Melur, sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ಶ್ರೀ ಉಮಾ ಮಹೇಶ್ವರಸ್ವಾಮಿ, ಭದ್ರಕಾಳಿ ಸಮೇತ ಶ್ರೀ ವೀರಭದ್ರಸ್ವಾಮಿ ದೇವಾಲಯದ ಶ್ರೀ ಉಮಾ ಮಹೇಶ್ವರಸ್ವಾಮಿ ದೇವರ ವರ್ಧಂತಿ ಉತ್ಸವ ಹಾಗೂ ಗಿರಿಜಾ ಕಲ್ಯಾಣ ಮಹೋತ್ಸವ ಕಾರ್ಯಕ್ರಮ ಶುಕ್ರವಾರ ಶ್ರದ್ಧಾ ಭಕ್ತಿಯಿಂದ ನಡೆಯಿತು.
ಮೇಲೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಭಕ್ತಾದಿಗಳು ಬಂದು ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿ ದೇವರ ಕೃಪೆಗೆ ಪಾತ್ರರಾದರು.
ಗಿರಿಜಾ ಕಲ್ಯಾಣ ಮಹೋತ್ಸವ ಅಂಗವಾಗಿ ಗುರುವಾರದಿಂದಲೇ ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರಿತು. ಗುರವಾರ ಶ್ರೀ ಮಹಾಗಣಪತಿ ಪ್ರಾರ್ಥನೆ, ಮಹಾಗಣಪತಿ ಪೂಜೆ, ವಾಸ್ತು ಪ್ರಾರ್ಥನೆ, ಪಾಲ ಪ್ರಾರ್ಥನ, ಗಂಗಾಯಮುನಾ ಪೂಜೆ, ಮಹಾಕುಂಭ ಆಗಮನ, ವರುಣ ಪೂಜೆ, ಪುಣ್ಯಾಹ ಶುದ್ದಿ ಕರ್ಮ, ಋತ್ವಿಕವರ್ಣನೆ, ಕಲಶ ಪೂಜೆ, ಭೂದೇವತಾ ಪೂಜೆ, ಪ್ರಾರ್ಥನೆ, ಮರ್ತಿಕಾ, ಸಂಗ್ರಹಣ ದೇವ ನಾಂದಿ, ಕಂಕಣ ಧಾರಣೆ, ಮಧಪರ್ಕ ಶುದ್ದಿ ಹೋಮ, ದ್ವಜಾರೋಹಣ ಸೇರಿದಂತೆ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.
ಶುಕ್ರವಾರ ಅರ್ಚಕರಾದ ಶ್ಯಾಮಸುಂದರ್ ಎಂ. ಭಗವಾತ್ ಗೋಕರ್ಣ ಹಾಗೂ ಸಂಗಡಿಗರಿಂದ ಮಹಾಗಣಪತಿ ಪೂಜೆ, ದೇವತಾ ಪ್ರಾರ್ಥನೆ, ನವಗ್ರಹ ದೇವತಾ ಆರಾಧನೆ, ಪ್ರಾಣ ಪ್ರತಿಷ್ಠಾ ಹವನ ಮಹಾಗಣಪತಿ, ಶ್ರೀ ದೇವರ ಮೂಲ ಮಂತ್ರ ಹೋಮ, ಫಲಪಂಚಾಮೃತ ಅಭಿಷೇಕ, ಬ್ರಹ್ಮ ಕಲಶಾಭಿಷೇಕ, ಶ್ರೀ ಗಿರಿಜಾ ಕಲ್ಯಾಣ ನಡೆಯಿತು.
ಕಾರ್ಯಕ್ರಮ ನಡೆದ ಎರಡು ದಿನ ಗ್ರಾಮದಲ್ಲಿ ಹಬ್ಬದ ವಾತಾವರಣ ಇತ್ತು. ಮಹಿಳೆಯರು ಮನೆಗಳ ಮುಂದೆ ಸಾರಿಸಿ ರಂಗೋಲಿ ಹಾಕಿ ಪರಮಾತ್ಮನಿಗೆ ಕಳಶ ಹೊತ್ತು ತಂದಿರುವುದು ವಿಶೇಷವಾಗಿತ್ತು. ತೀರ್ಥ ಪ್ರಸಾದ ವಿನಿಯೋಗ ನೆರವೇರಿಸಲಾಯಿತು. ಭಕ್ತಾದಿಗಳಿಗಾಗಿ ಅನ್ನ ಸಂತರ್ಪಣೆ ಸೇವೆ ಆಯೋಜಿಸಲಾಗಿತ್ತು.
ಗ್ರಾ.ಪಂ ಸದಸ್ಯ ಆರ್.ಎ.ಉಮೇಶ್, ಮುಖಂಡರಾದ ರಾಮಕೃಷ್ಣಪ್ಪ, ಎಸ್.ಆರ್.ಶ್ರೀನಿವಾಸಮೂರ್ತಿ, ನಾಗರಾಜ್, ನಂಜುಂಡಮೂರ್ತಿ, ಶಿವಕುಮಾರ್, ರಮೇಶ್, ಡ್ರಿಮರ್ಸ ಮಂಜುನಾಥ್, ಆರ್.ಬಿ.ಜಯದೇವ, ಸುದರ್ಶನ್, ಮಲ್ಲಿಕಾರ್ಜುನ್, ಬದ್ರಿನಾಥ್, ಎನ್.ಎಲ್.ಎನ್.ಮೂರ್ತಿ, ರೂಪೇಶ್. ಸುಧೀರ್, ನಂದನ್, ಮುನೇಗೌಡ ಸೇರಿದಂತೆ ಗ್ರಾಮದ ಗಣ್ಯರು ಪಾಲ್ಗೊಂಡಿದ್ದರು.








