ಶಿಡ್ಲಘಟ್ಟದಲ್ಲಿ ಸಂಚಾರಿ ಆರೋಗ್ಯ ಫಟಕ ಸೇವೆ ಪ್ರಾರಂಭ

0
12
Sidlaghatta Mobile Medical Van Inauguration

Sidlaghatta : ಗ್ರಾಮೀಣ ಹಾಗೂ ನಗರ ಭಾಗದ ಕಾರ್ಮಿಕರು ಹಾಗೂ ಜನಸಾಮಾನ್ಯರಿಗೆ ಸುಲಭ ಮತ್ತು ಉಚಿತ ವೈದ್ಯಕೀಯ ತಪಾಸಣೆ ಹಾಗೂ ಔಷಧೋಪಚಾರವನ್ನು ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಂಚಾರಿ ಆರೋಗ್ಯ ಫಟಕ ಸೇವೆಯನ್ನು ಶಿಡ್ಲಘಟ್ಟದಲ್ಲಿ ಆರಂಭಿಸಿದೆ.

ನಗರದ ಪ್ಯಾರಾಗಾನ್ ಶಾಲೆಯ ಬಳಿ ಇರುವ ರಸ್ತೆಯಲ್ಲಿ ಈ ತಾತ್ಕಾಲಿಕ ಆರೋಗ್ಯ ಘಟಕವನ್ನು ಸ್ಥಾಪಿಸಲಾಗಿದ್ದು, ಶಿಡ್ಲಘಟ್ಟ ಸೇರಿದಂತೆ ಹತ್ತಿರದ ಹಳ್ಳಿಗಳ ಜನತೆ ಇದರಿಂದ ಬಹಳಷ್ಟು ಲಾಭ ಪಡೆಯುತ್ತಿದ್ದಾರೆ. ಕಾರ್ಮಿಕರ ಕಾರ್ಡ್ ಹಾಗೂ ಇ ಶ್ರಮ ಕಾರ್ಡ್ ಹೊಂದಿರುವವರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ತಾಲ್ಲೂಕಿನಲ್ಲಿ ವಾರಕ್ಕೆ ಒಮ್ಮೆ ಈ ಸಂಚಾರಿ ಘಟಕವನ್ನು ನಗರ ಮತ್ತು ಹಳ್ಳಿಗಳಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸಲಾಗುತ್ತಿದ್ದು, ಗ್ರಾಮೀಣ ಆಸ್ಪತ್ರೆಗಳ ಕೊರತೆಯನ್ನು ಭರಿಸಲು ಇದು ಸಹಕಾರಿಯಾಗಿದೆ. ರಕ್ತದೊತ್ತಡ, ಸಕ್ಕರೆ ಖಾಯಿಲೆ ತಪಾಸಣೆ, ತುರ್ತು ಚಿಕಿತ್ಸೆ, ಮಕ್ಕಳ ಹಾಗೂ ಮಹಿಳಾ ಆರೋಗ್ಯ ತಪಾಸಣೆ ಸೇರಿದಂತೆ ವಿವಿಧ ವೈದ್ಯಕೀಯ ಸೇವೆಗಳು ತಜ್ಞ ವೈದ್ಯರು ಹಾಗೂ ಪೆರಾಮೆಡಿಕಲ್ ಸಿಬ್ಬಂದಿಯಿಂದ ನೀಡಲಾಗುತ್ತಿದೆ.

ಶಿಡ್ಲಘಟ್ಟ ತಾಲ್ಲೂಕು ಮರಗೆಲಸ ಕಾರ್ಮಿಕ ಸಂಘದ ಅಧ್ಯಕ್ಷ ಪ್ರದೀಪ್ ದೀಪು ಮಾತನಾಡಿ, ಗ್ರಾಮೀಣ ಮತ್ತು ನಗರ ಭಾಗದ ಕಾರ್ಮಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಸರ್ಕಾರ ಕಟಿಬದ್ಧವಾಗಿದೆ. ಈ ಯೋಜನೆಯ ಮೂಲಕ ಆರೋಗ್ಯ ವ್ಯವಸ್ಥೆಯ ಸುಧಾರಣೆಯೇ ಮೂಲ ಉದ್ದೇಶ ಎಂದು ಹೇಳಿದರು.

ಸ್ಥಳೀಯರು ಆರೋಗ್ಯ ಇಲಾಖೆಯ ಈ ನೂತನ ಪ್ರಯತ್ನಕ್ಕೆ ಹರ್ಷ ವ್ಯಕ್ತಪಡಿಸುತ್ತಿದ್ದು, ಸೇವೆಯನ್ನು ವ್ಯಾಪಕವಾಗಿ ಸ್ವಾಗತಿಸಿದ್ದಾರೆ.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!