School Classrooms Idludu

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಇದ್ಲುಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಪಲ್ ಟ್ರೀ ಸಂಸ್ಥೆಯ ವತಿಯಿಂದ ನಿರ್ಮಿಸಲಾದ ಎರಡು ಸುಸಜ್ಜಿತ ಹೈಟೆಕ್ ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭ ಬುಧವಾರ ನಡೆಯಿತು.

ಮಾಪಲ್ ಟ್ರೀ ಸಂಸ್ಥೆಯು ತನ್ನ ಸಾಮಾಜಿಕ ಹೊಣೆಗಾರಿಕೆ (ಸಿ.ಎಸ್.ಆರ್) ಯೋಜನೆಯಡಿ ಶಾಲೆಗೆ ಎರಡು ಆಧುನಿಕ ಹಾಗೂ ಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸಿಕೊಟ್ಟಿದ್ದು, ಅವುಗಳನ್ನು ಶಾಲೆಯ ವಿದ್ಯಾರ್ಥಿಗಳ ಬಳಕೆಗೆ ಅಧಿಕೃತವಾಗಿ ಸಮರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಪಲ್ ಟ್ರೀ ಸಂಸ್ಥೆಯ ಸಂಯೋಜಕರಾದ ಶ್ರೀಗಂಧ್, ರಾಧಾಕೃಷ್ಣ ಭಾಸ್ಕರನ್, ಹರ್ಷವರ್ಧನ್ ದಿಲೀಪ್, ಅಂಕುರ್, ವಿಜಯ್ ಶಾಂತ ಹಾಗೂ ರವಿಕುಮಾರ್ ಭಾಗವಹಿಸಿ ನೂತನ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಶಾಲೆಗೆ ಹಸ್ತಾಂತರಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಸನ್ನಕುಮಾರ್, ಇಸಿಒ ಮನ್ನಾರಸ್ವಾಮಿ, ಬಿ.ಆರ್‌.ಪಿ ಮಂಜುನಾಥ್, ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ಬೈರೇಗೌಡ ಹಾಗೂ ಸದಸ್ಯರು, ಮುಖ್ಯಶಿಕ್ಷಕ ಕೆ.ಎನ್. ನಾಗರಾಜ್, ಶಿಕ್ಷಕಿ ವಿ. ರಮಾಮಣಿ, ಗ್ರಾಮದ ಮುಖಂಡ ಡಿ.ವಿ. ಮುನಿಶ್ಯಾಮಪ್ಪ ಶಾಲೆಯ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.

In English: Maple Tree Foundation built two hi-tech classrooms at Idludu government senior primary school in Sidlaghatta taluk under its CSR initiative, formally inaugurated and handed over to students on Wednesday. Field education officer Prasannakumar and other officials attended the ceremony.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-09/07/2026

0
Sidlaghatta Silk Cocoon Market Rate 09 July 2026

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 09/07/2026

VarietyLotsQty (Kg)MaxMinAvg
Cross-Breed – ಮಿಶ್ರತಳಿ ರೇಷ್ಮೆ ಗೂಡು52527520746445676
Bi-Voltine – ದ್ವಿತಳಿ ರೇಷ್ಮೆ ಗೂಡು15886₹855₹520₹777

Summary: Sidlaghatta Government Cocoon Market rates for 09/07/2026 — Cross-Breed cocoon averaged ₹676/kg across 525 lots (27,520 kg total, price range ₹445–₹746); Bi-Voltine cocoon averaged ₹777/kg across 15 lots (886 kg total, price range ₹520–₹855).

ಹಿಂದಿನ ದಿನದ ದರಕ್ಕಾಗಿ 08/07/2026ರ ಮಾರುಕಟ್ಟೆ ದರ ವೀಕ್ಷಿಸಿ. ಎಲ್ಲಾ ದಿನಗಳ ದರಕ್ಕಾಗಿ ರೇಷ್ಮೆ ಗೂಡು ಮಾರುಕಟ್ಟೆ ವಿಭಾಗ ನೋಡಿ.


For Daily Updates WhatsApp ‘HI’ to 7406303366

ಇ-ಕೋಲಿ ಪತ್ತೆ: ಕಲುಷಿತ ನೀರು ಪೂರೈಕೆ ಸ್ಥಗಿತ, ಮಾಲೀಕರ ವಿರುದ್ಧ ಪ್ರಕರಣ

0
Sidlaghatta Chikkatekahalli Contaminated Water Tank E-coli Test

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತೇಕಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿದ ಪರಿಣಾಮ 25ಕ್ಕೂ ಹೆಚ್ಚು ಮಂದಿ ವಾಂತಿ-ಭೇದಿಯಿಂದ ಬಳಲುತ್ತಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ ಮನೆಮನೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸಿದ್ದಾರೆ.

