Sidlaghatta : ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷ್ ಮೆಂಟ್ ಆಕ್ಟ್ (ಕೆ.ಪಿ.ಎಂ.ಎ) ನೋಂದಣಿಯಾಗಿರದ ತಾಲ್ಲೂಕಿನ ಜಂಗಮಕೋಟೆ ಕ್ರಾಸ್ ನ ಮೂರು ಖಾಸಗಿ ಕ್ಲಿನಿಕ್ ಗಳನ್ನು ಮಂಗಳವಾರ ವೈದ್ಯಾಧಿಕಾರಿಗಳ ತಂಡ ಮುಚ್ಚಿಸಿದ್ದಾರೆ.
“ಒಬ್ಬ ವ್ಯಕ್ತಿ ಹೋಮಿಯೋಪತಿ ಮಾಡಿಕೊಂಡಿರುವುದಾಗಿ ಹೇಳಿ ಮತ್ಯಾರದೋ ಹೆಸರಿನಲ್ಲಿ ಕೆ.ಪಿ.ಎಂ.ಎ ನೋಂದಣಿಗಾಗಿ ಅರ್ಜಿ ಸಲ್ಲಿಸಿರುವುದಾಗಿ ಹೇಳಿದರು. ಅದು ಒಪ್ಪಲು ಸಾಧ್ಯವಿಲ್ಲವೆಂದು ಹೇಳಿ ಅವರಿಗೆ ನೋಟಿಸ್ ಕೊಟ್ಟು ಅಂಗಡಿ ಮುಚ್ಚಿಸಿದೆವು. ಮತ್ತೊಬ್ಬರು, ಔಷಧಿ ಅಂಗಡಿಯವರು ಪಕ್ಕದ ಓಣಿಯಲ್ಲಿ ಮೂರ್ನಾಕು ಹಾಸಿಗೆಗಳನ್ನು ಹಾಸಿ ಕ್ಲಿನಿಕ್ ಮಾಡಿಕೊಂಡಿದ್ದ. ಇದೇ ವ್ಯಕ್ತಿಯ ಈ ಕ್ಲಿನಿಕ್ ಅನ್ನು ಕಳೆದ ಕೋವಿಡ್ ಸಮಯದಲ್ಲಿಯೂ ಮುಚ್ಚಿಸಿದ್ದೆವು. ಈಗ ಅದೇ ಪುನರಾವರ್ತನೆಯಾಗಿದ್ದನ್ನು ಕಂಡು ಮತ್ತೊಮ್ಮೆ ಮುಚ್ಚಿಸಿದೆವು. ಇನ್ನೊಂದು ಶಿಡ್ಲಘಟ್ಟ ರಸ್ತೆಯಲ್ಲಿನ ಕ್ಲಿನಿಕ್ ಕೂಡ ಮುಚ್ಚಿಸಿದ್ದೇವೆ” ಎಂದು ಈ ಬಗ್ಗೆ ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾಹಿತಿ ನೀಡಿದರು.
, “ಯಾವುದೇ ಕ್ಲಿನಿಕ್ ಮಾಡಬೇಕಾದರೆ ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಕೆ.ಪಿ.ಎಂ.ಎ ಯಲ್ಲಿ ಅರ್ಜಿ ಸಲ್ಲಿಸಿ, ಸ್ಥಳ ಪರಿಶೀಲನೆಯ ನಂತರ ಡಿ.ಸಿ ಮತ್ತು ಡಿ.ಎಚ್.ಒ ಅವರಿಂದ ನೋಂದಣಿ ಪ್ರಮಾಣಪತ್ರ ಪಡೆದುಕೊಳ್ಳಬೇಕು. ವಿದ್ಯಾರ್ಹತೆಯಿಲ್ಲದೆ ರೋಗಿಗಳ ಜೀವದೊಂದಿಗೆ ಚೆಲ್ಲಾಟ ಆಡಬಾರದು. ಬಯೋ ಮೆಡಿಕಲ್ ವೇಸ್ಟ್ ಬಗ್ಗೆ ಲೈಸೆನ್ಸ್ ಹೊಂದಿರಬೇಕು. ಪೊಲ್ಯೂಶನ್ ಬೋರ್ಡ್ ನಲ್ಲಿ ಪ್ರಮಾಣಪತ್ರ ಹೊಂದಿರಬೇಕು. ಸಾರ್ವಜನಿಕರೂ ಸಹ ವೈದ್ಯರ ವಿದ್ಯಾರ್ಹತೆಯನ್ನು ಗಮನಿಸಬೇಕು” ಎಂದು ಅವರು ಹೇಳಿದರು.
ತಾಲ್ಲೂಕು ಆರೋಗ್ಯಾಕಾರಿ ಡಾ.ವೆಂಕಟೇಶ್‌ಮೂರ್ತಿ, ಆರೋಗ್ಯ ನಿರೀಕ್ಷಣಾಕಾರಿ ದೇವರಾಜ್ ಹಾಗೂ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.