Sidlaghatta : ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಇನ್ನಷ್ಟು ಸಂಘಟಿಸಲು ಘಟಕಗಳ ಪುನರ್ ರಚನೆ ಮಾಡಲಾಗಿದೆ. ಬಿಜೆಪಿಯ ಗ್ರಾಮಾಂತರ ಘಟಕದ ಅಧ್ಯಕ್ಷರನ್ನಾಗಿ ಸೀಕಲ್ ಎಸ್.ವಿ.ಆನಂದಗೌಡ, ನಗರ ಘಟಕದ ಅಧ್ಯಕ್ಷರನ್ನಾಗಿ ಕೆ.ನರೇಶ್ ಕುಮಾರ್ ಅವರನ್ನು ನೇಮಿಸಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ಆದೇಶಿಸಿದ್ದಾರೆ.
ಹಾಗೆಯೆ ಗ್ರಾಮಾಂತರ ಘಟಕಕ್ಕೆ ಇಬ್ಬರು ಪ್ರಧಾನ ಕಾರ್ಯದರ್ಶಿಗಳನ್ನು ನೇಮಿಸಿದ್ದು ರಜನೀಕಾಂತ್ ಬಾಬು, ರವಿಚಾರಿ ನೇಮಕವಾಗಿದ್ದಾರೆ.
ನಗರ ಘಟಕಕ್ಕೆ ಜೆ.ಎಸ್.ಭರತ್ ಕುಮಾರ್ ಮತ್ತು ಆರ್.ನಾಗೇಶ್‌ರನ್ನು ಪ್ರಧಾನ ಕಾರ್ಯದರ್ಶಿಗಳನ್ನಾಗಿ ಆಯ್ಕೆ ಮಾಡಲಾಗಿದೆ.
ಶಿಡ್ಲಘಟ್ಟ ನಗರ ಘಟಕದ ಅಧ್ಯಕ್ಷರಾಗಿದ್ದ ಮಿಲ್ಟ್ರಿ ರಾಘವೇಂದ್ರ ಅವರು ಆರು ತಿಂಗಳ ಹಿಂದೆಯೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇನ್ನು ಗ್ರಾಮಾಂತರ ಮಂಡಲದ ಅಧ್ಯಕ್ಷರಾಗಿ ಎರಡು ಅವಧಿಗಳಿಂದಲೂ ಕಂಬದಹಳ್ಳಿ ಸುರೇಂದ್ರಗೌಡ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಘಟಕಗಳನ್ನು ಪುನರ್ ರಚನೆ ಮಾಡಲಾಗಿದೆ.