S Devaganahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಎಸ್.ದೇವಗಾನಹಳ್ಳಿಯ ಶ್ರೀ ಗಂಗಾಭವಾನಿ ದೇವಾಲಯದ ಬಳಿ ಶ್ರೀ ಲಕ್ಷ್ಮೀವೆಂಕಟೇಶ್ವರಸ್ವಾಮಿ ಎಜುಕೇಷನಲ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಅಧಿಕ ಶ್ರಾವಣ ಮಾಸದ ಪ್ರಯುಕ್ತ ಜನಪದ ಕಲಾ ಮೇಳ, ನೃತ್ಯೋತ್ಸವ – 2023 ಆಯೋಜಿಸಲಾಗಿತ್ತು.
ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾಮೂಹಿಕ ನೃತ್ಯ, ಸುಗಮ ಸಂಗೀತ, ಭರತನಾಟ್ಯ ಮತ್ತು ಪ್ರತಿಭಾ ಪುರಸ್ಕಾರ ಮತ್ತು ಮ್ಯಾಜಿಕ್ ಷೋ ನಡೆಯಿತು.
ವಿವಿಧ ಸಾಂಸ್ಕೃತಿಕ ಕಲಾವಿದರಿಂದ ಸುಗಮ ಸಂಗೀತ ನಡೆಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಚಿಕ್ಕಬಳ್ಳಾಪುರದ ಯಶ್ವಂತ್ ಸ್ಕೂಲ್ ಆಫ್ ಡಾನ್ಸ್ ತಂಡದವರಿಂದ ಸಾಮೂಹಿಕ ನೃತ್ಯ, ರಾಷ್ಟ್ರೀಯ ಪ್ರಶಸ್ತಿ ಪಡೆದ ಲಿಟ್ಲ್ ಮೆಜೀಷಿಯನ್ ಪಿ.ಜಿ.ಸುಚಲ್ ಅವರಿಂದ ಮ್ಯಾಜಿಕ್ ಷೋ, ಜನಪದ ಕಲಾ ಪ್ರದರ್ಶನ ಮತ್ತು ಎಸ್.ದೇವಗಾನಹಳ್ಳಿಯ ದುರ್ಗಾಪರಮೇಶ್ವರಿ ಎಂ.ಶಿವಪ್ಪ ಮತ್ತು ತಂಡದವರಿಂದ ತಮಟೆ ವಾದ್ಯಗೋಷ್ಠಿ ನಡೆಯಿತು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ವಿ.ಒಬಳಪ್ಪ, ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಮದಾಸು, ಕರ್ನಾಟಕ ರಕ್ಷಣಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಎಂ. ಶ್ರೀನಿವಾಸ್, ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಟ್ರಸ್ಟ್ ನ ಅಧ್ಯಕ್ಷೆ ಪಿ.ಎನ್.ಅಂಬಿಕ, ವ್ಯವಸ್ಥಾಪಕ ನಿರ್ದೇಶಕ ಡಿ.ವಿ.ಪ್ರಸಾದ್, ವಿಜಯಕುಮಾರ, ಎಂ.ಪಿ.ಸಿ.ಎಸ್ ನಿರ್ದೇಶಕ ವೇಣುಗೋಪಾಲ, ರಾಮಸಮುದ್ರ ಕೆರೆ ಸಂಘದ ಸದಸ್ಯ ಡಿ.ವಿ. ಶ್ರೀನಿವಾಸ, ಎಸ್.ಡಿ.ಎಮ್.ಸಿ ಮಾಜಿ ಅಧ್ಯಕ್ಷ ಎಂ. ಶಿವಪ್ಪ, ಮುಖಂಡರಾದ ಬಿ.ಎಲ್.ಮಂಜುನಾಥ, ನಾಗೇಶ್.ಡಿ.ಎಲ್, ಶ್ರೀನಿವಾಸಮೂರ್ತಿ.ಡಿ.ವಿ, ಮಹಿಳಾ ಸಂಘದ ಪ್ರತಿನಿಧಿ ಸರಸ್ವತಿ, ನೃತ್ಯ ನಿರ್ದೇಶಕ ರಾಜು ಹಾಜರಿದ್ದರು.