20.8 C
Sidlaghatta
Sunday, July 6, 2025

ರಾಷ್ಟ್ರೀಯ ಸಂಪನ್ಮೂಲಗಳ ರಕ್ಷಣೆ ಅವಶ್ಯಕ

- Advertisement -
- Advertisement -

ಗ್ರಾಮೀಣ ಪ್ರದೇಶಗಳ ಅಭಿವೃದ್ಧ್ದಿಯಲ್ಲಿ ಯಾವುದೇ ರಾಜಕೀಯ ಬೆರಸದೇ ಗ್ರಾಮಗಳ ಏಳಿಗೆಗಾಗಿ ಎಲ್ಲರೂ ಸಹಕರಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್. ನಟರಾಜ್ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ, ಕಂದಾಯ ಇಲಾಖೆ, ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ತಾಲೂಕು ಕಛೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಸಂಪನ್ಮೂಲಗಳ ರಕ್ಷಣೆಯ ಕುರಿತು ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರಕಾರಿ ಸೇವೆಯಲ್ಲಿರುವವರು ಮೊದಲು ಸಂವಿಧಾನದಲ್ಲಿ ನಮಗಿರುವ ಮೂಲಭೂತ ಹಕ್ಕುಗಳು ಹಾಗು ಕರ್ತವ್ಯಗಳ ಬಗ್ಗೆ ಮೊದಲು ತಿಳಿದುಕೊಳ್ಳುವ ಮೂಲಕ ನಾಗರೀಕರಿಗೆ ಈ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಬೇಕು.
ಮಾನವನ ಜೀವನದ ಜೊತೆ ಅವಿನಾಭಾವ ಸಂಬಂಧ ಹೊಂದಿರುವ ನಮ್ಮ ಸುತ್ತ ಮುತ್ತಲಿನ ಪರಿಸರ ಕಾಪಾಡುವುದು ನಮ್ಮೆಲ್ಲರ ಆಧ್ಯ ಕರ್ತವ್ಯ ಎಂದ ಅವರು ಮಾನವನ ಅತಿಯಾಸೆಯ ಫಲವಾಗಿ ಪರಿಸರ ನಾಶವಾಗುತ್ತಿದ್ದು ಸಕಾಲದಲ್ಲಿ ಮಳೆಯಾಗದೇ ಹವಾಮಾನ ವೈಪರೀತ್ಯವುಂಟಾಗಿ ಜನರ ಜೀವನ ತುಂಬಾ ಕಷ್ಟಕರವಾಗಿ ರೂಪಗೊಂಡಿದೆ ಹಾಗಾಗಿ ಈಗಲಾದರೂ ಎಚ್ಚೆತ್ತುಕೊಂಡು ಪರಿಸರ ರಕ್ಷಣೆಗೆ ಮುಂದಾಗದಿದ್ದಲ್ಲಿ ಮುಂಬರುವ ದಿನಗಳಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ ಎಂದರು.
ನಮ್ಮ ಪೂರ್ವಜರಿಗೆ ಮುಂದಿನ ಫೀಳಿಗೆಯ ಮೇಲಿದ್ದ ಕಾಳಜಿಯಿಂದ ಕೆರೆ, ಕುಂಟೆ, ಬಾವಿ, ಕಲ್ಯಾಣಿಗಳನ್ನು ನಿರ್ಮಿಸಿದ್ದರು. ಆದರೆ ಈಗಿನವರು ಅವನ್ನೆಲ್ಲಾ ಒತ್ತುವರಿ ಮಾಡಿಕೊಂಡು ಲೇಔಟ್ ನಿರ್ಮಾಣ ಮಾಡುವುದು ಸೇರಿದಂತೆ ವಿವಿಧ ಕಟ್ಟಡ ನಿರ್ಮಾಣ ಮಾಡುವುದರಿಂದ ನೀರಿನ ಸಂಗ್ರಹಣೆ ಮಾಡಲಾಗದೇ ಈಗಾಗಲೇ ಜಿಲ್ಲೆಯಾಧ್ಯಂತ 1500-2000 ಅಡಿ ಆಳದ ಕೊಳವೆ ಬಾವಿಯ ವಿಷಪೂರಿತ ನೀರು ಸೇವಿಸುವಂತಾಗಿದೆ.