ಗ್ರಾಮದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಆರಂಭಿಸಿ, ಅಸ್ವಸ್ಥರಿಗೆ ಚಿಕಿತ್ಸೆ ನೀಡಲಾಗಿದೆ. ವೈದ್ಯರು, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿ ಗ್ರಾಮಸ್ಥರ ಆರೋಗ್ಯ ಸ್ಥಿತಿ ಪರಿಶೀಲಿಸಿದ್ದಾರೆ. ತಾಲ್ಲೂಕು ಪಂಚಾಯಿತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಆರೋಗ್ಯ ಇಲಾಖೆಯೊಂದಿಗೆ ಸೇರಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಎರಡೂ ಗ್ರಾಮಗಳಲ್ಲಿ ಇದ್ದ ಆತಂಕ ಈಗ ಕಡಿಮೆಯಾಗಿದೆ.

ಗ್ರಾಮದಲ್ಲಿ ಖಾಸಗಿ 20 ಲೀಟರ್ ಕ್ಯಾನ್ ಮೂಲಕ ಸರಬರಾಜಾಗುತ್ತಿದ್ದ ಕುಡಿಯುವ ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪರೀಕ್ಷೆಯಲ್ಲಿ ಇ-ಕೋಲಿ ಬ್ಯಾಕ್ಟೀರಿಯಾ ಪತ್ತೆಯಾಗಿದ್ದು, ಈ ನೀರಿನ ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ. ಘಟಕದ ಮಾಲೀಕ ಹಾಗೂ ನೀರು ಪೂರೈಕೆದಾರರ ವಿರುದ್ಧ ನಿರ್ಲಕ್ಷ್ಯದ ಪ್ರಕರಣ ದಾಖಲಿಸಲಾಗಿದೆ.

“ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಎಲ್ಲರಿಗೂ ಚಿಕಿತ್ಸೆ ನೀಡಲಾಗಿದೆ. ಕಳೆದ ಮೂರು–ನಾಲ್ಕು ದಿನಗಳಿಂದ ಯಾವುದೇ ಹೊಸ ಪ್ರಕರಣ ಕಂಡುಬಂದಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮದಲ್ಲಿ ನರ್ಸ್ ಒಬ್ಬರನ್ನು ನಿಯೋಜಿಸಲಾಗಿದೆ. ಹೊಟ್ಟೆ ಸಂಬಂಧಿ ಲಘು ಲಕ್ಷಣ ಇರುವವರು ಕುದಿಸಿ ಆರಿಸಿದ ನೀರನ್ನೇ ಕುಡಿಯಬೇಕು. ಆರೋಗ್ಯದಲ್ಲಿ ಏರುಪೇರು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು” ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶಮೂರ್ತಿ ತಿಳಿಸಿದರು.

ಇದೇ ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ಕಲುಷಿತ ನೀರು ಸೇವನೆಯಿಂದ 20 ಮಂದಿ ಅಸ್ವಸ್ಥಗೊಂಡಿದ್ದ ಬಗ್ಗೆ ವರದಿ ಪ್ರಕಟವಾಗಿತ್ತು.

In English: More than 25 residents of Chikkatekahalli village, Sidlaghatta taluk, fell ill after consuming contaminated water supplied through private 20-litre cans. Lab tests confirmed E-coli bacteria in the water sample, prompting authorities to halt the supply and file a negligence case against the tank owner. Health officials say no new cases have surfaced in the past 3-4 days and have posted a nurse in the village as a precaution.

FAQ

What caused the illness in Chikkatekahalli village?
Lab tests confirmed E-coli bacteria in a private water can supply that residents had been drinking, prompting health authorities to investigate.

What action was taken against the contaminated water source?
The tainted water supply was halted, a negligence case was filed against the tank owner, and no new illness cases have been reported in the past 3-4 days.

