24.1 C
Sidlaghatta
Friday, March 29, 2024

ದಲಿತರು ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಕಾರಣಕ್ಕೂ ಮತ ನೀಡಬಾರದು – ಸಂಸದ ಎಸ್. ಮುನಿಸ್ವಾಮಿ

MP S. Muni Swamy criticises Congress' historical neglect of Dalit community and praises Modi government's accomplishments

- Advertisement -
- Advertisement -

Palicheralu, Sidlaghatta : ದೇಶದ ರಾಜಕೀಯ ಇತಿಹಾಸವನ್ನು ನೋಡಿದಾಗ ಕಾಂಗ್ರೆಸ್ ಪಕ್ಷ ಎಂದಿಗೂ ಸಹ ದಲಿತರ ಧ್ವನಿಯಾಗಿ ಕೆಲಸ ಮಾಡಲಿಲ್ಲ. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಅಂತ್ಯಸಂಸ್ಕಾರಕ್ಕೆ ದೆಹಲಿಯಲ್ಲಿ ಅಂಗೈ ಅಗಲ ಜಾಗ ನೀಡಲಿಲ್ಲ. ಇಂತಹ ಪಕ್ಷಕ್ಕೆ ದಲಿತರು ಯಾವುದೇ ಕಾರಣಕ್ಕೂ ಮತ ನೀಡಬಾರದು ಎಂದು ಸಂಸದ ಎಸ್.ಮುನಿ ಸ್ವಾಮಿ ತಿಳಿಸಿದರು.

ಶಿಡ್ಲಘಟ್ಟ ತಾಲ್ಲೂಕಿನ ಪಲಿಚೇರ್ಲು ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ಮನೆಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಅವರ ಪರವಾಗಿ ಮತಯಾಚಿಸಿ, ನಂತರ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ಬಾಬಾ ಸಾಹೇಬ್ ಅಂಬೇಡ್ಕರ್ ರವರನ್ನು ಇಡೀ ವಿಶ್ವ ಗೌರವಿಸುತ್ತಿದೆ. ಇಂತಹ ಮಹಾನಿಯನನ್ನು ಎರಡು ಬಾರಿ ಚುನಾವಣೆಯಲ್ಲಿ ಸೋಲಿಸಿ ದಲಿತರನ್ನು ದಮನ ಮಾಡಲು ಪ್ರಯತ್ನಿಸಿದ ಕಾಂಗ್ರೆಸ್ ಪಕ್ಷವನ್ನು ಯಾವುದೇ ಕಾರಣಕ್ಕೂ ಶೋಷಿತ ಸಮಾಜ ಬೆಂಬಲಿಸಬಾರದೆಂದು ಮನವಿ ಮಾಡಿದರು.

ದೇಶದ ರಾಜಕೀಯ ಇತಿಹಾಸವನ್ನು ನೋಡಿದಾಗ ಕಾಂಗ್ರೆಸ್ ಪಕ್ಷ ಎಂದಿಗೂ ಸಹ ದಲಿತರ ಧ್ವನಿಯಾಗಿ ಕೆಲಸ ಮಾಡಲಿಲ್ಲ. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಅಂತ್ಯಸಂಸ್ಕಾರಕ್ಕೆ ದೆಹಲಿಯಲ್ಲಿ ಅಂಗೈ ಅಗಲ ಜಾಗ ನೀಡಲಿಲ್ಲ. ಇಂತಹ ಪಕ್ಷಕ್ಕೆ ದಲಿತರು ಯಾವುದೇ ಕಾರಣಕ್ಕೂ ಮತ ನೀಡಬಾರದು ಎಂದರು.

