ಜೀವಾಮೃತವು ಸಸ್ಯಗಳ ಬೆಳವಣಿಗೆಯ ಪ್ರಚೋದಕಗಳಲ್ಲೊಂದಾಗಿದೆ. ಇದರಲ್ಲಿ ಅನೇಕ ರೀತಿಯ ಉಪಯುಕ್ತ ಸೂಕ್ಷ್ಮಜೀವಿಗಳಿದ್ದು ಸಸ್ಯಗಳಿಗೆ ಬೇಕಾಗಿರುವ ಎಲ್ಲಾ ಪೋಷಕಾಂಶಗಳನ್ನು ಒದಗಿಸುತ್ತದೆ ಎಂದು ಸಂಪನ್ಮೂಲ ವ್ಯಕ್ತಿ ಶ್ರೀನಿವಾಸ ಶರ್ಮ ತಿಳಿಸಿದರು.
ತಾಲ್ಲೂಕಿನ ಎಸ್.ದೇವಗಾನಹಳ್ಳಿ ಪಂಚಾಯ್ತಿಯ ಇರುಗಪ್ಪನಹಳ್ಳಿ ಗ್ರಾಮದಲ್ಲಿ ಈಚೆಗೆ ಎಫ್‌ಇಎಸ್ ಸಂಸ್ಥೆ ರೈತರಿಗೆ ಆಯೋಜಿಸಿದ್ದ ಹಿಂದಿನ ಕೃಷಿ ಪದ್ಧತಿಗಳ ಪುನರುಜ್ಜೀವನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಗಣಿ,ಗಂಜಲ, ಉದುರಿದ ಎಲೆಗಳಿಂದ ‘ಜೀವಾಮೃತ’ ತಯಾರಿಸಿ ಬೆಳೆಗಳಿಗೆ ಅಮೃತ ಉಣಿಸಬಹುದು. ದನಕರುಗಳ ಗಂಜಲವನ್ನು ಶೇಖರಣೆ ಮಾಡಿ ನೀರು ಸೇರಿಸಿ ಗಿಡಗಳಿಗೆ ಬಳಸಬಹುದು. ಜೀವ ಸರಪಳಿಯನ್ನು ಉಳಿಸಿಕೊಂಡಲ್ಲಿ ಎಲ್ಲರೂ ಬದುಕಬಹುದು. ಪಂಚಗವ್ಯ ಎಂಬ ಪದವು ಸಾವಯವ ಕೃಷಿಯಲ್ಲಿ ಬಹುವಾಗಿ ಬಳಕೆಯಾಗುವ ಪದ. ಆಕಳಿಂದ ಬರುವ ಐದು ಉತ್ಪನ್ನಗಳ (ಆಕಳ ಸಗಣಿ, ಗಂಜಳ, ಹಾಲು,ಮೊಸರು ಮತ್ತು ತುಪ್ಪವನ್ನು 5:3:2:2:1 ರ ಅನುಪಾತದಲ್ಲಿ) ಮಿಶ್ರಣವಿದು. ಪಂಚಗವ್ಯದಲ್ಲಿ ಮುಖ್ಯ ಪೋಷಕಾಂಶಗಳು ಮತ್ತು ಬೆಳವಣಿಗೆ ಚೋದಕಗಳಿದ್ದು ಬೆಳೆಯ ಬೆಳವಣಿಗೆಗೆ ಸಹಕಾರಿಯಾಗುತ್ತವೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಸಾಲು ಪದ್ಧತಿ ಹಾಗೂ ಕಡಿಮೆ ಬಂಡವಾಳದಿಂದ ಹೆಚ್ಚು ಇಳುವರಿ ಪಡೆಯುವ ಬಗ್ಗೆ ರೈತರಿಗೆ ಮಾಹಿತಿಯನ್ನು ನೀಡಿದರು.
ಎಫ್‌ಇಎಸ್ ಸಂಸ್ಥೆಯ ಗೋಪಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -