ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ಶ್ರೀ ಭಗೀರಥ ಮಹರ್ಷಿ ಜಯಂತ್ಯುತ್ಸವವನ್ನು ಆಚರಿಸಿ ಶಿರಸ್ತೆದಾರ್ ಮಂಜುನಾಥ್ ಮಾತನಾಡಿದರು.
ನಾಡಿನಾದ್ಯಂತ ಕೊರೊನಾ ಸೋಂಕು ಹೆಚ್ಚಾಗಿ ಹರಡುತ್ತಿರುವುದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೊರಡಿಸಿರುವ ಲಾಕ್ ಡೌನ್ ಹಿನ್ನೆಲೆಯಲ್ಲಿ ಶ್ರೀ ಭಗೀರಥ ಜಯಂತಿ ಆಚರಣೆಯನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸುತ್ತಿರುವುದಾಗಿ ಅವರು ತಿಳಿಸಿದರು.
ಕಠಿಣ ಹಾಗೂ ಸುದೀರ್ಘವಾದ ತಪಸ್ಸಿನಿಂದ ದೇವ ಗಂಗೆಯನ್ನು ಭೂಲೋಕ ಹಾಗೂ ಪಾತಾಳಲೋಕಕ್ಕೆ ಕರೆತರಲು ಶ್ರಮಿಸಿದರು. ಭಗೀರಥ ಮಹರ್ಷಿಗಳು ಎಂತಹ ವಿಘ್ನಗಳು ಬಂದರೂ ಕೂಡ ಎದೆಗುಂದದೆ ಸತತ ಪ್ರಯತ್ನದಿಂದ ತನ್ನ ಪೂರ್ವ ಜರಿಗೆ ಸದ್ಗತಿಯನ್ನು ದೊರಕಿಸಲು ಅವಿರತವಾಗಿ ಪ್ರಯತ್ನಿಸಿದರು. ದೇವ ಗಂಗೆಯನ್ನು ಭೂಲೋಕಕ್ಕೆ ತರುವ ಮೂಲಕ ಭರತ ಭೂಮಿಯನ್ನು ಸ್ವರ್ಗವಾಗಿ ಮಾಡಿದ ಶ್ರೀ ಮಹರ್ಷಿ ಭಗೀರಥ ಮಹಾರಾಜರ ಸಾಧನೆಯನ್ನು ಹಿರಿಯರು ಭಗೀರಥ ಪ್ರಯತ್ನ ಎಂಬುದಾಗಿ ಕರೆದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಕಚೇರಿಯ ಸಿಬ್ಬಂದಿ ಹಾಜರಿದ್ದರು.