ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯಲ್ಲಿ ನವೀಕರಣಗೊಂಡ ಹೊರಠಾಣೆಗೆ ಪೊಲೀಸ್ ಎಸ್.ಪಿ ಮಿಥುನ್ ಕುಮಾರ್ ಶುಕ್ರವಾರ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿದರು.
ಸುಮಾರು ಎಂಬತ್ತು ವರ್ಷಗಳ ಹಿಂದೆ ಬ್ರಿಟಿಷರ ಕಾಲದಲ್ಲಿ ನಿರ್ಮಿಸಿದ್ದ ಶಿಡ್ಲಘಟ್ಟ ತಾಲ್ಲೂಕಿನ ಗ್ರಾಮೀಣ ಭಾಗಕ್ಕೆ ಸೇರಿರುವ ಜಂಗಮಕೋಟೆ ಹೊರಠಾಣೆ ಕಟ್ಟಡವನ್ನು ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಅನುದಾನಗಳೊಂದಿಗೆ ದಾನಿಗಳ ನೆರವು ಪಡೆದು ತುಂಬಾ ಅಚ್ಚುಕಟ್ಟಾಗಿ ಜನಸ್ನೇಹಿ ಮತ್ತು ಪರಿಸರಸ್ನೇಹಿ ಕಟ್ಟಡವನ್ನಾಗಿ ಇಲ್ಲಿನ ಸಿಬ್ಬಂದಿ ನವೀಕರಣಗೊಳಿಸಿ ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ಸ್ವಾಗತ ಕಮಾನು, ಗೇಟ್, ಸುಂದರ ಉದ್ಯಾನ, ಮಳೆ ಕೊಯ್ಲು ಪದ್ಧತಿ ಅನುಸರಿಸಿ ಬೃಹತ್ ನೀರಿನ ಸಂಪು, ಧ್ವಜಸ್ಥಂಭ ಎಲ್ಲವೂ ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ. ಇವರ ಈ ಉತ್ತಮ ಆಲೋಚನೆ ಹಾಗೂ ಪ್ರಯತ್ನಕ್ಕಾಗಿ ಐಜಿ ಕಚೇರಿ ಮತ್ತು ಎಸ್.ಪಿ ಕಚೇರಿಯಿಂದ ಪ್ರಶಂಸಾ ಪತ್ರ ಮತ್ತು ನಗದು ಬಹುಮಾನ ಕೊಡಲಾಗಿದೆ ಎಂದರು.
ಎ.ಎಸ್.ಐ ವೆಂಕಟರಾಜು, ಮುಖ್ಯಪೇದೆ ರಂಗನಾಥ್, ಪೇದೆಗಳಾದ ಶಿವರಾಜ್ ಕುಮಾರ್, ಪೃಥ್ವಿರಾಜ್, ಮಂಜೇಶ್ ಮತ್ತು ಬಾಬು ಅವರ ಕಾರ್ಯವನ್ನು ಮುಕ್ತಕಠದಿಂದ ಶ್ಲಾಘಿಸಿದ್ದೇವೆ. ಪೊಲೀಸರು ಜನಸೇವಕರು ಮತ್ತು ಪರಿಸರ ಪ್ರೇಮಿಗಳೆಂದು ಇವರೆಲ್ಲ ನಿರೂಪಿಸಿದದಾರೆ ಎಂದು ಹೇಳಿದರು.
Follow ನಮ್ಮ ಶಿಡ್ಲಘಟ್ಟ on
Facebook: https://www.facebook.com/sidlaghatta
Twitter: https://twitter.com/hisidlaghatta
Instagram: https://www.instagram.com/sidlaghatta
Telegram: https://t.me/Sidlaghatta