18.6 C
Sidlaghatta
Wednesday, March 4, 2026

ಕರಾಟೆ ಸ್ಪರ್ಧೆಯಲ್ಲಿ ಗೆದ್ದ ಜಂಗಮಕೋಟೆ ವಿದ್ಯಾರ್ಥಿಗಳು

- Advertisement -
- Advertisement -

ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಜಂಗಮಕೋಟೆಯ ವಿದ್ಯಾರ್ಥಿಗಳು ಪದಕಗಳನ್ನು ಪಡೆದಿದ್ದಾರೆ ಎಂದು ವಾಡು ಇಂಟರ್‌ನ್ಯಾಷನಲ್‌ ಕರಾಟೆ ಫೆಡರೇಷನ್‌ ತರಬೇತುದಾರ ಜಂಗಮಕೋಟೆಯ ಎಸ್‌.ಮಹಮ್ಮದ್‌ ತಿಳಿಸಿದ್ದಾರೆ.
ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ನಡೆದ 2016ನೇ ಸಾಲಿನ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಪ್ರಥಮ ಬಾರಿಗೆ ಜ್ಞಾನ ಜ್ಯೋತಿ ಪದವಿ ಪೂರ್ವ ಕಾಲೇಜಿನ ಸಿಂಧು ಬೆಳ್ಳಿ ಪದಕವನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿರುವುದಾಗಿ ಅವರು ತಿಳಿಸಿದರು.
ಜ್ಞಾನ ಜ್ಯೋತಿ ಪದವಿ ಪೂರ್ವ ಕಾಲೇಜಿನ ಮೇಘನ, ಹರ್ಷಿತ ಮತ್ತು ಪ್ರಗತಿ ಪದವಿ ಪೂರ್ವ ಕಾಲೇಜಿನ ರಾಹುಲ್‌ ಸಹ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪತ್ರವನ್ನು ಪಡೆದಿದ್ದಾರೆ.
ವಾಡು ಇಂಟರ್‌ನ್ಯಾಷನಲ್‌ ಕರಾಟೆ ಫೆಡರೇಷನ್‌ ಅಧ್ಯಕ್ಷ ಬಿ.ಎಚ್‌.ಸಾಬುಲಾಲ್‌, ತರಬೇತುದಾರ ಎಸ್‌.ನೂರುಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!