ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣೆಗೆ ವೇಳಾ ಪಟ್ಟಿ ಪ್ರಕಟಿಸಲಾಗಿದ್ದು, ಅನಧಿಕೃತ ಮತದಾರರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಶಾಸಕ ರಾಜಣ್ಣ ಆರೋಪಿಸಿ, ಜೆಡಿಎಸ್ ಕಾರ್ಯಕರ್ತರೊಡನೆ ತಲ್ಲೂಕು ಕಚೇರಿಯ ಮುಂದೆ ಪ್ರತಿಭಟಿಸಿದರು.
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣೆ ನವೆಂಬರ್ ತಿಂಗಳ ೨೮ ರಂದು ನಡೆಯಲಿದ್ದು, ಚುನಾವಣೆಗೆ ಮತದಾರರ ಸೇರ್ಪಡೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ. ಇದರಲ್ಲಿ ಶಾಮಿಲಾಗಿರುವ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಜಸ್ವ ನಿರೀಕ್ಷಕರು ಈ ಪ್ರಕರಣದಲ್ಲಿ ಶಾಮಿಲಾಗಿರುವುದಾಗಿ ಆರೋಪಿಸಿದ ಅವರು, ತಾಲೂಕು ಕಚೇರಿಯಿಂದ ಅಧಿಕಾರಿಗಳು ಹೊರಹೋಗದಂತೆ ತಡೆದು ಹೊರಗಡೆ ಹೋಗಲು ಬಿಡದೆ ಮುತ್ತಿಗೆ ಹಾಕಿ ಘಟನೆ ನಡೆಸಿದರು.
ಗ್ರಾಮಾಂತರ ಠಾಣಾ ಸಬ್ ಇನ್ಸ್‌ಪೆಕ್ಟರ್ ಪ್ರದೀಪ್ ಪೂಜಾರಿ ಪ್ರವೇಶಿಸಿ, ಪ್ರತಿಭಟನೆ ಮಾಡಲು ಮೊದಲೇ ಮಾಹಿತಿ ನೀಡಬೇಕಾಗಿದ್ದು, ಏಕಾಏಕಿ ಪ್ರತಿಭಟನೆಯಲ್ಲಿ ತೊಡಗಿದ್ದು ಅಲ್ಲದೆ ಸರ್ಕಾರಿ ಅಧಿಕಾರಿಗಳನ್ನು ಕಚೇರಿ ಒಳಗಡೆ ಕೂಡಿ ಹಾಕುವುದು ಕಾನೂನು ರೀತ್ಯಾ ಅಪರಾಧ ಎಂದು ಹೇಳಿ ಪ್ರತಿಭಟನಾನಿರತರನ್ನು ಸಮಾಧಾನ ಮಾಡಿದರು.
ತಹಸಿಲ್ದಾರ್ ಮನೋರಮಾ ಅವರು ಕಚೇರಿಗೆ ಆಗಮಿಸುತ್ತಿದ್ದಂತೆ, ಶಾಸಕರು ತಹಸಿಲ್ದಾರ್ ಅವರಿಗೆ ದಾಖಲೆಗಳನ್ನು ನೀಡಿ ಚುನಾವಣೆಯಲ್ಲಿ ನಡೆದ ಭಾರಿ ಅವ್ಯವಹಾರದ ಬಗ್ಗೆ ವಿವರಿಸಿದರು. ತನಗೆ ಇದರ ಬಗ್ಗೆ ಯಾವುದೇ ರೀತಿ ಮಾಹಿತಿ ತಿಳಿಯದು, ಇದರಲ್ಲಿ ತನ್ನ ಪಾತ್ರ ಏನೂ ಇಲ್ಲ ಎಂದು ಅವರು ತನಿಖೆ ಮಾಡುವುದಾಗಿ ತಿಳಿಸಿದರು.
ನಗರದಲ್ಲಿರುವ ಸರ್ಕಾರಕ್ಕೆ ಸೇರಿದ ವಿವಿಧ ಸ್ವತ್ತುಗಳಾದ, ಪೋಲಿಸ್ ವಸತಿ ಗೃಹ ಲಕ್ಷಮ್ಮ ಎಂಬುವವರ ಹೆಸರಿನಲ್ಲಿ, ಮುನಿಸಿಪಲ್ ಹೈಸ್ಕೂಲ್ ಸ್ಥಳ ಮಾಜಿ ನಗರಸಭಾ ಅಧ್ಯಕ್ಷೆಯ ಪತಿ ತನ್ವೀರ್ ಅವರ ಹೆಸರಿನಲ್ಲಿ, ಸಾರ್ವಜನಿಕ ಸ್ಮಶಾನ ಎ,ಹರೀಶ್ ಅವರ ಹೆಸರಿನಲ್ಲಿ ಪಹಣಿಗಳು ಬರುತ್ತಿದೆ. ಇವರೆಲ್ಲಾ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರಾಗಿದ್ದು, ಈ ಭಾರಿ ಅವ್ಯವಹಾರಕ್ಕೆ ಕಾಂಗ್ರೆಸ್ ಪಕ್ಷದ ಕೈವಾಡ ಇದೆಯೆಂದು ಜೆ.ಡಿ.ಎಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಆರೋಪಿಸಿದರು.
ಮತದಾರರ ಪಟ್ಟಿ ಪರಷ್ಕರಣೆ ಆಗುವವರೆಗೂ ಚುನಾವಣೆ ಮುಂದೂಡಬೇಕೆಂದು ಕಾರ್ಯಕರ್ತರು ಒತ್ತಾಯಿಸಿದರು.
ಚಿಕ್ಕಬಳ್ಳಾಪುರ ಜಿಲ್ಲಾಧೀಕಾರಿ ಅದಿತ್ಯ ದೀಪ್ತಿ ಕಾನಡೆ ಅವರು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ತಾಲ್ಲೂಕು ಕಚೇರಿ ಎದುರು, ಶಾಮಿಯಾನ ಹಾಕಿ ಪ್ರತಿಭಟನೆಯಲ್ಲಿ ನಿರತರಾದರು.
ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ, ತಾಲ್ಲೂಕು ಪಂಚಾಯತಿ ಅಧ್ಯಕ್ಷ ಲಕ್ಷ್ಮೀನಾರಾಯಣ, ನಗರಸಭಾ ಅಧ್ಯಕ್ಷ ಅಫ್ಸರ್ ಪಾಷಾ, ಜೆ.ಡಿ.ಎಸ್ ಮುಖಂಡರಾದ ರಹಮತ್ತುಲ್ಲಾ, ಡಾ.ಧನಂಜಯರೆಡ್ಡಿ, ಸ್ಥಾಯಿ ಸಮಿತಿ ಅದ್ಯಕ್ಷ ನಂದಕಿಶನ್, ನಗರಸಭಾ ಸದಸ್ಯರಾದ ರಘು, ವೆಂಕಟಸ್ವಾಮಿ, ಜೆಡಿಎಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು,
- Advertisement -
- Advertisement -
- Advertisement -