ಭುವನ್ ತಂತ್ರಾಂಶದ ಮೂಲಕ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕಾಮಗಾರಿಗಳ ಮಾಹಿತಿಯನ್ನು ಜಿಯೋಟ್ಯಾಗ್ ಪೋಟೋ ಸಹಿತ ತಂತ್ರಾಂಶದಲ್ಲಿ ದಾಖಲಿಸುವ ಕಾರ್ಯದಲ್ಲಿ ತಾಲ್ಲೂಕಿನ ವೈ.ಹುಣಸೇನಹಳ್ಳಿ ಗ್ರಾಮ ಪಂಚಾಯಿತಿಗೆ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ.
ಜೂನ್ 19ರಂದು ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವೈ.ಹುಣಸೇನಹಳ್ಳಿ ಗ್ರಾಮಪಂಚಾಯಿತಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗುವುದು.
೨೦೦೯-೧೦ನೇ ಸಾಲಿನ ನಂತರದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯಲ್ಲಿ ಕೈಗೊಳ್ಳಲಾಗಿರುವ ಎಲ್ಲಾ ಕಾಮಗಾರಿಗಳನ್ನು ಭುವನ್ ತಂತ್ರಾಂಶದ ಮೂಲಕ ಜಿಯೋಟ್ಯಾಗ್ ಪೋಟೋಗಳನ್ನು ತೆಗೆದು ಕಾಮಗಾರಿಯ ವಿವರಗಳನ್ನು ಒಳಗೊಂಡ ಸಂಪೂರ್ಣ ಮಾಹಿತಿ ಹಾಗೂ ಕಾಮಗಾರಿ ಕೈಗೊಳ್ಳಲಾಗಿರುವ ನಿಖರ ಸ್ಥಳವನ್ನು ಗುರುತಿಸಿ ಆಕ್ಷಾಂಶ ರೇಖಾಂಶ ಸಹಿತ ತಂತ್ರಾಂಶದಲ್ಲಿ ದಾಖಲಿಸುವುದರಿಂದ ಒಂದೇ ಕಾಮಗಾರಿಗೆ ಎರಡು ಬಾರಿ ಪಾವತಿಗಳಾಗುವುದು ಒಳಗೊಂಡು ಇತರೆ ಯೋಜನೆಯಡಿ ಬೇರೆ ಅವಶ್ಯಕ ಸ್ಥಳದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ. ಹಾಗೂ ಈ ರೀತಿಯಾಗಿ ಗ್ರಾಮಪಂಚಾಯಿತಿಗಳಿಂದ ತಂತ್ರಾಂಶದಲ್ಲಿ ದಾಖಲಿಸಲಾದ ಕಾಮಗಾರಿಗಳ ಸಂಪೂರ್ಣ ಮಾಹಿತಿಯನ್ನು http://bhuvan.nrsc.gov.in ರ ವೆಬ್ ಸೈಟ್ ನಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು, ಈ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ವ್ಯಾಪ್ತಿಗೆ ಸೇರಿದ ಎಲ್ಲಾ ೨೮ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಂ.ವೆಂಕಟೇಶ್ ರವರ ಮಾರ್ಗದರ್ಶನದಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ಸಿಬ್ಬಂದಿ ೨೦೦೯-೧೦ ನೇ ಸಾಲಿನಿಂದ ಕೈಗೊಂಡ ಎಲ್ಲಾ ಕಾಮಗಾರಿಗಳನ್ನು ಭುವನ್ ತಂತ್ರಾಂಶದಲ್ಲಿ ದಾಖಲಿಸುವ ಮತ್ತು ಕಾಮಗಾರಿಗಳ ವಾಸ್ತವತೆಯನ್ನು ಪಾರದರ್ಶಕವಾಗಿ ಸಾರ್ವಜನಿಕ ವೀಕ್ಷಣೆಗೆ ವೆಬ್‌ಸೈಟ್ ನಲ್ಲಿ ಅವಕಾಶ ಕಲ್ಪಿಸಿದ್ದು, ಈ ಸಾಧನೆಗಾಗಿ ಮಹಾತ್ಮ ಗಾಂಧಿ-ನರೇಗಾ ಯೋಜನೆಯ ಕಾಮಗಾರಿಗಳ ಜಿಯೋಟ್ಯಾಗ್ ವಿಭಾಗದಲ್ಲಿ ವೈ.ಹುಣಸೇನಹಳ್ಳಿ ಗ್ರಾಮ ಪಂಚಾಯಿತಿಗೆ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ.
- Advertisement -
- Advertisement -
- Advertisement -
- Advertisement -