Home Blog Page 483

ದೇಶ ನೋಡು ಕೋಶ ಓದು

0

‘ದೇಶ ನೋಡು ಕೋಶ ಓದು’ ಎಂಬ ನಾಣ್ಣುಡಿಯಂತೆ ವಿದ್ಯಾರ್ಥಿಗಳು ಕೈಗೊಳ್ಳುವ ಪ್ರವಾಸದ ಮೂಲಕ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳುವಂತಾಗಲಿ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಬುಧವಾರ ತಾಲ್ಲೂಕಿನ ಒಟ್ಟು ೧೪೫ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ಕರ್ನಾಟಕ ದರ್ಶನ ಪ್ರವಾಸಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ನಾಡು ಸಾಕಷ್ಟು ವೈವಿಧ್ಯತೆಯನ್ನು ಹೊಂದಿದೆ. ಐತಿಹಾಸಿಕ, ಸಾಂಸ್ಕೃತಿಕ, ನೈಸರ್ಗಿಕ, ವಿಭಿನ್ನ ಸಂಸ್ಕೃತಿಗಳ ತಾಣವಾಗಿದೆ. ವಿದ್ಯಾರ್ಥಿಗಳು ಪ್ರವಾಸವನ್ನು ಒಂದು ಅಧ್ಯಯನ ಪ್ರವಾಸ ಎಂದು ಪರಿಗಣಿಸಿ ತಾವು ನೋಡುವ ಚಾರಿತ್ರಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ತಮ್ಮ ಜ್ಞಾನ ಬಂಡಾರವನ್ನು ವಿಸ್ತರಿಸಿಕೊಳ್ಳಬೇಕು ಎಂದು ಹೇಳಿದರು.

ಶಿಡ್ಲಘಟ್ಟದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಬುಧವಾರ ತಾಲ್ಲೂಕಿನ ಒಟ್ಟು ೧೪೫ ಪ್ರೌಢಶಾಲೆ ವಿದ್ಯಾರ್ಥಿಗಳ ಕರ್ನಾಟಕ ದರ್ಶನ ಪ್ರವಾಸಕ್ಕೆ ಶಾಸಕ ಎಂ.ರಾಜಣ್ಣ ಚಾಲನೆ ನೀಡಿದರು.
ಶಿಡ್ಲಘಟ್ಟದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಬುಧವಾರ ತಾಲ್ಲೂಕಿನ ಒಟ್ಟು ೧೪೫ ಪ್ರೌಢಶಾಲೆ ವಿದ್ಯಾರ್ಥಿಗಳ ಕರ್ನಾಟಕ ದರ್ಶನ ಪ್ರವಾಸಕ್ಕೆ ಶಾಸಕ ಎಂ.ರಾಜಣ್ಣ ಚಾಲನೆ ನೀಡಿದರು.

ಪ್ರೌಢ ಶಾಲೆಯಲ್ಲಿ ಅಧ್ಯಯನ ಮಾಡುತ್ತಿರುವ ಕಡು ಬಡ ವಿದ್ಯಾರ್ಥಿಗಳಿಗೂ ಕರ್ನಾಟಕದ ಪ್ರಮುಖ ಐತಿಹಾಸಿಕ ಸ್ಥಳಗಳನ್ನು ಪರಿಚಯಿಸುವ ಉದ್ದೇಶದಿಂದ ಸರ್ಕಾರ ಕರ್ನಾಟಕ ದರ್ಶನ ಎಂಬ ವಿನೂತನ ಯೋಜನೆ ಪರಿಚಯಿಸಿದೆ. ಮಕ್ಕಳು ಆಯಾ ಸ್ಥಳಗಳಲ್ಲಿ ಪ್ರವಾಸಿ ಮಾರ್ಗದರ್ಶಿಗಳು ತಿಳಿಸುವ ವಿಷಯಗಳನ್ನು ತಿಳಿಯುತ್ತಾ ಪ್ರವಾಸವನ್ನು ಸಾರ್ಥಕಪಡಿಸಿಕೊಳ್ಳಿ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ಮಾತನಾಡಿ, ತಾಲ್ಲೂಕಿನಿಂದ ಕರ್ನಾಟಕ ದರ್ಶನ ಪ್ರವಾಸಕ್ಕೆ ಈ ಭಾರಿ ೧೪೫ ಮಂದಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ೯೫ ಬಾಲಕರು ಸೇರಿದಂತೆ ೫೦ ಬಾಲಕಿಯರು ಪ್ರವಾಸಕ್ಕೆ ತೆರಳುತ್ತಿದ್ದಾರೆ.
ಒಟ್ಟಾರೆ ಐದು ದಿನಗಳ ಪ್ರವಾಸ ಕಾರ್ಯಕ್ರಮದಲ್ಲಿ ಹಂಪಿ, ಹೊಸಪೇಟೆ, ವಿಜಯನಗರ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಬನಶಂಕರಿ, ಕೂಡಲಸಂಗಮ, ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿರುವ ಐತಿಹಾಸಿಕ ಸ್ಥಳಗಳನ್ನು ಪರಿಚಯಿಸಲಾಗುತ್ತದೆ ಎಂದು ವಿವರಿಸಿದರು.
ಪ್ರವಾಸ ಕೈಗೊಳ್ಳುವ ಮಕ್ಕಳಿಗೆ ಕರ್ನಾಟಕ ದರ್ಶನ ಎಂಬ ಲಾಂಛನವುಳ್ಳ ಟಿ-ಶರ್ಟ್ ಮತ್ತು ಟೋಪಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕರಾದ ಎಲ್.ವಿ.ವೆಂಕಟರೆಡ್ಡಿ, ಲಕ್ಷ್ಮಿನರಸೇಗೌಡ, ಮಂಜುನಾಥ, ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.

ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಅವರ ಜಯಂತೋತ್ಸವ

0

ಸಮಾಜದಲ್ಲಿನ ಜಾತಿಪದ್ಧತಿಯನ್ನು ಹೋಗಲಾಡಿಸಲು ಹೋರಾಡಿದ ಮಹಾನ್ ವ್ಯಕ್ತಿ ಅಂಬಿಗರ ಚೌಡಯ್ಯ ಎಂದು ಕ್ಷೇತ್ರ ಶಿಕ್ಷಣಾದಿಕಾರಿ ರಘುನಾಥ ರೆಡ್ಡಿ ತಿಳಿಸಿದರು.
ನಗರದ ಮಿನಿ ವಿಧಾನ ಸೌಧದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಅವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮದಲ್ಲಿ ಪಾಲ್ಗೂಂಡು ಮಾತನಾಡಿದ ಅವರು 12ನೇ ಶತಮಾನದಲ್ಲಿ ಬಸವಣ್ಣವನರು ಅನುಭವ ಮಂಟಪ ಸ್ಥಾಪನೆ ಮಾಡಿದ್ದು ಅದರಲ್ಲಿ ಸ್ಥಾನ ಪಡೆದಿದ್ದ ಅಂಬಿಗರ ಚೌಡಯ್ಯ, ಸಮಾಜದಲ್ಲಿನ ಮೂಡನಂಬಿಕೆಗಳ ವಿರುದ್ಧ ಸಿಡಿದೆದ್ದು ತನ್ನ ವಚನ ಸಾಹಿತ್ಯದ ಮೂಲಕ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದ ಮಹಾನ್ ವ್ಯಕ್ತಿಯಾಗಿದ್ದು, ಅವರ ತತ್ವಗಳು ಒಂದು ಸಮಾಜಕ್ಕೆ, ಒಂದು ಜಾತಿಗೆ ಸೀಮಿತವಾಗದೆ ಎಲ್ಲರೂ ಅವರ ತತ್ವ ಆದರ್ಶಗಳನ್ನು ಪಾಲಿಸಿ ಸಮಾಜದ ಒಳಿತಿಗಾಗಿ ಶ್ರಮಿಸಬೇಕೆಂದು, ಆ ಕಾಲದಲ್ಲಿ ವಿದ್ಯೆಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದ್ದು, ಜಾತಿ, ಮತ ಬಡವ, ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲರೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ವಿದ್ಯಾವಂತರನ್ನಾಗಿ ಮಾಡಿ ಸಮಾಜದಲ್ಲಿ ಏಳಿಗೆಗಾಗಿ ಸಹಕರಿಸಿ ಎಂದು ಕರೆನೀಡಿದರು.

ಜನಾಂಗದಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು,ಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು
ಜನಾಂಗದಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು,ಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು

ಇದೇ ಸಂದರ್ಭದಲ್ಲಿ ಬೆಸ್ತ ಜನಾಂಗದಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು,ಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಮತ್ತು ಜನಾಂಗದ ಏಳಿಗೆಗಾಗಿ ಶ್ರಮಿಸಿದ ಹಿರಿಯ ನಾಗರೀಕರಾದ ನ್ಯಾತಪ್ಪ ಅವರನ್ನು ಸನ್ಮಾನಿಸಲಾಯಿತು.
ಸೆಕೆಂಡ್ ಗ್ರೇಡ್ ತಹಸಿಲ್ದಾರ್ ವಾಸುದೇವ ಮೂರ್ತಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಂತಪ್ಪ, ಜಿಲ್ಲಾ ಮತ್ತು ತಾಲೂಕು ಬೆಸ್ತರ ಸಂಘದ ಅದ್ಯಕ್ಷ ಜಯರಾಂ, ಕಾರ್ಯದರ್ಶಿ ವೆಂಕಟಾದ್ರಿ, ಗೌರವಾದ್ಯಕ್ಷ ನ್ಯಾತಪ್ಪ, ತಾಲೂಕು ಅಧ್ಯಕ್ಷ ಕೃಷ್ಣಮೂರ್ತಿ, ಜಂಗಮಕೋಟೆ ಬೆಸ್ತರ ಸಂಘದ ಅಧ್ಯಕ್ಷ ವೆಂಕಟೇಶ್, ಮತ್ತಿತತರು ಕಾರ್ಯಕ್ರದಮಲ್ಲಿ ಹಾಜರಿದ್ದರು.

ಸಿದ್ದರಾಮಯ್ಯ ಸರ್ಕಾರದ ಗೆಲುವಿನ ಒಲವು

0

ಜನಪರ ಕಲ್ಯಾಣ ಯೋಜನೆಗಳನ್ನು ರಾಜ್ಯದ ಜನತೆಗೆ ಕೊಟ್ಟಿರುವ ಸಿದ್ದರಾಮಯ್ಯ ಸರ್ಕಾರವನ್ನು ಮೆಚ್ಚಿ ಈ ಬಾರಿ ತಾಲ್ಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆಗಳಲ್ಲಿ ರಾಜ್ಯದಲ್ಲಿ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಕೆ.ಪಿ.ಸಿ.ಸಿ.ಉಪಾದ್ಯಕ್ಷ ವಿ.ಮುನಿಯಪ್ಪ ತಿಳಿಸಿದರು.
ನಗರದ ಕಾಂಗ್ರೇಸ್ ಭವನದಲ್ಲಿ ನಡೆದ ಅಬ್ಲೂಡು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಚುನಾವಣಾ ಸ್ವರ್ಧೆಯ ಅಕಾಂಕ್ಷಿಗಳು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಕೆ.ಎಚ್.ಮುನಿಯಪ್ಪ ಹಾಗೂ ನನ್ನ ನಡುವೆ ಇರುವ ವ್ಯೆಷಮ್ಯ ನಮ್ಮ ಸ್ವಂತ ವಿಷಯ ಇದನ್ನು ಪಕ್ಷದ ಮೇಲೆ ಹೇರಲ್ಲ ನಾನು ಪಕ್ಷಕ್ಕೆ ದೋಹ್ರ ಬಗೆಯುವುದಿಲ್ಲ ರಾಷ್ಟ್ರ ಹಾಗೂ ರಾಜ್ಯದ ವರಿಷ್ಠರ ನಿರ್ದೇಶನದಂತೆ ಕೆಲಸ ಮಾಡುತ್ತೇನೆ. ಜೆ.ಡಿ.ಸ್.ಮುಖಂಡರು ನಮ್ಮ ನಡುವಿನ ಒಡಕನ್ನು ಅಪಪ್ರಚಾರ ಮಾಡಿ ಈ ಬಾರಿ ಚುನಾವಣೆಗಳಲ್ಲಿ ಹೆಚ್ಚು ಸ್ಢಾನಗಳನ್ನು ಗೆಲ್ಲುವುದು ಅವರ ಭ್ರಮೆ ನಮ್ಮ ಪಕ್ಷದಲ್ಲಿ ಹೆಚ್ಚಿನ ಆಕ್ಷಾಂಕ್ಷಿಗಳ ಪಟ್ಟಿ ಹೇಳುತ್ತದೆ. ಈ ಬಾರಿ ಹೆಚ್ಚಿನ ಅಭ್ಯರ್ಥಿಗಳು ಆಯ್ಕೆಯಾಗಿ ಅಧಿಕಾರ ಪಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರಾದ ಎನ್ ಮುನಿಯಪ್ಪ,ಆರ್ ಶ್ರೀನಿವಾಸ್ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಗೋಪಾಲ್ ಟಿ.ಪಿ.ಎಸ್ ಮಾಜಿ ಅಧ್ಯಕ್ಷರಾದ ವೇಣು ಗೋಪಾಲ್, ಮುನಿಕೃಷ್ಣಪ್ಪ ಮುಖಂಡರಾದ ಸಾದಲಿ ಜೈ ಪ್ರಕಾಶ್, ಬೆಳ್ಳೂಟಿ ಸಂತೋಷ್, ನಿರಂಜನ್, ರಾಜ್ ಕುಮಾರ್, ಎಲ್ ಮಧು, ಶಂಕರ್, ರಾಘವೇಂದ್ರ ಮುಂತಾದವರು ಹಾಜರಿದ್ದರು

ಚಿಂತನ ವಿಜ್ಞಾನ ಪರೀಕ್ಷೆ: ಸುಗಟೂರು ಶಾಲೆಗೆ ರಾಜ್ಯ ಪ್ರಥಮ ರ್ಯಾಂಕ್

0

ಚಿತ್ರದುರ್ಗದ ಚಿಂತನ ಪ್ರಕಾಶನ ನಡೆಸಿದ ಚಿಂತನ ವಿಜ್ಞಾನ ರಾಷ್ಟ್ರ ಮಟ್ಟದ ಪರೀಕ್ಷೆಯಲ್ಲಿ ತಾಲ್ಲೂಕಿನ ಸುಗಟೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ೮ ನೇ ತರಗತಿ ವಿದ್ಯಾರ್ಥಿನಿ ಎಸ್.ಆರ್.ಮಾನಸ ರಾಜ್ಯ ಮಟ್ಟದ ಪ್ರಥಮ ರ್ಯಾಂಕ್ ಪಡೆದಿದ್ದಾಳೆ.
ಏಳನೆಯ ತರಗತಿಯ ಎಸ್.ಕೆ.ಸುದರ್ಶನ್ ಜಿಲ್ಲಾ ಮಟ್ಟದಲ್ಲಿ ಪ್ರಥಮ ರ್ಯಾಂಕ್, ೫ ನೇ ತರಗತಿಯ ಮಧುಮತಿ ಮತ್ತು ೬ ನೇ ತರಗತಿಯ ಎಸ್.ಆರ್.ಚಂದನ ತಾಲ್ಲೂಕು ಮಟ್ಟದ ಪ್ರಥಮ ರ್ಯಾಂಕ್ ಗಳಿಸಿದ್ದಾರೆ.
ಉಳಿದಂತೆ ಪರೀಕ್ಷೆ ಬರೆದಿದ್ದ ಸುಮಾರು ೨೫ ಮಂದಿ ವಿದ್ಯಾರ್ಥಿಗಳು ಶಾಲಾಮಟ್ಟದ ಪ್ರಥಮ ರ್ಯಾಂಕ್ ಪಡೆದಿದ್ದು, ವಿದ್ಯಾರ್ಥಿಗಳನ್ನು ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ, ಎಸ್.ಡಿ.ಎಂಸಿ ಅಧ್ಯಕ್ಷ ಎಸ್.ಆರ್.ನಾಗೇಶ್ಮತ್ತು ಸದಸ್ಯರು, ಬೋಧಕವರ್ಗದವರು ಅಭಿನಂದಿಸಿದ್ದಾರೆ.

