ಅರ್ಹ ಮತದಾರರು ಮತದಾರರ ಪಟ್ಟಿಯಿಂದ ತಪ್ಪಿ ಹೋಗದಂತೆ ಎಚ್ಚರಿಕೆ ವಹಿಸಬೇಕು

- Advertisement -
- Advertisement -

Sidlaghatta : ತಾಲ್ಲೂಕಿನ ಸಾದಲಿ ಹೋಬಳಿಯ ಹಲವು ಮತಗಟ್ಟೆಗಳಲ್ಲಿ ಮತಗಟ್ಟೆ ಅಧಿಕಾರಿಗಳು (BLO) ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯ ಎನ್ಯುಮರೇಷನ್ ಅರ್ಜಿಗಳನ್ನು ಮತದಾರರ ಮನೆಗೆ ಭೇಟಿ ನೀಡಿ ವಿತರಿಸದೆ ಗ್ರಾಮದ ಮುಖಂಡರ ಕೈಗೆ ನೀಡಲಾಗುತ್ತಿದೆ ಎಂದು SIR ಗೆ ನೇಮಕವಾಗಿರುವ ಕಾಂಗ್ರೆಸ್ ಪ್ರತಿನಿಧಿ BLA-1 ರಾಜೀವ್ ಗೌಡ ಆರೋಪಿಸಿದರು.

ತಾಲ್ಲೂಕಿನ ಸಾದಲಿಯಲ್ಲಿ ಶನಿವಾರ ಕಾಂಗ್ರೆಸ್ ನಿಂದ ಹಮ್ಮಿಕೊಂಡಿದ್ದ “ಕಾಂಗ್ರೆಸ್ ನಡೆ ಮತದಾರರ ರಕ್ಷಣೆಯ ಕಡೆ” ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯ ಜಾಗೃತಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹಾಗೂ BLA-2ಗಳನ್ನುದ್ದೇಶಿಸಿ ಅವರು ಮಾತನಾಡಿದರು.

SIR ಕಾರ್ಯಕ್ರಮಕ್ಕೆ ನಿಯೋಜನೆಗೊಂಡಿರುವ ಮತಗಟ್ಟೆ ಅಧಿಕಾರಿಗಳಲ್ಲಿ ಕೆಲವರು ತಾಲ್ಲೂಕು ಆಡಳಿತದ ಅಧಿಕಾರಿಗಳು, ಶಾಸಕರ ಮರ್ಜಿಗೆ ಕೆಲಸ ಮಾಡುತ್ತಿದ್ದು SIR ನ ಎನ್ಯುಮರೇಷನ್ ಅರ್ಜಿಗಳನ್ನು ಜೆಡಿಎಸ್ ಮತ್ತು ಬಿಜೆಪಿ ಮುಖಂಡರಿಗೆ ಕೈಗೆ ಒಪ್ಪಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಇದರಿಂದ ಅನೇಕರ ಹೆಸರು ಮತದಾರರ ಪಟ್ಟಿಯಿಂದ ಕೈ ಬಿಟ್ಟು ಹೋಗುವ ಆತಂಕ ವ್ಯಕ್ತಪಡಿಸಿದ ಅವರು, ಮತದಾರರ ಪಟ್ಟಿಯಿಂದ ಕೈ ಬಿಟ್ಟರೆ ರಾಜ್ಯ ಸರ್ಕಾರದ ಯಾವ ಗ್ಯಾರಂಟಿ ಯೋಜನೆಯೂ ಸಿಗದು ಎಂದು ಎಚ್ಚರಿಸಿ, ಅರ್ಹ ಮತದಾರರೂ ಕೈ ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಬೇಕೆಂದು ಹೇಳಿದರು.

