Laghunayakanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ಲಗಿನಾಯಕನಹಳ್ಳಿ ಗ್ರಾಮದಲ್ಲಿ ಶನಿವಾರ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು,ಕೃಷಿ ಮಹಾವಿದ್ಯಾಲಯ GKVK ಬೆಂಗಳೂರು ವಿದ್ಯಾರ್ಥಿಗಳಿಂದ “ಕೃಷಿ ಕಾರಂಜಿ” ಆಯೋಜಿಸಲಾಗಿತ್ತು.
ಕೃಷಿ ಕಾರಂಜಿಯಲ್ಲಿ ಕೃಷಿಮೇಳ,ಕೃಷಿ ವಸ್ತು ಪ್ರದರ್ಶನ ಮತ್ತು ವಿಚಾರಗೋಷ್ಠಿಯನ್ನು ಏರ್ಪಡಿಸಲಾಗಿತ್ತು.
ಬೆಳೆ ಸಂಗ್ರಹಾಲಯಕ್ಕೆ ಚಾಲನೆ ನೀಡಿ ಮಾತನಾಡಿದ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಡೀನ್ (ಸ್ನಾತಕೋತ್ತರ) ಡಾ. ಎಚ್.ಸಿ.ಪ್ರಕಾಶ್, ಸಾವಯವ ಗೊಬ್ಬರದ ಪ್ರಾಮುಖ್ಯತೆ ಮತ್ತು ಅದರ ಉಪಯೋಗಗಳನ್ನು ರೈತರಿಗೆ ತಿಳಿಸಿಕೊಡುತ್ತಾ ಅದನ್ನು ಬಳಸಿದ್ದಲ್ಲಿ ಮಣ್ಣಿನ ಆರೋಗ್ಯ ಮತ್ತು ಫಲವತ್ತತೆ ಹೆಚ್ಚುವುದು ಎಂಬ ಮಾಹಿತಿ ನೀಡಿದರು.
ಕೃಷಿ ವಿಶ್ವವಿದ್ಯಾನಿಲಯ ಪ್ರಾಧ್ಯಾಪಕ ಹಾಗೂ ವೈಜ್ಞಾನಿಕ ಅಧಿಕಾರಿ ಡಾ.ನಾರಾಯಣಸ್ವಾಮಿ ಮಾತನಾಡಿ, ರೈತರು ವೈಜ್ಞಾನಿಕ ಮಾದರಿಯಲ್ಲಿ ಕೃಷಿಯನ್ನು ಕೈಗೊಳ್ಳುವತ್ತ ಗಮನಹರಿಸಬೇಕು ಮತ್ತು ಕೃಷಿಯಲ್ಲಿ ಆಗುವ ಸಮಸ್ಯೆಗಳ ಬಗ್ಗೆ ವಿವರಿಸಿದರು.
ರೇಷ್ಮೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅಕ್ಮಲ್ ಪಾಷಾ ಮಾತನಾಡಿ, ರೇಷ್ಮೆ ಉತ್ಪಾದನೆಯಲ್ಲಿ ನಮ್ಮ ದೇಶವು ಗುಣಮಟ್ಟ ಕಾಯ್ದುಕೊಳ್ಳುವುದರ ಜೊತೆಗೆ ಮಾರುಕಟ್ಟೆ ಮಾಡುವಂತಹ ದಿನಗಳು ಸಮೀಪದಲ್ಲಿದೆ. ನಮ್ಮಲ್ಲಿನ ರೈತರು ಹೆಚ್ಚು ಉತ್ಪಾದನೆಯ ಕಡೆಗೆ ಗಮನ ಹರಿಸಿದ್ದಾರೆ ಎಂದರು.
ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಶ್ರೀನಾಥ ರೆಡ್ಡಿ ಮಾತನಾಡಿ, ಈ ಶಿಬಿರವನ್ನು ಆಯೋಜಿರುವ ವಿದ್ಯಾರ್ಥಿಗಳ ಪರಿಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪಶುಗಳಿಗೆ ಬರುವ ರೋಗಗಳ ಬಗ್ಗೆ ಮಾಹಿತಿ ನೀಡಿ ಹುಚ್ಚು ನಾಯಿ ಲಸಿಕೆಯ ಬಗ್ಗೆ ವಿವರಿಸಿದರು.
ಬೆಳೆ ಸಂಗ್ರಹಾಲಯ, ಕೈತೋಟ, ಯಂತ್ರೋಪಕರಣ ಮತ್ತು ವಸ್ತು ಪ್ರದರ್ಶನವನ್ನು ಕೃಷಿ ಕಾರಂಜಿ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು.
ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರತ್ನಮ್ಮ ವೆಂಕಟೇಶಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀರಾಮರೆಡ್ಡಿ, ಜಯರಾಮರೆಡ್ಡಿ, ಶಿವಮ್ಮ ಮುನಿನಾರಾಯಣಪ್ಪ, ಕೆ.ವಿ.ನಾಗರಾಜ್, ಎಂ.ಪಿ.ಸಿ.ಎಸ್ ಅಧ್ಯಕ್ಷ ಮುನಿರೆಡ್ಡಿ, ಕೃಷಿ ವಿಶ್ವವಿದ್ಯಾನಿಲಯದ ಸಂಪನ್ಮೂಲ ವ್ಯಕ್ತಿಗಳಾದ ಡಾ.ಎಂ.ಮಹದೇವ ಮೂರ್ತಿ, ಡಾ.ಸಿ.ನಾರಾಯಣಸ್ವಾಮಿ, ಡಾ. ಸಿ.ಆರ್.ಜಹೀರ್ ಭಾಷ, ಡಾ.ಬಸವರಾಜ್ ಬಿರಾದರ್, ಡಾ.ಯಶಸ್ವಿನಿ ಹಾಜರಿದ್ದರು.