ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ಕೋವಿಡ್ 19 ಸಂಬಂಧಿಸಿದಂತೆ ಸಭೆ ನಡೆಸಿ ತಾಲ್ಲೂಕು ಪಂಚಾಯಿತಿ ಇಒ ಚಂದ್ರಕಾಂತ್ ಮಾತನಾಡಿದರು.
ಕೊರೊನಾ ವಿರುದ್ಧದ ಹೋರಾಟದಲ್ಲಿ ಜಯಿಸಲು ಲಸಿಕೆ ರಾಮಬಾಣದಂತಹುದು. ಕೊರೊನಾ ಲಸಿಕೆಯನ್ನು ತೆಗೆದುಕೊಂಡವರು ಕೊರೊನಾ ಪಾಸಿಟೀವ್ ಆದರೂ ಬೇಗ ಗುಣಹೊಂದುತ್ತಿದ್ದಾರೆ. ಸೋಂಕು ಬರುವ ಮುನ್ನ ಲಸಿಕೆ ತೆಗೆದುಕೊಂಡು, ಮುನ್ನೆಚ್ಚರಿಕೆ ವಹಿಸಬೇಕು.
ಈ ಬಗ್ಗೆ ಹಳ್ಳಿಗಳಲ್ಲಿ ಜನರಿಗೆ ಮನವರಿಕೆ ಮಾಡಿಕೊಡಬೇಕು. ಇನ್ನೂ ಸಾಕಷ್ಟು ಮಂದಿ ಅಪನಂಬಿಕೆಯಿಂದ ಲಸಿಕೆ ಹಾಕಿಸಿಕೊಳ್ಳದಿರುವುದು ದುರದೃಷ್ಟಕರ ಎಂದು ಅವರು ತಿಳಿಸಿದರು.
ಸೋಂಕಿತರು ಮನೆಗಳಲ್ಲಿಯೇ ಇದ್ದು, ಕುಟುಂಬದವರಿಗೆ ಸೋಂಕು ಹರಡಬೇಡಿ, ಕೋವಿಡ್ ಕೇರ್ ಸೆಂಟರಿಗೆ ಸೇರಿಕೊಂಡು ಗುಣಮುಖರಾಗಿ ಮನೆಗೆ ಬನ್ನಿ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಇದುವರೆಗೂ ಎಷ್ಟು ಮಂದಿ ಲಸಿಕೆ ಹಾಕಿಸಿಕೊಂಡಿರುವರೆಂದು ಮಾಹಿತಿ ಪಡೆದರು. ನಗರಗಳಲ್ಲಿ ಲಸಿಕೆಗಾಗಿ ನೂಕುನುಗ್ಗಲಿದ್ದರೆ, ಹಳ್ಳಿಗಳಲ್ಲಿ ಲಸಿಕೆ ಹಾಕಿಸಿಕೊಳ್ಳಲು ಮನವೊಲಿಸಬೇಕಾಗಿದೆ. ಪಾಸಿಟೀವ್ ಆದವರು ಖಡ್ಡಾಯವಾಗಿ ಕೋವಿಡ್ ಕೇರ್ ಸೆಂಟರಿಗೆ ಹೋಗಬೇಕು. ಅಲ್ಲಿ ಅತ್ಯುತ್ತಮ ವೈದ್ಯಕೀಯ ಸೇವೆ, ಊಟ ಮತ್ತು ವಸತಿ ಇರುತ್ತದೆ ಎಂದರು.
ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿ ಮಹೇಶ್, ಪಿಡಿಒ ಅಂಜನ್ ಕುಮಾರ್, ಕಾರ್ಯದರ್ಶಿ ರಾಜಣ್ಣ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು ಹಾಜರಿದ್ದರು.
Follow ನಮ್ಮ ಶಿಡ್ಲಘಟ್ಟ on
Facebook: https://www.facebook.com/sidlaghatta
Twitter: https://twitter.com/hisidlaghatta
Instagram: https://www.instagram.com/sidlaghatta
Telegram: https://t.me/Sidlaghatta
WhatsApp: https://wa.me/917406303366?text=Hi