Sidlaghatta : ಶಿಡ್ಲಘಟ್ಟ ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ಮಾರ್ಥೋಮ ಚರ್ಚ್ ನಲ್ಲಿ ಕ್ರಿಶ್ಚಿಯನ್ ಸಮುದಾಯದವರು ಗುಡ್ ಫ್ರೈಡೆ ಪ್ರಯುಕ್ತ ಶುಕ್ರವಾರ ಶ್ರದ್ಧಾ ಭಕ್ತಿಯಿಂದ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.
ಚರ್ಚಿನ ಸಭಾಪಾಲಕ ರೆವರೆಂಡ್ ಸಂಕಲ್ಪ್ ಸ್ಯಾಮ್ ಮ್ಯಾತ್ಯಸ್ ಅಚ್ಚನ್ ಮಾತನಾಡಿ, “ಮಾನವ ಪ್ರೇಮಿ ಯೇಸುಕ್ರಿಸ್ತನು ಶಿಲುಬೆಗೇರಿದ ದಿನವನ್ನು ಗುಡ್ ಫ್ರೈಡೆ (ಶುಭ ಶುಕ್ರವಾರ) ಎಂದು ಆಚರಿಸಲಾಗುತ್ತದೆ. ಯೇಸು ಕ್ರಿಸ್ತನ ತ್ಯಾಗವನ್ನು ಸ್ಮರಿಸಲು ಈ ದಿನ ವಿಶೇಷ ಪ್ರಾರ್ಥನೆಗಳನ್ನು ನಡೆಸಲಾಗುತ್ತಿದೆ ಎಂದರು.
ಈ ದಿನದಂದು ದೇವಾಲಯದಲ್ಲಿ ಶೋಕಾಚರಣೆಯ ಕಾರಣ ಯಾವ ಅಲಂಕಾರವೂ ಮಾಡುವುದಿಲ್ಲ. ಸುಮಧುರ ಗಂಟೆಯ ನಾದವೂ ಬರದ ಹಾಗೆ ಬಟ್ಟೆಯಿಂದ ಸುತ್ತಲಾಗಿರುವುದು. ಕ್ರೈಸ್ತರು “ಇದೇ ಶಿಲುಬೆಯಿಂದ ಲೋಕ ಉದ್ಧಾರವಾಯಿತು” ಎಂದು ಮೌನವಾಗಿ ಧ್ಯಾನ ಮಾಡುವ ಆತ್ಮಾವಲೋಕನ ಮಾಡುವ ದಿನವಿದು ಎಂದು ವಿವರಿಸಿದರು.