Appegowdanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಶಿಡ್ಲಘಟ್ಟ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಇವರ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಣ್ಣಿನ ತಪಾಸಣೆ ನಡೆಸಿದರು.
ಲಯನ್ಸ್ ಕ್ಲಬ್ ನ ಜಿಲ್ಲಾ ಕ್ಯಾಬಿನೆಟ್ ಅಧಿಕಾರಿ 317 ಎಫ್ ಅಜಯ್ ಕೀರ್ತಿ ಮಾತನಾಡಿ, ಲಯನ್ಸ್ ಸಂಸ್ಥೆಯು ಸಮಾಜಮುಖಿಯಾದ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಶಿಕ್ಷಣ ಸಂಸ್ಥೆಗಳಲ್ಲಿರುವ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ, ನೇತ್ರ ತಪಾಸಣೆಯಂತಹ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ಇಂತಹ ಉತ್ತಮ ಅವಕಾಶಗಳನ್ನು ಮಕ್ಕಳು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಶಾಲೆಯ ಪ್ರಾಂಶುಪಾಲೆ ವಿಜಯಶ್ರೀ.ಎಸ್.ವಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಕಲಿಕೆಯ ಸಮಯದಲ್ಲಿ ಏಕಾಗ್ರತೆಯನ್ನು ರೂಢಿಸಿಕೊಳ್ಳಬೇಕಾಗಿರುವುದರಿಂದ ನಿಮ್ಮಲ್ಲಿ ಏಕಾಗ್ರತೆಯನ್ನು ಉಂಟು ಮಾಡುವಂತಹ ಕಣ್ಣುಗಳ ತಪಾಸಣೆಯನ್ನು ಕಡ್ಡಾಯವಾಗಿ ಮಾಡಿಕೊಳ್ಳುವುದು ಉತ್ತಮ. ಕೆಲವು ಮಕ್ಕಳಲ್ಲಿ ದೃಷ್ಟಿಯಲ್ಲಿ ಕಂಡು ಬರುತ್ತಿರುವ ಸಣ್ಣ ಸಣ್ಣ ದೋಷಗಳನ್ನು ಪ್ರಾಥಮಿಕ ಹಂತದಲ್ಲೆ ಗುರುತಿಸಿ, ಆರಂಭದಲ್ಲೆ ಸರಿಪಡಿಸಿಕೊಳ್ಳಲು ಉಚಿತ ನೇತ್ರ ತಪಾಸಣಾ ಶಿಬಿರಗಳು ಹೆಚ್ಚು ಸಹಕಾರಿಯಾಗುತ್ತವೆ. ಇಂತಹ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಕ್ಲಬ್ ನ ಅಧ್ಯಕ್ಷ ಮೊಹಮದ್ ಅಮಾನುಲ್ಲಾ, ಅರುಣ್, ಮಧುಸೂದನ್, ಶಾಲೆಯ ಉಪಪ್ರಾಂಶುಪಾಲ ಮುರಳಿಧರ.ಡಿ.ಪಿ, ಶಿಕ್ಷಕರು ಪ್ರಸಾದ್.ಎಸ್.ಎ, ದಿವಾಕರರೆಡ್ಡಿ.ಸಿ.ಜಿ, ಶಶಿದೀಪಿಕಾ.ಜಿ, ನರೇಶ್.ಜಿ.ಎನ್, ಲಕ್ಷ್ಮೀನಾರಾಯಣ ನಾಯಕ್, ರಾಮಪ್ಪ ಸಿದ್ಧಪ್ಪ ಶಿವಾಯಿ, ತ್ರಿವೇಣಿ.ಕೆ.ಪಿ, ಸಂಧ್ಯಾ, ಯಲ್ಲಪ್ಪ ಗಡ್ಡನಕೇರಿ, ಸಿದ್ದುಹುಣಸಿಕಟ್ಟಿ ಹಾಜರಿದ್ದರು.