ನಗರಸಭೆಯಲ್ಲಿ ಸಹಾಯಧನ ಚೆಕ್ ವಿತರಣೆ

0

ನಗರಸಭೆಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಗಣರಾಜೋತ್ಸವ ಕಾರ್ಯಕ್ರಮದ ಅಂಗವಾಗಿ ನಗರಸಭೆ ವತಿಯಿಂದ ಪೌರಕಾರ್ಮಿಕರಿಗೆ ಪ್ರತಿದಿನ ಬೆಳಿಗ್ಗೆ ಉಪಹಾರ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ವೈಯಕ್ತಿಕ ಶೌಚಾಲಯವನ್ನು ನಿರ್ಮಿಸಿರುವ 54
ಫಲಾನುಭವಿಗಳಿಗೆ ತಲಾ ೫,೩೩೦ ರೂಗಳ ಸಹಾಯಧನದ ಚೆಕ್ಕನ್ನು ಈ ಸಂದರ್ಭದಲ್ಲಿ ನೀಡಲಾಯಿತು.
ಕಳೆದ ಕೆಲವು ತಿಂಗಳಿಂದೆ ಸುರಿದ ಧಾರಕಾರ ಮಳೆಯಿಂದ ಹಾನಿಗೊಳಗಾದ ನಗರದ ೨೦ ಕುಟುಂಬಗಳಿಗೆ ೬-೮ ಸಾವಿರದವರೆಗೆ ಸಹಾಯಧನ ವಿತರಿಸಲಾಯಿತು.
ನಗರಸಭೆಯ ೨೪:೧೦ ರ ಯೋಜನೆಯಲ್ಲಿ ಎಸ್,ಸಿ, ಎಸ್,ಟಿ ಹಾಗೂ ಸಾಮಾನ್ಯ ವರ್ಗಕ್ಕೆ ಸೇರಿದ ೩೦ ಕುಟುಂಬಗಳಿಗೆ ಒಟ್ಟು೧,೧೦.೬೧೦ರೂಗಳ ಸಹಾಯಧನವನ್ನು ನೀಡಲಾಯಿತು.
ಶಾಸಕ ಎಂ.ರಾಜಣ್ಣ, ನಗರಸಭೆ ಅಧ್ಯಕ್ಷೆ ಮುಷ್ಠರಿ ತನ್ವೀರ್,ಉಪಾಧ್ಯಕ್ಷೆ ಸುಮಿತ್ರ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ನಂದ ಕಿಶನ್, ನಗರಸಭೆ ಪೌರಾಯುಕ್ತ ಹರೀಶ್, ಸದಸ್ಯರಾದ ಅಫ್ಸರ್ ಪಾಷ, ಲಕ್ಷ್ಮಣ, ಸಿಕಂದರ್, ವೆಂಕಟಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ದೇಶ ಕಟ್ಟುವಲ್ಲಿ ಯುವಶಕ್ತಿ ಹೆಚ್ಚು ಬಳಕೆಯಾಗಲಿ

0

ಅಸಮಾನತೆ, ಭ್ರಷ್ಟಾಚಾರ, ಭಯೋತ್ಪಾದನೆಗಳನ್ನು ನಿರ್ಮೂಲನೆ ಮಾಡಿ ರಾಷ್ಟದ ಪ್ರಗತಿಗೆ ಯುವಶಕ್ತಿ ಶ್ರಮಿಸಬೇಕು ಎಂದು ಶಾಸಕ ಎಂ.ರಾಜಣ್ಣ ಕರೆ ನೀಡಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ನಾಡಹಬ್ಬ ಆಚರಣಾ ಸಮಿತಿ ವತಿಯಿಂದ ನಡೆದ ಗಣರಾಜೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು. ದೇಶದ ಯುವಶಕ್ತಿ ವಿದ್ಯಾವಂತರಾಗಿ, ಸ್ನೇಹ-ಸೌರ್ಧತೆಯಿಂದ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು. ದೇಶಪ್ರೇಮವನ್ನು ಬೆಳೆಸಿಕೊಂಡು ದೇಶದ ರಕ್ಷಣೆಗೆ ಮುಂದಾಗಬೇಕೆಂದು ಹೇಳಿದರು.

ಶಿಡ್ಲಘಟ್ಟದ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ನಾಡಹಬ್ಬ ಆಚರಣಾ ಸಮಿತಿ ವತಿಯಿಂದ ನಡೆದ ಗಣರಾಜೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಎಂ.ರಾಜಣ್ಣ ಮಾತನಾಡಿದರು. ತಹಶೀಲ್ದಾರ್ ಮನೋರಮ, ನಗರಸಭೆಯ ಪೌರಾಯುಕ್ತ ಹರೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ನಗರಸಭೆ ಅಧ್ಯಕ್ಷೆ ಮುಷ್ಠರಿ ತನ್ವೀರ್, ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸಮೂರ್ತಿ ಹಾಜರಿದ್ದರು.
ಶಿಡ್ಲಘಟ್ಟದ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ನಾಡಹಬ್ಬ ಆಚರಣಾ ಸಮಿತಿ ವತಿಯಿಂದ ನಡೆದ ಗಣರಾಜೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಎಂ.ರಾಜಣ್ಣ ಮಾತನಾಡಿದರು. ತಹಶೀಲ್ದಾರ್ ಮನೋರಮ, ನಗರಸಭೆಯ ಪೌರಾಯುಕ್ತ ಹರೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ನಗರಸಭೆ ಅಧ್ಯಕ್ಷೆ ಮುಷ್ಠರಿ ತನ್ವೀರ್, ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸಮೂರ್ತಿ ಹಾಜರಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ತಹಶೀಲ್ದಾರ್ ಮನೋರಮ, ಭಾರತೀಯರ ಐಕ್ಯತೆಯ ಸಂಕೇತವಾಗಿ ಗಣರಾಜೋತ್ಸವವನ್ನು ಆಚರಿಸಲಾಗುತ್ತಿದೆ. ನಾವೆಲ್ಲರೂ ಭಾರತೀಯರು ಎಂಬ ಭಾವನೆ ಬೆಳಸಿಕೊಳ್ಳಬೇಕು. ಭಾರತವನ್ನು ಒಂದುಗೂಡಿಸಲು ಅನೇಕ ಮಹಾತ್ಮರು ಪ್ರಾಣತ್ಯಾಗ ಮಾಡಿದ್ದಾರೆ. ರಾಷ್ಟ್ರಕ್ಕೆ ಅಗೌರವವನ್ನು ತರುವಂತಹ ಯಾವುದೇ ರೀತಿಯ ಕೆಲಸವನ್ನು ಮಾಡಬಾರದು ಎಂದು ತಿಳಿಸಿದರು.
ಗಣರಾಜೋತ್ಸವ ಕಾರ್ಯಕ್ರಮದ ಅಂಗವಾಗಿ ಪೊಲೀಸ್ ಇಲಾಖೆ ಮತ್ತು ವಿವಿಧ ಶಾಲೆಗಳ ಮಕ್ಕಳು ಧ್ವಜವಂದನೆ ಹಾಗೂ ಪಥಸಂಚಲನ ನಡೆಸಿದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ನಗರದ ಕೋಟೆ ವೃತ್ತದಲ್ಲಿ ಯೂನಿಟಿ ಸಿಲ್ಸಿಲಾ ಫೌಂಡೇಶನ್ ವತಿಯಿಂದ ಗಣರಾಜೋತ್ಸವದ ಪ್ರಯುಕ್ತ ಪೆರೇಡ್ನಲ್ಲಿ ಭಾಗವಹಿಸಿದ್ದ ಶಾಲಾ ಮಕ್ಕಳಿಗೆ ಬಿಸ್ಕೆಟ್ ಮತ್ತು ಕುಡಿಯುವ ನೀರಿನ ಪ್ಯಾಕೆಟ್ ವಿತರಿಸಲಾಯಿತು.
ನಗರಸಭೆಯ ಪೌರಾಯುಕ್ತ ಹರೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ನಗರಸಭೆ ಅಧ್ಯಕ್ಷೆ ಮುಷ್ಠರಿ ತನ್ವೀರ್, ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸಮೂರ್ತಿ, ಗುರುರಾಜ್ ರಾವ್, ನಗರಸಭೆ ಸದಸ್ಯರಾದ ಅಫ್ಸರ್ಪಾಷ, ಸಿಕಂದರ್ ಮತ್ತಿತರರು ಗಣರಾಜೋತ್ಸವ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಡಿಕ್ಷನರಿ ಓದಿರಿ!

