Kachahalli, sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕಾಚಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಐದು ವರ್ಷಗಳ ಆಡಳಿತ ಮಂಡಳಿಗೆ ನಿರ್ದೇಶಕರುಗಳ ಸ್ಥಾನಗಳಿಗೆ ಚುನಾವಣೆ ನಡೆಯಿತು.
ಸಾಮಾನ್ಯ ಸ್ಥಾನದಿಂದ ಅಶ್ವತ್ಥಪ್ಪ, ನರಸಿಂಹಪ್ಪ, ಬಚ್ಚಪ್ಪ, ಎಂ.ಮಂಜುನಾಥ್, ಕೆ.ವಿ.ರಮಣ, ವೆಂಕಟರೆಡ್ಡಿ, ಶ್ರೀನಿವಾಸ್, ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಸುಬ್ಬರಾಯಪ್ಪ, ಹಿಂದುಳಿದ ವರ್ಗ ಬಿಸ್ಥಾನದಿಂದ ನಾಗರಾಜಪ್ಪ ಹಾಗೂ ಮಹಿಳಾ ಮೀಸಲು ಸ್ಥಾನದಿಂದ ಆನಂದಮ್ಮ, ನಾರಾಯಣಮ್ಮ ಚುನಾಯಿತರಾಗಿದ್ದಾರೆ.
ಒಟ್ಟು 13 ನಿರ್ದೇಶಕರುಗಳ ಸ್ಥಾನಕ್ಕೆ ನಡೆಯಬೇಕಿದ್ದ ಚುನಾವಣೆಯಲ್ಲಿ 11 ಸ್ಥಾನಗಳಿಗಷ್ಟೆ ನಾಮಪತ್ರ ಸಲ್ಲಿಸಿದ್ದು ಚುನಾವಣೆ ನಡೆದಿದೆ. ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗ ಎ ಮೀಸಲು ಸ್ಥಾನಕ್ಕೆ ಯಾರೂ ನಾಮಪತ್ರವನ್ನೆ ಸಲ್ಲಿಸಿಲ್ಲ.