Sidlaghatta WhatsApp Channel Group

For Daily Updates WhatsApp ‘HI’ to 7406303366

ರೈಲ್ವೆ ಕೆಳಸೇತುವೆ ಕಬ್ಬಿಣದ ಸರಳು ಸಮಸ್ಯೆಗೆ ಶಾಶ್ವತ ಪರಿಹಾರ

0
Sidlaghatta Railway Underpass Waterlogging Permanent Solution

Sidlaghatta : ಶಿಡ್ಲಘಟ್ಟ–ಚಿಂತಾಮಣಿ ಮಾರ್ಗದ ವೀರಾಪುರ ಸಮೀಪದ ರೈಲ್ವೆ ಕೆಳಸೇತುವೆಯಲ್ಲಿ ನೀರು ಹರಿದು ಹೋಗಲು ಅಳವಡಿಸಲಾಗಿದ್ದ ಮೋರಿಯ ಕಬ್ಬಿಣದ ಸರಳುಗಳ ವೆಲ್ಡಿಂಗ್ ಆಗಾಗ್ಗೆ ಕಿತ್ತುಬರುತ್ತಿದ್ದ ಸಮಸ್ಯೆಗೆ ಕೊನೆಗೂ ಶಾಶ್ವತ ಪರಿಹಾರ ಕಲ್ಪಿಸಲಾಗಿದೆ.

ಕಳೆದ ಐದಾರು ತಿಂಗಳುಗಳಲ್ಲಿ ಐದಾರು ಬಾರಿ ಕಬ್ಬಿಣದ ಸರಳುಗಳ ವೆಲ್ಡಿಂಗ್ ಕಿತ್ತು, ಕಬ್ಬಿಣದ ರಾಡುಗಳು ಮೇಲ್ಮುಖವಾಗಿ ಎದ್ದು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದವು. ಈ ಕಾರಣದಿಂದ ನಾಲ್ಕೈದು ಅಪಘಾತಗಳು ಸಂಭವಿಸಿದ್ದವು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಾತ್ಕಾಲಿಕ ದುರಸ್ತಿ ಕೈಗೊಂಡರೂ, ಕೆಲವೇ ದಿನಗಳಲ್ಲಿ ಮತ್ತೆ ಸಮಸ್ಯೆ ಮರುಕಳಿಸುತ್ತಿತ್ತು.

ಈ ಕುರಿತು ಕೆಳಸೇತುವೆ ಸಮೀಪದ ವೀರಾಪುರ ಹಾಗೂ ತಲದುಮ್ಮನಹಳ್ಳಿ ಗ್ರಾಮಸ್ಥರು ಹಲವು ಬಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರೈಲ್ವೆ ಇಲಾಖೆ ಮತ್ತು ಪೊಲೀಸರಿಗೆ ಮನವಿ ಸಲ್ಲಿಸಿದ್ದರು. ತಾತ್ಕಾಲಿಕ ದುರಸ್ತಿ ಬದಲು ಶಾಶ್ವತ ಕಾಮಗಾರಿ ಕೈಗೊಳ್ಳಬೇಕು ಎಂದು ಅಗತ್ಯವಿದ್ದರೆ ಒಂದೆರಡು ದಿನ ಸಂಚಾರಕ್ಕೆ ತೊಂದರೆಯಾದರೂ ಪರವಾಗಿಲ್ಲ, ಇಲ್ಲವಾದರೆ ರಸ್ತೆ ತಡೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

ಅಂತಿಮವಾಗಿ ಶಾಸಕ ಬಿ.ಎನ್. ರವಿಕುಮಾರ್ ಮಧ್ಯಪ್ರವೇಶಿಸಿ ರೈಲ್ವೆ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಪೊಲೀಸರು ಹಾಗೂ ಸ್ಥಳೀಯರೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಂಡರು. ಮರುಕಳಿಸದ ರೀತಿಯಲ್ಲಿ ಶಾಶ್ವತ ದುರಸ್ತಿ ಕೈಗೊಳ್ಳುವಂತೆ ಸೂಚಿಸಿದ ಹಿನ್ನೆಲೆಯಲ್ಲಿ, ಕಬ್ಬಿಣದ ಸರಳುಗಳನ್ನು ಸಂಪೂರ್ಣ ತೆರವುಗೊಳಿಸಿ ನೀರು ಸರಾಗವಾಗಿ ಹರಿದು ಹೋಗಲು ಪೈಪ್ ಅಳವಡಿಸಲಾಗಿದೆ. ಜೊತೆಗೆ ಸಿಮೆಂಟ್ ದಿಂಡು ನಿರ್ಮಿಸಲಾಗಿದ್ದು, ಅದರ ಕ್ಯೂರಿಂಗ್ ಕಾರ್ಯಕ್ಕೆ ವೀರಾಪುರ ಗ್ರಾಮಸ್ಥರು ಟ್ಯಾಂಕರ್ ಮೂಲಕ ನೀರು ಪೂರೈಸಿ ಸಹಕರಿಸುತ್ತಿದ್ದಾರೆ.

ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಕೆಳಸೇತುವೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಜಾರಿಯಲ್ಲಿದೆ. ಇನ್ನೆರಡು–ಮೂರು ದಿನಗಳಲ್ಲಿ ಕಾಮಗಾರಿ ಪೂರ್ಣಗೊಂಡು ವಾಹನ ಸಂಚಾರಕ್ಕೆ ಸಂಪೂರ್ಣ ಮುಕ್ತವಾಗುವ ನಿರೀಕ್ಷೆಯಿದೆ. ಕಬ್ಬಿಣದ ಸರಳುಗಳ ಸಮಸ್ಯೆ ನಿವಾರಣೆಯಾಗಿರುವುದರಿಂದ ಇನ್ನು ಮುಂದೆ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗಲಿದೆ ಎಂಬ ಆಶಾಭಾವನೆ ಸ್ಥಳೀಯರಲ್ಲಿ ವ್ಯಕ್ತವಾಗಿದೆ.

In English: The recurring iron-rod grille failure at the Veerapura railway underpass on the Sidlaghatta–Chintamani road — which had caused several accidents over the past five to six months — has finally been permanently fixed. Following repeated appeals from Veerapura and Taladummanahalli villagers, MLA B.N. Ravikumar intervened with railway, NHAI and police officials; the iron grille was fully removed and replaced with a pipe outlet plus a cured cement kerb. One-way traffic has been in place during the week-long repair, expected to fully reopen in two to three days.

ಸಂಬಂಧಿತ ಸುದ್ದಿ: ರೈಲ್ವೆ ಕೆಳಸೇತುವೆಯಲ್ಲಿ ಸಂಚಾರಕ್ಕೆ ಅಡಚಣೆ – ಅಧಿಕಾರಿಗಳ ಭೇಟಿ

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-08/07/2026

0
Sidlaghatta Silk Cocoon Market Rate 08 July 2026

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 08/07/2026

VarietyLotsQty (Kg)MaxMinAvg
Cross-Breed – ಮಿಶ್ರತಳಿ ರೇಷ್ಮೆ ಗೂಡು39820828755521681
Bi-Voltine – ದ್ವಿತಳಿ ರೇಷ್ಮೆ ಗೂಡು151838₹832₹673₹774

Summary: Sidlaghatta Government Cocoon Market rates for 08/07/2026 — Cross-Breed cocoon averaged ₹681/kg across 398 lots (20,828 kg total, price range ₹521–₹755); Bi-Voltine cocoon averaged ₹774/kg across 15 lots (1,838 kg total, price range ₹673–₹832).

ಹಿಂದಿನ ದಿನದ ದರಕ್ಕಾಗಿ 07/07/2026ರ ಮಾರುಕಟ್ಟೆ ದರ ವೀಕ್ಷಿಸಿ. ಎಲ್ಲಾ ದಿನಗಳ ದರಕ್ಕಾಗಿ ರೇಷ್ಮೆ ಗೂಡು ಮಾರುಕಟ್ಟೆ ವಿಭಾಗ ನೋಡಿ.


For Daily Updates WhatsApp ‘HI’ to 7406303366

16ನೇ ಶತಮಾನದ ಅಪರೂಪದ ಶಾಸನ ಪತ್ತೆ; ಭಾಗವತ ಮಾನ್ಯದ ಮಾಹಿತಿ ಬೆಳಕಿಗೆ

0
Sidlaghatta Mallishettipura 16th Century Inscription Discovery

Sidlaghatta : ತಾಲ್ಲೂಕಿನ ಮಲ್ಲಿಶೆಟ್ಟಿಪುರ ಗ್ರಾಮದಲ್ಲಿ 16ನೇ ಶತಮಾನಕ್ಕೆ ಸೇರಿದ ಅಪರೂಪದ ಶಾಸನವೊಂದು ಪತ್ತೆಯಾಗಿದ್ದು, ವಿಜಯನಗರ ಕಾಲದ ಧಾರ್ಮಿಕ ದಾನಪರಂಪರೆ ಮತ್ತು ಭಾಗವತ ಸಂಪ್ರದಾಯದ ಕುರಿತು ಮಹತ್ವದ ಮಾಹಿತಿಯನ್ನು ಅದು ತಿಳಿಸುತ್ತದೆ.

ಮಲ್ಲಿಶೆಟ್ಟಿಪುರಕ್ಕೆ ಮಂಗಳವಾರ ಭೇಟಿ ನೀಡಿದ್ದ ಶಾಸನತಜ್ಞರಾದ ಕೆ.ಆರ್.ನರಸಿಂಹನ್, ಕೆ.ಧನಪಾಲ್. ಎ.ಎಂ.ತ್ಯಾಗರಾಜ್ ಮತ್ತು ಯುವರಾಜ್ ಶಾಸನವನ್ನು ಓದಿ ಅದರಲ್ಲಿನ ಸಂಗತಿಗಳನ್ನು ವಿವರಿಸಿದರು.

“ಮಲ್ಲಿಶೆಟ್ಟಿಪುರವು 10ನೇ ಶತಮಾನದಿಂದಲೂ ಅಸ್ತಿತ್ವದಲ್ಲಿದ್ದ ಪ್ರಾಚೀನ ಗ್ರಾಮವೆಂದು ಇಲ್ಲಿ ಸಿಕ್ಕಿರುವ ಶಾಸನಗಳ ಆಧಾರದ ಮೇಲೆ ಪರಿಗಣಿಸಬಹುದಾದೆ. ಇಲ್ಲಿ ಈಗಾಗಲೇ ದಾಖಲಾಗಿದ್ದ ವೀರಗಲ್ಲು ಶಾಸನಗಳ ಜೊತೆಗೆ ಹೊಸ ಶಾಸನ ಪತ್ತೆಯಾಗಿದ್ದು, ಆ ಶಾಸನವು 16ನೇ ಶತಮಾನದ ಕನ್ನಡ ಲಿಪಿಯಲ್ಲಿ ತೆಲುಗು ಭಾಷೆಯಲ್ಲಿ ಕೆತ್ತಲ್ಪಟ್ಟಿದ್ದು, ಎಂಟು ಸಾಲುಗಳನ್ನು ಒಳಗೊಂಡಿದೆ. ಈ ಶಾಸನವು ಗ್ರಾಮದ ಗೋಕುಂಟೆ ಸಮೀಪ ಪತ್ತೆಯಾಗಿದೆ” ಎಂದು ಅವರು ಹೇಳಿದರು.

“ಶಾಸನವು ಶಕ 1506ರ ಸ್ವಭಾನು ಸಂವತ್ಸರಕ್ಕೆ ಸೇರಿದ್ದು, ಕ್ರಿ.ಶ. 1584ರ ಫೆಬ್ರುವರಿ 17ರ ದಿನಾಂಕವನ್ನು ಉಲ್ಲೇಖಿಸುತ್ತದೆ. ಶಾಸನದಲ್ಲಿ ಆಳ್ವಿಕೆ ನಡೆಸುತ್ತಿದ್ದ ರಾಜನ ಹೆಸರಿಲ್ಲದಿದ್ದರೂ, ಸಾನಿ ಚಿನ್ನಪ್ಪನಾಯಕನ ಪುತ್ರ ಕೃಷ್ಣಪ್ಪನಾಯಕನ ಹೆಸರನ್ನು ದಾಖಲಿಸಲಾಗಿದೆ. ಕೃಷ್ಣಪ್ಪನು ನೆಲ್ಲಕಂಟಿ ತಿರುಮಲಯ್ಯ ಎಂಬುವವರಿಗೆ ಆಲಂಬಗಿರಿಯ ವೆಂಕಟಾದ್ರಿ ದೇವರ ಪುಣ್ಯಾರ್ಥವಾಗಿ ಹೊಲವೊಂದನ್ನು “ಭಾಗವತ ಮಾನ್ಯ”ವಾಗಿ ಧಾರಾಪೂರ್ವಕವಾಗಿ ದಾನ ನೀಡಿರುವುದಾಗಿ ಶಾಸನ ತಿಳಿಸುತ್ತದೆ”.

“ಶಾಸನದಲ್ಲಿ ಉಲ್ಲೇಖವಾಗಿರುವ ಆಲಂಬಗಿರಿ, ಚಿಂತಾಮಣಿ ಸಮೀಪದ ಐತಿಹಾಸಿಕ ವೈಷ್ಣವ ಕ್ಷೇತ್ರವಾಗಿದೆ. ಅಲ್ಲಿನ ವೆಂಕಟೇಶ್ವರಸ್ವಾಮಿಗೆ ವಿಜಯನಗರ ಅರಸರಾದ ಕೃಷ್ಣದೇವರಾಯ, ಅಚ್ಯುತರಾಯ ಹಾಗೂ ನಂತರದ ಮರಾಠ ಆಡಳಿತಗಾರ ಸಾಂಭಾಜಿ ಕಾಲದಲ್ಲಿಯೂ ದಾನಗಳು ಸಲ್ಲಿಕೆಯಾಗಿರುವುದು ಇತರ ಶಾಸನಗಳಿಂದ ತಿಳಿದುಬಂದಿದೆ”.