ಅರವತ್ತೈದು ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ಸಿಗರು ಮಾಡದ ಕೆಲಸವನ್ನು ಒಂಬತ್ತು ವರ್ಷಗಳಲ್ಲಿ ಮೋದಿ ಸರ್ಕಾರ ಮಾಡಿದೆ ಎಂಬುದನ್ನು ಜನತೆ ಅರಿಯಬೇಕಾಗಿದೆ. ಕೊರೊನಾ ಸಂದರ್ಭದಲ್ಲಿ ಮುಂದುವರೆದ ದೇಶಗಳು ತಮ್ಮ ದೇಶದ ಜನರಿಗೆ ಲಸಿಕೆ ನೀಡಲು ದುಬಾರಿ ಶುಲ್ಕ ವಿಧಿಸಿದರು. ಆದರೆ ಭಾರತದಲ್ಲಿ ಮಾತ್ರ ನರೇಂದ್ರ ಮೋದಿಯವರು 200 ಕೋಟಿಗೂ ಅಧಿಕ ಕೊರೊನಾ ಲಸಿಕೆಯನ್ನು ತನ್ನ ಜನರ ಸುರಕ್ಷತೆಗಾಗಿ ಉಚಿತವಾಗಿ ನೀಡುವ ವ್ಯವಸ್ಥೆ ಮಾಡಿ ಇಡೀ ವಿಶ್ವಕ್ಕೆ ಮಾದರಿಯಾದರು. ಆದ್ದರಿಂದಲೇ ಇಂದು ಭಾರತ ಅರ್ಥವ್ಯವಸ್ಥೆಯಲ್ಲಿ ತನ್ನ ಸದೃಢತೆಯನ್ನು ಕಾಯ್ದುಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅರ್ಥ ಶತಮಾನಗಳ ಕಾಲ ಯಾವುದೇ ಅಭಿವೃದ್ಧಿಯನ್ನು ಮಾಡದೆ ಜನರಿಂದ ತಿರಸ್ಕೃತವಾಗಿರುವ ಕಾಂಗ್ರೆಸ್ ಪಕ್ಷ ಇಂದು ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಮತದಾರರಿಗೆ ಮಂಕುಬೂದಿ ಎರಚುತ್ತಿದೆ. ಯಾವುದೇ ಆಮಿಷಗಳಿಗೆ ಒಳಗಾಗದೆ ಜನತೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ರನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.

ಜಿಲ್ಲೆಯ ಜನರಿಗೆ ಅನುಕೂಲವಾಗಲೆಂದು ಜಿಲ್ಲಾ ಕೇಂದ್ರಕ್ಕೆ ಮೆಡಿಕಲ್ ಕಾಲೇಜನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ತಂದಿದ್ದಾರೆ. ಶಿಡ್ಲಘಟ್ಟ ಕ್ಷೇತ್ರದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಮನೆಮನೆಗೂ ಕುಡಿಯುವ ನೀರು, 176 ಕಿಲೋಮೀಟರ್ ಸಿಸಿ ರಸ್ತೆ ಸೇರಿದಂತೆ 220 ಕೋಟಿ ರೂಗಳ ಅಭಿವೃದ್ಧಿ ಕೆಲಸಗಳು ನಡೆದಿದೆ. ಈ ಬಾರಿ ಶಿಡ್ಲಘಟ್ಟ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಗೆಲ್ಲಿಸಿದರೆ ನಾನು ಮತ್ತು ರಾಮಚಂದ್ರಗೌಡರು ಜೋಡೆತ್ತಿನಂತೆ ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರೇಗೌಡ ಅವರು ಮಾತನಾಡಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಶಿಡ್ಲಘಟ್ಟವನ್ನು ತಮ್ಮ ಭದ್ರಕೋಟೆ ಎಂದು ಹೇಳಿಕೊಳ್ಳುತ್ತಿವೆ. ಆದರೆ ಮೇ ಹತ್ತರಂದು ಇಲ್ಲಿನ ಮತದಾರರು ಬಿಜೆಪಿ ಪಕ್ಷಕ್ಕೆ ಮತ ನೀಡುವ ಮೂಲಕ ಶಿಡ್ಲಘಟ್ಟ ಕ್ಷೇತ್ರವನ್ನು ಬಿಜೆಪಿ ಪಕ್ಷದ ಭದ್ರಕೋಟೆ ಎಂದು ಸಾಬೀತು ಮಾಡಿ ಅಭಿವೃದ್ಧಿ ಕೆಲಸಕ್ಕೆ ಮುನ್ನುಡಿ ಬರೆಯಬೇಕೆಂದು ಕೇಳಿಕೊಂಡರು.