0

ತಲೆಬರಹ ಓದಿ ಒಮ್ಮೆಗೇ ನಕ್ಕವರಲ್ಲಿ ನೀವೂ ಒಬ್ಬರಾಗದಿದ್ದರೆ ಸಾಕು! ಬಹುಷಃ ಬಹುಮಂದಿ ನಗದೇ ಇರರು. ಅಲ್ಲವೇ ಮತ್ತೇ? ಡಿಕ್ಷನರಿಗಳು ಇರುವುದು ಶಬ್ಧಾರ್ಥ ಹುಡುಕಾಟಕ್ಕೆ. ಒಂಥರ ಕತ್ತಲೆಯಲ್ಲಿ ಪದಾರ್ಥ ಹುಡುಕಲು ಬ್ಯಾಟರಿ ಬಳಸಿದಂತೆ. ಹಾಗೆಂದುಕೊಂಡರೆ ಅದು ತಪ್ಪು ಹೆಜ್ಜೆ. ಪದ ಎನ್ನುವುದು ಜೀವನದ ಸಲೀಸು ಜಾರಿಗೆ ಸಲಕರಣೆ. ಡಿಕ್ಷನರಿ ಅಂತಹ ಪದಗಳ ದೊಡ್ಡ ಗುಚ್ಛ. ಅದರಲ್ಲಿ ಬರೀ ಶಬ್ಧದ ಅರ್ಥ ಇರುವುದಿಲ್ಲ. ಒಂದು ಶಬ್ಧದ ಪೂರ್ವಾಪರ, ಬಳಕೆ ವಿಧಾನ, ವಾಕ್ಯದಲ್ಲಿ ಉಪಯೋಗಿಸಿದ ಉದಾಹರಣೆ, ಅಷ್ಟೇಕೆ, ಹೇಗೇಗೆಲ್ಲ ಪದದ ಪ್ರಯೋಜನವನ್ನು ಪಡೆಯಬಹುದು ಎಂಬುದೂ ಇರುತ್ತದೆ. ನಿಜಕ್ಕೂ ಮಕ್ಕಳು ಡಿಕ್ಷನರಿಯನ್ನು `ಓದಲು ಆರಂಭಿಸಿಬಿಟ್ಟರೆ’ ಭಾಷೆಯ ಮೇಲಿನ ಅವರ ಹಿಡಿತ ಸಾವಿರ ಪಟ್ಟು ಉತ್ತಮಗೊಂಡೀತು. ಡಿಕ್ಷನರಿ ಸ್ವಯಂ ಪಾಠ ಮಾಡುವ ಮನೆಶಿಕ್ಷಕ ಎನ್ನಬಹುದು. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಭಾಷಾ ಪಾಂಡಿತ್ಯ ಕುಸಿಯುತ್ತಿರುವ ಹಿನ್ನೆಲೆಯಲ್ಲಿ `ಡಿಕ್ಷನರಿ ಓದಿರಿ’ ಒಂದು ಆಂದೋಲನವಾಗುವ ಅಗತ್ಯವಿದೆ.
ನಿಜ, ಡಿಕ್ಷನರಿಗಳದು ಬಹುರೂಪಿ ನಿಲುವು. ಒಂದು ಭಾಷೆಯ ಪದಕ್ಕೆ ಅದೇ ಭಾಷೆಯಲ್ಲಿ ಅಥವಾ ಹೊರತಾದ ಬೇರೆ ಭಾಷೆಯಲ್ಲಿ ಅರ್ಥ, ಇತಿಹಾಸ ವಿವರಿಸುವ ಮಾದರಿ ಒಂದೇ ಅಲ್ಲ. ತ್ರಿ ಭಾಷಾ ಡಿಕ್ಷನರಿಗಳು ಕೂಡ ಇವೆ. ಪ್ರತಿ ವಿಷಯಕ್ಕೂ ಪ್ರತ್ಯೇಕವಾದ ಡಿಕ್ಷನರಿಗಳಿವೆ. ಇವತ್ತಿಗೂ ಡಿಕ್ಷನರಿ ನೋಡುವುದೆಂದರೆ ಪದದ ಅರ್ಥ ಗೊತ್ತಾಗದ ಕಷ್ಟ ಕಾಲದಲ್ಲಿ ಮಾತ್ರ ಎಂಬ ಅಭಿಪ್ರಾಯ ಖುದ್ದು ಶಿಕ್ಷಕರಿಗಿದೆ. ಅದಲ್ಲ, ಡಿಕ್ಷನರಿಯಲ್ಲಿ ಒಮ್ಮೆ ಕಣ್ಣಾಡಿಸುವ ಹವ್ಯಾಸ ಬೆಳೆದರೆ ನೀಡುವ ಖುಷಿ ವರ್ಣಿಸಲಾಗದ್ದು. ಮುಖ್ಯವಾಗಿ, ಪದಸಂಪತ್ತು ಬೆಳೆದು ಓದುವವರ ವ್ಯಕ್ತಿತ್ವವೇ ಬದಲಾಗುವ ಪರಿಯಲ್ಲಿ ಉತ್ಪ್ರೇಕ್ಷೆಯೇನಿಲ್ಲ.
ಡಿಕ್ಷನರಿ ಎಂದ ತಕ್ಷಣ ನೆನಪಾಗುವುದು ಆಕ್ಸ್‍ಫರ್ಡ್. ಇಪ್ಪತ್ತು ಸಂಪುಟಗಳ ಆಕ್ಸ್‍ಫರ್ಡ್ ಇಂಗ್ಲೀಷ್ ಡಿಕ್ಷನರಿಯಲ್ಲಿ 21,730 ಪುಟಗಳಿವೆ. ಇದನ್ನು ಇಂಗ್ಲೀಷ್‍ನ ಸಂಪೂರ್ಣ ಡಿಕ್ಷನರಿ ಎಂದೂ ಕರೆಯಲಾಗುತ್ತದೆ. ಓಇಡಿ 615,100 ಪದಗಳನ್ನು 2,436,600 ವ್ಯಾಖ್ಯಾನಗಳ ಮೂಲಕ ವರ್ಣಿಸುತ್ತದೆ. ಶೇಕ್ಸ್‍ಸ್ಪಿಯರ್‍ನನ್ನು 33,300 ಬಾರಿ ಉಲ್ಲೇಖಿಸಲಾಗಿದ್ದರೆ, ಅವನ ನಾಟಕ ಹ್ಯಾಮ್ಲೆಟ್‍ನ್ನೇ 1,600 ಕಡೆ ದಾಖಲಿಸಲಾಗಿದೆ!
ದುಬಾರಿ ಬೆಲೆಯ ಈ ಮಾದರಿಯ ಓಇಡಿ, ವೆಬ್‍ಸ್ಟರ್ ಅಮೆರಿಕನ್ ಡಿಕ್ಷನರಿ, ಕ್ಯಾಂಡಮ್ ಹೌಸ್ ಡಿಕ್ಷನರಿಗಳನ್ನು ಸಾಮಾನ್ಯರು ಖರೀದಿಸುವುದು ಸುಲಭದ ಮಾತಲ್ಲ. ಹಾಗಾಗಿಯೇ ಇತ್ತೀಚಿನ ದಶಕದಲ್ಲಿ ಕಲಿಯುವ ಹಂತದಲ್ಲಿರುವವರಿಗಾಗಿ ಲರ್ನರ್ಸ್ ಡಿಕ್ಷನರಿಗಳನ್ನು ಹೊರತರಲಾಗಿದೆ. ತುಂಬಾ ಸರಳವಾಗಿ ಮತ್ತು ಹೆಚ್ಚು ಪ್ರಚಲಿತ ಶಬ್ಧಗಳನ್ನು ಮಾತ್ರ ಆಯ್ದು ವಿವರಿಸಲಾಗಿರುತ್ತದೆ. ಉದಾಹರಣೆಗೆ, `ಲಾಂಗ್‍ಮನ್ ಡಿಕ್ಷನರಿ ಆಫ್ ಕಂಟೆಂಪರ್ವರಿ ಇಂಗ್ಲೀಷ್’ನಲ್ಲಿ 2,07,000 ಪದ-ವಿಶೇಷಣಗಳನ್ನು ವಿವರಿಸಲು ಕೇವಲ ಎರಡು ಸಾವಿರ ಸಾಮಾನ್ಯ ಪದ ಬಳಸಲಾಗಿದೆ. ಡಿಕ್ಷನರಿಯ ಗಾತ್ರವೂ ಚಿಕ್ಕದು. ಬೆಲೆಯೂ ಕೈಗೆಟುಕುವಂತದು. ಇಂತಹುದೇ ಡಿಕ್ಷನರಿಯನ್ನು ಮ್ಯಾಕ್‍ಮಿಲಾನ್, ಆಕ್ಸ್‍ಫರ್ಡ್ ಸಂಸ್ಥೆಗಳೂ ಪ್ರಕಾಶಿಸಿವೆ.
ಡಿಕ್ಷನರಿ ಎಂದಾಕ್ಷಣ ಗಂಭೀರವಾಗಿಯೇ ಪದಗಳನ್ನು ವಿವರಿಸಬೇಕು ಎಂಬುದೂ ತಪ್ಪು ಕಲ್ಪನೆ. ಶಬ್ಧಾರ್ಥ ಚಿಂತನೆಗೆ ಹಾಸ್ಯ ಸ್ವರೂಪ, ಆಟದ ಮೆರುಗು ಸಹ ನೀಡಬಹುದು ಎನ್ನುವುದನ್ನು ಚಾಂಬರ್ಸ್ ಇಂಗ್ಲೀಷ್ ಡಿಕ್ಷನರಿ ಶ್ರುತಪಡಿಸಿದೆ. ಡಿಕ್ಷನರಿಯಲ್ಲಿ ಪದ ಸರ್ಕಸ್, ಪದಬಂಧಗಳನ್ನು ಅಳವಡಿಸಿರುವುದು ಸ್ವಾಗತಾರ್ಹ. ಅಷ್ಟೇಕೆ, ರಸವತ್ತಾದ ಪದ ವಿವರಣೆಗಳಿವೆ. ಐಡಿಯಲ್ ವುಮನ್ ಎಂಬ ವಿಶೇಷಣವನ್ನು ಅದು ವಿವರಿಸುವುದು ಹೀಗೆ, `ಯಾರು ಮದುವೆಯಾದ ಪುರುಷರ ಪತ್ನಿಯರ ಲೋಪ ದೋಷಗಳನ್ನು ಹೊಂದಿರುವುದಿಲ್ಲವೋ ಅವರು!’ ದ್ವಿಚಕ್ರವಾಹನದ `ಪಿಲಿಯನ್ ರೈಡರ್’ಗೆ ಪದಕೋಶ ಹೇಳುತ್ತದೆ, someone free of responsibility but full of advice!
ಮುಖ್ಯವಾಗಿ, ಇಂಗ್ಲೀಷ್ ಡಿಕ್ಷನರಿಗಳು ಪ್ರತಿ ವರ್ಷ ಪರಿಷ್ಕಾರಕ್ಕೊಳಗಾಗುತ್ತವೆ. ಜೊತೆಗೆ ಇಂಗ್ಲೀಷ್ ಭಾಷೆ ಬೇರೆ ಭಾಷೆಗಳಿಂದ ಪದಗಳನ್ನು ಸ್ವೀಕರಿಸುವುದರಲ್ಲಿ ಸಂಕೋಚಪಟ್ಟುಕೊಳ್ಳುವುದಿಲ್ಲ. ಇದೇ ಕಾರಣದಿಂದ ಆ ಭಾಷೆ, ಪದಕೋಶ ಬೆಳೆಯುತ್ತಲೇ ಇದೆ. ಬಹುಷಃ ಈ ಸಮಯದಲ್ಲಿ ಕನ್ನಡ ಪದಕೋಶಗಳ ಬಗ್ಗೆ ಪ್ರಸ್ತಾಪಿಸುವುದೂ ಬೇಸರದ ಸಂಗತಿ. ಇಲ್ಲಿ ಪರಿಷ್ಕರಣೆ ಕಾಲಕಾಲಕ್ಕೆ ನಡೆದಿದ್ದಿಲ್ಲ. `ಇಗೋ ಕನ್ನಡ’ದಂತ ಕೆಲವೇ ಕೆಲವು ಪ್ರಯತ್ನಗಳು ಡಿಕ್ಷನರಿ ಸಂಸ್ಕøತಿಯನ್ನು ಜೀವಂತವಾಗಿಟ್ಟಿವೆ. ವಾಸ್ತವವಾಗಿ, ಇಗೋ ಕನ್ನಡದ ಯಶಸ್ಸು ಕನ್ನಡದಲ್ಲೂ `ಡಿಕ್ಷನರಿ ಓದಿರಿ’ ಆಂದೋಲನಕ್ಕೆ ಭವಿಷ್ಯವಿದೆ ಎನ್ನುವುದನ್ನು ತೋರಿಸಿದೆ.
ಕನ್ನಡದ ಮಡಿವಂತಿಕೆ ಭಾಷಾ ಬೆಳವಣಿಗೆಯ ದೃಷ್ಟಿಯಿಂದ ಪ್ರಶ್ನಾರ್ಹ. ಪೋಲೀಸರನ್ನು ಬಲವಂತವಾಗಿ ಆರಕ್ಷಕರು ಎಂದು ಅನುವಾದಿಸುವುದು, ಇಂಜಿನೀಯರರನ್ನು ಅಭಿಯಂತರರು ಎಂದು ಕರ್ಣ, ಜಿಹ್ವೆಗಳಿಗೆ ಕಷ್ಟ ಕೊಡುವುದು ನಡೆದಿರುವುದರಿಂದಲೇ ಭಾಷೆ ಸೊರಗಿದೆ. ಹೋಗಲಿ, ಈ ತರ್ಜುಮೆಗಳಾದರೂ ಎಷ್ಟರಮಟ್ಟಿಗೆ ಜಾರಿಯಲ್ಲಿದೆ?
ಪದಕೋಶಕ್ಕೆ ಈಗ ಸೀಮಿತ ಅರ್ಥವಿಲ್ಲ. ಇಷ್ಟೇ ಎಂಬ ಚೌಕಟ್ಟು ಇಲ್ಲ. ಇಂಗ್ಲೀಷ್‍ನ ಕೋಲಿನ್ಸ್ ಕೋನ್ಸಿಸ್ ಡಿಕ್ಷನರಿಯ ಇತ್ತೀಚಿನ ಆವೃತ್ತಿಯಲ್ಲಿ ಪದಗಳ ಜೊತೆಗೆ ಸಂಬಂಧಿಸಿದ ವೆಬ್‍ಸೈಟ್ ಲಿಂಕ್‍ಗಳನ್ನು ನೀಡಲಾಗಿದೆ. ಎನ್‍ಸೈಕ್ಲೋಪೀಡಿಯಾಗಳ ಸಂಕ್ಷಿಪ್ತ ಮಾಹಿತಿಯೂ ಅವೇ ಪುಟಗಳಲ್ಲಿ ಲಭ್ಯ. ಈ ಮಾದರಿ ಪ್ರಸ್ತುತ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು. ಇಂಗ್ಲೀಷ್‍ನಲ್ಲಿ ಸಾಕಷ್ಟು ಖಾಸಗಿ ಡಿಕ್ಷನರಿ ಪ್ರಕಾಶನಗಳಿವೆ. ಪೆಂಗ್ವಿನ್, ಅಮೆರಿಕನ್ ಹೆರಿಟೇಜ್, ದಿ ವರ್ಡ್ ಬುಕ್‍ಗಳು, ಮೇಲೆ ಹೇಳಿದ ಆಕ್ಸ್‍ಫರ್ಡ್, ವೆಬ್‍ಸ್ಟರ್, ಕೋಲಿನ್ಸ್‍ನಂತ ಸಂಸ್ಥೆಗಳ ಜೊತೆ ಚಾಲ್ತಿಯಲ್ಲಿವೆ. ಮತ್ತೆ ಕನ್ನಡದ ವಿಚಾರಕ್ಕೆ ಬಂದಲ್ಲಿ, ಮಾರುಕಟ್ಟೆಯ ಕಾರಣದಿಂದಲೇ ಇರಬೇಕು, ಇಲ್ಲಿ ಖಾಸಗಿ ಪ್ರಯತ್ನಗಳಿಗೆ ಉತ್ತೇಜನ ಸಿಕ್ಕಿಲ್ಲ. ಸಾಕಷ್ಟು ಹಣ, ವಿಪರೀತ ಶ್ರಮ, ಸಂಶೋಧನೆಗಳನ್ನು ಬಯಸುವ ಡಿಕ್ಷನರಿ ಪರಿಷ್ಕಾರ ಕನ್ನಡಕ್ಕಂತೂ ಸದ್ಯಕ್ಕೆ ಗಗನ ಕುಸುಮ. ಡಿಕ್ಷನರಿ ಓದುವ ಆಂದೋಲನ ಇದನ್ನು ಬದಲಿಸೀತು.
ಈ ದಿನಗಳಲ್ಲಿ ಡಿಕ್ಷನರಿಯ ಸ್ವರೂಪ ಕಂಪ್ಯೂಟರ್ ತಾಂತ್ರಿಕತೆಯಲ್ಲಿ ಕ್ರಾಂತಿಕಾರಕ ವೇಗದಲ್ಲಿ ಬದಲಾಗಿದೆ. ಮುದ್ರಿತ ಡಿಕ್ಷನರಿಗಳ ಮೇಲೆ ಒಂದು ನಿಜವಾದ ಆರೋಪ ಇತ್ತು. ನಾವು ಹುಡುಕುವ ಪದದ ವಿವರ ಎಲ್ಲಿದೆ ಎಂಬ ಮಾಹಿತಿ, ಶಬ್ಧದ ಅಸಲಿ ಅಕ್ಷರಗಳ ಅರಿವು ಇಲ್ಲದ ಪಕ್ಷದಲ್ಲಿ ನಮ್ಮ ಹುಡುಕಾಟ ಹುಲ್ಲಿನ ಗೊಣಬೆಯಲ್ಲಿ ಸೂಜಿ ಹುಡುಕಿದಂತಾಗುತ್ತಿತ್ತು. ಇನ್ನಿಲ್ಲ ಆ ಕಷ್ಟ. ಡಿಕ್ಷನರಿಗಳು ಈಗ ಒಂದು `ಕ್ಲಿಕ್’ಗೆ ಎದುರಲ್ಲಿ! ಎಲ್ಲ ಪ್ರಸಿದ್ಧ ಡಿಕ್ಷನರಿಗಳು ಅಂತರ್ಜಾಲ ಆವೃತ್ತಿಗಳನ್ನು ಹೊಂದಿದ್ದು ಹೆಚ್ಚು ಸೌಲಭ್ಯವನ್ನು ಹೊಂದಿವೆ. ಪದ ಅರ್ಥದಂತ ಸಾಮಾನ್ಯ ಡಿಕ್ಷನರಿ ಅಂಶಗಳನ್ನು ಬಿಡಿ, ಉಚ್ಛಾರಣೆಯ ಆಡಿಯೋ ರೂಪವೂ ಇರುತ್ತಿದೆ. ಇವುಗಳ ಪ್ರಧಾನ ಆವೃತ್ತಿಗೆ ವಾರ್ಷಿಕ ಸದಸ್ಯತ್ವವಿದೆ. ವೆಬ್‍ಸ್ಟರ್‍ನ ಎರಡು ವಿಭಿನ್ನ ಮಾದರಿಗೆ ವಾರ್ಷಿಕ 14.95 ಡಾಲರ್ ಹಾಗೂ 29.95 ಡಾಲರ್ ನೀಡಿ ಚಂದಾದಾರರಾಗಬೇಕು. ಕೆಲವು ಉಚಿತ ಮಾದರಿಗಳೂ ಇವೆ. ಉದಾಹರಣೆಗೆ, ಆಕ್ಸ್‍ಫರ್ಡ್ ಲರ್ನರ್ಸ್ ಡಿಕ್ಷನರಿ ಮತ್ತು ಕಾಪ್ಯಾಕ್ಟ್ ಡಿಕ್ಷನರಿಗಳನ್ನು ಉಚಿತವಾಗಿ ಒದಗಿಸುತ್ತದೆ. ಅಂತರ್ಜಾಲದಲ್ಲಿ ಪದೇಪದೆ ವೀಕ್ಷಿಸಿದ ಪದಪಟ್ಟಿ, ಇಗೋ ಕನ್ನಡದ ವೆಂಕಟಸುಬ್ಬಯ್ಯ ವಿವರಿಸಿದಂತ ಪದ ಟಿಪ್ಪಣಿ ಮುಂತಾದ ಸೌಲಭ್ಯವೂ ಲಭ್ಯ. ಅಂತರ್ಜಾಲ ಡಿಕ್ಷನರಿಗಳ ಬಗ್ಗೆ ಕುತೂಹಲವಿರುವವರು ಸುಮ್ಮನೆ ಒಮ್ಮೆ www.onelook.com ನಂತ ವೆಬ್‍ಸೈಟ್‍ನಲ್ಲಿ ಇಣುಕಬಹುದು.
ಕಂಪ್ಯೂಟರ್ ಮೌಸ್‍ನ ಕ್ಲಿಕ್ ಇರಲಿ, ಕಪ್ಪು ಶಾಹಿಯ ಡಿಕ್ಷನರಿ ಕಾಗದದ ಪುಟಗಳಿರಲಿ ನಾವು ಅದನ್ನು ಓದುವುದನ್ನು ಚಟವಾಗಿಸಿಕೊಳ್ಳಬೇಕು. ಸಮಯವಿದ್ದಾಗಲೆಲ್ಲ ಅತ್ತ ಕಣ್ಣಾಡಿಸಬೇಕು. ಆಸಕ್ತರ ಮಧ್ಯೆ ಈ ಕುರಿತು ಚರ್ಚೆಯಾಗಬೇಕು. ದುರಂತವೆಂದರೆ, ಇತ್ತೀಚೆಗೆ ಓದುವುದೇ ಮರೆತ ಮಾತಾಗುತ್ತಿದೆ, ನಾವೆಲ್ಲ ಬರೀ ನೋಡುಗರಾಗುತ್ತಿದ್ದೇವೆ. ಅಕ್ಷರಶಃ ಮೂರ್ಖರ ಪೆಟ್ಟಿಗೆಯ ದಾಸರಾಗುತ್ತಿದ್ದೇವೆ. ಹೀಗಾಗಿ ಇತರ ಪುಸ್ತಕಗಳನ್ನೇ ತಿರಸ್ಕರಿಸುವ ನಾವು ಡಿಕ್ಷನರಿ ಓದಿರಿ ಎಂದರೆ ಕೇಳಿಸಿಕೊಳ್ಳುತ್ತೇವೆ. ಸದ್ಯ, ಬ್ರಿಟನ್‍ನಲ್ಲಿ ಈಗ ಡಿಕ್ಷನರಿ ಓದುವಿಕೆ ಪಠ್ಯಕ್ರಮದ ಒಂದು ಭಾಗ. ಅದನ್ನು ಜಾರಿಗೆ ತರಲು ಕನ್ನಡದಂತ ಸೀಮಿತ ವ್ಯಾಪ್ತಿಯ ಪ್ರಾದೇಶಿಕ ಭಾಷೆಗೂ ತ್ರಾಸಿಲ್ಲ. ಆಂದೋಲನ ಹುಟ್ಟಲೂ ಇಷ್ಟು ಸಾಕು. ಅಲ್ಲವೇ?
– ಮಾ.ವೆಂ.ಸ.ಪ್ರಸಾದ್

ರಾಜಕೀಯ ಲಾಭಕ್ಕಾಗಿ ಪೊಲೀಸ್ ಅಧಿಕಾರಿ ವರ್ಗಾವಣೆಗೆ ಒತ್ತಾಯ

0

ಪೊಲೀಸ್ ಅಧಿಕಾರಿಯೋರ್ವರನ್ನು ತಮ್ಮ ರಾಜಕೀಯ ಲಾಭಕ್ಕಾಗಿ ವರ್ಗಾವಣೆ ಮಾಡುವಂತೆ ಪಟ್ಟುಹಿಡಿದು ಪ್ರತಿಭಟನೆ ನಡೆಸಿರುವ ಕ್ರಮ ಖಂಡನೀಯ ಎಂದು ಕರವೇ ತಾಲೂಕು ಅಧ್ಯಕ್ಷ ಎಂ.ವೆಂಕಟರವಣಪ್ಪ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಇವರು ಕಳೆದ ಐದು ವರ್ಷಗಳ ಹಿಂದೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ದಿಬ್ಬೂರಹಳ್ಳಿ ಗ್ರಾ.ಪಂ ಯೊಂದರಲ್ಲೇ ಸುಮಾರು 10ಕ್ಕೂ ಹೆಚ್ಚು ಮಂದಿ ಕಳಪೆ ಮಧ್ಯ ಸೇವಿಸಿ ಮೃತಪಟ್ಟಿದ್ದು ಈ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಯಥೇಚ್ಛವಾಗಿತ್ತು. ಮರಳು ದಂಧೆಯಲ್ಲಿ ತೊಡಗಿದ್ದ ಬಹಳಷ್ಟು ದಂಧೆಕೋರರಿಗೆ ದಿಬ್ಬೂರಹಳ್ಳಿ ಠಾಣೆ ಪಿಎಸ್ಸೈ ರಾಘವೇಂದ್ರರಂತಹ ದಕ್ಷ ಅಧಿಕಾರಿಯಿಂದ ಅಕ್ರಮವಾಗಿ ಮರಳು ಸಾಗಿಸಲು ಆಗುವುದಿಲ್ಲ ಎಂಬ ಕಾರಣಕ್ಕೆ ಶಾಸಕರ ನೇತೃತ್ವದಲ್ಲಿ ಠಾಣೆಯ ಮುಂದೆ ಧರಣಿ ನಡೆಸಿರುವ ಕ್ರಮ ಶಾಸಕ ಎಂ.ರಾಜಣ್ಣರ ಘನತೆಗೆ ತಕ್ಕುದಲ್ಲ.
ಒಬ್ಬ ಸಾಮಾನ್ಯ ಸರಕಾರಿ ಅಧಿಕಾರಿಯನ್ನು ವರ್ಗಾವಣೆ ಮಾಡಲು ಶಾಸಕರು ಜಿಲ್ಲಾ ಹಾಗು ರಾಜ್ಯ ಮಟ್ಟದ ಅಧಿಕಾರಿಗಳಿಗೆ ಅಥವ ತಮ್ಮ ಶಕ್ತಿ ಉಪಯೋಗಿಸಿ ಸರಕಾರದ ಮಟ್ಟದಲ್ಲಿ ವರ್ಗಾವಣೆ ಮಾಡಬಹುದಿತ್ತು ಆದರೆ ಜಿ.ಪಂ ಹಾಗು ತಾ.ಪಂ ಚುನಾವಣೆ ಸಮಯದಲ್ಲಿ ತಮ್ಮ ರಾಜಕೀಯ ಲಾಭಕ್ಕಾಗಿ ಕಾರ್ಯಕರ್ತರನ್ನು ಒಕ್ಕಲೆಬ್ಬಿಸಿ ಠಾಣೆಯ ಮುಂದೆ ಪ್ರತಿಭಟನೆ ಮಾಡುವುದು ಶಾಸಕರಿಗೆ ಶೋಭೆಯಲ್ಲ ಎಂದಿದ್ದಾರೆ.
ಕಾನೂನು ವಿರೋಧಿ ಚಟುವಟಿಕೆ ನಡೆಸುವವರ ವಿರುದ್ದ ಕ್ರಮ ಜರುಗಿಸುವ ದಕ್ಷ ಪೊಲೀಸ್ ಅಧಿಕಾರಿ ರಾಘವೇಂದ್ರರನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡಬಾರದು. ಒಂದು ವೇಳೆ ಶಾಸಕರ ಒತ್ತಾಯಕ್ಕೆ ಮಣಿದು ವರ್ಗಾವಣೆ ಮಾಡಿದ್ದೇ ಆದಲ್ಲಿ ಕರವೇ ವತಿಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

ಅಭಿವೃದ್ಧಿಗಾಗಿ ಶ್ರಮಿಸಬೇಕು

0

ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಿ ನಗರದ ಅಭಿವೃದ್ದಿಗಾಗಿ ಶ್ರಮಿಸಬೇಕಿದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
2012-13 ನೇ ಸಾಲಿನ ಎಸ್‍ಎಫ್‍ಸಿ ಯೋಜನೆಯಡಿ ಸುಮಾರು 5 ಲಕ್ಷ 25 ಸಾವಿರ ರೂ ವೆಚ್ಚದಲ್ಲಿ ನಗರದ 2 ಮತ್ತು 3 ನೇ ವಾರ್ಡಿಗೆ ಸೇರುವ ಡಿಸಿಸಿ ಬ್ಯಾಂಕ್ ರಸ್ತೆಯ ಡಾಂಬರೀಕರಣ ಹಾಗು ಪೈಪ್‍ಲೈನ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಶಿಡ್ಲಘಟ್ಟ ಪುರಸಭೆಯಿಂದ ಮೇಲ್ದರ್ಜೆಗೇರಿ ನಗರಸಭೆಯಾಗಿದ್ದು ನಗರದಾದ್ಯಂತ ಉತ್ತಮ ರಸ್ತೆ, ಚರಂಡಿ, ಕುಡಿಯುವ ನೀರು, ನೈರ್ಮಲೀಕರಣ ಇನ್ನಿತರೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ನಗರಸಭೆ ಸದಸ್ಯರು ಸೇರಿದಂತೆ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದರು.
ಇದೀಗ ನಗರದ ಡಿಸಿಸಿ ಬ್ಯಾಂಕ್ ರಸ್ತೆಯಲ್ಲಿ ನಡೆಯುತ್ತಿರುವ ರಸ್ತೆ ಡಾಂಬರೀಕರಣ ಹಾಗು ಪೈಪ್‍ಲೈನ್ ಕಾಮಗಾರಿಯ ಗುಣಮಟ್ಟ ಕಾಪಾಡಿಕೊಳ್ಳಲು ಎಚ್ಚರಿಕೆವಹಿಸಿ ಕಾಲ ಕಾಲಕ್ಕೆ ಕಾಮಗಾರಿಯ ಮೇಲೆ ನಿಗಾವಹಿಸುವಂತೆ ನಾಗರೀಕರಲ್ಲಿ ಮನವಿ ಮಾಡಿದರು.
ನಗರಸಭೆ ಆಯುಕ್ತ ಹೆಚ್.ಎ.ಹರೀಶ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಿಶನ್ (ನಂದು), ನಗರಸಭೆ ಸದಸ್ಯರಾದ ಜಭೀವುಲ್ಲಾ, ಎಸ್.ರಾಘವೇಂದ್ರ, ವೆಂಕಟಸ್ವಾಮಿ, ಮುಖಂಡರಾದ ಎಸ್.ಎಂ.ರಮೇಶ್, ಜೆಇ ಪ್ರಸಾದ್, ಗುತ್ತಿಗೆದಾರ ಕೆ.ಬಿ.ಮಂಜುನಾಥ, ಪ್ರಭಾಕರ ಮತ್ತಿತರರು ಹಾಜರಿದ್ದರು.

