25.1 C
Sidlaghatta
Friday, June 2, 2023

ಶಿಡ್ಲಘಟ್ಟ ಕ್ಷೇತ್ರವನ್ನು ಕಡೆಗಣಿಸಿದವರಿಗೆ ತಕ್ಕ ಉತ್ತರ ನೀಡುವ ಕಾಲ ಬಂದಿದೆ – ರವಿಕುಮಾರ್

Previously Defeated Candidate Vows to Work for Development of Sidlaghatta Constituency

- Advertisement -
- Advertisement -

Sadali, Sidlaghatta : ಹಾಲಿ ಶಾಸಕರು ಹಾಗೂ ಮಾಜಿ ಶಾಸಕರ ಕುಟುಂಬಗಳು ಒಂದಾಗಿ ನನ್ನನ್ನು ಉದ್ದೇಶ ಪೂರ್ವಕವಾಗಿ ಕಳೆದ ಚುನಾವಣೆಯಲ್ಲಿ ಸೋಲಿಸಿದರು. ನನಗೆ ನೋವಾಗಲಿಲ್ಲ. ಆದರೆ ಈ ಕ್ಷೇತ್ರವನ್ನು ಅಭಿವೃದ್ಧಿ ಪಡಿಸದೇ ಕ್ಷೇತ್ರವನ್ನು ಕಡೆಗಣಿಸಿ ಹಿಂದುಳಿಯುವಂತೆ ಮಾಡಿ ಕ್ಷೇತ್ರದ ಜನತೆಯ ಆಶೋತ್ತರಗಳಿಗೆ ಮೋಸ ಮಾಡಿದ್ದು ಎಷ್ಟು ಸರಿ ಎಂದು ಜೆಡಿಎಸ್.ಮುಖಂಡ ರವಿಕುಮಾರ್ ಪ್ರಶ್ನಿಸಿದರು.

ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹಾಗೂ ಎಸ್ .ದೇವಗಾನಹಳ್ಳಿ ಪಂಚಾಯತಿ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ನೂರಕ್ಕೂ ಹೆಚ್ಚು ಮುಖಂಡರು ಹಾಗೂ ಮುನ್ನೂರಕ್ಕೂ ಹೆಚ್ಚು ಕಾರ್ಯಕರ್ತರು ಜೆಡಿಎಸ್ ಅಭ್ಯರ್ಥಿಯಾದ ಬಿ.ಎನ್. ರವಿಕುಮಾರ್ ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷದ ಸಿದ್ಧಾಂತಗಳನ್ನು ಒಪ್ಪಿ ಜೆಡಿಎಸ್ ಪಕ್ಷಕ್ಕೆ ಮೇಲೂರಿನ ಅವರ ಸ್ವಗೃಹದ ಆವರಣದಲ್ಲಿ ಸೇರ್ಪಡೆ ಮಾಡಿಕೊಂಡ ಸಂದರ್ಭದಲ್ಲಿ ಅವರು ಮಾತನಾಡಿದರು.

ಕ್ಷೇತ್ರದ ಬಗ್ಗೆ ಪ್ರತಿ ಇಂಚು ನನಗೆ ಗೊತ್ತು. ಯಾವ್ಯಾವ ಭಾಗದಲ್ಲೇನು ಅವಶ್ಯಕತೆಯಿದೆ ಹೇಗೆ ಅಭಿವೃದ್ಧಿಗೊಳಿಸಬೇಕೆಂಬುದು ನನಗರಿವಿದೆ,

