21.1 C
Sidlaghatta
Saturday, July 27, 2024

ಶಿಡ್ಲಘಟ್ಟದ ಶ್ರೀಕೃಷ್ಣಕಲಾ ಕುಂಜ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳಿಂದ ಆಮ್ರಪಾಲಿ ನೃತ್ಯರೂಪಕ ಪ್ರದರ್ಶನ

- Advertisement -
- Advertisement -

ಪಟ್ಟಣದ ಶ್ರೀಕೃಷ್ಣಕಲಾ ಕುಂಜ ನೃತ್ಯ ಸಂಸ್ಥೆಯ ಸುಮಾರು ಐವತ್ತು ಮಂದಿ ವಿದ್ಯಾರ್ಥಿಗಳು, ಬುದ್ಧನ ತತ್ವಗಳ ಕುರಿತಾದ ಆಮ್ರಪಾಲಿ – ನೃತ್ಯರೂಪಕವನ್ನು ನೃತ್ಯ ಶಿಕ್ಷಕ ಜಿ.ಪವನ್‌ಕುಮಾರ್‌ ಅವರ ನೃತ್ಯ ಸಂಯೋಜನೆಯಲ್ಲಿ ಬೆಂಗಳೂರಿನ ಎ.ಡಿ.ಎ ರಂಗಮಂದಿರದಲ್ಲಿ ಈಚೆಗೆ ಪ್ರದರ್ಶಿಸಿದರು.
ಅತ್ಯಂತ ರೂಪವತಿ ವೈಶಾಲಿ ರಾಜ್ಯದ ರಾಜನರ್ತಕಿ ಆಮ್ರಪಾಲಿ, ಬುದ್ಧನ ತತ್ವಕ್ಕೆ ಶರಣಾಗುವುದು ಹಾಗೂ ಆಕೆ ತನ್ನೆಲ್ಲ ಭೋಗಭಾಗ್ಯಗಳನ್ನು ತೊರೆದು ಆತ್ಮೋನ್ನತಿಯತ್ತ ಮುಖಮಾಡುವ ಕಥನ ಬುದ್ಧನ ಜಾತಕ ಕಥೆಗಳಿಂದ ತಿಳಿದುಬರುತ್ತದೆ. ಮಗಧ ರಾಝ್ಯದ ಸಾಮ್ರಾಟ ಅಜಾತಶತ್ರುವೆಂದೇ ಪ್ರಸಿದ್ಧನಾದ ಬಿಂಬಿಸಾರ ಆಮ್ರಪಾಲಿ ಮೋಹಕ್ಕೊಳಗಾಗಿ ನಡೆಸುವ ಯುದ್ಧ, ಬಾಹ್ಯ ಮತ್ತು ಆಂತರಿಕ ಯುದ್ಧಗಳನ್ನು ಬುದ್ಧನ ನೆರವಿನಿಂದ ಜಯಿಸುವ ಆಮ್ರಪಾಲಿ ದೇಹ, ದೇಶ, ಕಾಲವನ್ನು ಮೀರುವ ಆತ್ಮೋನ್ನತಿಯನ್ನು ಸಾಧಿಸಿ ಚರಿತ್ರೆಯಲ್ಲಿ ಅಜರಾಮರ ಸ್ತ್ರೀಯಾಗಿ ಗುರುತಿಸಲ್ಪಟ್ಟಿದ್ದಾಳೆ.
ಬುದ್ಧ ಕರುಣೆಯಿಂದ ಸಾಂತ್ವನಗೊಂಡ ಮೈಮನಗಳು ಕೋಟಿಕೋಟಿ. ನೊಂದ, ಬೆಂದ, ಬದುಕೆ ಬೇಸರವಾದ, ತಿರಸ್ಕರಿಸಲ್ಪಟ್ಟ, ದನಿಯಿಲ್ಲದ, ಬೆಲೆಯಿಲ್ಲದ, ಶೋಷಿಸಲ್ಪಟ್ಟ, ದೂಷಿಸಲ್ಪಟ್ಟ ಮನಗಳಿಗೆ, ನೆಮ್ಮದಿಯ, ಶಾಂತಿಯ, ಅಕ್ಕರೆಯ, ಸಕ್ಕರೆಯ ಸವಿ ನೀಡಿ ಧನ್ಯಮನವನ್ನಾಗಿಸಿಸದ ಜ್ಯೋತಿ ಬುದ್ಧಜ್ಯೋತಿ. 2500 ವರ್ಷಗಳ ಹಿಂದೆ ಬೆಳಗಿದ ಬುದ್ಧ ಪ್ರಭೆ ಇಂದಿಗೂ ಜಗತ್ತಿನ ದಾರಿ ದೀವಿಗೆಯಾಗಿದೆ. ಆಮ್ರಪಾಲಿ ಬುದ್ಧ ಸಂದೇಶ ಕೇಳಿ ಬದುಕನ್ನು ಭವ್ಯವಾಗಿಸಿಕೊಂಡವಳು. ಈ ಸಾರ್ವಕಾಲಿಕ ಸಂದೇಶವನ್ನು ನೃತ್ಯರೂಪಕದ ಮೂಲಕ ಪ್ರದರ್ಶಿಸಿರುವುದಾಗಿ ನೃತ್ಯ ಶಿಕ್ಷಕ ಜಿ.ಪವನ್‌ಕುಮಾರ್‌ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಭಾಗವಹಿಸಿದ ಶಿಡ್ಲಘಟ್ಟ ತಾಲ್ಲೂಕಿನ ಎಲ್ಲಾ ನೃತ್ಯ ಶಾಲೆಯ ವಿದ್ಯಾರ್ಥಿಗಳಿಗೆ ಹಿರಿಯ ಸಾಹಿತಿ ಡಾ.ವರದಾ ಶ್ರೀನಿವಾಸ್‌, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ರಿಜಿಸ್ಟ್ರಾರ್‌ ಟಿ.ಜಿ.ನರಸಿಂಹಮೂರ್ತಿ, ನಿವೃತ್ತ ಉಪ ಕಾರ್ಯದರ್ಶಿ ಎಚ್‌.ವಿ.ರಾಮಚಂದ್ರರಾವ್‌ ಪ್ರಶಸ್ತಿಪತ್ರಗಳನ್ನು ವಿತರಿಸಿದರು.
[images cols=”four”]
[image link=”#” image=”2020″]
[image link=”#” image=”2018″]
[image link=”#” image=”2019″]
[image link=”#” image=”2017″]
[/images]

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!