Sidlaghatta : ಶಿಡ್ಲಘಟ್ಟ ತಾಲ್ಲೂಕಿನ ವೈ.ಹುಣಸೇನಹಳ್ಳಿಯ 66/11 ಕೆವಿ ಉಪ ವಿದ್ಯುತ್ ಕೇಂದ್ರದಿಂದ ಪಲಿಚೇರ್ಲು 66/11 ಕೆವಿ ಉಪ ವಿದ್ಯುತ್ ಕೇಂದ್ರಕ್ಕೆ ಹೊಸದಾಗಿ 66ಕೆವಿ ಮಾರ್ಗದ ಕಾಮಗಾರಿಯನ್ನು ಡಿಸೆಂಬರ್ 16 ರ ಸೋಮವಾರ ಕೈಗೆತ್ತಿಕೊಳ್ಳಲಾಗುತ್ತಿದೆ.
ಈ ಕಾರಣ ಪಲಿಚೇರ್ಲು ಉಪ ವಿದ್ಯುತ್ ಕೇಂದ್ರ ವ್ಯಾಪ್ತಿಯ ಕುತ್ತಾಂಡಹಳ್ಳಿ, ಸದ್ದಹಳ್ಳಿ, ಮರಿಹಳ್ಳಿ, ಚೌಡರೆಡ್ಡಿಹಳ್ಳಿ, ಕೋಟಹಳ್ಳಿ, ತಾತಹಳ್ಳಿ, ಸಿದ್ದಾಪುರ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಡಿಸೆಂಬರ್ 16 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ವಿದ್ಯುತ್ ಸರಬರಾಜಲ್ಲಿ ವ್ಯತ್ಯಯವಾಗಲಿದೆ ಎಂದು BESCOM ಪ್ರಕಟಣೆಯಲ್ಲಿ ತಿಳಿಸಿದೆ.