Sidlaghatta : ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘ (Karnataka Cartoonists’ Association) ನೀಡುವ 2021 ನೇ ಸಾಲಿನ ರಾಜ್ಯಮಟ್ಟದ ಪ್ರಶಸ್ತಿಗೆ (Award) ಶಿಡ್ಲಘಟ್ಟ ಮೂಲದ ವ್ಯಂಗ್ಯಚಿತ್ರಕಾರ (Cartoonist) ಬಿ.ವಿ.ಪಾಂಡುರಂಗರಾವ್ (B V Panduranga Rao) ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಯು 5 ಸಾವಿರ ರೂ ನಗದು ಹಾಗೂ ಫಲಕವನ್ನು ಒಳಗೊಂಡಿದೆ. ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿರುವ (M G Road) ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯಲ್ಲಿ ಮೇ 28 ರ ಬೆಳಿಗ್ಗೆ 11.30 ಕ್ಕೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶಿಡ್ಲಘಟ್ಟದ ಹಳೆಯ ಆಸ್ಪತ್ರೆ ಕ್ವಾಟರ್ಸ್‌ನಲ್ಲಿ ಬಾಲ್ಯವನ್ನು ಕಳೆದಿದ್ದ ಬಿ.ವಿ.ಪಾಂಡುರಂಗರಾವ್, ಶಿಡ್ಲಘಟ್ಟದಲ್ಲಿ ವೈದ್ಯರಾಗಿದ್ದ ಡಾ.ಬಿ.ವೆಂಕಟರಾವ್ ಮತ್ತು ಇಂದಿರಾಬಾಯಿ ಅವರ ಮಗ. ಇವರು ಫ್ಲಿಪ್ ಬುಕ್ ಅನಿಮೇಷನ್‌ನಲ್ಲಿ 6 ಬಾರಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ 6 ಬಾರಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ಮಾಡಿದ್ದಾರೆ. ವಿಶ್ವದ ವಿವಿಧ ದೇಶಗಳು ನಡೆಸಿರುವ ವ್ಯಂಗ್ಯ ಚಿತ್ರ ಸ್ಪರ್ಧೆ ಮತ್ತು ಪ್ರದರ್ಶನಗಳಲ್ಲಿ ಇವರ ಚಿತ್ರಗಳು 60 ಬಾರಿ ಪ್ರಶಸ್ತಿಗೆ ಭಾಜನವಾಗಿವೆ. ದೇಶದ ಹಲವೆಡೆ ಏಕ ವ್ಯಕ್ತಿ ವ್ಯಂಗ್ಯ ಚಿತ್ರ ಪ್ರದರ್ಶನಗಳು ನಡೆದಿವೆ. 2011 ರಲ್ಲಿ ಮಾಜಿ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಅವರಿಂದ ಜೀವಮಾನ ಸಾಧನೆ ಪ್ರಶಸ್ತಿ ಲಭಿಸಿದೆ. ಕರ್ನಾಟಕ ವ್ಯಂಗ್ಯ ಚಿತ್ರಕಾರರ ಸಂಘದ ಅಧ್ಯಕ್ಷರಾಗಿ, ರಾಜ್ಯ ಕ್ರಿಕೆಟ್ ಅಂಪೈರ್ ಆಗಿ ಮಧ್ಯಪ್ರದೇಶ ವಿಭಾಗ ಮತ್ತು ಅಖಿಲ ಭಾರತ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಕಾರ್ಯನಿರ್ವಹಿಸಿದ್ದಾರೆ.