Sidlaghatta : ಮೇ 10 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ ಶನಿವಾರ ಪೊಲೀಸ್ ಹಾಗು ಬಿಎಸ್‌ಎಫ್ ಯೋಧರು ನಗರದಾದ್ಯಂತ ಪಥ ಸಂಚಲನ ನಡೆಸಿದರು.
ಶಿಡ್ಲಘಟ್ಟ ನಗರದ ಬಸ್ ನಿಲ್ದಾಣದಿಂದ ಆರಂಭವಾದ ಪಥಸಂಚಲನ ಕೋಟೆ ವೃತ್ತ, ಸಿದ್ದಾರ್ಥನಗರ, ವಿಜಯಲಕ್ಷ್ಮಿ ವೃತ್ತ, ಟಿ.ಬಿ.ರಸ್ತೆ ಮೂಲಕ ಸಂತೋಷನಗರ, ರಾಜೀವ್ ಗಾಂಧಿ ಆಶ್ರಯ ಬಡಾವಣೆಗಳಲ್ಲಿ ಸಂಚರಿಸುವ ಮೂಲಕ ಚುನಾವಣೆಯ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಲು ನಾವು ಸನ್ನದ್ದರಾಗಿದ್ದು ಪ್ರತಿಯೊಬ್ಬರೂ ನಿರ್ಭೀತಿಯಿಂದ ಮತದಾನದಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವ ರಕ್ಷಿಸಬೇಕು ಎಂದು ಸಾರಿದರು.
ತಹಶೀಲ್ದಾರ್ ಬಿ.ಎನ್.ಸ್ವಾಮಿ, ಸಹಾಯಕ ಪೊಲೀಸ್ ಅಧೀಕ್ಷಕ ಕುಶಾಲ್ ಚೌಕ್ಸೆ, ಸರ್ಕಲ್ ಇನ್ಸ್ ಪೆಕ್ಟರ್ ನಂದಕುಮಾರ್ ಸೇರಿದಂತೆ ವಿವಿಧ ಠಾಣೆಗಳ ಪಿಎಸ್ಸೈ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
Police and BSF Troopers Conduct Road Patrols Ahead of Assembly Elections
Sidlaghatta : On Saturday, in preparation for the upcoming assembly elections on May 10th, police and BSF troopers conducted road patrols throughout the city. The patrols covered areas including Pathasanchalana Kote circle, Siddharthanagar, Vijayalakshmi circle, T.B. road through Santhoshnagar, Rajiv Gandhi sheltered areas, and started from Shidlaghatta city bus station.
According to an official, the authorities are fully prepared to maintain law and order during the elections. The patrol team included Tehsildar BN Swamy, Assistant Superintendent of Police Kushal Chowkse, Circle Inspector Nandakumar, PSSI, and staff from various stations.