ಗ್ರಾಮ ಪಂಚಾಯ್ತಿಯ ಅವ್ಯವಹಾರ

0

ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋಟ್ಯಾಂತರ ರೂಪಾಯಿಗಳ ಹಣವನ್ನು ಗ್ರಾಮ ಪಂಚಾಯ್ತಿಗಳ ಮೂಲಕ ಬಿಡುಗಡೆ ಮಾಡುತ್ತಿದ್ದರೂ ಕೂಡಾ ಈ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ನಾಗರೀಕರು ಆರೋಪಿಸಿದ್ದಾರೆ.
ತಾಲ್ಲೂಕಿನ ಕುಂಬಿಗಾನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಿ.ತಿಮ್ಮಸಂದ್ರ (ಟಿ.ಬುಸನಹಳ್ಳಿ) ಗ್ರಾಮದಲ್ಲಿ ರೋಟರಿ ಸಂಸ್ಥೆಯಿಂದ ನಿರ್ಮಾಣ ಮಾಡಿಕೊಟ್ಟಿರುವ ಶೌಚಾಲಯಗಳಿಗೆ ಗ್ರಾಮ ಪಂಚಾಯ್ತಿಯಿಂದ ಸ್ವಚ್ಛ ಭಾರತ್ ಮಿಷನ್‍ನ ಅಡಿಯಲ್ಲಿ 22 ಮಂದಿ ಪಲಾನುಭವಿಗಳಿಗೆ ತಲಾ 10 ಸಾವಿರ ರೂಪಾಯಿಗಳಂತೆ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದ್ದರೂ ಕೂಡಾ ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯ ವಿನಯನಂದಬಾಬು, ಫಲಾನುಭವಿಗಳನ್ನು ಬ್ಯಾಂಕಿಗೆಕರೆದುಕೊಂಡು ಹೋಗಿ ಅವರ ಖಾತೆಯಲ್ಲಿರುವ ಹಣವನ್ನು ಸಂಪೂರ್ಣವಾಗಿ ಡ್ರಾ ಮಾಡಿಸಿಕೊಂಡಿದ್ದಾರೆ ಎಂದು ಸ್ಥಳೀಯ ನಾಗರೀಕರು ಆರೋಪ ಮಾಡಿದ್ದಾರೆ.

ಶಿಡ್ಲಘಟ್ಟ ತಾಲ್ಲೂಕಿನ ಕುಂಬಿಗಾನಹಳ್ಳಿ ಗ್ರಾಮ ಪಂಚಾಯ್ತಿಯ ಬಿ.ತಿಮ್ಮಸಂದ್ರಗ್ರಾಮದಲ್ಲಿನ ಕುಡಿಯುವ ನೀರಿನ ಪೂರೈಕೆಗಾಗಿ ಮೂರು ವರ್ಷಗಳ ಹಿಂದೆ ನಿರ್ಮಾಣವಾಗಿರುವ ನೀರಿನ ಟ್ಯಾಂಕಿಗೆ ಪೈಪ್‍ಲೈನ್ ಅಳವಡಿಸದೆ ಇರುವುದು.
ಶಿಡ್ಲಘಟ್ಟ ತಾಲ್ಲೂಕಿನ ಕುಂಬಿಗಾನಹಳ್ಳಿ ಗ್ರಾಮ ಪಂಚಾಯ್ತಿಯ ಬಿ.ತಿಮ್ಮಸಂದ್ರಗ್ರಾಮದಲ್ಲಿನ ಕುಡಿಯುವ ನೀರಿನ ಪೂರೈಕೆಗಾಗಿ ಮೂರು ವರ್ಷಗಳ ಹಿಂದೆ ನಿರ್ಮಾಣವಾಗಿರುವ ನೀರಿನ ಟ್ಯಾಂಕಿಗೆ ಪೈಪ್‍ಲೈನ್ ಅಳವಡಿಸದೆ ಇರುವುದು.

ಕಳೆದ 2014-15 ನೇ ಸಾಲಿನಲ್ಲಿ ರೋಟರಿ ಸಂಸ್ಥೆಯಿಂದ ಸಿಮೆಂಟ್ ಕಾಂಕ್ರೀಟ್‍ನಲ್ಲಿ ಗೋಡೆಗಳನ್ನು ತಂದು ನಿಲ್ಲಿಸಲಾಗಿದ್ದು, ಈ ಶೌಚಾಲಯಗಳಿಗೆ ಗ್ರಾಮ ಪಂಚಾಯ್ತಿಯಿಂದ ಫಲಾನುಭವಿಗಳ ಬ್ಯಾಂಕ್‍ಖಾತೆಗೆ ಸ್ವಚ್ಚ ಭಾರತ ಮಿಷನ್‍ನಯೋಜನೆಯಡಿಯಲ್ಲಿಗ್ರಾಮ ಪಂಚಾಯ್ತಿಯ ನಡಾವಳಿ ಪುಸ್ತಕದಲ್ಲಿ ಚರ್ಚೆಗೆತಾರದೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮೌಖಿಕ ಆದೇಶದ ಮೇರೆಗೆ ತಲಾ 10000 ದಂತೆ ಜಮಾ ಮಾಡಿದ್ದಾರೆ, ಆದರೆ ಯಾವೊಬ್ಬ ಫಲಾನುಭವಿಗಳಿಗೆ ಹಣವನ್ನು ತಲುಪಿಸಿಲ್ಲ, ಶೌಚಾಲಯಗಳಿಗೆ ಪಾಯ ಹಾಕುವಾಗ 1 ಸಾವಿರ ರೂಪಾಯಿಗಳನ್ನು ಫಲಾನುಭವಿಗಳಿಂದ ತೆಗೆದುಕೊಂಡಿದ್ದಾರೆ, ಗ್ರಾಮದಲ್ಲಿ ಒಂದು ಚರಂಡಿಯನ್ನೂ ಮಾಡಿಲ್ಲ, ರಸ್ತೆಗಳಿಗೆ ಕಾಂಕ್ರೀಟ್ ಹಾಕಿಲ್ಲ, 2013-14 ನೇ ಸಾಲಿನಲ್ಲಿ ನಿರ್ಮಾಣ ಮಾಡಲಾಗಿರುವ ಮೇಲ್ಮಟ್ಟದ ನೀರಿನ ಟ್ಯಾಂಕಿಗೆ ಇದುವರೆಗೂ ಪೈಪ್‍ಲೈನ್ ಅಳವಡಿಸಿಲ್ಲ, ಈ ಟ್ಯಾಂಕ್ ಶಿಥಿಲಾವಸ್ಥೆಗೆ ತಲುಪಿದೆ, ಇರುವ ಒಂದು ನೀರಿನ ಟ್ಯಾಂಕಿನ ಸುತ್ತಲೂ ಗಿಡಗಂಟಿಗಳು ಬೆಳೆದು ನಿಂತಿದ್ದು, ಸ್ವಚ್ಛಗೊಳಿಸಿಲ್ಲ, ಮನೆಗಳ ಪಕ್ಕದಲ್ಲೆ ನಿಂತಿರುವ ನೀರಿನಿಂದ ಉತ್ಪತ್ತಿಯಾಗುತ್ತಿರುವ ಸೊಳ್ಳೆಗಳಿಂದಾಗಿ ದಿನನಿತ್ಯ ಆಸ್ಪತ್ರೆಗಳಿಗೆ ಅಲೆದಾಡುವಂತಾಗಿದೆ ಇಷ್ಟೆಲ್ಲಾ ಪರಿಸ್ಥಿತಿಗಳಿದ್ದರೂ ಕೂಡಾ ಯಾವುದೇ ಅಧಿಕಾರಿಗಳಾಗಲಿ, ಸ್ಥಳೀಯ ಸದಸ್ಯರಾಗಲಿ ಗಮನಹರಿಸಿಲ್ಲವೆಂದು ಎಂದು ಗ್ರಾಮಸ್ಥರಾದ ರಾಮಕೃಷ್ಣಪ್ಪ, ಅಶೋಕ್, ಮುಂತಾದವರು ಆರೋಪಿಸಿದ್ದಾರೆ.
ನಮ್ಮ ಮನೆಯ ಹತ್ತಿರ ರೋಟರಿಯವರು ಶೌಚಾಲಯ ಕಟಿಸಿದ್ದಾರೆ, ಅದಕ್ಕೆ ನಮ್ಮ ಬ್ಯಾಂಕ್‍ಖಾತೆಗೆ 10 ಸಾವಿರ ಬಂದಿತ್ತು, ಆದರೆ ನಮಗೆ ಒಂದು ರೂಪಾಯಿ ಕೂಡಾ ಕೊಟ್ಟಿಲ್ಲ, ಎಲ್ಲಾ ಸದಸ್ಯ ಬಾಬು ಅವರೇ ತೆಗೆದುಕೊಂಡಿದ್ದಾರೆ.
| ಚಂದ್ರಮ್ಮ, ಬಿ.ತಿಮ್ಮಸಂದ್ರಗ್ರಾಮದ ನಿವಾಸಿ.
ಶಿಡ್ಲಘಟ್ಟ ತಾಲ್ಲೂಕಿನ ಕುಂಬಿಗಾನಹಳ್ಳಿ ಗ್ರಾಮ ಪಂಚಾಯ್ತಿಯ ಬಿ.ತಿಮ್ಮಸಂದ್ರಗ್ರಾಮದಲ್ಲಿನ ರೋಟರಿ ಸಂಸ್ಥೆಯಿಂದ ಉಚಿತವಾಗಿ ನಿರ್ಮಾಣವಾಗಿರುವ ಶೌಚಾಲಯಗಳಿಗೆ ತಲಾ 10 ಸಾವಿರ ರೂಪಾಯಿಗಳಂತೆ ಖಾತೆಗಳಿಗೆ ನೀಡಿ ಫಲಾನುಭವಿಗಳಿಂದ ವಾಪಸ್ಸು ಪಡೆದುಕೊಂಡಿದ್ದಾರೆಂದು ಶೌಚಾಲಯ ತೋರಿಸುತ್ತಿರುವ ಗ್ರಾಮಸ್ಥರು.
ಶಿಡ್ಲಘಟ್ಟ ತಾಲ್ಲೂಕಿನ ಕುಂಬಿಗಾನಹಳ್ಳಿ ಗ್ರಾಮ ಪಂಚಾಯ್ತಿಯ ಬಿ.ತಿಮ್ಮಸಂದ್ರಗ್ರಾಮದಲ್ಲಿನ ರೋಟರಿ ಸಂಸ್ಥೆಯಿಂದ ಉಚಿತವಾಗಿ ನಿರ್ಮಾಣವಾಗಿರುವ ಶೌಚಾಲಯಗಳಿಗೆ ತಲಾ 10 ಸಾವಿರ ರೂಪಾಯಿಗಳಂತೆ ಖಾತೆಗಳಿಗೆ ನೀಡಿ ಫಲಾನುಭವಿಗಳಿಂದ ವಾಪಸ್ಸು ಪಡೆದುಕೊಂಡಿದ್ದಾರೆಂದು ಶೌಚಾಲಯ ತೋರಿಸುತ್ತಿರುವ ಗ್ರಾಮಸ್ಥರು.

ರೋಟರಿ ಸಂಸ್ಥೆಯಿಂದ ಬಿ.ತಿಮ್ಮಸಂದ್ರಗ್ರಾಮದಲ್ಲಿನ ಪ್ರತಿಯೊಂದು ಮನೆಗೂ ಸ್ವಚ್ಚತೆಯದೃಷ್ಟಿಯಿಂದ ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ, ಆದರೆ ದಾಖಲಾತಿಗಳು ಸರಿಯಾಗಿದ್ದ 22 ಕುಟುಂಬಗಳಿಗೆ ತಲಾ 10 ಸಾವಿರ ರೂಪಾಯಿಗಳಂತೆ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ ಆದೇಶದ ಮೇರೆಗೆ ಸ್ವಚ್ಚ ಭಾರತ್ ಮಿಷನ್‍ನ ಯೋಜನೆಯಡಿಯಲ್ಲಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದ್ದೇವೆ, ಆದರೆ ಪಂಚಾಯ್ತಿಯಲ್ಲಿ ನಡಾವಳಿ ಪುಸ್ತಕದಲ್ಲಿ ನಮೂದಾಗಿಲ್ಲ, ಪುನಃ ಸದಸ್ಯರು ಹಣವನ್ನು ವಾಪಸ್ಸುತೆಗೆದುಕೊಂಡಿರುವ ಬಗ್ಗೆ ಮಾಹಿತಿಯಿಲ್ಲ.
| ನಯಾನಾ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ. ಕುಂಬಿಗಾನಹಳ್ಳಿ ಗ್ರಾ.ಪಂ.
ನಾನು ಸದಸ್ಯನಾದ ಮೇಲೆ ರೋಟರಿ ಸಂಸ್ಥೆಯವರನ್ನು ಕರೆದುಕೊಂಡು ಬಂದು ಪ್ರತಿಯೊಂದು ಮನೆಗಳಿಗೆ ಶೌಚಾಲಯಗಳನ್ನು ಕಟ್ಟಿಸಿಕೊಟ್ಟಿದ್ದೇವೆ, ಸಿ.ಇ.ಓ. ಆದೇಶದಂತೆ ಸ್ವಚ್ಛ ಭಾರತ ಮಿಷನ್‍ನ ಅಡಿಯಲ್ಲಿ 10 ಸಾವಿರ ರೂಪಾಯಿಗಳ ಹಣವನ್ನು ಅವರ ಖಾತೆಗಳಿಗೆ ಜಮಾ ಮಾಡಿಸಿ, ಅದೇ ಹಣವನ್ನುಗ್ರಾಮದಲ್ಲಿ ಡ್ರೈನ್‍ಗಳನ್ನು ಮಾಡಲು ತೊಡಗಿಸಲಾಗುತ್ತಿದೆ, ಈ ಬಗ್ಗೆ ಪಂಚಾಯ್ತಿಯಲ್ಲಿ ರೇಜುಲೇಷನ್ ಮಾಡಲಾಗಿದೆ.
| ವಿನಯನಂದಬಾಬು, ಸ್ಥಳೀಯ ಗ್ರಾ.ಪಂ.ಸದಸ್ಯ

ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರಗೆಳೆಯಬೇಕು

0

ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರಗೆಳೆಯುವಂತಹ ಪ್ರಯತ್ನಗಳಾಗಬೇಕು ಎಂದು ಸಿ.ಡಿ.ಪಿ.ಓ.ಲಕ್ಷ್ಮೀದೇವಮ್ಮ ಹೇಳಿದರು.
ನಗರದ ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಾಲಭವನ ಸೊಸೈಟಿ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ 2015-16 ನೇ ಸಾಲಿನ 9 ರಿಂದ 16 ವರ್ಷದೊಳಗಿನ ಮಕ್ಕಳಿಗೆ ತಾಲ್ಲೂಕು ಮಟ್ಟದ ಕಲಾಶ್ರೀ ಶಿಬಿರವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಪ್ರತಿಯೊಂದು ಮಗುವಿನಲ್ಲೂ ಒಂದೊಂದು ಪ್ರತಿಭೆಗಳು ಅಡಗಿರುತ್ತವೆ, ಅಂತಹ ಪ್ರತಿಭೆಗಳನ್ನು ಹೊರತೆಗೆಯಲು ಇರುವಂತಹ ಅವಕಾಶಗಳನ್ನು ಸದ್ಭಳಕೆ ಮಾಡಿಕೊಂಡು ಅವರಲ್ಲಿರುವ ಕಲಾಪ್ರಾಕಾರಗಳನ್ನು, ವೈಜ್ಞಾನಿಕವಾದ ಚಿಂತನೆಗಳನ್ನು ಹೊರಗೆಳೆಯುವಂತಹ ಪ್ರಯತ್ನವನ್ನು ಶಾಲಾ ಹಂತಗಳಲ್ಲೆ ಮಾಡಿದಾಗ ಅವರು, ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟಗಳಲ್ಲಿ ಗುರ್ತಿಸಿಕೊಳ್ಳಲು ಸಾಧ್ಯವಾಗುತ್ತದೆ, ಅನೇಕ ಮಕ್ಕಳಲ್ಲಿ ಪ್ರತಿಭೆಗಳಿದ್ದರೂ ಕೂಡಾ ಆರ್ಥಿಕವಾದ ಸಮಸ್ಯೆಗಳಿಂದಾಗಿ ಹೊರಪಡಿಸಲು ಸಾದ್ಯವಿಲ್ಲದ ಪರಿಸ್ಥಿತಿಯಲ್ಲಿದ್ದಾರೆ ಅಂತಹ ಮಕ್ಕಳನ್ನು ಗುರ್ತಿಸಬೇಕು, ಆಧುನಿಕತೆ ಬೆಳೆದಂತೆಲ್ಲಾ ಮಕ್ಕಳಲ್ಲಿ ಹೊಸ ಹೊಸ ವಿಚಾರಗಳನ್ನು ಕಲಿಯಬೇಕೆನ್ನುವಂತಹ ಆಸಕ್ತಿ ಕಡಿಮೆಯಾಗುತ್ತಿದ್ದು, ಪಾಶ್ಚಿಮಾತ್ಯ ಸಂಸ್ಕøತಿಯತ್ತ ಒಲವು ತೋರುತ್ತಿದ್ದಾರೆ, ಗ್ರಾಮೀಣ ಭಾಗದ ಕ್ರೀಡೆಗಳ ಬದಲಾಗಿ, ಕ್ರಿಕೆಟ್‍ನಂತಹ ಕ್ರೀಡೆಗಳ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ, ಆದ್ದರಿಂದ ಪೋಷಕರೂ ಕೂಡಾ ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಬೇಕು ಎಂದರು.
ಶಿಕ್ಷಣ ಇಲಾಖೆಯ ಬೈರಾರೆಡ್ಡಿ, ಮುಖ್ಯಶಿಕ್ಷಕ ಕೃಷ್ಣಮೂರ್ತಿ, ಸಂದೀಪ್, ನಿರೀಕ್ಷಕಿ ಗಿರಿಜಾಂಬಿಕೆ, ಶಾಂತಾ ಜೀದಾಳೆ, ರಾಧಮ್ಮ, ಬಾಸ್ಕರ್, ಅರುಣ್, ಪ್ರಕಾಶ್, ಮುಂತಾದವರು ಹಾಜರಿದ್ದರು.

ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

0

ಹೈದರಾಬಾದ್‍ನ ವಿವಿಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿ ರೋಹಿತ್‍ವೆಮುಲಾ ಅವರ ಸಾವಿಗೆ ಕಾರಣವಾಗಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರರ ಮೂಲಕ ಮನವಿ ಪತ್ರವನ್ನು ಸಲ್ಲಿಸಿದರು.
ನಗರದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಅವರು, ದೇಶದಲ್ಲಿ ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ, ಕಳೆದ ಹತ್ತು ವರ್ಷಗಳಲ್ಲಿ ಹೈದರಾಬಾದ್ ವಿವಿಯಲ್ಲಿ ಸಾವನ್ನಪ್ಪಿರುವ ವಿದ್ಯಾರ್ಥಿಗಳ ಸಂಖ್ಯೆ 08 ಕ್ಕೆ ಏರಿಕೆಯಾಗಿದ್ದರೂ ಕೂಡಾ ಯಾವುದೇ ಕ್ರಮಕ್ಕೆ ಮುಂದಾಗಿಲ್ಲದ ವಿವಿಯ ಉಪಕುಲಪತಿಗಳನ್ನು ಕೂಡಲೇ ವಜಾಗೊಳಿಸಿ, ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು, ದಲಿತ ಸಮುದಾಯದ ಬಗ್ಗೆ ಕೀಳಾಗಿ ಮಾತನಾಡುತ್ತಿರುವ ಕೇಂದ್ರ ಸಚಿವರಾದ ಸ್ಮøತಿ ಇರಾನಿ ಹಾಗೂ ಬಂಡಾರು ದತ್ತಾತ್ರೇಯ ಅವರನ್ನು ಕೂಡಲೇ ಸಂಪುಟದಿಂದ ಕೈ ಬಿಡಬೇಕು, ದೇಶದಲ್ಲಿನ ದಲಿತರಿಗೆ ಸೂಕ್ತ ರಕ್ಷಣೆಯನ್ನು ಒದಗಿಸಬೇಕು, ವಿದ್ಯಾರ್ಥಿ ರೋಹಿತ್‍ನ ಆತ್ಮಹತ್ಯೆಯ ಬಗ್ಗೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರೂ ಕೂಡಾ ಅವರ ಮೇಲೆ ಗೂಂಡಾಗಿರಿ ಮಾಡಿ, ಪೋಷಕರು ಹಾಗು ವಿದ್ಯಾರ್ಥಿಗಳನ್ನು ಅಂತ್ಯ ಸಂಸ್ಕಾರದಿಂದ ಹೊರಗಿಟ್ಟು ಸಂಸ್ಕಾರ ನಡೆಸಿರುವ ಪೊಲೀಸರ ಮೇಲೆಯೂ ಸರ್ಕಾರಗಳು ಸೂಕ್ತ ಕ್ರಮ ಜರುಗಿಸಬೇಕು, ಪೊಲೀಸರೇ ಅಂತ್ಯಕ್ರಿಯೆ ನಡೆಸಲು ಕಾರಣವೇನು ಎಂಬ ಸತ್ಯವನ್ನು ಬಹಿರಂಗ ಪಡಿಸಬೇಕು, ಸ್ಥಳೀಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ವಿದ್ಯಾರ್ಥಿಯ ಸಾವಿಗೆ ಕಾರಣವಾಗಿರುವವರ ಮೇಲೆ ಕಾನೂನು ಕ್ರಮ ಜರುಗಿಸಿ ದಲಿತರ ಮಕ್ಕಳು ನಿರ್ಭಿತಿಯಿಂದ ವ್ಯಾಸಂಗ ಮಾಡಿ, ಸಮಾಜದಲ್ಲಿನ ಎಲ್ಲಾ ಸಮುದಾಯಗಳೊಟ್ಟಿಗೆ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಎಂದು ಒತ್ತಾಯಿಸಿದರು.
ಮನವಿ ಪತ್ರವನ್ನು ಸ್ವೀಕರಿಸಿದ ತಹಶೀಲ್ದಾರ್ ಕೆ.ಎಂ.ಮನೋರಮಾ ಮಾತನಾಡಿ, ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಿಕೊಡಲಾಗುತ್ತದೆ ಎಂದರು.
ಜಿಲ್ಲಾ ಸಂಚಾಲಕ ಸಿ.ಎಂ.ಮುನಿಯಪ್ಪ, ತಾಲ್ಲೂಕು ಸಂಚಾಲಕರಾದ ಎನ್.ಎ.ವೆಂಕಟೇಶ್, ಲಕ್ಷ್ಮೀನಾರಾಯಣ, ಹುಜುಗೂರು ವೆಂಕಟೇಶ್, ಚಲಪತಿ, ಮುನಿರಾಜು, ಡಿ.ಎಂ.ವೆಂಕಟೇಶ್, ಮಟ್ಟಿನಾರಾಯಣಸ್ವಾಮಿ, ನರಸಿಂಹಪ್ಪ, ದೊಡ್ಡತಿರುಮಳಪ್ಪ, ಮುಂತಾದವರು ಹಾಜರಿದ್ದರು.

ಪೋಲೀಸ್‍ರ ದುರ್ವರ್ತನೆ

0

ಪೊಲೀಸ್ ಠಾಣೆಗೆ ದೂರು ನೀಡಲು ಬರುವಂತಹ ನಾಗರೀಕರೊಂದಿಗೆ ಉತ್ತಮವಾದ ನಡುವಳಿಕೆಯಿಂದ ವರ್ತನೆ ಮಾಡದೆ, ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿರುವ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ ಜಿ.ಕೆ.ರಾಘವೇಂದ್ರ ಅವರನ್ನು ಕೂಡಲೇ ವರ್ಗಾವಣೆ ಮಾಡುವಂತೆ ಒತ್ತಾಯಿಸಿ ದಿಬ್ಬೂರಹಳ್ಳಿ ಠಾಣೆಯ ಮುಂಭಾಗದಲ್ಲಿ ಶಾಸಕ ಎಂ.ರಾಜಣ್ಣ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿ.ಎಸ್.ಐ. ಜಿ.ಕೆ. ರಾಘವೇಂದ್ರ, ಠಾಣೆಗೆ ಹೋಗುವಂತಹ ನಾಗರೀಕರೊಂದಿಗೆ ತೋರುತ್ತಿರುವ ವರ್ತನೆ ಸರಿಯಾಗಿಲ್ಲ, ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುವವರೊಂದಿಗೆ ಶಾಮೀಲಾಗಿ ಹಣ ಮಾಡುತ್ತಿದ್ದಾರೆ, ಠಾಣೆಗೆ ದೂರು ನೀಡಲು ಹೋಗುವವರ ಮೇಲೆ ವಿನಾಕಾರಣ ಕೇಸುಗಳನ್ನು ದಾಖಲಿಸಿ, ಅವಾಚ್ಯಶಬ್ದಗಳಿಂದ ನಿಂದಿಸುವುದನ್ನು ಮಾಡುತ್ತಿದ್ದಾರೆ, ದೂರು ನೀಡಲು ಬರುವವರಿಗೆ ಹಣ ನೀಡುವಂತೆ ಒತ್ತಾಯಿಸುತ್ತಾರೆ, ಹಣ ನೀಡಲು ನಿರಾಕರಿಸುವವರನ್ನು ಠಾಣೆಗೆ ಕರೆದುಕೊಂಡು ಬಂದು ಬಟ್ಟೆಗಳನ್ನು ಬಿಚ್ಚಿ ದೈಹಿಕವಾಗಿ ಹಿಂಸೆ ನೀಡುತ್ತಿದ್ದಾರೆ, ಇದನ್ನು ಕೇಳಲು ಹೋಗುವಂತಹ ನಾಯಕರೊಂದಿಗೆ ಉದ್ದಟತನವಾಗಿ ನಡೆದುಕೊಳ್ಳುತ್ತಿದ್ದಾರೆ, ಅಮಾಯಕ ಮಹಿಳೆಯರ ಮೇಲೆ ಕೇಸುಗಳನ್ನು ದಾಖಲಿಸಿದ್ದಾರೆ, ವೆಂಕಟೇಶ್ ಎಂಬಾತನಿಗೆ ದೈಹಿಕವಾಗಿ ಹೊಡೆದಿರುವ ಪರಿಣಾಮವಾಗಿ ಇಂದಿಗೂ ಕೂಡಾ ಆತ ಮತ್ತೊಬ್ಬರ ಸಹಾಯದಿಂದ ನಡೆದಾಡುವಂತಾಗಿದ್ದು, ಜೀವನಕ್ಕಾಗಿ ಮತ್ತೊಬ್ಬರನ್ನು ಅವಲಂಬಿಸಬೇಕಾಗಿದೆ, ಆದ್ದರಿಂದ ಸಾರ್ವಜನಿಕ ವಲಯದಲ್ಲಿ ಉತ್ತಮವಾದ ಬಾಂಧವ್ಯವನ್ನು ಇಟ್ಟುಕೊಳ್ಳದ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕು ಎಂದು ಪ್ರತಿಭಟನೆಕಾರರು ಒತ್ತಾಯಿಸಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಸಂವಿಧಾನಬದ್ಧವಾಗಿ ಎಲ್ಲಾ ಜಾತಿ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕಾಗಿರುವ ಅಧಿಕಾರಿ ಜನರೊಂದಿಗೆ ಈ ರೀತಿಯಾಗಿ ವರ್ತನೆ ಮಾಡುತ್ತಿರುವುದು ಶೋಚನೀಯವಾದ ವಿಚಾರವಾಗಿದೆ, ಕಳೆದ ಅನೇಕ ಬಾರಿ ನಾನೇ ಸ್ವತಃ ದೂರವಾಣಿಯ ಮೂಲಕ ಕರೆ ಮಾಡಿ, ನಾಗರೀಕರ ಬಟ್ಟೆ ಬಿಚ್ಚಿಸಿ ನಿಲ್ಲಿಸಿರುವ ಬಗ್ಗೆ ವಿಚಾರಿಸಿದಾಗ ನನಗೆ ಸುಳ್ಳು ಹೇಳಿದ್ದು, ದೈಹಿಕವಾಗಿ ಬಹಳಷ್ಟು ಹಿಂಸೆ ನೀಡಿದ್ದಾರೆ, ಇವರು ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರಾ ಅಥವಾ ರಾಜಕೀಯ ಪಕ್ಷಗಳ ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರಾ ಎಂಬುದನ್ನು ಅಧಿಕಾರಿಗಳು ಬಹಿರಂಗ ಪಡಿಸಬೇಕು, ಕೂಡಲೇ ಜನರಿಂದ ತಿರಸ್ಕರಿಸಲ್ಪಟ್ಟಂತಹ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕು ಎಂದರು.
ಸ್ಥಳಕ್ಕೆ ಬೇಟಿ ನೀಡಿದ್ದ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಚೈತ್ರಾ, ಕೂಡಲೇ ಅಧಿಕಾರಿಯನ್ನು ರಜೆಯ ಮೇಲೆ ಕಳುಹಿಸಿ, ಇಲಾಖೆಯ ನಿಯಮದಂತೆ ತನಿಖೆ ನಡೆಸಿ, ಅವರ ಮೇಲೆ ಬಂದಿರುವ ಆರೋಪಗಳು ಸಾಬೀತಾದರೆ ಕೂಡಲೇ ಅವರ ಮೇಲೆ ಕ್ರಮ ಜರುಗಿಸಲಾಗುತ್ತದೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಇದೇ ವೇಳೆ ಪಿ.ಎಸ್.ಐ.ರಾಘವೇಂದ್ರ ಅವರಿಂದ ಭಾದಿತರಾಗಿದ್ದಾರೆನ್ನಲಾದ ಕೆಲವು ಮಂದಿ ತಮಗಾಗಿರುವ ಅನ್ಯಾಯವನ್ನು ಬಹಿರಂಗವಾಗಿ ಹೇಳಿಕೊಂಡು ಅಧಿಕಾರಿಯ ವರ್ಗಾವಣೆಗೆ ಒತ್ತಾಯಿಸಿದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕ ಪಿ.ಶಿವಾರೆಡ್ಡಿ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಡಾ.ಧನಂಜಯರೆಡ್ಡಿ, ಡಾ.ಜಯರಾಮರೆಡ್ಡಿ, ಡಿ.ಬಿ.ವೆಂಕಟೇಶ್, ರಾಮಲಿಂಗಾರೆಡ್ಡಿ, ಬಳುವನಹಳ್ಳಿ ರಘುನಾಥ್, ಜೆ.ಎಂ.ವೆಂಕಟೇಶ್, ನಂಜಪ್ಪ, ಗಂಜಿಗುಂಟೆ ಮೂರ್ತಿ, ಮುನಿರೆಡ್ಡಿ, ವೈ.ಹುಣಸೇನಹಳ್ಳಿ ಬೇಕರಿ ಮಂಜುನಾಥ್, ವಿಜಯಕುಮಾರ್, ಸೇರಿದಂತೆ ನೂರಾರು ಮಂದಿ ನಾಗರೀಕರು ಭಾಗವಹಿಸಿದ್ದರು.