ಮಾಜಿ ಶಾಸಕ ಎಂ.ರಾಜಣ್ಣ, ಸೀಕಲ್ ಆನಂದಗೌಡ, ಗ್ರಾಮ ಪಂಚಾಯತಿ ಅಧ್ಯಕ್ಷ ಹರೀಶ್, ಉಪಾಧ್ಯಕ್ಷ ಗಂಗ ರೆಡ್ಡಿ, ಡಾ.ಧನಂಜಯ್ಯ, ನಗರಸಭಾ ಸದಸ್ಯ ನಾರಾಯಣಸ್ವಾಮಿ, ದೊಡ್ಡ ತೇಕಹಳ್ಳಿ ಚಂದ್ರಪ್ಪ, ಮಾಜಿ ಗ್ರಾಪಂ ಅಧ್ಯಕ್ಷ ಬಂಡಪ್ಪ, ದೇವರೆಡ್ಡಿ, ಅಂಜಿನಪ್ಪ, ರವಿಚಂದ್ರ, ಗಿರೀಶ್, ಜಗದೀಶ್, ಗಂಗರೆಡ್ಡಿ, ದೇವರಾಜು, ಜಯರಾಮ ರೆಡ್ಡಿ, ಬಸವರಾಜು, ನಾಗರಾಜು, ಮಂಜು, ಸತೀಶ್, ದೇವೇಂದ್ರ, ಪಿಳ್ಳಪ್ಪ, ರಾಮಚಂದ್ರಪ್ಪ, ವೆಂಕಟರೆಡ್ಡಿ ಹಾಜರಿದ್ದರು.


BJP Campaign Urges Dalits to Reject Congress Party

Palicheralu, Sidlaghatta : In a recent development, MP S. Muni Swamy, while campaigning for BJP candidate Seekal Ramachandra Gowda, urged the Dalit community not to support the Congress party. Swamy criticised the Congress for its historical failure to advocate for the rights of Dalits and highlighted how the party neglected the cremation of Dr. B.R. Ambedkar, the architect of the Indian Constitution, in Delhi. He emphasised that the oppressed society should not vote for a party that twice defeated such an esteemed figure in the elections.

Swamy further compared the Modi government’s achievements to those of the Congress party, stating that in just nine years, the current administration accomplished what the Congress could not achieve in 65 years. He praised Prime Minister Narendra Modi for providing over 200 crores of free COVID-19 vaccines to the Indian population during the pandemic, setting an example for the world. Swamy argued that India’s strong economy today is a testament to the government’s efforts.

Calling the Congress party a promoter of false promises, Swamy urged people to support BJP candidate Seekal Ramachandra Gowda without succumbing to any temptations. He highlighted the developmental initiatives brought to the district by District in-charge Minister Dr. K. Sudhakar, such as the establishment of a medical college and the implementation of the Jaljivan Mission project, which provided drinking water and CC roads to the constituency at a cost of 220 crores.

Seekal Ramachandre Gowda, the BJP candidate, asserted that the Congress and JDS parties claimed Sidlaghatta as their stronghold. However, he urged the voters to prove them wrong by electing the BJP and emphasizing the need for development in the constituency.

Prominent figures present at the event included former MLA M. Rajanna, Seekal Ananda Gowda, Gram Panchayat President Harish, Vice President Ganga Reddy, and several other local leaders and representatives.

Overall, the campaign highlighted the BJP’s focus on development and criticised the Congress party’s historical record, with special emphasis on the party’s relationship with the Dalit community and its failure to prioritise their concerns.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!