ಪಟ್ಟಣದ ದಿವ್ಯಭಾರತ್ ಕರಾಟೆ ಡೊ ವಿದ್ಯಾರ್ಥಿಗಳು ಗುರುವಾರ ವಿಜಯಪುರದಲ್ಲಿ ನಡೆದ ಗೋಜು ರಿಯೊ ಸೇವಾ ಕಾಯ್ ಅಂತರ ಶಾಲಾ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಪದಕಗಳನ್ನು ಪಡೆದಿದ್ದಾರೆ.
ವೈಟ್‌ಬೆಲ್ಟ್ ಕತಾ ಸ್ಪರ್ಧೆಯಲ್ಲಿ ಹೇಮಂತ್(ಪ್ರಥಮ), ಗ್ರೀನ್‌ಬೆಲ್ಟ್ ಕತಾ ಸ್ಪರ್ಧೆಯಲ್ಲಿ ಜಯಸಿಂಹ(ದ್ವಿತೀಯ), 15 ರಿಂದ 20 ಕೆಜಿ ಕುಮಿತೆ ಸ್ಪರ್ಧೆಯಲ್ಲಿ ಜಗದೀಶ್(ಪ್ರಥಮ), ಹೇಮಂತ್(ದ್ವಿತೀಯ), 20 ರಿಂದ 25 ಕೆಜಿ ಕುಮಿತೆ ಸ್ಪರ್ಧೆಯಲ್ಲಿ ಜಯಸಿಂಹ(ಪ್ರಥಮ), ಚೇತನ್(ದ್ವಿತೀಯ), ಜಗನ್ ಮತ್ತು ಹರ್ಷಿತ್ (ತೃತೀಯ), 25 ರಿಂದ 30 ಕೆಜಿ ಕುಮಿತೆ ಸ್ಪರ್ಧೆಯಲ್ಲಿ ಪುನೀತ್(ಪ್ರಥಮ), ನಂದೀಶ್ ಮತ್ತು ಹರ್ಷನ್ (ದ್ವಿತೀಯ), 30 ರಿಂದ 35 ಕೆಜಿ ಕುಮಿತೆ ಸ್ಪರ್ಧೆಯಲ್ಲಿ ಓಂ ದೇಶಮುದ್ರೆ(ಪ್ರಥಮ), 35 ರಿಂದ 40 ಕೆಜಿ ಕುಮಿತೆ ಸ್ಪರ್ಧೆಯಲ್ಲಿ ನವೀನ್(ದ್ವಿತೀಯ), 40 ರಿಂದ 45 ಕೆಜಿ ಕುಮಿತೆ ಸ್ಪರ್ಧೆಯಲ್ಲಿ ಪ್ರದೀಪ್(ಪ್ರಥಮ), ಜಸ್ವಂತ್‌ರೆಡ್ಡಿ ಮತ್ತು ನರಸಿಂಹ ಸಮಾಧಾನಕರ ಬಹುಮಾನ ಪಡೆದಿದ್ದಾರೆಂದು ದಿವ್ಯಭಾರತ್ ಕರಾಟೆ ಡೊ ಶಿಕ್ಷಕ ಅರುಣ್‌ಕುಮಾರ್ ತಿಳಿಸಿದ್ದಾರೆ.
ಗೋಜು ರಿಯೊ ಕರಾಟೆ ಡೊ ಸೇವಕೈ ಇಂಡಿಯಾ ಸಂಸ್ಥೆಯ ಮುಖ್ಯ ಶಿಕ್ಷಕ ಸಂದೀಪ್ ಎಸ್.ಸಾಲ್ವಿ ಮತ್ತು ರಾಜ್ಯ ಸಂಸ್ಥೆಯ ಶಿಕ್ಷಕ ಎಂ.ಡಿ.ಜಬೀವುಲ್ಲಾ ಪ್ರಶಸ್ತಿಗಳನ್ನು ವಿಜೇತರಿಗೆ ವಿತರಿಸಿದರು.
- Advertisement -
- Advertisement -
- Advertisement -
- Advertisement -