ಮತಗಟ್ಟೆ ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯ, ಪಕ್ಷಪಾತ ಧೋರಣೆ ವಿರುದ್ಧ ಜಿಲ್ಲಾಧಿಕಾರಿಗಳಿಗೆ, ಚುನಾವಣಾ ಆಯೋಗ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೂ ದೂರು ಸಲ್ಲಿಸಿ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಮನವಿ ಮಾಡುವುದಷ್ಟೆ ಅಲ್ಲ, ಸಸ್ಪೆಂಡ್ ಮಾಡಿಸುವ ತನಕ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಪಕ್ಷದಿಂದ SIR ಕಾರ್ಯಕ್ಕೆ ನೇಮಕಗೊಂಡಿರುವ ಎಲ್ಲ BLA-2ಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು, ಯಾವುದೇ ಕಾರಣಕ್ಕೂ ಅರ್ಹ ಮತದಾರರೂ ಮತದಾರರ ಪಟ್ಟಿಯಿಂದ ತಪ್ಪಿ ಹೋಗದಂತೆ ಎಚ್ಚರಿಕೆ ವಹಿಸಬೇಕು. ಕರ್ತವ್ಯ ನಿರ್ಲಕ್ಷ್ಯ ಅಥವಾ ಪಕ್ಷಪಾತಿ ಧೋರಣೆಯ BLOಗಳು ಕಂಡುಬಂದಲ್ಲಿ ತಿಳಿಸುವಂತೆ ಕೋರಿದರು. SIR ಕಾರ್ಯದ ಬಗ್ಗೆ ಸಂದೇಹ, ಗೊಂದಲ ಅಥವಾ ದೂರು ನೀಡಲು ಕಾಂಗ್ರೆಸ್ ಭವನದಲ್ಲಿ ಸಹಾಯವಾಣಿ ಆರಂಭಿಸಲಾಗಿದ್ದು 9739720505 ಸಂಪರ್ಕಿಸಲು ಕೋರಿದರು.

SIR ನ ಕಾಂಗ್ರೆಸ್ ಉಸ್ತುವಾರಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಉದಯಕುಮಾರ್ ಮಾತನಾಡಿ, SIR ಪ್ರಕ್ರಿಯೆಯನ್ನು ಕಾಂಗ್ರೆಸ್ ಪಕ್ಷ ಬಹಳ ಗಂಭೀರವಾಗಿ ಪರಿಗಣಿಸಿದ್ದು, ಯಾವುದೇ ಅರ್ಹ ಮತದಾರರೂ ಮತದಾರರ ಪಟ್ಟಿಯಿಂದ ತಪ್ಪುವಂತಾಗಬಾರದು, ಇಲ್ಲದಿದ್ದರೆ ಗ್ಯಾರಂಟಿ ಯೋಜನೆಯಿಂದ ವಂಚಿತರಾಗುತ್ತಾರೆ ಎಂದು ಎಚ್ಚರಿಸಿ, SIR ಕಾರ್ಯಕ್ಕೆ ನೇಮಕಗೊಂಡ ಪಕ್ಷದ ಎಲ್ಲರೂ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕೆಂದು ಮನವಿ ಮಾಡಿದರು.

ಸಾದಲಿ, ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು, ಕೋಟೆ ವೃತ್ತ ಸೇರಿದಂತೆ ತಾಲ್ಲೂಕಿನ ಹಲವು ಕಡೆ SIR ಕುರಿತು ಮತದಾರರು, ಕಾಂಗ್ರೆಸ್ ಕಾರ್ಯಕರ್ತರು, BLA-2ಗಳಿಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯಿತು. ಈ ಹಿಂದೆ SIR ಎನ್ಯುಮರೇಷನ್ ನಮೂನೆ ವಿತರಣೆ ಕುರಿತೂ ವರದಿಯಾಗಿತ್ತು.

In English: Congress BLA-1 representative Rajeev Gowda alleged that BLOs in Sidlaghatta’s Sadali hobli are handing SIR (Special Intensive Revision) enumeration forms to village leaders instead of visiting voters’ homes directly, risking eligible voters being dropped from rolls. Congress has set up a helpline (9739720505) and urged all BLA-2 volunteers to actively verify the process.

Sidlaghatta WhatsApp Channel Group

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!