ನಗರದ ಒಂದನೇ ನಗರ್ತಪೇಟೆಯ ಕಾಳಿಕಾಂಬ ಕಮಠೇಶ್ವರ ದೇವಾಲಯದಲ್ಲಿ ಮಂಗಳವಾರ ಕಾಳಿಕಾಂಬ ಕಮಠೇಶ್ವರಸ್ವಾಮಿ ಸೇವಾ ಟ್ರಸ್ಟ್, ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘ, ಕಾಳಿಕಾಂಬ ಮಹಿಳಾ ಮಂಡಲಿ, ಕಾಳಿಕಾಂಬ ಕಮಠೇಶ್ವರ ಯುವಕ ಮಂಡಲಿ ವತಿಯಿಂದ ೨೩ನೇ ವರ್ಷದ ಶ್ರೀಮತ್ ವಿರಾಟ್ ವೀರಬ್ರಹ್ಮೇಂದ್ರ ಸ್ವಾಮಿಯವರ ಆರಾಧನೆ, ಸಾಮೂಹಿಕ ಉಪನಯನಗಳು ಹಾಗೂ ಅನ್ನದಾಸೋಹವನ್ನು ಆಯೋಜಿಸಲಾಗಿತ್ತು.
ಕಾಳಿಕಾಂಬ ಕಮಠೇಶ್ವರಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಕೆ.ಮುನಿರತ್ನಾಚಾರ್ ಮಾತನಾಡಿ,‘ಚಿನ್ನ, ಬೆಳ್ಳಿ, ಮರಗೆಲಸ, ಕಮ್ಮಾರಿಕೆ, ಶಿಲ್ಪಕಲೆ ಮತ್ತಿತರ ಕುಶಲಕರ್ಮಿ ಸಮುದಾಯಗಳ ಅಭಿವೃದ್ಧಿಗಾಗಿ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು, ಅದರಿಂದ ಸಿಗುವ ಸೌಲಭ್ಯಗಳನ್ನು ಬಡ ಜನರಿಗೆ ತಲುಪಿಸುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.
ದೇವಾಲಯದಲ್ಲಿ ಮೂಲ ವಿಗ್ರಹಗಳಿಗೆ ಅಭಿಷೇಕ, ಸಾಮೂಹಿಕ ಉಪನಯನಗಳು, ವಿರಾಟ್ ವೀರಬ್ರಹ್ಮೇಂದ್ರಸ್ವಾಮಿ ಯಜ್ಞ, ಹೋಮ, ವಿಶ್ವಕರ್ಮ ಯಜ್ಞ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದಗಳ ವಿನಿಯೋಗ ನಡೆಯಿತು. ಎಂಟು ಮಂದಿಗೆ ಉಪನಯನ ಮಾಡಲಾಯಿತು. ಹಿರಿಯರಾದ ಬಸಮ್ಮ ಮತ್ತು ಕೆ.ಇ.ಬಿ ಸುಂದರಾಚಾರಿ ಅವರನ್ನು ಗೌರವಿಸಲಾಯಿತು.
ಕಾಳಿಕಾಂಬ ಭಕ್ತಮಂಡಳಿ, ಶ್ರೀ ಮಾರುತಿ ಸಂಗೀತ ಅಕಾಡೆಮಿ ವಿದ್ಯಾರ್ಥಿಗಳು, ಸಂಗೀತ ವಿದುಷಿ ಮಂಜುಳಾ ಜಗದೀಶ್ ಮತ್ತು ಲಕ್ಷ್ಮೀನಾರಾಯಣಮ್ಮ ಅವರಿಂದ ಭಜನೆ ಕಾರ್ಯಕ್ರಮ ನಡೆಯಿತು.
ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮರನಾರಾಯಣಾಚಾರ್, ಆರ್.ಜಗದೀಶ್ ಕುಮಾರ್, ಕೃಷ್ಣಾಚಾರ್, ಜನಾರ್ಫ಼ಹನಮೂರ್ತಿ, ಕೆ.ಇ.ಬಿ ಸುಂದರಾಚಾರಿ, ಎಸ್.ಶ್ರೀನಿವಾಸಾಚಾರ್, ಗೌರೀಶಂಕರ್, ರಮೇಶ್, ಕೆ.ಶ್ರೀನಿವಾಸಾಚಾರ್, ಹಾಜರಿದ್ದರು.
- Advertisement -
- Advertisement -
- Advertisement -