Bashettahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿಯ ಶ್ರೀ ಗಂಗಾಭವಾನಿ ತೋಟಗಾರಿಕಾ ರೈತ ಉತ್ಪಾದಕರ ಕಂಪನಿಯ (FPO) ಮಳಿಗೆ ಮತ್ತು ದಾಸ್ತಾನು ಕೊಠಡಿ ನಿರ್ಮಾಣಕ್ಕೆ ಜಾಗ ಮಂಜೂರು ಮಾಡುವಂತೆ ಕೋರಿ ಶಾಸಕ ಬಿ.ಎನ್.ರವಿಕುಮಾರ್ ರಿಗೆ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗು ನಿರ್ದೇಶಕರು ಮಂಗಳವಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಫ್.ಪಿ.ಒ ಗಳ ಪ್ರಸ್ತುತ ಸ್ಥಿತಿಗತಿಗಳು ಮತ್ತು ಅವುಗಳ ಬೆಳವಣಿಗೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಾಗಿ ಚರ್ಚಿಸಲಾಯಿತು.
ಶ್ರೀ ಗಂಗಾಭವಾನಿ ತೋಟಗಾರಿಕಾ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ವಿಜಯ ಬಾವರೆಡ್ಡಿ, ಉಪಾಧ್ಯಕ್ಷ ಟಿ.ಎಸ್.ಆಂಜನೇಯರೆಡ್ಡಿ, ನಿರ್ದೇಶಕರಾದ ಜಿ.ಎನ್.ರವಿಕುಮಾರ್, ಬಿ.ಎನ್.ಮಂಜುನಾಥ್, ಲಕ್ಕೇನಹಳ್ಳಿ ವೆಂಕಟೇಶ್, ಸಿಇಓ ಮಧು, ಬಶೆಟ್ಟಹಳ್ಳಿ ಗ್ರಾ.ಪಂ ಅಧ್ಯಕ್ಷ ಬಿ.ಎನ್.ವೆಂಕಟೇಶಪ್ಪ, ತಾ.ಪಂ ಮಾಜಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ಗಂಜಿಗುಂಟೆ ಗ್ರಾ.ಪಂ ಅಧ್ಯಕ್ಷ ನರಸಿಂಹಮೂರ್ತಿ, ಮುಖಂಡರಾದ ಬಿ.ಶಿವಕುಮಾರ್, ಆನೆಮಡಗು ದೇವರಾಜ್ ಹಾಜರಿದ್ದರು.