“ಈ ಶಾಸನದಲ್ಲಿ ಉಲ್ಲೇಖವಾಗಿರುವ ಸಾನಿ ಚಿನ್ನಪ್ಪನಾಯಕನ ಹೆಸರು ಆಲಂಬಗಿರಿಯ ವೆಂಕಟರಮಣ ದೇವಾಲಯದ ಕ್ರಿ.ಶ. 1533ರ ಶಾಸನದಲ್ಲಿಯೂ ಕಂಡುಬರುತ್ತದೆ. ಅಚ್ಯುತರಾಯನ ಆಳ್ವಿಕೆಯ ಆ ಶಾಸನದ ಪ್ರಕಾರ, ಚಿನ್ನಪ್ಪನಾಯಕನು ಸಾನಿ ಪದುಮಪ್ಪನಾಯಕನ ಪುತ್ರನಾಗಿದ್ದು, ದೇವಾಲಯಕ್ಕೆ ದಾನದತ್ತಿಗಳನ್ನು ನೀಡಿದ್ದನು. ತಂದೆಯ ಧಾರ್ಮಿಕ ಪರಂಪರೆಯನ್ನು ಮುಂದುವರಿಸಿದ ಕೃಷ್ಣಪ್ಪನು ಕೂಡ ಭಾಗವತ ಮಾನ್ಯ ರೂಪದಲ್ಲಿ ಹೊಲವನ್ನು ದಾನ ನೀಡಿರುವುದು ಈ ಹೊಸ ಶಾಸನದಿಂದ ದೃಢಪಟ್ಟಿದೆ” ಎಂದು ಶಾಸನತಜ್ಞರು ಹೇಳಿದರು.

ಇತಿಹಾಸಕಾರರ ಪ್ರಕಾರ, ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ವೈಷ್ಣವ ಮತ್ತು ಶ್ರೀವೈಷ್ಣವ ಸಂಪ್ರದಾಯಗಳು ವ್ಯಾಪಕವಾಗಿ ಬೆಳೆದು ಅನೇಕ ದೇವಾಲಯಗಳು ನಿರ್ಮಾಣಗೊಂಡಿದ್ದವು. ಅವುಗಳ ನಿರ್ವಹಣೆಗಾಗಿ ವಿವಿಧ ರೀತಿಯ ದಾನದತ್ತಿಗಳನ್ನು ನೀಡಲಾಗುತ್ತಿತ್ತು. ಅವುಗಳಲ್ಲಿ “ಭಾಗವತ ಮಾನ್ಯ”ವೂ ಒಂದಾಗಿದ್ದು, 16–17ನೇ ಶತಮಾನಗಳಲ್ಲಿ ದಾಸಸಾಹಿತ್ಯ ಮತ್ತು ಭಾಗವತ ಸಂಪ್ರದಾಯದ ವಿಸ್ತರಣೆಗೆ ಇಂತಹ ದಾನಗಳು ಮಹತ್ವದ ಪಾತ್ರ ವಹಿಸಿದ್ದವು. ಮಲ್ಲಿಶೆಟ್ಟಿಪುರದಲ್ಲಿ ಪತ್ತೆಯಾದ ಈ ಶಾಸನವು ಆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಗೆ ಮತ್ತೊಂದು ಮಹತ್ವದ ಸಾಕ್ಷಿಯಾಗಿದೆ.

In English: A rare 16th-century stone inscription has been discovered near the Gokunte pond at Mallishettipura village in Sidlaghatta taluk. Epigraphists K.R. Narasimhan, K. Dhanapal, A.M. Thyagaraj and Yuvaraj read the eight-line record, carved in Kannada script but Telugu language, dated February 17, 1584 CE (Shaka 1506, Swabhanu samvatsara). It records Krishnappa Nayaka, son of Sani Chinnappa Nayaka, granting a field as a “Bhagavata Manya” endowment to Nellakanti Tirumalayya for the merit of Lord Venkatadri of Alambagiri, a historic Vaishnava centre near Chintamani — fresh evidence of Vijayanagara-era religious donation traditions in the region.

