ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮತ ಚಲಾಯಿಸಲೆಂದು ಬರುತ್ತಿದ್ದವರ ಕಾರು ಬಾವಿಯಲ್ಲಿ ಬಿದ್ದ ಪ್ರಕರಣ ತಾಲ್ಲೂಕಿನ ಕಂಬದಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಪ್ರಯಾಣಿಸುತ್ತಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಂಬದಹಳ್ಳಿಯ ಡೈರಿ ಬಳಿ ರಸ್ತೆ ಬದಿಯಲ್ಲಿರುವ 50 ಅಡಿ ಆಳದ ನೀರಿಲ್ಲದ ಬಾವಿಗೆ ಸ್ಯಾಂಟ್ರೋ ಕಾರು ಬಿದ್ದಿದ್ದು, ಕಾರಿನಲ್ಲಿದ್ದ ಮುರಳಿ, ನರೇಶ್ಬಾಬು, ಶರ್ಮಿಳಾ ಮತ್ತು ಸಿದ್ದರಾಜು ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಪ್ರತಿಯೊಂದು ಮತವೂ ಅಮೂಲ್ಯವಿರುವ ಕಾರಣ ಕಂಬದಹಳ್ಳಿಯಲ್ಲಿ ಮತ ಹಾಕಿಸಲು ಮತದಾರರನ್ನು ಸಂಜೆ 5 ಗಂಟೆಯೊಳಗೆ ತಲುಪಬೇಕೆಂದು ದೇವನಹಳ್ಳಿಯಿಂದ ಕರೆತರುತ್ತಿದ್ದಾಗ ಕಾರಿನ ಚಕ್ರ ಪಂಚರ್ರಾದ ಕಾರಣ ಚಾಲಕನ ಹತೋಟಿ ತಪ್ಪಿ ರಸ್ತೆ ಬದಿಯಲ್ಲಿದ್ದ ಬಾವಿಗೆ ಕಾರು ಬಿದ್ದಿದೆ. ತಕ್ಷಣ ಗ್ರಾಮಸ್ಥರು ಹಗ್ಗ ಮತ್ತು ಗೋಣಿಚೀಲಗಳನ್ನು ಬಳಸಿ ಸಹಾಯದಿಂದ ಕಾರಿನಲ್ಲಿದ್ದವರನ್ನು ಮೇಲೆತ್ತಿದ್ದಾರೆ.
- Advertisement -
- Advertisement -
- Advertisement -
- Advertisement -