22.1 C
Sidlaghatta
Tuesday, March 19, 2024

ಸಾವಿರ ಗಿಡ ನೆಟ್ಟು ಕಾಲೇಜು ವಿದ್ಯಾರ್ಥಿಗಳಿಂದ ವನಮಹೋತ್ಸವ ಆಚರಣೆ

- Advertisement -
- Advertisement -

Appegowdanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಆವರಣ ಮತ್ತು ಇಂದಿರಾಗಾಂಧಿ ವಸತಿ ಶಾಲೆಯ ಆವರಣದಲ್ಲಿ ಶುಕ್ರವಾರ ವಿದ್ಯಾರ್ಥಿಗಳೊಂದಿಗೆ ಒಂದು ಸಾವಿರ ಗಿಡ ನೆಡುವ (Tree Planting) ಕಾರ್ಯಕ್ರಮಕ್ಕೆ ಚಾಲನೆ ನೀಡಿ ರೇವಾ ವಿಶ್ವವಿದ್ಯಾಲಯದ (Reva University) ವಾಣಿಜ್ಯ ವಿಭಾಗದ ಡಾ.ಸುಬ್ರಮಣ್ಯಂ ಅವರು ಮಾತನಾಡಿದರು.

ಹಸಿರು ಹಳ್ಳಿಗಳ ನಿರ್ಮಾಣದ ಸಂಕಲ್ಪದೊಂದಿಗೆ ಹಾಗೂ ವನಮಹೋತ್ಸವದ ಪ್ರಯುಕ್ತ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿಯವರ ಸಹಕಾರದೊಂದಿಗೆ ಇದು ಇಂದು ಸಾವಿರ ಗಿಡಗಳನ್ನು ನೆಡುವ ಕಾರ‍್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ಈ ವನಮಹೋತ್ಸವವು ಜನರಲ್ಲಿ ಮರಗಳ ಬಗ್ಗೆ ಅರಿವನ್ನು ಹೆಚ್ಚಿಸುತ್ತದೆ ಮತ್ತು ಜಾಗತಿಕ ತಾಪಮಾನ ಏರಿಕೆಯನ್ನು ತಡೆಯಲು ಹಾಗೂ ಮಾಲಿನ್ಯವನ್ನು ಕಡಿಮೆಮಾಡುವ ಅತ್ಯುತ್ತಮ ದಾರಿಗಳ ಪೈಕಿ ಒಂದಾಗಿ ಸಸಿಗಳನ್ನು ನೆಡುವ ಮತ್ತು ಮರಗಳ ಆರೈಕೆ ಮಾಡುವ ಅಗತ್ಯವನ್ನು ಎತ್ತಿ ತೋರಿಸುತ್ತದೆ. ಗಿಡಗಳನ್ನು ನೆಡುವುದು ವಿವಿಧ ಉದ್ದೇಶಗಳನ್ನು ಈಡೇರಿಸುತ್ತದೆ, ಪರ್ಯಾಯ ಇಂಧನವನ್ನು ಒದಗಿಸುವುದು, ಆಹಾರ ಸಂಪನ್ಮೂಲಗಳ ಉತ್ಪಾದನೆಯನ್ನು ಹೆಚ್ಚಿಸುವುದು, ಉತ್ಪಾದಕತೆಯನ್ನು ಹೆಚ್ಚಿಸಲು ಹೊಲಗದ್ದೆಗಳ ಸುತ್ತ ಮರೆಗಳನ್ನು ಸೃಷ್ಟಿಸುವುದು, ದನಗಳಿಗೆ ಆಹಾರವನ್ನು ಒದಗಿಸುವುದು, ನೆರಳು ಮತ್ತು ಅಲಂಕಾರಿಕ ಭೂದೃಶ್ಯವನ್ನು ಒದಗಿಸುವುದು, ಬರವನ್ನು ಕಡಿಮೆಮಾಡುವುದು ಹಾಗೂ ಭೂಸವೆತವನ್ನು ತಡೆಯಲು ನೆರವಾಗುವುದು ಎಂದರು.

“ರೇವಾ ಮನಮಹೋತ್ಸವ” ಎಂಬ ಘೋಷ ವಾಕ್ಯದೊಂದಿಗೆ ನಮ್ಮ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಶ್ಯಾಮ್ ರಾಜು ಅವರ ಮಾರ್ಗದರ್ಶನದಲ್ಲಿ ವಿವಿಧ ಗ್ರಾಮ ಪಂಚಾಯಿತಿಗಳ ನೆರವನ್ನು ಪಡೆದು ಸರ್ಕಾರಿ ಜಾಗಗಳಲ್ಲಿ ಒಟ್ಟಾರೆಯಾಗಿ 15 ಸಾವಿರ ಗಿಡಗಳನ್ನು ನೆಡುವ ಯೋಜನೆಯಿದು. ಗಿಡಗಳನ್ನು ನೆಟ್ಟ ನಂತರ ಅವುಗಳ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿಯವರು ಹೊರುತ್ತಿರುವುದು ಸಂತಸದ ಸಂಗತಿ. ಹಸುರೀಕರಣದ ಕಾರ್ಯದಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿ ಅವರಲ್ಲಿ ಪರಿಸರ ಕಾಳಜಿಯನ್ನು ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮುನಿರೆಡ್ಡಿ, ಅಭಿವೃದ್ಧಿ ಅಧಿಕಾರಿ ಮಧು, ಸದಸ್ಯರಾದ ದ್ಯಾವಪ್ಪ, ಮಂಜುಳಮ್ಮ, ಗಂಗರತ್ನ, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಇಂದಿರಾಗಾಂಧಿ ವಸತಿ ಶಾಲೆಯ ಶಿಕ್ಷಕ ಪ್ರಸಾದ್, ರೇವಾ ವಿಶ್ವವಿದ್ಯಾಲಯದ ನಿರ್ದೇಶಕಿ ನೀತು ಘೋಷ್, ಪ್ರೊ.ಮಧು, ಡಾ.ಮುನೇಗೌಡ ಹಾಜರಿದ್ದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!