FAQ

ಶಾಸನದಲ್ಲಿ ಏನಿದೆ? ಕ್ರಿ.ಶ. 1584ರ ಫೆಬ್ರುವರಿ 17ರ ದಿನಾಂಕದ ಈ ಶಾಸನವು, ಸಾನಿ ಚಿನ್ನಪ್ಪನಾಯಕನ ಪುತ್ರ ಕೃಷ್ಣಪ್ಪನಾಯಕನು ಆಲಂಬಗಿರಿಯ ವೆಂಕಟಾದ್ರಿ ದೇವರ ಪುಣ್ಯಾರ್ಥವಾಗಿ ನೆಲ್ಲಕಂಟಿ ತಿರುಮಲಯ್ಯ ಅವರಿಗೆ ಹೊಲವೊಂದನ್ನು “ಭಾಗವತ ಮಾನ್ಯ”ವಾಗಿ ದಾನ ನೀಡಿದ ವಿವರವನ್ನು ದಾಖಲಿಸುತ್ತದೆ.

ಶಾಸನ ಎಲ್ಲಿ, ಯಾವ ಭಾಷೆಯಲ್ಲಿ ಇದೆ? ಶಿಡ್ಲಘಟ್ಟ ತಾಲ್ಲೂಕಿನ ಮಲ್ಲಿಶೆಟ್ಟಿಪುರ ಗ್ರಾಮದ ಗೋಕುಂಟೆ ಸಮೀಪ ಪತ್ತೆಯಾಗಿದ್ದು, 16ನೇ ಶತಮಾನದ ಕನ್ನಡ ಲಿಪಿಯಲ್ಲಿ ತೆಲುಗು ಭಾಷೆಯಲ್ಲಿ ಕೆತ್ತಲಾದ ಎಂಟು ಸಾಲುಗಳನ್ನು ಒಳಗೊಂಡಿದೆ.

Sidlaghatta WhatsApp Channel Group

For Daily Updates WhatsApp ‘HI’ to 7406303366

102 ಫಲಾನುಭವಿಗಳಿಗೆ ₹1.98 ಕೋಟಿ ಮೌಲ್ಯದ ಕೆಎಂಡಿಸಿ ಮಂಜೂರಾತಿ ಪತ್ರ ವಿತರಣೆ

0
Sidlaghatta KMDC Sanction Letter Distribution 102 Beneficiaries

Sidlaghatta : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ಕೆಎಂಡಿಸಿ) ವತಿಯಿಂದ 2025–26ನೇ ಸಾಲಿನ ವಿವಿಧ ಸ್ವಯಂ ಉದ್ಯೋಗ ಯೋಜನೆಗಳಿಗೆ ಆಯ್ಕೆಯಾದ 102 ಫಲಾನುಭವಿಗಳಿಗೆ ₹1.98 ಕೋಟಿ ಮೌಲ್ಯದ ಮಂಜೂರಾತಿ ಪತ್ರಗಳನ್ನು ಮಂಗಳವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿತರಿಸಲಾಯಿತು.

ಮಂಜೂರಾತಿ ಪತ್ರಗಳನ್ನು ವಿತರಿಸಿ ಮಾತನಾಡಿದ ಶಾಸಕ ಬಿ.ಎನ್. ರವಿಕುಮಾರ್, ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಪಾರದರ್ಶಕವಾಗಿ ತಲುಪಬೇಕು ಎಂಬ ಉದ್ದೇಶದಿಂದ ಕ್ಷೇತ್ರದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲಾಗಿದ್ದು, ಅದರ ಫಲವಾಗಿ ಹೆಚ್ಚಿನ ಅನುದಾನ ದೊರೆತಿದೆ ಎಂದು ಹೇಳಿದರು.

ರೇಷ್ಮೆ ನೂಲು ಬಿಚ್ಚಾಣಿಕೆ (ಸಿಲ್ಕ್ ರೀಲಿಂಗ್) ಉದ್ಯಮದಲ್ಲಿ ತೊಡಗಿರುವ ಮುಸ್ಲಿಂ ಸಮುದಾಯದವರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದ ಹಿನ್ನೆಲೆಯಲ್ಲಿ, ರೇಷ್ಮೆ ನೂಲು ಬಿಚ್ಚಾಣಿಕೆ ಯೋಜನೆಯಡಿ 96 ಫಲಾನುಭವಿಗಳಿಗೆ ₹1.92 ಕೋಟಿ ಮಂಜೂರಾಗಿದೆ ಎಂದು ತಿಳಿಸಿದರು.