ಈ ಬಾರಿ ರಾಜ್ಯದಲ್ಲಿ ಕುಮಾರಣ್ಣ ಮುಖ್ಯಮಂತ್ರಿಯಾಗುವುದು ಶತಸಿದ್ದ. ಆದ್ದರಿಂದ ನನ್ನನ್ನು ಈ ಬಾರಿ ಕ್ಷೇತ್ರದ ಮತದಾರ ಬಂಧುಗಳು ಅತ್ಯಂತ ಹೆಚ್ಚಿನ ಮತಗಳನ್ನು ನೀಡಿ ಆಶಿರ್ವದಿಸಿ ಶಾಸಕರಾಗಿ ವಿದಾನಸೌಧಕ್ಕೆ ಕಳುಹಿಸಿದಲ್ಲಿ ಶಿಡ್ಲಘಟ್ಟ ಕ್ಷೇತ್ರದ ಅಭಿವೃದ್ಧಿಗೆ ಕಾಯ ವಾಚ ಶ್ರಮಿಸುವೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಬಿಟ್ಟು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿ ಮಾತನಾಡಿದ ಸಾದಲಿ ಎಸ್.ಎಫ್.ಸಿ.ಎಸ್.ಬ್ಯಾಂಕ್ ನ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಇರಗಪ್ಪನಹಳ್ಳಿ ಅಶ್ವತ್ ರೆಡ್ಡಿ, ನಾವು ಸ್ವಾಭಿಮಾನದಿಂದ ಪಕ್ಷಕ್ಕೆ ದುಡಿದು ಬೆಳೆದವರು. ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬರುವಂತಹ ಪರಿಸ್ಥಿತಿ ಅಲ್ಲಿರುವುದರಿಂದ ಆ ಪಕ್ಷದಲ್ಲಿರಲಾಗಲಿಲ್ಲ. ಆದ್ದರಿಂದ ಜೆಡಿಎಸ್ ಪಕ್ಷದ ಮುಖಂಡರಾದ ಬಿ.ಎನ್‌. ರವಿಕುಮಾರ್ ರವರ ಸಂಘಟನೆ, ಆತ್ಮಿಯತೆಯ ಸ್ನೇಹವುಳ್ಳವರು, ಸರಳಜೀವಿ ಹಾಗೂ ನಮ್ಮ ಕ್ಷೇತ್ರದ ಸ್ಥಳೀಯರಾಗಿರುವುದರಿಂದ ಜೆಡಿಎಸ್ ಪಕ್ಷಕ್ಕೆ ನಾವು ಸೇರ್ಪಡೆಯಾದೆವು. ನಾವು ಯಾವುದೇ ಆಸೆಗಳನ್ನಿಟ್ಟುಕೊಂಡು ಬಂದಿಲ್ಲ. ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ನಾವು ನೀವೆಲ್ಲಾ ಸೇರಿ ಕೆಲಸ ಮಾಡಿ ರವಿಕುಮಾರ್ ರವರನ್ನು ಗೆಲ್ಲಿಸಿಕೊಂಡು ಬರೋಣ ಎಂದರು.

ಈ ವೇಳೆ ಡಾ.ಧನಂಜಯರೆಡ್ಡಿ ಹಾಗೂ ಬಂಕ್ ಮುನಿಯಪ್ಪ ಮಾತನಾಡಿದರು. ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಎಸ್.ಎಫ್.ಸಿ.ಎಸ್. ಬ್ಯಾಂಕ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಇರಗಪ್ಪನಹಳ್ಳಿ ಅಶ್ವತ್ ರೆಡ್ಡಿ ,ಹಾಲಿ ಸದಸ್ಯರಾದ ಅಶ್ವತ್ಥಪ್ಪ, ನೇರಳೆಮರದಹಳ್ಳಿ,ಕಷ್ಣಾರೆಡ್ಡಿ,

ಸೋಮಶೇಖರ್, ಸಾಕುಪ್ಪನಹಳ್ಳಿ,ಲಕ್ಷ್ಮಿನಾರಾಯಣರೆಡ್ಡಿ, ಮುಖಂಡರುಗಳ ನೇತೃತ್ವದಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಬಿಟ್ಟು, ಜೆಡಿಎಸ್ ಪಕ್ಷದ ಸಿದ್ಧಾಂತ ಒಪ್ಪಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಜೆಡಿಎಸ್.ತಾಲ್ಲೂಕು ಅಧ್ಯಕ್ಷ ಡಿ.ಬಿ‌.ವೆಂಕಟೇಶ್, ಬಂಕ್ ಮುನಿಯಪ್ಪ, ಡಾ.ಧನಂಜಯರೆಡ್ಡಿ, ಡಿ.ಸಿ‌.ರಾಮಚಂದ್ರ, ನರಸಿಂಹಪ್ಪ, ಪಾಪಣ್ಣ, ಪಿ.ಶಿವಾರೆಡ್ಡಿ, ತಾದೂರು ರಘು, ಕೆ.ಎಸ್.ಮಂಜುನಾಥ್, ಆರ್.ಎ.ಉಮೇಶ್,

ಕುಂದಲಗುರ್ಕಿ ಚಂದ್ರಶೇಖರ್ ಹಾಜರಿದ್ದರು.


JDS Party Gains Support as Congress Workers Join Ranks

Sadali, Sidlaghatta : In the recent election, a candidate claims that they were deliberately defeated by a group consisting of sitting MLAs and families of former MLAs. The defeated candidate, however, remains optimistic and determined to work towards the development of their constituency.

JDS.Mukhanda Ravikumar has raised concerns about neglecting the constituency’s development, and more than 100 leaders and 300 workers of the Congress party have joined JDS candidate B.N. in support of him. B.N. promises to work hard for the development of the Shidlaghatta constituency and claims to have a deep understanding of the area’s needs.

Former chairman of Sadali SFCS Bank and current member, Iragappanahalli Aswath Reddy, has left the Congress party to join the JDS party along with more than 300 workers. They claim to have joined the JDS party due to Ravikumar’s organization skills, friendly demeanor, and native background in the constituency. They hope to work together to bring the JDS party to power and support Ravikumar’s bid for leadership.

Various JDS party leaders were present at the occasion, including Taluk President DB Venkatesh, Bank Muniyappa, Dr. Dhananjaya Reddy, DC Ramachandra, Narasimhappa, Papanna, P. Shivareddy, Taduru Raghu, KS Manjunath, RA Umesh, and Kundalagurki Chandrasekhar.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!