ಇ-ಹರಾಜು ತರಬೇತಿ ಕಾರ್ಯಾಗಾರ

0

ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸಿಕೊಂಡಿರುವ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಪ್ರಾರಂಭವಾಗಲಿರುವ ಇ-ಹರಾಜು ಪ್ರಕ್ರಿಯೆಯನ್ನು ರೀಲರ್‍ಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಪ್ರಭಾಕರ್ ಹೇಳಿದರು.
ನಗರದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೀಲರ್‍ಗಳಿಗೆ ಆಯೋಜನೆ ಮಾಡಲಾಗಿದ್ದ ಇ-ಹರಾಜು ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ರೈತರ ಅನೇಕ ವರ್ಷಗಳ ಬೇಡಿಕೆಯಾಗಿದ್ದ ಇ-ಹರಾಜಿನ ಪದ್ದತಿಯನ್ನು ಅಳವಡಿಸಿರುವುದರಿಂದ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ, ರೈತರು ಬೆಳೆದಂತಹ ಗೂಡಿನ ಗುಣಮಟ್ಟದ ಆಧಾರದ ಮೇಲೆ ಬೆಲೆಯನ್ನು ನಿಗದಿಪಡಿಸಲು ಸಾಧ್ಯವಾಗುತ್ತದೆ, ಇ-ಹರಾಜು ಮೂಲಕ ರೀಲರ್‍ಗಳು ತಮ್ಮ ಮೊಬೈಲ್‍ಗಳ ಮೂಲಕ ನೀಡಿದಂತಹ ಬೆಲೆಯನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರ ರೈತರಿಗಿದ್ದು, ರೈತರು ಬೆಲೆಯನ್ನು ತಿರಸ್ಕರಿಸಿದರೆ, ಮೂರು ಬಾರಿ ಹರಾಜಿಗೆ ಇಡಲಾಗುತ್ತದೆ, ಮಾರುಕಟ್ಟೆಯ ಆವರಣದಲ್ಲಿ ವೈ.ಫೈ. ವ್ಯವಸ್ಥೆಯಿದ್ದು, ನಿಗದಿತ ಸಮಯದಲ್ಲಿ ಹರಾಜು ಮುಗಿದು, ರೈತರಿಗೆ ಬರಬೇಕಾದ ಹಣವನ್ನು ತಲುಪಿಸಲಾಗುತ್ತದೆ, ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ರೈತರಿಗೆ ಅನುಕೂಲವಾಗಲಿದೆ.
ಏನಿದು ಇ-ಹರಾಜು
ರೈತರು ತರುವಂತಹ ಗೂಡಿಗೆ ಗೇಟ್‍ನಲ್ಲಿ ಟೋಕನ್ ತೆಗೆದುಕೊಂಡು ಟೋಕನ್‍ನಲ್ಲಿ ನಿಗದಿಪಡಿಸಿರುವ ಬಿನ್‍ಗಳಿಗೆ ಗೂಡನ್ನು ತರುತ್ತಾರೆ, ಹರಾಜು ಪ್ರಾರಂಭವಾಗುವುದಕ್ಕಿಂತ ಮುಂಚೆ ಲೈಸನ್ಸ್ ಹೊಂದಿರುವ ರೀಲರುಗಳು ಎಲ್ಲಾ ಲಾಟುಗಳನ್ನು ಪರಿಶೀಲನೆ ಮಾಡಿರುತ್ತಾರೆ, ನಂತರ ಅವರಿಗೆ ನಿರ್ಧಿಷ್ಟವಾದ ಸ್ಥಳಾವಕಾಶವನ್ನು ಮಾಡಿಕೊಡಲಾಗಿರುತ್ತದೆ, ಹರಾಜು ಪ್ರಕ್ರಿಯೆ ಪ್ರಾರಂಭವಾದಾಗ ವೈ.ಫೈ. ಚಾಲನೆ ಮಾಡಲಾಗುತ್ತದೆ, ರೀಲರ್‍ಗಳು ತಮ್ಮ ಮೊಬೈಲ್‍ಗಳ ಮೂಲಕ ವೈ.ಫೈ. ಆನ್ ಮಾಡಿಕೊಂಡು ತಮಗೆ ನೀಡಿರುವ ಪಾಸ್‍ವರ್ಡ್ ಮೂಲಕ ಹರಾಜು ಪ್ರಕ್ರಿಯೆಗೆ ಎಂಟ್ರಿ ಆಗುತ್ತಾರೆ, ಯಾವ ಲಾಟು ಹರಾಜು ನಡೆಯುತ್ತಿದೆ, ಎಷ್ಟು ಬೆಲೆಗೆ ಹರಾಜಾಗುತ್ತಿದೆ, ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ, ರೀಲರ್‍ಗಳು ತಮ್ಮ ಬೆಲೆಯನ್ನು ನಿಗದಿಪಡಿಸುತ್ತಾರೆ, ನಿಗದಿ ಪಡಿಸಿದ ಬೆಲೆಗಿಂತ ಹೆಚ್ಚಿನ ಬೆಲೆ ಬಾರದೆ ಇದ್ದಾಗ ಹರಾಜು ಮುಗಿದು, ರೈತರ ಅಭಿಪ್ರಾಯ ಕೇಳಲಾಗುತ್ತದೆ ರೈತರು ಹರಾಜಿಗೆ ಒಪ್ಪಿಗೆ ನೀಡಿದರೆ ಬೆಲೆಯನ್ನು ಖಾಯಂ ಮಾಡಲಾಗುತ್ತದೆ, ಒಪ್ಪಿಗೆ ನೀಡದಿದ್ದರೆ ಮತ್ತೊಮ್ಮೆ ಹರಾಜಿಗೆ ಇಡಲಾಗುತ್ತದೆ, ಹರಾಜಾದ ಕೂಡಲೇ ತೂಕ ಮಾಡಿ, ರೈತರಿಗೆ ಹಣವನ್ನು ನೀಡಿ ಕಳುಹಿಸಲಾಗುವ ವ್ಯವಸ್ಥೆಯಾಗಿದೆ.
ಉಪನಿರ್ದೆಶಕರಾದ ರತ್ನಯ್ಯಶೆಟ್ಟಿ, ವಿಜಯಪುರ ಮಾರುಕಟ್ಟೆಯ ಉಪನಿರ್ದೇಶಕ ದಾದಾನೂರ್, ರೇಷ್ಮೆ ಹಿತರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಮಳ್ಳೂರು ಶಿವಣ್ಣ, ರೈತ ಸಂಘದ ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ವಿಸ್ತರಣಾಧಿಕಾರಿ ನಾರಾಯಣಸ್ವಾಮಿ, ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ್ದ ಅಧಿಕಾರಿಗಳು ರೀಲರ್‍ಗಳು ಭಾಗವಹಿಸಿದ್ದರು.

ಕಾಂಗ್ರೆಸ್ ಭವನದಲ್ಲಿ ಮುಖಂಡರ ಸಭೆ

0

ಕಾಂಗ್ರೆಸ್‍ನಲ್ಲಿ ಭಿನ್ನಮತವಿದೆ ಇದರಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆಂಬದು ಜೆಡಿಎಸ್ ಮುಖಂಡರ ಭ್ರಮೆ, ಪಕ್ಷದಿಂದ ಎಲ್ಲಾ ಕ್ಷೇತ್ರಗಳಿಗೆ ತಲಾ ಒಬ್ಬರಂತೆ ಅಭ್ಯರ್ಥಿಗಳಿರುತ್ತಾರೆ, ಗೆಲುವು ನಮ್ಮದೇ ಎಂದು ಕೆ.ಪಿ.ಸಿ.ಸಿ.ಉಪಾಧ್ಯಕ್ಷ ವಿ.ಮುನಿಯಪ್ಪ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಯ ಹಿನ್ನೆಲೆಯಲ್ಲಿ ಆಯೋಜನೆ ಮಾಡಲಾಗಿದ್ದ ಗ್ರಾಮ ಪಂಚಾಯ್ತಿವಾರು ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ಮುಂಬರುವ ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಎಲ್ಲಾ ಕ್ಷೇತ್ರಗಳಿಗೂ ಕಾರ್ಯಕರ್ತರು ಸೂಚಿಸುವ ಅಭ್ಯರ್ಥಿಗಳಿಂದಲೇ ನಾಮಪತ್ರಗಳು ಸಲ್ಲಿಕೆಯಾಗಲಿವೆ, ಗೆಲ್ಲುವಂತಹ ಸಾಮಥ್ರ್ಯವಿರುವ ಜನಪರ ಕಾಳಜಿಯನ್ನು ಹೊಂದಿರುವಂತಹವರನ್ನು ಮುಖಂಡರು ಹಾಗೂ ಕಾರ್ಯಕರ್ತರು ಆಯ್ಕೆ ಮಾಡಬೇಕು, ಕಾಂಗ್ರೆಸ್‍ನಲ್ಲಿ ಭಿನ್ನಮತವಿಲ್ಲ, ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳು ಗೊತ್ತಿಲ್ಲದವರು, ಗುಂಪುಗಾರಿಕೆ ಮಾಡಿ, ನಾಯಕರಾಗಲು ಯತ್ನಿಸುತ್ತಿದ್ದಾರೆ, ಇದ್ಯಾವುದಕ್ಕೂ ಕಿವಿಗೊಡದೆ ಪಕ್ಷದ ನಿಷ್ಟಾವಂತ ಕಾರ್ಯಕರ್ತರು ಅಧಿಕೃತ ಪಕ್ಷದ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಬೇಕು, 23 ನೇ ತಾರೀಖಿನಿಂದ ಗಂಜಿಗುಂಟೆ, ಚಿಲಕಲನೇರ್ಪು, ದಿಬ್ಬೂರಹಳ್ಳಿ, ಅಬ್ಲೂಡು, ಚೀಮಂಗಲ, ಮತ್ತು ಜಂಗಮಕೋಟೆ ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳು ಹಾಗೂ ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳ ವ್ಯಾಪ್ತಿಯ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯನ್ನು ಕರೆದು ಆಕಾಂಕ್ಷಿಗಳ ಪಟ್ಟಿಯನ್ನು ತಯಾರಿಸಲಾಗುತ್ತದೆ ಎಂದರು.
ಬೆಳೆಸಿದ ನಾಯಕರು ಎದುರಾಗಿದ್ದಾರೆ
ಅನೇಕ ವರ್ಷಗಳು ತಪಸ್ಸು ಮಾಡಿದಂತೆ ಸಂಪಾದನೆ ಮಾಡಿಕೊಂಡಿದ್ದ ರಾಜಕೀಯವನ್ನು ಧಾರೆಯೆರೆದು ಬೆಳೆಸಿದ ನಾಯಕರು ಇಂದು ಎದುರಾಗಿ ಅವರು ಚೆನ್ನಾಗಿದ್ದಾರೆ, ಆದರೆ ನಾವೇ ಬೆಳೆಸಿದ ನಾಯಕರು ಎದುರಾದಾಗ ಆಗುತ್ತಿರುವ ನೋವನ್ನು ತಡೆದುಕೊಳ್ಳಲಾಗುತ್ತಿಲ್ಲ, ಅದನ್ನು ವಿವರಿಸಲು ಸಾಧ್ಯವಿಲ್ಲ, ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳು ವೈಯಕ್ತಿಕವಾಗಿದ್ದು, ಪಕ್ಷದ ಹಿತದೃಷ್ಟಿಯಿಂದ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಕೆಲಸ ಮಾಡಬೇಕು, ನಾವೆಲ್ಲರೂ ಒಂದಾಗುತ್ತೇವೆ, ಒಂದಾಗಿ ಕೆಲಸ ಮಾಡುತ್ತೇವೆ. ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ಟಿಕೆಟ್ ಪಡೆಯಬೇಕಾದರೆ ಸಾಮಾನ್ಯ/ಹಿಂದುಳಿದ/ಎಸ್.ಸಿ/ಎಸ್.ಟಿ. ಅಭ್ಯರ್ಥಿಗೆ ಜಿಲ್ಲಾ ಪಂಚಾಯ್ತಿಗೆ 10,000 ಮಹಿಳೆಯರಿಗೆ 5000, ತಾಲ್ಲೂಕು ಪಂಚಾಯ್ತಿಗೆ 5000, ಮಹಿಳೆಯರಿಗೆ 2500, ರೂಗಳನ್ನು ಪಕ್ಷಕ್ಕೆ ಠೇವಣಿ ಇಡಬೇಕು. ಎಂದರು.
ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಶ್ರೀನಿವಾಸ್, ಸಾದಲಿ ಜೈಪ್ರಕಾಶ್, ಕೆ.ಗುಡಿಯಪ್ಪ, ಜಂಗಮಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಂ.ಮುನಿಯಪ್ಪ, ತಾ.ಪಂ.ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಸದಸ್ಯ ವೇಣುಗೋಪಾಲ್, ಶ್ರೀನಾಥ್, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಚೀಮನಹಳ್ಳಿ ಗೋಪಾಲ್, ಗಂಜಿಗುಂಟೆ ಮೌಲಾ, ಮಾಜಿ ಜಿ.ಪಂ.ಅಧ್ಯಕ್ಷ ಸುಭ್ರಮಣಿ, ಮಿತ್ತನಹಳ್ಳಿ ಹರೀಶ್, ಬಸವಾಪಟ್ಟಣ ಬೈರೇಗೌಡ, ಹಾಗೂ ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಮಂದಿ ಮುಖಂಡರುಗಳು ಹಾಜರಿದ್ದರು.

ಪೌರಾಣಿಕ ಹಿನ್ನೆಲೆಯ ಸುಂದರ ತಾಣ ರಾಮಲಿಂಗೇಶ್ವರ ಬೆಟ್ಟ

0

ರಾಮ ಮತ್ತು ಈಶ್ವರ ಒಂದೆಡೆ ನೆಲೆಸಿರುವುದು ಅಪರೂಪ. ದೇಶದ ದಕ್ಷಿಣದ ತುತ್ತ ತುದಿಯಲ್ಲಿ ರಾವಣನೊಂದಿಗೆ ಯುದ್ಧಕ್ಕೆ ತೆರಳುವ ಮುಂಚೆ ರಾಮನು ಶಿವನನ್ನು ಪೂಜಿಸಿದ ಕ್ಷೇತ್ರ ರಾಮೇಶ್ವರವಾಗಿದ್ದರೆ, ತಾಲ್ಲೂಕಿನಲ್ಲಿ ಶ್ರೀರಾಮ ವನವಾಸದ ಕಾಲದಲ್ಲಿ ಪೂಜಿಸಲೆಂದು ಸ್ಥಾಪಿಸಿದ್ದ ಇಷ್ಟಲಿಂಗವಿರುವ ಕ್ಷೇತ್ರ ರಾಮಲಿಂಗೇಶ್ವರವೆಂದೇ ಪ್ರಸಿದ್ಧವಾಗಿದೆ.

ರಾಮ ನಿರ್ಮಿಸಿದ್ದನೆಂಬ ಪ್ರತೀತಿಯಿರುವ ಸದಾ ನೀರು ತುಂಬಿರುವ ರಾಮದೊಣೆ
ರಾಮ ನಿರ್ಮಿಸಿದ್ದನೆಂಬ ಪ್ರತೀತಿಯಿರುವ ಸದಾ ನೀರು ತುಂಬಿರುವ ರಾಮದೊಣೆ

ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ನಲ್ಲರಾಳ್ಳಹಳ್ಳಿ ಬಳಿಯಿರುವ ರಾಮಲಿಂಗೇಶ್ವರ ಬೆಟ್ಟ ಪುರಾತನವಾದ ಹಾಗೂ ಪ್ರಸಿದ್ಧಿಪಡೆದ ಕ್ಷೇತ್ರವಾಗಿದೆ. ಬೆಟ್ಟದ ಮೇಲಿನ ದೇವಾಲಯ ಹಾಗೂ ಪರಿಸರ ಹಲವು ವಿಶೇಷತೆಗಳನ್ನು ಹೊಂದಿದ್ದು, ಪ್ರತಿ ವರ್ಷ ಶುಕ್ಲ ಪಕ್ಷದ ಚತುರ್ದಶಿಯಂದು ನಡೆಯುವ ಬ್ರಹ್ಮರಥೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ವಿವಿಧ ತಾಲ್ಲೂಕು ಹಾಗೂ ಜಿಲ್ಲೆಗಳಿಂದ ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ.
ಕಣ್ಣು ಹಾಯಿಸಿದಷ್ಟೂ ಕಾಣುವ ಸುಂದರ ಪ್ರಕೃತಿ, ಭಕ್ತಿ ಭಾವವನ್ನು ಸೃಜಿಸುವ ದೇಗುಲ, ಪ್ರಶಾಂತ ವಾತಾವರಣಕ್ಕೆ ಮಾರು ಹೋಗಿ ನಗರದ ಗೌಜು ಗದ್ದಲದಿಂದ ಬೇಸತ್ತವರು ರಜೆ ಸಿಕ್ಕಾಗೆಲ್ಲಾ ರಾಮಲಿಂಗೇಶ್ವರ ಬೆಟ್ಟಕ್ಕೆ ಆಗಮಿಸುತ್ತಿರುತ್ತಾರೆ.
ರಾಮಾಯಣದ ಹಿನ್ನೆಲೆ, ಚೋಳರ ಕಾಲದ ಕೆತ್ತನೆಗಳುಳ್ಳ ದೇಗುಲ, ನೂರಾರು ವರ್ಷಗಳ ಇತಿಹಾಸ ಸಾರುವ ಶಿಲ್ಪಗಳು, ಸಾವಿರಾರು ವರ್ಷದಿಂದ ಕದಲದೇ ಇರುವ ಬೆಟ್ಟ, ಬಂಡೆ ಕಲ್ಲುಗಳು, ಸ್ಥಳೀಯರಿಂದ ನಿರ್ಮಾಣಗೊಂಡಿರುವ ಮೆಟ್ಟಿಲು ಮತ್ತು ಕಮಾನು, ಎಲ್ಲವೂ ಬೆಟ್ಟದ ಕೆಳಗಿನಿಂದ ನೋಡಿದಾಗ ಸೊಗಸಾಗಿ ಕಂಡುಬರುತ್ತದೆ.
ದೇವಾಲಯ ಮುಜರಾಯಿಯದ್ದಾದರೂ, ಪ್ರತಿವರ್ಷ ಜನವರಿ ತಿಂಗಳ ಶುಕ್ಲ ಪಕ್ಷದ ಚತುರ್ದಶಿಯಂದು ನಡೆಯುವ ಬ್ರಹ್ಮರಥೋತ್ಸವದ ನಿರ್ವಹಣೆಯನ್ನು ದೇವಾಲಯ ಸಂಚಾಲಕರಾದ ಡಿ.ಎಂ.ಶ್ರೀನಿವಾಸರೆಡ್ಡಿ ಮತ್ತು ಕುಟುಂಬದವರು ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ.
ಅತಿ ಎತ್ತರವಾದ ಧ್ವಜಸ್ತಂಭ
ಅತಿ ಎತ್ತರವಾದ ಧ್ವಜಸ್ತಂಭ

