Sidlaghatta : ಶಿಡ್ಲಘಟ್ಟ ನಗರದ ಶ್ರೀ ಕಾಳಿಕಾಂಬ ಕಮ್ಮಠೇಶ್ವರಸ್ವಾಮಿ ದೇವಾಲಯದ ಸಮುದಾಯ ಭವನದಲ್ಲಿ ಮಾರುತಿ ಸಂಗೀತ ಅಕಾಡೆಮಿ ವತಿಯಿಂದ ಶ್ರೀ ಪುರಂದರ ದಾಸರು, ಶ್ರೀ ಸದ್ಗುರು ತ್ಯಾಗರಾಜ ಸ್ವಾಮಿಯವರು, ಶ್ರೀ ಕನಕದಾಸರು, ಶ್ರೀ ಯೋಗಿ ನಾರಾಯಣ ಯತೀಂದ್ರರು ಹಾಗೂ ವಾಗ್ಗೇಯಕಾರರ ಆರಾಧನೆ ಮಹೋತ್ಸವ ಭಾನುವಾರ ನಡೆಯಿತು.
ಶ್ರೀ ಕಾಳಿಕಾಂಬ ಕಮ್ಮಠೇಶ್ವರಸ್ವಾಮಿ ಸ್ವಾಮಿಗೆ ಪಂಚಾಮೃತಾಭಿಷೇಕ, ವಜ್ರಾಂಗಿ ಹಾಗೂ ಹೂವಿನ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಿದರು.
ಬೆಳ್ಳಿಗ್ಗೆಯಿಂದ ರಾತ್ರಿಯವರೆಗೆ ನಡೆದ ಆರಾಧನಾ ಮಹೋತ್ಸವದಲ್ಲಿ ನಾದಸ್ವರ ವಿದ್ವಾನ್ ದೊಡ್ಡದಾಸರಹಳ್ಳಿ ಮುನಿನಾರಾಯಣಪ್ಪ ಮತ್ತು ಸಂಗಡಿಗರು ನಾದಸ್ವರ ಕಚೇರಿ, ಸಂಗೀತ ಕಾರ್ಯಕ್ರಮದಲ್ಲಿ ಗಾಯನ ವಿಭಾಗದಲ್ಲಿ ಸಂಗೀತ ವಿದ್ವಾನ್ ಮಂಜುಳಾ ಜಗದೀಶ್, ವಿದ್ವಾನ್ ಶಾಂತ ಕೃಷ್ಣಮೂರ್ತಿ, ಸವಿತಾ ಸುಬ್ರಹ್ಮಣ್ಯಂ, ಹೇಮಾ ಬಾಲಾಜಿ, ಪಾರ್ವತಮ್ಮ ಬಸವರಾಜ್, ಸೌಭಾಗ್ಯ ಲಕ್ಷ್ಮಿ, ರೇಖಾ, ಉಷಾ ನಾರಾಯಣ, ನಳಿನ ಯತೀಶ್, ವೀಣಾ, ಶಾಂತಲಾ ಅರಸ್ ಗಾಯನ ಮಾಡಿದರು. ಚಿಂತಾಮಣಿ ಪದ್ಮರವರ ಶಿಷ್ಯ ವೃದ್ದದಿಂದ ಹಾಡುಗಾರಿಕೆ ನಡೆಯಿತು. ಆರ್.ಜಗದೀಶ್‌ಕುಮಾರ್ ಹಾಗೂ ಜೆ.ನವೀನ್ ಕುಮಾರ್ ಪಿಟೀಲ್ ನುಡಿಸಿದರು. ವಿ.ಪಿ ರಘುನಾಥರಾವ್ ಮತ್ತು ಲಕ್ಷ್ಮೀನಾರಾಯಣ್, ವಿನಯ್ ಕುಮಾರ್ ರವರು ಮೃದಂಗ ನುಡಿಸಿದರು.
ಮಂಜುಳಾ ಜಗದೀಶ್ ರವರ ನೇತೃತ್ವದಲ್ಲಿ ಆಹ್ವಾನಿತ ಕಲಾವಿದರಿಂದ ಪಂಚರತ್ನ ಕೀರ್ತನೆಗಳ ಕವಿ ಗೋಷ್ಟಿ ಗಾಯನ ನಡೆಯಿತು.
ಶ್ರೀ ಮಾರುತಿ ಸಂಗೀತ ಪಾಠಶಾಲೆ ವಿದ್ಯಾರ್ಥಿಗಳಿಂದ ಹಾಡುಗಾರಿಕೆ ನಡೆಯಿತು. ನಾದ ಚಿಂತಾಮಣಿ ವಿದ್ವಾನ್ ಆರ್.ಜಗದೀಶ್ ಕುಮಾರ್ ಪಿಟೀಲ್ ಸೋಲೋವಾದನ ಹಾಗೂ ಚಿಂತಾಮಣಿ ವಿಶ್ವನಾಥ್ ಸೋಲೋವಾದ ನುಡಿಸಿದರು.
ಮಾರುತಿ ಸಂಗೀತ ಅಕಾಡೆಮಿ ವತಿಯಿಂದ ಸಾಧಕರಾದ ಚಿಂತಾಮಣಿ ತಾಲ್ಲೂಕು ಕೊರ್ಲಹಳ್ಳಿ ವಿದ್ವಾನ್ ವೆಂಕಟರಾಯಪ್ಪ ಅವರನ್ನು ಸನ್ಮಾನ ಮಾಡಲಾಯಿತು.
ಶ್ರೀ ಕಾಳಿಕಾಂಬ ಭಜನಾ ಮಂಡಳಿ ಸದಸ್ಯರಾದ ಬಿ.ಕೆ.ವಿಜಯಲಕ್ಷ್ಮಿ, ರಾಗಿಣಿದೇವಿ, ತುಳಿಸಮ್ಮ, ಅನಿತ, ಮುಕ್ತಾಂಬ, ಭಾರತಿ, ಮಾರುತಿ ಸಂಗೀತ ಅಕಾಡೆಮಿ ಅಧ್ಯಕ್ಷ ಆರ್.ಜಗದೀಶ್ ಕುಮಾರ್, ಶ್ರೀ ಕಾಳಿಕಾಂಬ ಕಮ್ಮಠೇಶ್ವರಸ್ವಾಮಿ ದೇವಾಲಯದ ಟ್ರಸ್ಟ್ ಅಧ್ಯಕ್ಷ ಮುನಿರತ್ನಾಚಾರಿ, ಶ್ರೀನಿವಾಸ್, ಬಿ.ಎಸ್.ಕೃಷ್ಣಮೂರ್ತಿ, ಕೃಷ್ಣಾಚಾರಿ, ಅಮರನಾರಾಯಣಾಚಾರಿ, ಮಾರುತಿ ಸಂಗೀತ ಅಕಾಡೆಮಿ ವಿದ್ಯಾರ್ಥಿಗಳು, ಕಲಾವಿದರು ಹಾಜರಿದ್ದರು.