Sidlaghatta : ಒಳಮೀಸಲಾತಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್ ಅವರಿಗೆ ತೋರಿಸಿರುವ ಅಗೌರವದ ವಿರುದ್ಧ ತಾಲ್ಲೂಕು ಜಾಂಭವ ಯುವ ಸೇನಾ ವತಿಯಿಂದ ಬುಧವಾರ ಕಾಲುನಡಿಗೆ ಜಾಥಾ ಹಾಗೂ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ತಾಲ್ಲೂಕು ಜಾಂಭವ ಯುವ ಸೇನಾ ಸದಸ್ಯರು ನಗರದ ಬಸ್ ನಿಲ್ದಾಣದಿಂದ ಕಾಲುನಡಿಗೆ ಜಾಥಾ ಮೂಲಕ ತಾಲ್ಲೂಕು ಕಚೇರಿಯ ಬಳಿ ಆಗಮಿಸಿ, ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನಾ ಧರಣಿ ನಡೆಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಧೋರಣೆ ಹಾಗೂ ವಿಕೃತ ಮನಸ್ಥಿತಿ ನೋಡಿ ಎಚ್ಚರಗೊಳ್ಳದಿದ್ದರೆ ಭಾರತದ ಸಂವಿಧಾನ ನಾಶಗೊಳ್ಳುವುದು ಖಚಿತ. ಈ ಕೂಡಲೇ ಅಮಿತ್ ಷಾ ಅವರು ರಾಜೀನಾಮೆ ನೀಡಬೇಕು ಎಂಬ ಮನವಿ ಪತ್ರವನ್ನು ರಾಜ್ಯಪಾಲರಿಗೆ ರವಾನಿಸಲು ಕೋರಿ ತಹಶೀಲ್ದಾರ್ ಬಿ.ಎನ್.ಸ್ವಾಮಿ ಅವರಿಗೆ ಸಲ್ಲಿಸಿದರು.
ಜಾಂಭವ ಯುವ ಸೇನಾ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಚಕ್ರವರ್ತಿ, ಗೌರವಾಧ್ಯಕ್ಷ ನಾರಾಯಣಸ್ವಾಮಿ, ನಿವಾಸ್, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಜಿ ಆರ್ ಶ್ರೀನಿವಾಸ್, ದ್ಯಾವಪ್ಪ, ಕಂಬದಹಳ್ಳಿ ದೇವರಾಜ್, ಗಂಗಾಧರಪ್ಪ, ತಾಲ್ಲೂಕು ಅಧ್ಯಕ್ಷ ಎಂ.ಸಂದೀಪ್ ಕುಮಾರ್, ನರೇಂದ್ರ, ಪ್ರಭು ಶ್ರೀರಾಮ್, ಶಿವಣ್ಣ ಹಾಜರಿದ್ದರು.