ಸಾಕಷ್ಟು ದೂರಕ್ಕೇ ಕಾಣಬಲ್ಲ ಅತಿ ಎತ್ತರವಾದ ಧ್ವಜಸ್ತಂಭ, ದೊಡ್ಡದಾದ ಏಕಶಿಲಾ ಬಸವಣ್ಣ ಈ ದೇವಾಲಯದ ವೈಶಿಷ್ಟ್ಯ. ಬೇರೆಲ್ಲಿಯೂ ಕಾಣಸಿಗದ ಹನುಮಲಿಂಗ ದೇವಾಲಯ ಕೂಡ ಇಲ್ಲಿದೆ. ರಾಮದೊಣೆ, ಲಕ್ಷ್ಮಣದೊಣೆ ಮತ್ತು ಸೀತಾದೊಣೆಗಳೆಂಬ ನೀರಿನ ಸೆಲೆಗಳಾದ ದೊಣೆಗಳಿಲ್ಲಿವೆ. ಇವುಗಳಲ್ಲಿ ಸದಾ ನೀರು ತುಂಬಿರುತ್ತವೆ. ಅವುಗಳನ್ನು ರಾಮ ನಿರ್ಮಿಸಿದ್ದನೆಂಬ ಪ್ರತೀತಿಯಿದೆ.
ಈ ಬಾರಿ ಜನವರಿ 24 ರ ಭಾನುವಾರದಂದು ನಡೆಯುವ ಬ್ರಹ್ಮರಥೋತ್ಸವದ ಸಂದರ್ಭದಲ್ಲಿ ಭಾರೀ ದನಗಳ ಜಾತ್ರೆಯನ್ನು ಆಯೋಜಿಸಲಾಗಿದೆ. ಜನವರಿ 23 ರಿಂದ 28 ರವರೆಗೂ ಆರು ದಿನಗಳ ಕಾಲ ದನಗಳ ಜಾತ್ರೆ ನಡೆಯಲಿದೆ. ಜಾತ್ರೆಯಲ್ಲಿ ಆಗಮಿಸುವ ದನಗಳಿಗೆಲ್ಲಾ ಮೇವು ಮತ್ತು ನೀರಿನ ಸೌಕರ್ಯವನ್ನು ಒದಗಿಸಲಾಗುತ್ತಿದೆ. ದೂರದ ಊರುಗಳಾದ ಹಾಸನ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ, ಭದ್ರಾವತಿ, ಚಿಕ್ಕಮಗಳೂರು, ಅನಂತಪುರಂ, ರಾಯಚೂಟಿ, ಪುಟ್ಟಪರ್ತಿ, ಪೆನುಗೊಂಡ, ಕದಿರಿ, ಹಿಂದೂಪುರ, ಲೇಪಾಕ್ಷಿ, ಪಾವಗಡ ಮುಂತಾದ ಊರುಗಳಿಂದ ರಾಸುಗಳನ್ನು ಕೊಳ್ಳಲು ಮತ್ತು ಮಾರಾಟಮಾಡಲು ಆಗಮಿಸುತ್ತಾರೆ.
‘ಪವಿತ್ರ ದೇವಾಲಯವಿರುವ ರಾಮಲಿಂಗೇಶ್ವರ ಬೆಟ್ಟ ನಮ್ಮ ಜಿಲ್ಲೆಯಲ್ಲಿಯೇ ಅತ್ಯಂತ ವಿಶಿಷ್ಟವಾದುದು. ಕೇವಲ ರಥೋತ್ಸವದಂದು ಮಾತ್ರ ತಾಲ್ಲೂಕು ಆಡಳಿತ ಬಂದು ಹೋದರೆ ಸಾಲದು. ಈ ಸ್ಥಳವು ಉತ್ತಮ ಪ್ರವಾಸಿ ತಾಣವಾಗುವಂತೆ ಅಭಿವೃದ್ಧಿಪಡಿಸಬೇಕು. ಹಿಂದೆ ಈ ಬೆಟ್ಟದಲ್ಲಿ ಗಣಿಗಾರಿಕೆಯನ್ನು ನಡೆಸಲು ಪ್ರಾರಮಭಿಸಿದ್ದರು. ಆದರೆ ಸ್ಥಳೀಯರ ವಿರೋಧದಿಂದ ನಿಂತಿತು. ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ತಾಲ್ಲೂಕು ಆಡಳಿತ ಮತ್ತು ಜನಪ್ರತಿನಿಧಿಗಳು ಪ್ರವಾಸಿ ಸೌಲಭ್ಯ, ಮಾಹಿತಿ ಒದಗಿಸುವ ಮೂಲಕ ರಾಮಲಿಂಗೇಶ್ವರ ಬೆಟ್ಟವನ್ನು ಅಭಿವೃದ್ಧಿಪಡಿಸಬೇಕು’ ಎಂದು ಅಮ್ಮಗಾರಹಳ್ಳಿ ಬೈರಾರೆಡ್ಡಿ ತಿಳಿಸಿದರು.

ಪ್ರವಾಸಿ ತಾಣಗಳು, ದೋಚು ಕೇಂದ್ರಗಳು

0

ಇಂಗ್ಲೀಷ್‍ನ ಪ್ರವರ್ತಕ ಕವಿಯಾದ ಟಿ.ಎಸ್.ಎಲಿಯಚ್‍ನ ಕವನ ‘Journey of the Magi’ ದಲ್ಲಿನ ಸಾಲುಗಳಿವು.
And the cities hostile and towns unfriendly
And the village’s dirty and charging high prices:
A hard time we had of it.
ಈ ಕವಿತೆಯನ್ನು ಕನ್ನಡದಲ್ಲಿ “ಜ್ಞಾನಿಗಳ ಪಯಣ” ಎಂದು ಶ್ರೀ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಅನುವಾದಿಸಿದು,್ದ ಆ ಸಾಲುಗಳು, ಒಂದಕ್ಕೆ ಹತ್ತು ಬೆಲೆ ಇಟ್ಟು ಮಾರುವ ಸುಟ್ಟ ಸುಡುಗಾಡು ಹಳ್ಳಿಗಳ ಹಾದು ಬಂದೆವು. ಅದೆಂಥ ಕೆಟ್ಟ ಕಾಲ!
ಕ್ರಿಸ್ತನ ಹುಟ್ಟಿನ ಕುರಿತು ಮುನ್ಸೂಚನೆ ಪಡೆದ ಮೂವರು ಜ್ಞಾನಿಗಳು, ಚಾಲ್ಡಿಯಾದ ರಾಜ ಬಾಲ್ತಜಾರ್, ಇಥಿಯೋಪಿಯಾದ ರಾಜ ತಾರ್ಫಿಷ್ ಮತ್ತು ನ್ಯೂಬಿಯಾದ ರಾಜ ಮೆಲ್‍ಫಿಯರ್, ಅತ್ತ ಪಯಣ ಬೆಳಸಿದ ಸಂದರ್ಭದಲ್ಲಾದ ಅನುಭವದ ವಿವರಣೆಗಳು ಈ ಕವಿತೆಯಲ್ಲಿದೆ.
ಅವರುಗಳು ಅಂದು ಪಡೆದ ಅನುಭವಕ್ಕೂ ಇಂದು ನಾವು ಪಡೆಯುತ್ತಿರುವ ಅನುಭವಕ್ಕೂ ಅಂಥ ವ್ಯಾತ್ಯಾಸಗಳೇನೂ ಕಾಣಿಸುತ್ತಿಲ್ಲ. ಅವರ ಪ್ರವಾಸದ ಸಂದರ್ಭದಲ್ಲಿ ಕೂಡ ಅವರು ಪ್ರವಾಸಿಗರೆಂದು ಅರಿತ ಜನ, ಅಧಿಕ ಬೆಲೆ ಕೇಳಿ ಅವರನ್ನು ದೋಚಿದ್ದರು. ಹಾಗೇ ಇಂದು ಪ್ರವಾಸಿಗಳೆಂದು ತಿಳಿದರೆ ಸಾಕು ನಮ್ಮವರೇ ನಮ್ಮನ್ನು ದೋಚಲು ಸಿದ್ದರಾಗಿ ಕುಳಿತಿರುತ್ತಾರೆ. ನೀವು ಯಾವುದೇ ಪ್ರವಾಸಿ ಕೇಂದ್ರಗಳಿಗೆ ತೆರಳಿದರೂ ಸರಿ, ಅಲ್ಲಿಯ ಬೆಲೆ ಗಗನಕ್ಕೇರಿರುತ್ತದೆ. ಬಂದ ಪ್ರವಾಸಿಗಳನ್ನು ಆದಷ್ಟು ದೋಚುವುದೇ ಅಲ್ಲಿನ ವ್ಯಾಪಾರಿಗಳ, ಮತ್ತಿತರರ ಕಸುಬಾಗಿರುತ್ತದೆ. ಕಳ್ಳರ ಹಾವಳಿ ಬೇರೆ. ಅವರು ಹೇಳಿ ಕೇಳಿ ಕಳ್ಳರು, ಅವರ ಸುದ್ದಿ ಬೇರೆ ಕಳ್ಳರೆಂದು ಗುರ್ತಿಸಿಕೊಳ್ಳದೇ ಕಳ್ಳರಾಗುವುದು ಬೇರೆ.
ಬಹಳಷ್ಟು ಪ್ರವಾಸಿ ಕೇಂದ್ರಗಳಲ್ಲಿ ‘ಪ್ರವೇಶ ಧನ’ ನಿಗದಿಗೊಳಿಸಿರುತ್ತಾರೆ. ಅಲ್ಲಿನ ವ್ಯವಸ್ಥೆಗೂ ಅದಕ್ಕೂ ಸಂಬಂಧವೇ ಇರುವುದಿಲ್ಲ. ಕೇರಳದಲ್ಲಿ ಒಂದು ಕಡೆ ಸಾಂಬಾರು ಬೆಳೆಗಳ ತೋಟಕ್ಕೆ ಪ್ರವೇಶ ಧನ ರೂ. 100/- (ಒಬ್ಬರಿಗೆ) ಪಡೆದು ತೋರಿಸಿದ್ದು, ಏಲಕ್ಕಿ, ಬಾಳೆ, ಅಡಿಕೆ ಮತ್ತು ಕೆಂಪು ದಾಸವಾಳ ಮಾತ್ರ. ಆಗ ಅನ್ನಿಸಿದ್ದು ಅವರು ನಿಜವಾಗಿಯೂ ನಮ್ಮ ಕಿವಿಯ ಮೇಲೆ ಈ ಕೆಂಪು ದಾಸವಾಳ ಹೂವನ್ನು ಇಡುತ್ತಿದ್ದಾರೆ ಎಂದು ‘ಪ್ರವೇಶ ಧನ’ ಪಡೆಯುವುದು ತಪ್ಪಲ್ಲ. ಅಲ್ಲಿನ ಪ್ರದೇಶವನ್ನು ಸ್ವಚ್ಛವಾಗಿ, ಜೋಪಾನವಾಗಿ ಇಡುವ ಜವಾಬ್ದಾರಿಗೆ ಹಣದ ಅಗತ್ಯವಿದೆ. ಆದರೆ ಅದಕ್ಕೂ ಒಂದು ಮಿತಿಯಿರಬೇಕು.
ಹಾಗೇ ಹೊರಗಡೆ ಊಟ, ತಿಂಡಿ, ವಸತಿ, ಎಲ್ಲದಕ್ಕೂ ಪ್ರವಾಸಿ ತಾಣಗಳಲ್ಲಿ ಒಂದಕ್ಕೆ ಹತ್ತರಷ್ಟು ಹಣವನ್ನು ತೆರಬೇಕು. ಒಳ್ಳೆಯ ಊಟ, ತಿಂಡಿ, ವಸತಿ, ಸೌಕರ್ಯ ಪೂರೈಸಲು ತೋರುವ ಕಾಳಜಿಗಿಂತ ಎಷ್ಟು ದೋಚಬಹುದೆಂಬ ಕಾಳಜಿಯೇ ಅಲ್ಲಿನ ಜನರಿಗೆ ಅಧಿಕವಾಗಿರುವಂತೆ ತೋರುತ್ತದೆ. ಸ್ಪಷ್ಟ ಉದಾಹರಣೆ ಬೇಕೆಂದರೆ ನಮ್ಮ ಜೋಗ ಜಲಪಾತದ ಬಳಿಯ ಬೆಲೆಗೂ, ಪಕ್ಕದ ತಾಳಗುಪ್ಪ, ಸಾಗರದಲ್ಲಿನ ಬೆಲೆಗೂ ತಾಳೆ ಹಾಕಿ ನೋಡಬಹುದು. ಪ್ರವಾಸಿಗರು ವರ್ಷದಲ್ಲಿ ಒಮ್ಮೆಯೋ, ಎರಡು ಬಾರಿಯೋ ತಮ್ಮ ಖುಷಿಗಾಗಿ ಹೊರಗಡೆ ಬಂದಿರುತ್ತಾರೆ. ಹಾಗೆ ಬಂದವರಿಗೆ ಸಮಾಧಾನವಾಗುವ ರೀತಿಯಲ್ಲಿ ಪ್ರವಾಸಿ ಕೇಂದ್ರಗಳು ಇರಬೇಕಾಗಿತ್ತು. ಆದರೆ ಅವರು ತಮ್ಮೆಲ್ಲ ಖುಷಿ ಮತ್ತು ಸಮಾಧಾನವನ್ನು ಕಳೆದುಕೊಳ್ಳುವಂತೆ, ಈ ಪ್ರವಾಸಿ ತಾಣಗಳು, ವ್ಯವಸ್ಥಿತವಾಗಿ ನೋಡಿಕೊಳ್ಳುತ್ತವೆ. ಹೀಗಾದಾಗ ಬರಬೇಕೆಂದು ಬಯಸುವವರೂ ಹಿಂದೇಟು ಹಾಕುತ್ತಾರೆ. ಒಮ್ಮೆ ಬಂದವರು ಮತ್ತೆ ಬರಲಾರರು ಬರಬೇಕೆಂದಿದ್ದವರಿಗೂ ಬೇಡವೆಂದು ತಿಳಿಹೇಳಿಯಾರು ಹೀಗಾದರೆ ಪ್ರವಾಸಿ ಕೇಂದ್ರಗಳು ಅಭಿವೃದ್ಧಿಯಾವುದು ಹೇಗೆ ಸಾಧ್ಯ?
ಇನ್ನು ನಮ್ಮಲ್ಲಿನ ಪ್ರವಾಸಿ ಕೇಂದ್ರಗಳ ಅಭಿವೃದ್ಧಿಗಳಿಗೆ ಸಹಕಾರ ಅನೇಕಾನೇಕ ಯೋಜನೆಗಳನ್ನು ರೂಪಿಸಿದ್ದಿದೆ. ಅಭಿವೃದ್ಧಿ ಪ್ರಾಧಿಕಾರಿಗಳ ರಚನೆ ಕೂಡ ಆಗಿದೆ. ಆದರೆ ಅಭಿವೃದ್ಧಿ ಎಷ್ಟರ ಮಟ್ಟಿಗೆ ಆಗಿದೆ? ಕೇವಲ ಪ್ರಾಧಿಕಾರದ ಬೋರ್ಡು ನಮ್ಮನ್ನು ಸ್ವಾಗತಿಸುತ್ತದೆಯೇ ವಿನಃ ಅವುಗಳು ನೀಡುವ ಸವಲತ್ತುಗಳಲ್ಲ, ಬಹಳಷ್ಟು ನಿರೀಕ್ಷೆಯೊಂದಿಗೆ ಬಂದವರಿಗೆ ನಿರಾಸೆ ಮಾತ್ರ ಕಾದಿರುತ್ತದೆ. ಕೊಳಕು ಪರಿಸರ, ಕುಡಿಯಲೂ ನೀರಿಲ್ಲದ ಸ್ಥಿತಿ ಹದಗೆಟ್ಟು ಶೌಚಾಲಯಗಳು, ಹುರಿದು ತಿನ್ನುವ ಶೆಡ್ಡುಗಳು, ವಾಹನ ಚಾಲಕರು ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಪುನಃ ಪುನಃ ಪ್ರವಾಸ ಕೈಗೊಳ್ಳಬೇಕೆಂಬ ಉತ್ಸಾಹವನ್ನೆ ಬತ್ತಿಸುವ ಸ್ಥಿತಿ ಇಂದು ಬಹತೇಕ ಪ್ರವಾಸಿ ತಾಣಗಳಲ್ಲಿ ಇದೆ ಎಂಥವರ ಆದಾಯಕ್ಕಾದರೂ ಒಂದು ಮಿತಿ ಇದೆ.
ಪ್ರಕೃತಿ ಸೌಂದರ್ಯದ ಆಸ್ಪಾದನೆಗೆ ಹೊರಟ ಪ್ರವಾಸಿಗಳಿಗಾಗಲಿ ಧಾರ್ಮಿಕ ನಂಬಿಕೆಯ ಮೇರೆಗೆ ಧಾರ್ಮಿಕ ಸ್ಥಳಗಳಿಗೆ ಭೇಟಿಕೊಡುವ ಯಾತ್ರಾರ್ಥಿಗಳಿಗಾಗಲೀ, ಹೊರಡುವ ಮುನ್ನ ಇದ್ದ ಉತ್ಸಾಹ, ಹೋಗಿ ಬಂದ ಅನಂತರ ಇರುವುದು ಅನುಮಾನ. ಕಾರಣವೆಂದರೆ ಅಲ್ಲಿನವರು ಬೆಳೆಸಿಕೊಂಡ ದೋಚುಪ್ರವೃತ್ತಿ ಹೊಸಬರೆಂದು ತಿಳಿದರೆ ಸಾಕು, ಅವರೆಲ್ಲಾ ಒಟ್ಟಾಗಿ ಜಿಗುಣಿಗಳಂತೆ ಶೋಷಿಸಲು ತೊಡಗುತ್ತಾರೆ. ಭಾಷೆ ಬಾರದಿದ್ದರಂತೂ ಹೀರುವಿಕೆಗೆ ಮಿತಿಯೇ ಇರುವುದಿಲ್ಲ. ಇವರೆಲ್ಲ ನಮ್ಮಲ್ಲಿಗೆ ಬಂದಿದ್ದಾರೆ, ಅವರಿಗೆ ಆದಷ್ಟು ಉತ್ತಮವಾದ ಸೇವೆ ಒದಗಿಸಬೇಕು, ಶೋಷಿಸಬಾರದು ಎಂಬ ಕನಿಷ್ಠ ಮಾನವೀಯತೆ ಕೂಡ ಮರೆಯಾಗಿದ್ದನ್ನು ನಾವು ಎಲ್ಲೆಂದರಲ್ಲಿ ಕಾಣಬಹುದಾಗಿದೆ. ಧಾರ್ಮಿಕ ಕೇಂದ್ರಗಳಲ್ಲಿ ಕೂಡ, ಶ್ರದ್ಧೆಯನ್ನು ಬಂಡವಾಳವಾಗಿಸಿಕೊಂಡು ಇಲ್ಲಸಲ್ಲದ ಆಚರಣೆಗಳನ್ನು ನೆರವೇರಿಸುವಂತೆ ಪ್ರೇರೇಪಿಸುತ್ತ ತಲೆಕೆಡಿಸುವವರ ದೊಡ್ಡ ಪಡೆಯೇ ಸದಾ ಜಾಗೃತವಾಗಿರುತ್ತದೆ. ಯಾಕೆ ಹೀಗೆ? ಇದಕ್ಕೆ ಪರಿಹಾರವೇ ಇಲ್ಲವೇ? ಪ್ರಶ್ನಿಸಿದರೆ ಉತ್ತರ ಕಷ್ಟವಾದರೂ ಕೆಲಮಟ್ಟಿನ ಸುಧಾರಣೆ ಸಾಧ್ಯವಾಗಬಹುದಾದ್ದು, ನಾವು ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆಗಳಿಂದ. ಅಂದರೆ ಪ್ರವಾಸಿ ತಾಣಗಳಿಗೆ ತೆರಳುವಾಗ, ನಾವು ನಮ್ಮಲ್ಲಿಂದಲೇ ನಮಗೆ ಪರಿಚಯದ ಬಾಡಿಗೆ ವಾಹನ ಪಡೆಯುವುದರಿಂದ ಹಿಡಿದು ನಮಗೆ ಬೇಕಾಗಬಹುದಾದ ಆಹಾರ, ಸಾರು ಇತ್ಯಾದಿ ಅಗತ್ಯ ಸಾಮಗ್ರಿಗಳನ್ನು ಒಯ್ಯುವುದು. ಇದು ಭಾರದ ಕೆಲಸ, ಹೊರೆ ಎಂದು ಭಾವಿಸಿದರೆ ಹಣ ನೀರಿನಂತೆ ಖರ್ಚಾಗುತ್ತದೆ. ಹಾಗೇ ಹೊರಗಡೆ ಹೊರಡುವ ಮುನ್ನ ಈಗಾಗಲೇ ಅಲ್ಲಿಗೆ ಹೋಗಿ ಬಂದವರಿಂದ ಸಲಹೆ, ಸೂಚನೆ ಮಾರ್ಗದರ್ಶನ ಪಡೆದುಕೊಂಡರೆ ಒಳ್ಳೆಯದು. ನೋಡಬಹುದಾದ ಸ್ಥಳಗಳು ಮತ್ತು ನಾವು ನೀಡುವ ಹಣಕ್ಕೆ ಯೋಗ್ಯವಾದ ಸ್ಥಳಗಳ ಸಂದರ್ಶನ ಸಾಧ್ಯವಾಗಬಹುದು, ಹಾಗಲ್ಲದಿದ್ದರೆ ನಮ್ಮ ಹೂದೋಟದ ಕೆಂಪು ದಾಸವಾಳವನ್ನೆ ನಾವು ತಲಾ ನೂರು ರೂಪಾಯಿ ನೀಡಿ ನೋಡುವ ಪ್ರಾರಾಬ್ದ ಒದಗಬಹುದು.
ಸರ್ಕಾರ ಪ್ರವಾಸಿ ತಾಣಗಳ ಮೇಲೆ ಸರಿಯಾದ ಲಕ್ಷ ಹರಿಸಬೇಕು ಕೇವಲ ಅಲ್ಲಿಯ ಅಭಿವೃದ್ಧಿಯನ್ನಷ್ಟೆ ಅಲ್ಲದೇ ಅಲ್ಲಿನ ಸುಲಿಗೆಯ ಕುರಿತೂ ನಿಗಾ ವಹಿಸುವುದು ಸೂಕ್ತ. ಅಭಿವೃದ್ಧಿ ಪ್ರಾಧಿಕಾರಗಳು ಕೇವಲ ‘ಬಿಳಿಯಾನೆ’ಗಳಾಗದೆ, ಬಂದವರ ಹಿತ ಚಿಂತನೆಗೂ ಲಕ್ಷ ಹರಿಸಬೇಕು. ಅಲ್ಲಿನ ಪ್ರವೇಶ ಶುಲ್ಕದಿಂದ ಹಿಡಿದು ಅಸುಪಾಸಿನ ಹೋಟೆಲ್, ಅಂಗಡಿಗಳಲ್ಲಿ ನೀಡುವ ತಿಂಡಿ, ಊಟ, ಹಣ್ಣು ಹಂಪಲುಗಳ ದರದ ಕುರಿತು ನಿರ್ದಿಷ್ಟ ಪಟ್ಟಿ ಪ್ರಕಟಿಸಿ, ಪ್ರವಾಸಿಗರು ಮೋಸ ಹೋಗದಂತೆ ನೋಡಿಕೊಳ್ಳಬೇಕು. ಸಾಧ್ಯವಾದಲ್ಲಿ ಸರಕಾರವೇ, ಸಹಕಾರಿ ತತ್ವದಡಿ ಅಥವಾ ಸ್ವಸಹಾಯ ಗುಂಪುಗಳಿಗೆ ನೆರವು ನೀಡಿ ಉತ್ತಮ ಸೌಲಭ್ಯ, ಯೋಗ್ಯ ಬೆಲೆಗೆ ಊಟ, ತಿಂಡಿ ಇತ್ಯಾದಿ ದೊರಕುವ ವ್ಯವಸ್ಥೆ ಮಾಡಬೇಕು. ಯಾಕೆಂದರೆ ಪ್ರವಾಸಿಗರು ಕೂಡ ಈ ದೇಶದ ನಾಗರಿಕರೇ ಸರಿ. ಅವರನ್ನು ಶೋಷಣೆಯಿಂದ ಕಾಪಾಡುವುದು ಕೂಡ ಆಡಳಿತ ಜವಬ್ದಾರಿ. ಇದರೊಟ್ಟಿಗೆ ಪ್ರತಿಯೊಂದು ಪ್ರವಾಸಿ ಕೇಂದ್ರಗಳಲ್ಲೂ ‘ಮಾಹಿತಿ ಕೇಂದ್ರ’ ವನ್ನು ಸ್ಥಾಪಿಸಿ, ಹೊರಗಡೆಯಿಂದ ಬಂದವರಿಗೆ ಮಾಹಿತಿ ಸಹಾಯ ನೀಡಬೇಕು. ಅದು ವಸತಿಯನ್ನು ಕುರಿತಾಗಿ ಅಥವಾ ವಾಹನಗಳ ಕುರಿತಾಗಿ ಅಥವಾ ಬಸ್ಸು, ರೈಲು, ವಿಮಾನಗಳ ಕುರಿತಾಗಿ ಮತ್ತು ಸ್ಥಳ ಕಾಯ್ದಿರಿಸುವಿಕೆ ಕುರಿತಾಗಿ, ಅಂದರೆ ಬಂದವರಿಗೆ ಇರುವುದಕ್ಕೆ ಮತ್ತು ಹೋಗುವುದಕ್ಕೆ ಅನುಕೂಲವಾಗುತ್ತದೆ. ಪ್ರವಾಸ ಪ್ರಯಾಸವಾಗದಂತೆ ಇನ್ನಷ್ಟು ಪ್ರವಾಸಕ್ಕೆ ಪ್ರೊತ್ಸಹಿಸಿದಂತಾಗುತ್ತದೆ.
ಮನುಷ್ಯ ಜ್ಞಾನಿಯಾಗುವುದಕ್ಕೆ ‘ಒಂದೋ ಕೋಶ ಓದಬೇಕು ಅಥವಾ ದೇಶ ತಿರುಗಬೇಕು’ ಎಂದು ತಿಳಿದವರು ಹೇಳುತ್ತಾರೆ. ಇಂದಿನ ಯಾಂತ್ರಿಕ ಬದುಕಿನಲ್ಲಿ ಬಹುತೇಕ ಮಂದಿ ಕೂತು ಕೋಶ ಓದುವ ವ್ಯವಧಾನವಿಲ್ಲ. ಇರುವ ಸೀಮಿತ ವಿರಾಮದ ಅವಧಿ ಕೂಡ ಟಿ.ವಿ.ಯ ಸೀರಿಯಲ್ಲುಗಳಲ್ಲೆ ಕಳೆದು ಹೋಗುತ್ತದೆ. ಹಾಗಾಗಿ ವರ್ಷದಲ್ಲಿ ನಾಲ್ಕಾರು ದಿನ ಹೆಚ್ಚೆಂದರೆ ಒಂದು ವಾರ ಹೊರಗಡೆ ಸುತ್ತಾಡಿ ಬರಲು ಅಪೇಕ್ಷೆಸುವವರೇ ಅಧಿಕ. ಹೀಗೆ ಪ್ರವಾಸಕ್ಕೆ ಹೊರಡುವವರಿಗೆ ಅವರು ಹೋದಡೆಗೆ ಪಡೆಯುವ ಜ್ಞಾನ ಮತ್ತು ಸಂತೋಷಕ್ಕೆ ಯಾವುದೇ ಅಡ್ಡಿಯಾಗುವುದು ಸರಿಯಲ್ಲ. ಬರಿಯಾ ಚೌಕಶಿಯಲ್ಲೇ ದಿನಕಳೆವಂತಾದರೆ ಖುಷಿ ಎಲ್ಲಿಂದ ಬರಲು ಸಾಧ್ಯ.
ದೋಚುವ ಕೇಂದ್ರಗಳಾಗಿ ಮಾರ್ಪಡುತ್ತಿರುವ ಪ್ರವಾಸಿ ತಾಣಗಳಿಂದ ಶೋಷಣೆಯಷ್ಟೆ ಸಾಧ್ಯ. ಇದು ತಪ್ಪಬೇಕು. ಆನ ಒಪ್ಪುವಂತಹ ವಾತವರಣ ನಿರ್ಮಾಣವಾಗಬೇಕಾದ್ದು ಇಂದಿನ ತುರ್ತು.
‘ಒಂದಕ್ಕೆ ಹತ್ತು ಬೆಲೆ ತೆತ್ತು, ಸುಟ್ಟು ಸೂಡುಗಾಡುಗಳ ನೋಡ ಬಂದೆವು’ ಅಂದುಕೊಳ್ಳಬಾರದು. ಹಾಗೆ ಆಗದಂತೆ ವ್ಯವಸ್ಥೆ ಬದಲಾದರೆ ಸಂತೋಷ’ ಆದರೆ ಅದು ನೀರಿಕ್ಷಿಸಿದಂತೆ ಬದಲಾಗುವುದು ಕಷ್ಟ. ಒಟ್ಟಾರೆ ಒಂದಿಷ್ಟು ಸಂಗತಿಗಳನ್ನು ತಿಳಿದುಕೊಳ್ಳಬೇಕೆಂದರೆ ಕೆಟ್ಟದನ್ನೆಲ್ಲಾ ಅನುಭವಿಸಬೇಕು. ಅದಕ್ಕೆ ಪ್ರಾರಾಬ್ಧ ಎನ್ನಬಹುದೆನೊ?
ಆದರೆ ಎಲ್ಲ ವ್ಯಾಖ್ಯೆಗಳಗೂ ಅಪವಾದವಿದ್ದಂತೆ. ಕೆಲವೊಂದು ಪ್ರವಾಸಿ ತಾಣಗಳೂ ಸಹ ಅಪವಾದಗಳೆಂಬಂತೆ ಒಳ್ಳೆಯಾದಗಿವೆ ಎಂಬುದನ್ನು ನಾವು ಮರೆಯುವಂತಿಲ್ಲ.
ಪ್ರತಿ ಬಾರಿ ನಾವು ಪ್ರವಾಸಕ್ಕೆ ಹೊರಟುನಿಂತಾಗ ಮತ್ತೆ ಮರಳಿ ಬಂದಾಗ ಅದೆ ಏಲಿಯಟ್‍ನ ವಾಕ್ಯಗಳು ನಮ್ಮಳೊಗೆ ಅನುರಣಿಸದಿರಲಿ ಎಂಬ ಆಶಾಭಾವನೆ. Happy journey.
ರವೀಂದ್ರ ಭಟ್ ಕುಳಿಬೀಡು.

