ಇಂದಿನ ಯಾಂತ್ರಿಕ ಜೀವನದಿಂದ ಜನರು ಮಾನಸಿಕ ನೆಮ್ಮದಿಯಿಂದ ವಂಚಿತರಾಗುತ್ತಿದ್ದು ಆದ್ಯಾತ್ಮಿಕತೆ ಮತ್ತು ಧ್ಯಾನದಿಂದ ಮಾತ್ರ ನೆಮ್ಮದಿಯ ಜೀವನ ಸಾಗಿಸಲು ಸಾದ್ಯ ಎಂದು ಜಿಲ್ಲಾ ಆರ್‍ಯ ವೈಶ್ಯ ಮಹಾಸಭಾದ ಕಾರ್ಯದರ್ಶಿ ಸ್ವರ್ಣಲತಾ ಗುಪ್ತಾ ತಿಳಿಸಿದರು.
ಪಟ್ಟಣದ ಷರಾಫ್ ಬೀದಿಯಲ್ಲಿರುವ ಬ್ರಹ್ಮ ಕುಮಾರಿ ವಿಶ್ವ ವಿದ್ಯಾಲಯದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ “ವಿಶ್ವ ಬಂದುತ್ವ ದಿನಾಚರಣೆ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಸುದೈವ ಕುಟುಂಬಕಂ ಎಂಬ ದ್ಯೇಯದೊಂದಿಗೆ ಬ್ರಹ್ಮ ಕುಮಾರಿಯ ವಿಶ್ವ ವಿದ್ಯಾಲಯವು ಜಗತ್ತಿನಾದ್ಯಂತ ಶಾಂತಿ ಸಂದೇಶಗಳನ್ನು ನೀಡುತ್ತಿದೆ. ವಿಶ್ವದಲ್ಲಿಂದು ಅಶಾಂತಿ ಜಾತಿ ಸಂಘರ್ಷಗಳ ನಡುವೆ ಎಲ್ಲ ವರ್ಗದ ಜನರಿಗೂ ನೆಮ್ಮದಿಯ ಜೀವನ ನಡೆಸುವ ಶಿಕ್ಷಣ ನೀಡುತ್ತಿರುವ ಏಕೈಕ ಸಂಸ್ಥೆ ಬ್ರಹ್ಮ ಕುಮಾರಿ ವಿಶ್ವವಿದ್ಯಾನಿಲಯವಾಗಿದ್ದು ಎಲ್ಲ ವರ್ಗದ ಎಲ್ಲ ಧರ್ಮಗಳ ಜನರು ಬ್ರಹ್ಮ ಕುಮಾರಿ ಶಾಂತಿ ಕೇಂದ್ರಗಳಿಗೆ ಭೇಟಿ ನೀಡಿ ಆದ್ಯಾತ್ಮಿಕ ಧ್ಯಾನದಿಂದ ಪುನೀತರಾಗಬಹುದು. ನಿತ್ಯ ಜೀವನದಲ್ಲಿ ದ್ಯಾನಾಸಕ್ತಿಯನ್ನು ಬೆಳಸಿಕೊಂಡಲ್ಲಿ ಮಾತ್ರ ವಿಶ್ವ ಬಂದುತ್ವ ದಿನ ಆಚರಣೆ ಮಾಡುವುದಕ್ಕೆ ಮಹತ್ವದೊರೆಯಲಿದೆ ಎಂದರು.
ವಿಶ್ವ ಬಂದುತ್ವ ಮತ್ತು ಗೋಕುಲಾಷ್ಠಮಿಯ ಮಹತ್ವದ ಬಗ್ಗೆ ಬ್ರಹ್ಮ ಕುಮಾರಿ ವಿಶ್ವವಿದ್ಯಾಲಯದ ಸಂಚಾಲಕಿ ಜಯಕ್ಕ ಪ್ರವಚನ ನೀಡಿದರು. ಗೋಕುಲಾಷ್ಠಮಿಯಂದು ಏರ್ಪಡಿಸಲಾಗಿದ್ದ ಕೃಷ್ಣ ವೇಷಧಾರಿ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸರಸ್ವತಿ ವಿದ್ಯಾಸಂಸ್ಥೆಗಳ ಅಧ್ಯಕ್ಷ ವೆಂಕಟಸುಬ್ಬರಾವ್, ಕ.ಸ.ಪ. ನಿಕಟ ಪೂರ್ವ ಅದ್ಯಕ್ಷ ರೂಪಸಿ ರಮೇಶ್, ನಾಗರತ್ನ, ರಮಾಮಣಿ, ವಿಮಲ, ಶೈಲ ಮತ್ತಿರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -