24.1 C
Sidlaghatta
Friday, March 29, 2024

ಅಂಬೇಡ್ಕರ್ ನಾಮ ಫಲಕ ಸರಿಪಡಿಸಲು ಮನವಿ

Founder of Edhare Samata Sena Urges Officials to Take Action

- Advertisement -
- Advertisement -

Sidlaghatta : ಶಿಡ್ಲಘಟ್ಟ ನಗರದ ತಾಲ್ಲೂಕು ಕಚೇರಿ ಮುಂಭಾಗದ ಜೋಡಿ ರಸ್ತೆಗೆ ಹಾಕಲಾಗಿದ್ದ ಡಾ. ಬಿ. ಆರ್ ಅಂಬೇಡ್ಕರ್ ರವರ ನಾಮ ಫಲಕ ಶಿಥಲಗೊಂಡು ನೆಲಕ್ಕೆ ಉರಳಿ ಬೀಳುವ ಸ್ಥಿತಿಯಲ್ಲಿದೆ. ಅದನ್ನು ಸಂರಕ್ಷಣೆ ಮಾಡಬೇಕೆಂದು ಗುರುವಾರ ನಗರಸಭೆ ಪೌರಯುಕ್ತ ಶ್ರೀಕಾಂತ್ ಅವರಿಗೆ ಈ ಧರೆ ಸಮತಾ ಸೇನೆ ಸಂಸ್ಥಾಪಕ ಈ ಧರೆ ಪ್ರಕಾಶ್ ಮನವಿ ನೀಡಿದರು.

ಪ್ರತಿದಿನ ಸಾವಿರಾರು ಜನ ಸಂಚಾರ ಮಾಡುವಂತ ಸ್ಥಳದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ರವರ ಹೆಸರು ಜನ ಸಾಮಾನ್ಯರಿಗೂ ತಿಳಿಯುವ ಸದುದ್ದೇಶದಿಂದ ಹಾಗೂ ಅವರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ದಿಬ್ಬೂರಹಳ್ಳಿಗೆ ಹಾದು ಹೋಗುವಂತ ಜೋಡಿ ರಸ್ತೆಗೆ ಡಾ. ಬಿ. ಆರ್ ಅಂಬೇಡ್ಕರ್ ರವರ ರಸ್ತೆ ಎಂದು ನಾಮಕರಣ ಮಾಡಿ ಹಾಕಿರುವ ನಾಮ ಫಲಕ ನೆಲಕ್ಕೆ ಉರಳಿ ಬೀಳುವ ಸ್ಥಿತಿಯಲ್ಲಿದೆ. ಏಪ್ರೀಲ್ 14 ರಂದು ಡಾ. ಬಿ. ಆರ್ ಅಂಬೇಡ್ಕರ್ ಜಯಂತಿ ಇರುವುದರಿಂದ ಕೂಡಲೆ ನಾಮ ಫಲಕ ಸರಿಪಡಿಸಿ ವಿಶ್ವದ ಅಗ್ರಗಣ್ಯ ನಾಯಕನಿಗೆ ಗೌರವ ಸೂಚಿಸುವಂತ ಕೆಲಸ ಸಂಬಂದ ಪಟ್ಟ ಅಧಿಕಾರಿಗಳು ಮಾಡಬೇಕೆಂದು ಮನವಿ ಮಾಡಿದರು.

ಮೂರ್ನಾಲ್ಕು ವರ್ಷಗಳ ಹಿಂದೆ ಹದಗೆಟ್ಟಿದ್ದ ಈ ನಾಮ ಫಲಕಕ್ಕೆ ಸ್ವಯಂ ಪ್ರೇರಿತವಾಗಿ ಕೆಲವರು ಬಣ್ಣ ಬಳಿಯುವ ಮೂಲಕ ನವೀಕರಣ ಮಾಡಲಾಗಿತ್ತು. ಆದರೆ ಇದೀಗ ನಾಮ ಫಲಕದ ಕಂಬಗಳು ಪೂರ್ಣ ಪ್ರಮಾಣದಲ್ಲಿ ಹಾಳಾಗಿ ಅದಕ್ಕೆ ಹಾಕಲಾಗಿದ್ದ ಕಬ್ಬಿಣದ ಕಂಬಿಗಳು ಕಾಣುತ್ತಿವೆ. ನೆಲಕ್ಕೆ ಉರಳಿ ಬೀಳುವ ಸ್ಥಿತಿಯಲ್ಲಿದೆ.

ಅಧಿಕಾರಿಗಳು ಡಾ. ಬಿ. ಆಂಬೇಡ್ಕರ್ ರವರ ಹೆಸರು ಇರುವ ಈ ನಾಮ ಫಲಕವನ್ನು ಕೂಡಲೇ ಏಪ್ರಿಲ್ ಹದಿನಾಲ್ಕರ ಒಳಗೆ ಸರಿಪಡಿಸಿ ಅವರಿಗೆ ಗೌರವ ಸಲ್ಲಿಸಬೇಕಾಗಿದೆ. ಒಂದು ವೇಳೆ ಮಾಡಲು ಸಾಧ್ಯವಾಗದಿದ್ದಲ್ಲಿ ಸ್ವಯಂಪ್ರೇರಿತವಾಗಿ ಈ ಧರೆ ಸಮತಾ ಸೇನೆ ವತಿಯಿಂದ ಸರಿಪಡಿಸಲು ಅನುಮತಿ ನೀಡಬೇಕೆಂದು ಪೌರಾಯುಕ್ತರನ್ನು ಕೋರಿದರು.


Call to Preserve Dr. B.R. Ambedkar’s Name Plaque in Sidlaghatta

Sidlaghatta : The name plaque of Dr. B.R. Ambedkar in front of the Sidlaghatta city taluk office, located on Double Road, is in a state of disrepair and is close to falling to the ground. On Thursday, Edhare Prakash, the founder of Edhare Samata Sena, urged Municipal Commissioner Srikanth to take action and preserve it.

The name plaque, dedicated to the architect of the Indian Constitution, Dr. B.R. Ambedkar, is located in a busy area where thousands of people pass by every day. Dhara Prakash believes that it is essential to maintain the plaque’s condition to pay respect to the esteemed leader, particularly on his birth anniversary on April 14.

Despite some individuals painting the plaque several years ago, it has now significantly deteriorated. The pillars are damaged, and the iron bars are visible, leaving the plaque at risk of collapsing.

Edhare Prakash has requested that concerned officials repair the plaque before April 14 or allow volunteers from the Edhare Samata Sena to restore it. It is essential to pay tribute to the great leader, Dr. B.R. Ambedkar, and preserve his legacy.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!