ಕುಡಿಯುವ ನೀರಿಗಾಗಿ ಅಳವಡಿಕೆ ಮಾಡುತ್ತಿರುವ ಪೈಪ್‍ಲೈನ್‍ಗಳನ್ನು ವ್ಯವಸ್ಥಿತವಾಗಿ ಅಳವಡಿಕೆ ಮಾಡಿಲ್ಲವೆಂದು ನಾಗರೀಕರು ಆರೋಪಿಸಿದ್ದಾರೆ.
ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುಡಿಹಳ್ಳಿ ಗ್ರಾಮದಲ್ಲಿ, ಗ್ರಾಮ ಪಂಚಾಯ್ತಿಯಿಂದ 13 ನೇ ಹಣಕಾಸು ಯೋಜನೆಯಡಿಯಲ್ಲಿ ಕುಡಿಯುವ ನೀರಿಗಾಗಿ ಪೈಪ್‍ಲೈನ್ ಅಳವಡಿಕೆ ಮಾಡುವಂತಹ ಕಾಮಗಾರಿ ಪ್ರಗತಿಯಲ್ಲಿದ್ದು, ಗ್ರಾಮದ ಮನೆಗಳ ಮುಂಭಾಗದಲ್ಲಿ ಕೇವಲ 4 ಕೆ.ಜಿ. ತೂಕದ ಕಳಪೆ ಗುಣಮಟ್ಟದ ಪೈಪ್‍ಗಳನ್ನು ಸುಮಾರು 500 ಮೀಟರ್‍ಗಳಿಗಿಂತಲೂ ಹೆಚ್ಚಿನ ದೂರದಲ್ಲಿ ಅಳವಡಿಕೆ ಮಾಡಲಾಗಿದೆ, ಪೈಪ್‍ಲೈನ್‍ನ್ನು ಭೂಮಿಯ ಒಳಗೆ 3 ಅಡಿಗಳ ಆಳದಲ್ಲಿ ಹಾಕಬೇಕು, ಆದರೆ ಕೇವಲ 1/2 ಅಡಿ ಆಳದಲ್ಲಿ ಹಾಕಿದ್ದಾರೆ, ಈ ಬಗ್ಗೆ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳನ್ನು ಪ್ರಶ್ನಿಸಿದರೆ, ನನ್ನ ಗಮನಕ್ಕೆ ಬಂದಿಲ್ಲವೆಂದಿದ್ದ ಅವರು, ನಂತರ ಕಾಮಗಾರಿಯು ಸರಿಯಾಗಿಲ್ಲ ಸರಿಪಡಿಸುತ್ತೇವೆ ಎಂದು ಜಾರಿಕೆಯ ಉತ್ತರ ನೀಡುತ್ತಿದ್ದಾರೆ, ಗ್ರಾಮದ ಸೋಮೇಶ್ವರಸ್ವಾಮಿ ದೇವಾಲಯದ ಸಮೀಪದಲ್ಲಿರುವ ಕೊಳವೆ ಬಾವಿಗೆ ಇಂಗುಗುಂಡಿಯನ್ನು ಮಾಡುತ್ತಿದ್ದು, 6.ಎಂ.ಎಂ. ಜಲ್ಲಿಕಲ್ಲುಗಳು, ಹಾಗೂ ಮರಳಿನಿಂದ ತುಂಬಿಸಿ ಮಳೆಯ ನೀರು ಇಂಗುವಂತೆ ಮಾಡಿ, ಅಂತರ್ಜಲದಮಟ್ಟವನ್ನು ವೃದ್ದಿ ಮಾಡಬೇಕು, ಆದರೆ ಕೊಳವೆ ಬಾವಿಯ ಸುತ್ತಲೂ ಗುಂಡಿಯನ್ನು ತೋಡಿದ್ದು, ಚೆಕ್‍ಡ್ಯಾಂಗಳಿಗೆ ಬಳಕೆ ಮಾಡುವಂತಹ ಕಲ್ಲುಗುಂಡುಗಳನ್ನು ಕೊಳವೆಬಾವಿಯ ಸುತ್ತಲೂ ಹಾಕಿ ಮುಚ್ಚುವಂತಹ ಪ್ರಯತ್ನ ಮಾಡಿದ್ದಾರೆ, ಈ ಕಾಮಗಾರಿಯನ್ನು ಯಾರು ಮಾಡುತ್ತಿದ್ದಾರೆ ಎಂಬ ಮಾಹಿತಿ ಸ್ಥಳೀಯ ಗ್ರಾ.