ಶಿಡ್ಲಘಟ್ಟ ಉಪ ವಿದ್ಯುತ್ ಕೇಂದ್ರದಲ್ಲಿ ವಿವಿಧ ಮಾರ್ಗಗಳ ಬದಲಾವಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ 66/11 ಕೆ.ವಿ ಶಿಡ್ಲಘಟ್ಟ ಉಪ ವಿದ್ಯುತ್ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಶಿಡ್ಲಘಟ್ಟ ನಗರ, ಇದ್ಲೂಡು, ಅಬ್ಲೂಡು, ಆನೂರು, ತಿಪ್ಪೇನಹಳ್ಳಿ, ಹನುಮಂತಪುರ, ಲಕ್ಕೇನಹಳ್ಳಿ, ಹಂಡಿಗನಾಳ, ತುಮ್ಮನಹಳ್ಳಿ, ಗುಡಿಹಳ್ಳಿ, ಭೈರನಾಯಕನಹಳ್ಳಿ, ಚೌಡಸಂದ್ರ, ಕೇಶವಾಪುರ, ಅಪ್ಪೇಗೌಡನಹಳ್ಳಿ ಗೇಟ್, ಹಿತ್ತಲಹಳ್ಳಿ, ಬೆಳ್ಳೂಟಿ, ಬೋದಗೂರು, ಮಳಮಾಚನಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಮಾರ್ಚ್ 10 ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುವುದರಿಂದ ಗ್ರಾಹಕರು ಸಹಕರಿಸಬೇಕೆಂದು ಬೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸೈಯದ್ ರೆಹಮಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -
- Advertisement -