ಟ್ಯಾಕ್ಸಿ ಹಾಗೂ ಸರಕು ವಾಹನ ಖರೀದಿ ಯೋಜನೆಯಡಿ ಒಬ್ಬ ಫಲಾನುಭವಿಗೆ ₹3 ಲಕ್ಷ, ವೃತ್ತಿ ಪ್ರೋತ್ಸಾಹ ಯೋಜನೆಯಡಿ ಇಬ್ಬರಿಗೆ ₹2 ಲಕ್ಷ ಹಾಗೂ ಶ್ರಮಶಕ್ತಿ ಯೋಜನೆಯಡಿ ಮೂವರಿಗೆ ₹1.50 ಲಕ್ಷ ಮಂಜೂರಾಗಿದ್ದು, ಒಟ್ಟು 102 ಫಲಾನುಭವಿಗಳಿಗೆ ₹1.98 ಕೋಟಿ 50 ಸಾವಿರ ಮೌಲ್ಯದ ಮಂಜೂರಾತಿ ಪತ್ರಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.

ಅಧಿಕಾರಿಗಳು ಸರ್ಕಾರದ ಯೋಜನೆಗಳ ಸೌಲಭ್ಯಗಳು ನೈಜ ಫಲಾನುಭವಿಗಳಿಗೆ ತಲುಪುವಂತೆ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು. ಶಿಕ್ಷಣ, ಆರೋಗ್ಯ, ಸ್ವಯಂ ಉದ್ಯೋಗ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳನ್ನು ಕ್ಷೇತ್ರದ ಜನರಿಗೆ ತಲುಪಿಸಲು ಆದ್ಯತೆ ನೀಡಲಾಗುವುದು ಎಂದರು.

ಗಂಗಾ ಕಲ್ಯಾಣ ಯೋಜನೆಯಡಿ ಇನ್ನೂ ಸೌಲಭ್ಯ ಪಡೆಯದ ಅರ್ಹ ಫಲಾನುಭವಿಗಳ ಮಾಹಿತಿ ಸಂಗ್ರಹಿಸಿ, ಅಧಿಸೂಚನೆ ಹೊರಡಿಸಿ ಬೋರ್‌ವೆಲ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಇದೇ ವೇಳೆ, ಕೆಎಂಡಿಸಿ ಯೋಜನೆಯಡಿ ಸಾಲ ಪಡೆದು ಮೃತಪಟ್ಟ ಫಲಾನುಭವಿಗಳ ಕುಟುಂಬಗಳಿಗೆ ಸಾಲಮನ್ನಾ ಶಿಫಾರಸು ಆದೇಶ ಪತ್ರಗಳನ್ನು ವಿತರಿಸಲಾಯಿತು. ಆರು ಕುಟುಂಬಗಳಿಗೆ ಒಟ್ಟು ₹44.78 ಲಕ್ಷ ಸಾಲಮನ್ನಾ ಮಾಡಲಾಗಿದ್ದು, ಇದರಲ್ಲಿ ₹29.45 ಲಕ್ಷ ಮೂಲಸಾಲ ಹಾಗೂ ₹15.33 ಲಕ್ಷ ಬಡ್ಡಿ ಸೇರಿದೆ.

ಮುಂದಿನ ವರ್ಷವೂ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಸ್ವೀಕರಿಸಿ, ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನವನ್ನು ಪಾರದರ್ಶಕವಾಗಿ ತಲುಪಿಸುವ ಕಾರ್ಯ ಮುಂದುವರಿಸಲಾಗುವುದು ಎಂದು ಶಾಸಕ ಹೇಳಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಆರ್. ಹೇಮಾವತಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು, ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಮುಖಂಡರು ಹಾಗೂ ಫಲಾನುಭವಿಗಳು ಹಾಜರಿದ್ದರು.

In English: The Karnataka Minorities Development Corporation (KMDC) distributed sanction letters worth ₹1.98 crore to 102 beneficiaries selected under various self-employment schemes for 2025–26 at the Sidlaghatta taluk panchayat hall on Tuesday. MLA B.N. Ravikumar said 96 beneficiaries in the silk reeling sector received ₹1.92 crore, with further sanctions under taxi/goods vehicle, profession incentive and Shrama Shakti schemes. Loan waiver orders totalling ₹44.78 lakh were also handed to six families of deceased borrowers under the KMDC death-case scheme.

Sidlaghatta WhatsApp Channel Group

For Daily Updates WhatsApp ‘HI’ to 7406303366