ಮರಳು ಸಾಗಿಸುತ್ತಿದ್ದ ಏಳು ಟ್ರಾಕ್ಟರ್ ಗಳ ವಶ

0

ತಾಲೂಕಿನಾದ್ಯಂತ ಎಗ್ಗಿಲ್ಲದೇ ಸಾಗಿದ್ದ ಮರಳು ಸಾಗಾಣಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಭಾನುವಾರ ನಡೆಸಿದ ಕಾರ್ಯಾಚರಣೆಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಏಳು ಟ್ರಾಕ್ಟರ್ಗಳನ್ನು ವಶಪಡಿಸಿಕೊಂಡು ದಂಡ ವಿಧಿಸಿರುವ ಘಟನೆ ನಡೆದಿದೆ.
ತಾಲ್ಲೂಕಿನಲ್ಲಿ ಅಕ್ರಮವಾಗಿ ಮರುಳು ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ತಹಸೀಲ್ದಾರ್ ಕೆ.ಎಂ.ಮನೋರಮಾ ನೇತೃತ್ವದ ಸಿಬ್ಬಂದಿ ತಾಲ್ಲೂಕಿನ ವಿವಿದೆಡೆ ದಾಳಿ ನಡೆಸಿ ಏಳು ಟ್ರಾಕ್ಟರ್ಗಳನ್ನು ವಶಪಡಿಸಿಕೊಂಡಿದ್ದಾರೆ.
ತಹಸೀಲ್ದಾರ್ ಕೆ.ಎಂ.ಮನೋರಮಾ, ಗ್ರಾಮ ಲೆಕ್ಕಿಗರಾದ ಲಾರೆನ್ಸ್, ಆನಂದ್, ನಗರಠಾಣೆ ಪಿಎಸ್ಸೈ ವಿಜಯ್ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ನಾಗಮಂಗಲ, ನಡಿಪಿನಾಯಕನಹಳ್ಳಿ, ಹೊಸಹಳ್ಳಿ ಮತ್ತು ನಲ್ಲೇನಹಳ್ಳಿ ಗ್ರಾಮಸ್ಥರ ಪ್ರತಿಭಟನೆ

0

ಶಾಶ್ವತ ನೀರಾವರಿ ಹೋರಾಟವು 120ನೇ ದಿನಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಭಾನುವಾರ ತಾಲ್ಲೂಕಿನ ನಾಗಮಂಗಲ, ನಡಿಪಿನಾಯಕನಹಳ್ಳಿ, ಹೊಸಹಳ್ಳಿ ಮತ್ತು ನಲ್ಲೇನಹಳ್ಳಿ ಗ್ರಾಮಸ್ಥರು ಭಜನೆ ಮಾಡುತ್ತಾ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳಿದರು.
ತಾಲ್ಲೂಕಿನ ನಾಗಮಂಗಲ ಗ್ರಾಮದ ಸೋಮೇಶ್ವರಸ್ವಾಮಿ ಭಜನಾ ಮಂಡಳಿ, ನಾಗಮಂಗಲ, ನಡಿಪಿನಾಯಕನಹಳ್ಳಿ, ಹೊಸಹಳ್ಳಿ ಮತ್ತು ನಲ್ಲೇನಹಳ್ಳಿ ಗ್ರಾಮಗಳ ಸ್ತ್ರೀಶಕ್ತಿ ಸಂಘದ ಸದಸ್ಯರು, ಯುವಕರು, ರೈತ ಸಂಘದ ಸದಸ್ಯರು ಬೈಕುಗಳು ಹಾಗೂ ಟೆಂಪೂಗಳ ಮೂಲಕ ಶಿಡ್ಲಘಟ್ಟಕ್ಕೆ ಬಂದರು. ಬಸ್ ನಿಲ್ದಾಣದ ಬಳಿ ಕೆಲ ಹೊತ್ತು ಶಾಶ್ವತ ನೀರಾವರಿ ಜಾರಿಗಾಗಿ ಘೋಷಣೆಗಳನ್ನು ಕೂಗುತ್ತಾ ಒತ್ತಾಯಿಸಿ ನಂತರ ಚಿಕ್ಕಬಳ್ಳಾಪುರದ ಚದಲಪುರ ಗೇಟ್ ಬಳಿ ನಡೆಯುತ್ತಿರುವ ಹೋರಾಟದ ಸ್ಥಳಕ್ಕೆ ತೆರಳಿದರು.
ಗ್ರಾಮ ಪಂಚಾಯತಿ ಉಪಾಧ್ಯಕ್ಷ ಎನ್.ಡಿ.ನಾರಾಯಣಪ್ಪ, ಸದಸ್ಯ ಶ್ರೀನಿವಾಸಗೌಡ, ಎಂ.ಪಿ.ಸಿ.ಎಸ್ ಅಧ್ಯಕ್ಷ ವೆಂಕಟೇಶಪ್ಪ, ಶಿವಕುಮಾರ್, ಆಂಜಿನಪ್ಪ, ಮುನಿರಾಜು, ಮಂಜುನಾಥ, ರಾಮಣ್ಣ, ಸೋಮನಾಥ್, ದೇವರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಕಡ್ಡಾಯವಾಗಿ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ

0

ತಾಲ್ಲೂಕಿನಾದ್ಯಂತ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಪಲ್ಸ್ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ಪೋಷಕರು ಸಹಕರಿಸಬೇಕೆಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳಲ್ಲಿ ಶಾಶ್ವತ ಅಂಗವಿಕಲತೆ ಉಂಟು ಮಾಡಿ, ದೀರ್ಘಕಾಲ ಭೀಕರ ಪರಿಣಾಮ ಬೀರುವ ಪೋಲಿಯೋ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ದೇಶವನ್ನು ಪೋಲಿಯೋ ಮುಕ್ತ ರಾಷ್ಟ್ರವನ್ನಾಗಿ ಮಾಡುವುದು ನಮ್ಮ ಆದ್ಯ ಕರ್ತವ್ಯ ಎಂದು ತಿಳಿಸಿದರು.
ತಹಶೀಲ್ದಾರ್ ಮನೋರಮಾ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್ಕುಮಾರ್, ಸಾರ್ವಜನಿಕ ಆಸ್ಪತ್ರೆಯ ಅಭಿವೃದ್ಧಿ ಸಮಿತಿಯ ಸದಸ್ಯ ಶ್ರೀನಿವಾಸ್, ನಗರಸಭಾ ಸದಸ್ಯ ವೆಂಕಟಸ್ವಾಮಿ, ಪಲ್ಸ್ ಪೋಲಿಯೋ ಕಾರ್ಯಕ್ರಮದ ಅಧಿಕಾರಿ ಸುಧಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.