ನಗರದ ಕಾಂಗ್ರೆಸ್ ಭವನದ ಹಿಂಭಾಗದಲ್ಲಿರುವ ನಂದಿನಿ ವಿವಿದೋದ್ಧೇಶ ಸಹಕಾರ ಸಂಘದ ವತಿಯಿಂದ ಶುಕ್ರವಾರ ಬಿತ್ತನೆ ಬೀಜ, ಕ್ರಿಮಿನಾಶಕ ಔಷಧಿಗಳು, ದಿನಸಿ, ನಿತ್ಯೋಪಯೋಗಿ ವಸ್ತುಗಳು ಹಾಗೂ ನಂದಿನಿ ಹಾಲು ಮತ್ತು ಹಾಲು ಉತ್ಪನ್ನಗಳ ಮಾರಾಟ ಮಳಿಗೆಗಳನ್ನು ಉದ್ಘಾಟಿಸಲಾಯಿತು.
‘ರೈತರ ಹಿತದೃಷ್ಠಿಯಿಂದ ಈಗಾಗಲೇ ರಸಗೊಬ್ಬರ ಹಾಗೂ ಬೂಸಾಹಿಂಡಿ ಮಾರಾಟವನ್ನು ಪ್ರಾರಂಭಿಸಿದ್ದು, ಹೈನುಗಾರಿಕೆಯನ್ನು ನಂಬಿರುವ ರೈತರಿಗೆ ಅನುಕೂಲವಾಗಲೆಂದು ಈ ದಿನ ಹಲವಾರು ಮಳಿಗೆಗಳನ್ನು ನಂದಿನಿ ವಿವಿದೋದ್ಧೇಶ ಸಹಕಾರ ಸಂಘದ ವತಿಯಿಂದ ಪ್ರಾರಂಭಿಸಲಾಗುತ್ತಿದೆ. ಹಾಲಿನ ಗುಣಮಟ್ಟ ಹೆಚ್ಚಿಸಲು ಬೂಸಾಹಿಂಡಿ, ಗುಣಮಟ್ಟದ ದಿನಬಳಕೆ ವಸ್ತುಗಳು ಹಾಗೂ ಮರಳಿ ಮನೆಗೆ ಎಂಬ ಪರಿಕಲ್ಪನೆಯ ರೈತರಿಂದ ಪಡೆದ ಹಾಲನ್ನು ವಿವಿಧ ಉತ್ಪನ್ನಗಳನ್ನಾಗಿಸಿ ಪುನಃ ಅವರ ಬಳಿಗೆ ತರುವ ಕೆಲಸವೂ ನಡೆದಿದೆ. ಇದರಿಂದ ರೈತರಿಗೆ ಸಾಕಷ್ಟು ಹಣ, ಸಮಯ ಉಳಿತಾಯವಾಗಲಿದ್ದು, ಆರ್ಥಿಕ ಚೇತರಿಕೆಯ ಕ್ರಮವಾಗಿದೆ’ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ಕೋಚಿಮುಲ್ ಅಧ್ಯಕ್ಷ ಕಾಂತರಾಜ್, ನಿರ್ದೇಶಕ ಬಂಕ್ ಮುನಿಯಪ್ಪ, ಗುಡಿಯಪ್ಪ, ನಾಗರತ್ನಮ್ಮ, ರತ್ನಮ್ಮ, ಉಮೇಶ್, ಮುನಿಕೃಷ್ಣಪ್ಪ, ಸೂರ್ಯನಾರಾಯಣಗೌಡ, ದೊಣ್ಣಹಳ್ಳಿ ರಾಮಣ್ಣ, ಅಶ್ವತ್ಥರೆಡ್ಡಿ, ಡಾ.ಈಶ್ವರಯ್ಯ, ಮುನಾಂಜಿನಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -