Kothanur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಪುರಾಣ ಪ್ರಸಿದ್ಧ ಶಿವಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಎರಡು ದಿನಗಳ ವೈಭವದ ಗಿರಿಜಾ ಕಲ್ಯಾಣೋತ್ಸವ ಹಾಗೂ ಕುಂಬಾಭಿಷೇಕ ಮಹೋತ್ಸವವನ್ನು ಆಯೋಜಿಸಲಾಗಿತ್ತು.
ಕುಂತಿಮಾತೆ ಪ್ರತಿಷ್ಠಾಪನೆ ಮಾಡಿರುವ ಶಿವಲಿಂಗ ಎಂಬ ಐತಿಹ್ಯವಿರುವ ಈ ದೇವಾಲಯದಲ್ಲಿ 2002 ರಲ್ಲಿ ಜೀರ್ಣೋದ್ಧಾರವಾಗಿತ್ತು. ಬುಧವಾರ ಮತ್ತು ಗುರುವಾರ ಶಿವಲಿಂಗೇಶ್ವರ ಸ್ವಾಮಿಗೆ ಎರಡು ದಿನಗಳ ಕಾಲ ವೈಭವದ ಶ್ರೀ ಗಿರಿಜಾ ಕಲ್ಯಾಣೋತ್ಸವ ಹಾಗೂ ಮಹಾ ಕುಂಬಾಭಿಷೇಕ, ಮಹಾ ರುದ್ರಾಭಿಷೇಕ ಸುಮಂಗಲಿಯರಿಂದ ಪೂರ್ಣ ಕುಂಭಗಳ ಸಮೇತ ಗ್ರಾಮ ಪ್ರದಕ್ಷಿಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಕಲಾ ಜ್ಯೋತಿ ಜಾನಪದ ಕಲಾ ಸಂಸ್ಥೆಯಿಂದ ವೀರಗಾಸೆ ಕಲಾವೈಭವ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಗಂಗಾಧರ್ ತಂಡದವರಿಂದ ವೀರಾಗಾಸೆಯೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ನಂತರ ಮಹಾ ಕುಂಭಾಭಿಷೇಕ ಪೂಜೆ ನೆರವೇರಿಸಲಾಯಿತು.
ಪ್ರಧಾನ ಅರ್ಚಕ ಬಸವರಾಜ್, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದ್ ಗೌಡ, ಮಾಜಿ ಶಾಸಕ ಎಂ ರಾಜಣ್ಣ, ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಪುಟ್ಟು ಆಂಜಿನಪ್ಪ, ಸೇವಾಕರ್ತರಾದ ಕೆ.ಎಂ. ರಾಮಯ್ಯ ರತ್ನಮ್ಮ, ಕೆ.ಆರ್. ರವಿಚಂದ್ರ, ಮುರಳಿ, ಜೀವನ್, ಶಂಕರ್, ಮನೋಜ್, ರಾಕೇಶ್, ವಿನೋದ್, ಗೌರಿ, ಪ್ರಣವ್, ಶಶಿಕುಮಾರ್, ಸುಪ್ರೀತ್ ಹಾಗೂ ಅರ್ಚಕರಾದ ಬಸವರಾಜ್, ಗಂಗಾಧರ್, ನಂಜುಂಡಪ್ಪ, ಮೂರ್ತಿ, ವಿಜಯ ಪ್ರಕಾಶ್, ಮಹೇಶ್ ಮತ್ತು ವೀರಭದ್ರಯ್ಯ ಹಾಜರಿದ್ದರು.