ಪ್ರತಿಯೊಬ್ಬರೂ ತಮ್ಮ ಸುತ್ತ ಮುತ್ತಲಿನ ಪರಿಸರ ಉಳಿಸುವ ಜೊತೆಗೆ ನೀರಿನ ಬಳಕೆಯನ್ನು ಮಿತವಾಗಿ ಮಾಡಬೇಕು. ಗ್ರಾಮ ಪಂಚಾಯಿತಿ ಕಾರ್ಯಾಲಯಗಳಿಗೆ ಇದೀಗ ಸಾಕಷ್ಟು ಅಧಿಕಾರ ನೀಡಿದ್ದು ಗ್ರಾಮಕ್ಕೆ ಅಗತ್ಯವಿರುವ ಎಲ್ಲಾ ಸವಲತ್ತುಗಳನ್ನು ಗ್ರಾಮ ಪಂಚಾಯಿತಿಯಿಂದ ಪಡೆದುಕೊಳ್ಳಬಹುದು. ಹಾಗಾಗಿ ಗ್ರಾ.ಪಂ ಅಭಿವೃದ್ಧ್ದಿ ಅಧಿಕಾರಿಗಳು ಸೇರಿದಂತೆ ಕಾರ್ಯದರ್ಶಿಗಳು ಪಂಚಾಯತ್ ರಾಜ್ ಕಾಯಿದೆಯನ್ನು ಸಮಗ್ರವಾಗಿ ತಿಳಿದುಕೊಂಡು ಸರಕಾರಿ ಸ್ಥಳ ಸೇರಿದಂತೆ ಗ್ರಾಮದ ಕೆರೆ, ಕುಂಟೆ, ಗೋಕುಂಟೆ, ಗೋಮಾಳ ಕಲ್ಯಾಣಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕು.
ಯಾರದೋ ಒತ್ತಡಗಳಿಗೆ ಮಣಿದು ಸರಕಾರಿ ಸ್ಥಳವನ್ನು ಬೇರೊಬ್ಬರಿಗೆ ಖಾತೆ ಮಾಡಿ ಕೊಡುವುದಾಗಲಿ ಕೆರೆ ಕುಂಟೆ ಒತ್ತುವರಿ ಮಾಡಿರುವವರ ರಕ್ಷಣೆಗೆ ನಿಂತಲ್ಲಿ ಕಾನೂನು ಪ್ರಕಾರ ತಾವು ಶಿಕ್ಷ ಅನುಭವಿಸಬೇಕಾಗುತ್ತದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಂ. ಪಾಪಿರೆಡ್ಡಿ ಮಾತನಾಡಿ ಗ್ರಾಮ ಪಂಚಾಯಿತಿ ಕಾರ್ಯಾಲಯಗಳಿಗೆ ಈಗ ಕೇಂದ್ರ ಹಾಗು ರಾಜ್ಯ ಸರಕಾರ ಸಂಪೂರ್ಣ ಸವಲತ್ತು ನೀಡಿದ್ದು ಅಧಿಕಾರಿಗಳು ಬದ್ದತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು. ಪಂಚಾಯತ್ ರಾಜ್ ಕಾಯಿದೆಯನ್ವಯ ಹಾಗೂ ಸ್ಥಳೀಯ ಜನಪ್ರತಿನಿಧಗಳ ಸಹಕಾರ ಪಡೆದುಕೊಂಡು ತಾಲೂಕಿನ 28 ಗ್ರಾಮ ಪಂಚಾಯಿತಿಗಳನ್ನು ಮಾದರಿ ಗ್ರಾಮ ಪಂಚಾಯಿತಿಗಳನ್ನಾಗಿಸಲು ಶ್ರಮಿಸಬೇಕು ಎಂದರು.
ವಕೀಲರಾದ ಎಂ.ಬಿ. ಲೋಕೇಶ್ ಪಂಚಾಯತ್ ರಾಜ್ ಕಾಯಿದೆ ಹಾಗು ರಾಷ್ಟ್ರೀಯ ಸಂಪನ್ಮೂಲಗಳ ರಕ್ಷಣೆ ಕುರಿತು ಮಾತನಾಡಿ, ರಾಷ್ಟ್ರೀಯ ಸಂಪನ್ಮೂಲಗಳಲ್ಲಿ ಎರಡು ರೀತಿಯ ಸಂಪನ್ಮೂಲಗಳಿದ್ದು ನವೀಕರಸಲಾಗುವ ಸಂಪನ್ಮೂಲ ಹಾಗು ನವೀಕರಿಸಲಾಗದ ಸಂಪನ್ಮೂಲಗಳು ಎಂದು ವಿಂಗಡಿಸಲಾಗಿದೆ.
ಬೆಳಕು, ಗಾಳಿ, ನೀರು ನವೀಕರಸಲಾಗುವ ಸಂಪನ್ಮೂಲಗಳಾಗಿದ್ದು ಇವನ್ನು ನಮ್ಮ ಸುತ್ತಮುತ್ತಲಿನ ಪರಿಸರ ಸಂರಕ್ಷಣೆ ಮಾಡುವುದರೊಂದಿಗೆ ನವೀಕರಿಸಕೊಳ್ಳಬಹುದು ಆದರೆ ಭೂಮಿಯಲ್ಲಿನ ಖನಿಜ ಸಂನ್ಮೂಲಗಳು ನವೀಕರಿಸಲಾಗದ ಸಂಪನ್ಮೂಲವಾಗಿದ್ದು ಮನುಷ್ಯನ ಅತಿ ಆಸೆ ಹಾಗು ಬಳಕೆಯಿಂದ ರಾಷ್ಟ್ರೀಯ ಸಂಪನ್ಮೂಲ ಬರಿದಾಗುತ್ತಿದ್ದು ಇದರ ನಿಯಂತ್ರಣಕ್ಕೆ ಗ್ರಾಮ ಪಂಚಾಯಿತಿಗೆ ಹೆಚ್ಚೆನ ಅಧಿಕಾರ ನೀಡಲಾಗಿದೆ.
ಪಂಚಾಯತ್ ರಾಜ್ ಕಾಯಿದೆಯಡಿ ಸರಕಾರ ಗ್ರಾಮ ಪಂಚಾಯಿತಿಗಳಿಗೆ ಹಲವಾರು ಕಾನೂನುಗಳನ್ನು ರೂಪಿಸಿದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ನೀರಿನ ಮೂಲಗಳನ್ನು ರಕ್ಷಣೆ ಮಾಡುವುದು ಸೇರಿದಂತೆ ಗಣಿಗಾರಿಕೆ ನಿಷೇಧದ ಬಗ್ಗೆ ಅಧಿಕಾರಿಗಳು ಶ್ರಮಿಸಬೇಕು ಎಂದರು.
ಹಿತ್ತಲಹಳ್ಳಿಯ ರೈತ ಹೆಚ್.ಎಂ. ಸುರೇಶ್ ನೀರಿನ ಸಂರಕ್ಷಣೆ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶ್ರೀಕಂಠ .ಎನ್.ಎ. ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಟಿ.ಎಲ್. ಸಂದೀಶ್, ಸಹಾಯಕ ಸರ್ಕಾರಿ ಅಭಿಯೋಜಕರಾದ ಎಸ್. ಕುಮುದಿನಿ, ತಹಸೀಲ್ದಾರ್ ಕೆ.ಎಂ. ಮನೋರಮಾ, ತಾ.ಪಂ ಸಹಾಯಕ ನಿರ್ದೇಶಕ ಶ್ರೀನಾಥಗೌಡ, ಸಿಡಿಪಿಓ ಲಕ್ಷ್ಮಿದೇವಮ್ಮ, ವಕೀಲರ ಸಂಘದ ಕಾರ್ಯದರ್ಶಿ ಬೈರಾರೆಡ್ಡಿ, ವಕೀಲ ಮಂಜುನಾಥ್, ಇನ್ನಿತರರು ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!