21.1 C
Sidlaghatta
Thursday, November 14, 2024

ಜೆಡಿಎಸ್ ಚುನಾವಣಾ ಪ್ರಚಾರದ ಪೂರ್ವಭಾವಿ ಸಭೆ

- Advertisement -
- Advertisement -

Melur, Sidlaghatta : ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಇದುವರೆಗೂ ಏಳು ಮಂದಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಯಾರೂ ಹಣದ ಬಲದಿಂದ ಆಯ್ಕೆ ಆದವರಲ್ಲ. ಈ ಕ್ಷೇತ್ರದ ಸ್ವಾಭಿಮಾನಿ ಮತದಾರರು ತಮ್ಮ ಮತದೊಂದಿಗೆ ಹಣದ ಭಿಕ್ಷೆ ಸಹ ನೀಡಿ ಶಾಸಕರನ್ನು ಆಯ್ಕೆ ಮಾಡಿದ್ದಾರೆ. ಈ ಸ್ವಾಭಿಮಾನಿ ಮತದಾರಿಗೆ ಕುಮಾರಣ್ಣನವರ ಅಭಿವೃದ್ಧಿಪರ ಚಿಂತನೆಗಳನ್ನು ವಿವರಿಸಿ ಎಂದು ಜೆಡಿಎಸ್ ಮುಖಂಡ ಬಿ.ಎನ್.ರವಿಕುಮಾರ್ ತಿಳಿಸಿದರು.

 ತಾಲ್ಲೂಕಿನ ಮೇಲೂರಿನಲ್ಲಿ ಭಾನುವಾರ ಸಂಜೆ ನಡೆದ ಜೆಡಿಎಸ್ ಪಕ್ಷದ ಪಂಚರತ್ನ ಯೋಜನೆ ಹಾಗೂ ಚುನಾವಣಾ ಪ್ರಚಾರದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.  

 ಚುನಾವಣೆಯ ದಿನಾಂಕವು ಶೀಘ್ರದಲ್ಲಿಯೇ ಘೋಷಣೆಯಾಗಲಿದೆ. ಕುಮಾರಣ್ಣನವರು ಮುಖ್ಯಮಂತ್ರಿ ಆದರೆ ಶಿಡ್ಲಘಟ್ಟ ಕ್ಷೇತ್ರಕ್ಕೆ ಶುಕ್ರದೆಸೆ ಪ್ರಾರಂಭವಾದಂತೆ. ಅವರ ಕೈಕಾಲು ಹಿಡಿದು ಅನುದಾನ ತರುತ್ತೇನೆ. ಅಭಿವೃದ್ಧಿ ಕಾರ್ಯಗಳನ್ನು ಮಾಡುವುದೇ ನನ್ನ ಗುರಿ. ಕಾರ್ಯಕರ್ತರು ಚುರುಕಾಗಬೇಕು. ಗ್ರಾಮ ಪಂಚಾಯಿತಿ ಅಥವಾ ನಗರಸಭೆಯ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರನ್ನೂ ನೀವು ಹೇಗೆ ಐದಾರು ಬಾರಿ ಮಾತನಾಡಿ ಮನವೊಲಿಸುತ್ತೀರೋ ಅದೇ ಪ್ರಯತ್ನವನ್ನು ಈಗ ಮಾಡಬೇಕು.

 ಮಾರ್ಚ್ 9 ರ ಗುರುವಾರ ಗಂಜಿಗುಂಟೆಯ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಚುನಾವಣಾ ಪ್ರಚಾರವನ್ನು ಪ್ರಾರಂಭಿಸೋಣ. ಕುಮಾರಣ್ಣನವರ ಪಂಚರತ್ನ ಯೋಜನೆಯ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಸೋಣ. ಕುಮಾರಣ್ಣನವರು ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡ ಜನೋಪಯೋಗಿ ಕಾರ್ಯಕ್ರಮಗಳ ಬಗ್ಗೆ, ರೈತರ ಸಾಲ ಮಾಡಿರುವ ಬಗ್ಗೆ ಹಾಗೂ ದೇವೇಗೌಡರ ಜನೋಪಯೋಗಿ ನಿಲುವುಗಳನ್ನು ಪ್ರತಿಯೊಬ್ಬರಿಗೂ ವಿವರಿಸೋಣ.