ಪಂ. ಸದಸ್ಯರಿಗೂ ಗೊತ್ತಿಲ್ಲ, ಗ್ರಾಮದಲ್ಲಿ ಚರಂಡಿಗಳು ಮುಚ್ಚಿ ಹೋಗಿದ್ದು, ಮನೆಗಳಲ್ಲಿ ಉಪಯೋಗಿಸಲ್ಪಟ್ಟ ನೀರು ರಸ್ತೆಗಳು ಸೇರಿದಂತೆ ಮನೆಗಳ ಪಕ್ಕದಲ್ಲಿ ಕುಂಟೆಗಳಲ್ಲಿ ನೀರು ನಿಲ್ಲುವಂತೆ ನಿಂತಿರುವುದರಿಂದ ಸಂಜೆಯಾದರೆ ವಿಪರೀತ ಸೊಳ್ಳೆಗಳ ಕಾಟದಿಂದಾಗಿ ಮಕ್ಕಳು ಸೇರಿದಂತೆ ಗ್ರಾಮದಲ್ಲಿ ಅನೇಕ ಮಂದಿ ನಾಗರೀಕರು ಜ್ವರದ ಪ್ರಕರಣಗಳಿಂದಾಗಿ ಆಸ್ಪತ್ರೆಗಳಿಗೆ ಹೋಗಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುವಂತಾಗಿದೆ, ಗ್ರಾಮದಲ್ಲಿರುವ ಗೋಕುಂಟೆಯ ಜಾಗವನ್ನು ಕೆಲವು ಮಂದಿ ಪ್ರಭಾವಿಗಳು ಗ್ರಾಮ ಪಂಚಾಯ್ತಿಯಲ್ಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡಿರುವ ಬಗ್ಗೆ ಅನುಮಾನಗಳಿದ್ದು, ಅಧಿಕಾರಿಗಳು ಈ ವಿಚಾರವನ್ನು ಬಹಿರಂಗಪಡಿಸಬೇಕು ಎಂದು ಸ್ಥಳೀಯ ನಾಗರೀಕರು ಆರೋಪ ಮಾಡಿದ್ದಾರೆ.
ಗ್ರಾಮದ ನಾಗರೀಕರಿಗೆ ಕುಡಿಯುವ ನೀರಿಗಾಗಿ ಪೈಪ್‍ಲೈನ್ ಅಳವಡಿಕೆ: ಗ್ರಾಮದಲ್ಲಿನ ಪ್ರತಿಯೊಂದು ಕುಟುಂಬಗಳಿಗೂ ವೈಯಕ್ತಿಕ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಪೈಪ್‍ಲೈನ್ ಮೇಲೆಯೇ ಅಳವಡಿಸಲಾಗಿದೆ, ಗ್ರಾಮದಲ್ಲಿ ಸಿ.ಸಿ. ರಸ್ತೆಗಳನ್ನು ಮಾಡುವುದರಿಂದ ರಸ್ತೆಯ ಮೇಲೆಯೇ ಒಂದೂವರೆ ಅಡಿ ಬರುವುದರಿಂದ ಸರಿ ಹೋಗುತ್ತದೆ, ಇಂಗು ಗುಂಡಿಯ ಬಳಿಯ ಕಲ್ಲುಗಳು ಹಾಕಿರುವುದು ಗಮನಕ್ಕೆ ಬಂದ ನಂತರ ಕಾಮಗಾರಿ ಸ್ಥಗಿತಗೊಳಿಸಿದ್ದೇವೆ, ಇದುವರೆಗೂ ಬಿಲ್ಲು ಮಾಡಿಲ್ಲ, ಕಾಮಗಾರಿ ಯಾರು ಮಾಡುತ್ತಿದ್ದಾರೆ ಎಂದು ಗೊತ್ತಿಲ್ಲ ಹಾಲಿ ಸದಸ್ಯ ವೆಂಕಟರೆಡ್ಡಿ ತಿಳಿಸಿದ್ದಾರೆ.
ಗ್ರಾಮದ ಮುಖಂಡರಾದ ಗುಡಿಹಳ್ಳಿ ಚಂದ್ರು, ನಾರಾಯಣಸ್ವಾಮಿ, ಕೆಂಪಣ್ಣ, ವೇಣುಗೋಪಾಲ್, ಮುನಿತಿಮ್ಮಯ್ಯ, ಗೋಪಾಲ್, ನರಸಿಂಹಮೂರ್ತಿ, ಬಿ.ಎನ್.ಮೂರ್ತಿ, ರಮೇಶ್, ನವೀನ್‍ಗೌಡ, ಮಂಜುನಾಥ್, ಮುಂತಾದವರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -