ನಗರದ ಸಿ.ಆರ್.ಲೇಔಟ್ ನಿವಾಸಿ ಜಾನಪದ ತಜ್ಞ ಡಾ.ಜಿ.ಶ್ರೀನಿವಾಸಯ್ಯ(43) ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪತ್ನಿ, ಇಬ್ಬರು ಮಕ್ಕಳು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಚಿಕ್ಕಬಳ್ಳಾಪುರದ ಪಂಚಗಿರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದ ಡಾ.ಜಿ.ಶ್ರೀನಿವಾಸಯ್ಯ ಸಂಶೋಧನಾ ಲೇಖನಗಳ ಸಂಗ್ರಹ ಪುಸ್ತಕ ‘ತಣಿಗೆ’ ರಚಿಸಿದ್ದಾರೆ. ಹಲವು ಕೃತಿಗಳನ್ನು ತೆಲುಗಿನಿಂದ ಕನ್ನಡಕ್ಕೆ ಅನುವಾದಿಸಿದ್ದರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಯೋಜನೆ ಗ್ರಾಮ ಚರಿತ್ರೆ ಕೋಶದ ಜಿಲ್ಲಾ ಸಂಚಾಲಕರಾಗಿದ್ದರು. ಮೃತರ ಅಂತ್ಯಕ್ರಿಯೆಯನ್ನು ಸವರ ಸ್ವಗ್ರಾಮ ಶ್ರೀನಿವಾಸಪುರ ತಾಲ್ಲೂಕಿನ ದೇವುಲಪಲ್ಲಿಯಲ್ಲಿ ಬುಧವಾರ ನೆರವೇರಿಸಲಾಯಿತು.
- Advertisement -
- Advertisement -
Subscribe to ನಮ್ಮ ಶಿಡ್ಲಘಟ್ಟ Newspaper
Launching Soon! Register for your Free Newspaper Copy Today.
- Advertisement -
- Tags
- sidlaghatta
Just Published
Latest news
- Advertisement -
Covid-19
Silk
- Advertisement -
ಸಂತಾಪ
ಡಾ. ಶ್ರೀನಿವಾಸಯ್ಯ ದೈವಾದೀನರಾದ ವಿಷಯ ತಿಳಿದು ಮೌನಗೊಂಡೆ. ನಮ್ಮ ಗೆಳೆತನ ಬಹಳಾ ಇತ್ತೀಚಿನದು, ಜಾನಪದ ವಿಚಾರವಾಗಿ, ಗೊಂಬೆಯಾಟ ಕಲಾಕಾರರ ವಿಚಾರವಾಗಿ,ಗಂಟೆಗಟ್ಟಲೆ ಫೋನ್ ಮೂಲಕ ಮಾತನಾಡಿದ್ದೇವೆ. ಈಗ ಎಲ್ಲವೂ ನೆನಪು ಮಾತ್ರ, ಅಮೂಲ್ಯ ಚಿಂತನಶೀಲ ಬರಹಗಾರ, ತನ್ನ ಉಪನ್ಯಾಸ ಹುದ್ದೆಯಲ್ಲಿದ್ದ ಸಮಸ್ಯೆಗಳನ್ನು ಹಂಚಿಕೊಳ್ಳುತ್ತಿದ್ದರು, ಮೊನ್ನೆ ಮೊನ್ನೆಯತನಕ ಡಾ. ಅಂಬೇಡ್ಕರ್ ಸಾಹಿತ್ಯ ಗ್ರಂಥಗಳನ್ನು ತರಿಸಿಕೊಳ್ಳಲು ಸಂಪರ್ಕವಿರಿಸಿಕೊಂಡಿದ್ದರು, ಕರುಣೆಯಿಲ್ಲದ ವಿಧಿ . . .
ಶ್ರೀನಿವಾಸಯ್ಯ ಅವರ ದಿವ್ಯ ಚೇತನಕ್ಕೆ ಸದಾ ಚಿರಶಾಂತಿ ಸದ್ಗತಿ ಸಿಗಲೆಂದು ದೇವರಲ್ಲಿ ಪ್ರಾರ್ಥನೆ, ಅಗಲಿದ ಚೇತನದ ಹತ್ತಿದ ಬಂಧುಗಳಿಗೆ, ಸ್ನೇಹಿತರಿಗೆ ಶೋಕವನ್ನು ಸಹಿಸಿಕೊಳ್ಳುವ ಶಕ್ತಿ ದೇವರು ನೀಡಲಿ.
ನಮನಗಳು
ಪ್ರೊ.ಎಸ್.ಎ.ಕೃಷ್ಣಯ್ಯ-ಉಡುಪಿ
೯೭೪೧೫೦೩೫೦೯