ನಾನು ಕೆಲಸಗಾರ, ಭರವಸೆ ನೀಡಿ ಭಾಷಣ ಮಾಡಿ ಮೋಸ ಮಾಡುವವನಲ್ಲ, ಕೆಲಸ ಮಾಡಲೆಂದೇ ಬಂದವನು. ಹಿರಿಯ ರಾಜಕಾರಣಿ, ಮಾಜಿ ಮಂತ್ರಿ ಹಾಗೂ ಹಾಲಿ ಶಾಸಕ ವಿ.ಮುನಿಯಪ್ಪ ಅವರ ವಿರುದ್ಧ ನಾಲ್ಕು ಚುನಾವಣೆಗಳನ್ನು ಎದುರಿಸಿದ್ದೇವೆ. ಈಗ ಕ್ಷೇತ್ರಕ್ಕೆ ಬಂದಿರುವ ಸಮಾಜ ಸೇವಕರು ನೂರು ಮಂದಿ ಇದ್ದರೂ ವಿ.ಮುನಿಯಪ್ಪ ಅವರಿಗೆ ಸಮರಲ್ಲ. ಜೆಡಿಎಸ್ ಕಾರ್ಯಕರ್ತರು ಮತದಾರರಿಗೆ ಪಕ್ಷದ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸಿ, ವಿಶ್ವಾಸ ಗಳಿಸಿ. ಮತದಾರರ ಪಟ್ಟಿಗೆ ಯುವಜನರನ್ನು ಸೇರಿಸಿ. ಇದು ಪ್ರಜಾಪ್ರಭುತ್ವ, ಯಾರೇನೇ ಅಂದರೂ ಮನಸ್ಸಿಗೆ ಹಚ್ಚಿಕೊಳ್ಳದಿರಿ,ಯಾರನ್ನೂ ಟೀಕಿಸಬೇಡಿ. ಗಂಭೀರವಾಗಿ ಜನರ ವಿಶ್ವಾಸ ಗಳಿಸುವತ್ತ ಕಾರ್ಯನಿರ್ವಹಿಸಿ ಎಂದು ಹೇಳಿದರು.

 ಮಾರ್ಚ್ 9 ರಿಂದ 29 ರವರೆಗೂ ಗಂಜಿಗುಂಟೆ, ತಿಮ್ಮನಾಯಕನಹಳ್ಳಿ, ತಲಕಾಯಲಬೆಟ್ಟ, ದಿಬ್ಬೂರಹಳ್ಳಿ, ಈ.ತಿಮ್ಮಸಂದ್ರ, ಸಾದಲಿ, ಎಸ್.ದೇವಗಾನಹಳ್ಳಿ, ಬಶೆಟ್ಟಹಳ್ಳಿ, ಕುಂದಲಗುರ್ಕಿ, ದೊಡ್ಡತೇಕಹಳ್ಳಿ, ಪಲಿಚೇರ್ಲು, ಚಿಲಕಲನೇರ್ಪು, ಏನಿಗದೆಲೆ, ಕೆಂಚಾರ್ಲಹಳ್ಳಿ, ಮಿಟ್ಟಹಳ್ಳಿ, ಬುರಡಗುಂಟೆ, ಕೋರ್ಲಪರ್ತಿ ವರೆಗೂ ಚುನಾವಣೆ ಪ್ರಚಾರ ಸಭೆ ನಡೆಯಲಿದ್ದು, ಜೆಡಿಎಸ್ ಪಕ್ಷದ ಕಾರ್ಯಕರ್ತರು ಯಶಸ್ವಿಗೊಳಿಸಬೇಕೆಂದು ಹೇಳಿದರು.

  ಜೆಡಿಎಸ್ ಮುಖಂಡರಾದ ಬಂಕ್ ಮುನಿಯಪ್ಪ, ಶಿವಾರೆಡ್ಡಿ, ಡಿ.ಬಿ.ವೆಂಕಟೇಶ್, ಬಚ್ಚನಹಳ್ಳಿ ನಾರಾಯಣಸ್ವಾಮಿ. ಡಾ.ಧನಂಜಯರೆಡ್ಡಿ ಹಾಜರಿದ್ದರು.


JDS Leader Urges Self-Respecting Voters in Sidlaghatta to Embrace Pro-Development Thoughts

Melur, Sidlaghatta : Seven MLAs have been elected in Sidlaghatta Assembly Constituency without the influence of money, according to JDS leader BN Ravikumar. Speaking at a preliminary meeting of the JDS party’s Pancharatna Yojana and election campaign in Melur, he emphasized the need to explain H D Kumaraswamy’s pro-development thoughts to the self-respecting voters of the constituency.

Ravikumar stated that if H D Kumaraswamy becomes Chief Minister, it will be the start of bright days for Sidlaghatta Constituency. He promised to bring grants to the area and focus on development work. He urged activists to be smart and engage with voters multiple times during the Gram Panchayat or Municipal Council elections.

The JDS party’s election campaign will begin on March 9 with a pooja at Lakshminarasimhaswamy temple in Ganjigunte, followed by meetings in various locations until March 29. Ravikumar encouraged party workers to inform voters about the party’s development activities and gain their confidence. He emphasized the importance of adding youth to the electoral roll and working towards gaining the trust of the people.

JDS leaders Bunk Muniyappa, Shivareddy, DB Venkatesh, Bachchanahalli Narayanaswamy, and Dr. Dhananjayreddy were present at the meeting. Ravikumar concluded by stating that democracy requires hard work and urged workers to make the party’s campaign successful.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!