S Devaganahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿ ಎಸ್.ದೇವಗಾನಹಳ್ಳಿ ಶ್ರೀಲಕ್ಷ್ಮಿ ವೆಂಕಟೇಶ್ವರಸ್ವಾಮಿ ಎಜುಕೇಷನಲ್ ಟ್ರಸ್ಟ್ ಹಾಗೂ ಶ್ರೀ ಅಂಭ ಕನಕ ದುರ್ಗಾದೇವಿ ದೇವಾಲಯ ಸೇವಾ ಸಮಿತಿ ಸಂಯುಕ್ತಾಶ್ರಯದಲ್ಲಿ ಈಚೆಗೆ ಎಸ್.ದೇವಗಾನಹಳ್ಳಿ ಶ್ರೀ ಅಂಭ ಕನಕ ದುರ್ಗಾದೇವಿ ದೇವಾಲಯ ಆವರಣದಲ್ಲಿ ಅಂಬಾರಿ ದಸರಾ ಉತ್ಸವ – 2023 ಆಯೋಜಿಸಲಾಗಿತ್ತು.
ಎಸ್.ದೇವಗಾನಹಳ್ಳಿಯ ಪ್ರಮುಖ ಬೀದಿಗಳಲ್ಲಿ ಶ್ರೀ ದುರ್ಗಾದೇವಿ (ಚಾಮುಂಡಿ) ಉತ್ಸವ ಮೂರ್ತಿಯನ್ನು ಮುತ್ತಿನ ಪಲ್ಲಕ್ಕಿಯಲ್ಲಿಟ್ಟು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಮೆರವಣಿಗೆಯಲ್ಲಿ ಪೇರೆಸಂದ್ರ ಪ್ರಕೃತಿ ಡೊಳ್ಳು ಕುಣಿತ ಹಾಗೂ ದುರ್ಗಾ ಪರಮೇಶ್ವರಿ ತಮಟೆ ತಂಡದ ವಾದ್ಯಗೋಷ್ಠಿ ಆಕರ್ಷಣೀಯವಾಗಿತ್ತು. ದೇವಿಗೆ ಮಹಾಮಂಗಳಾರತಿ ಮತ್ತು ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಎಸ್.ದೇವಗಾನಹಳ್ಳಿ ದುರ್ಗಾ ಪರಮೇಶ್ವರಿ ಎಂ.ಶಿವಪ್ಪ ತಮಟೆ ತಂಡದವರಿಂದ ತಮಟೆ ವಾದ್ಯಗೋಷ್ಠಿಯನ್ನು ಏರ್ಪಡಿಸಲಾಗಿತ್ತು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಡಿ. ವಿ. ಓಬಳಪ್ಪ, ಶ್ರೀಲಕ್ಷ್ಮಿ ವೆಂಕಟೇಶ್ವರಸ್ವಾಮಿ ಎಜುಕೇಷನಲ್ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ಡಿ.ವಿ.ಪ್ರಸಾದ್, ಸುನಂದಮ್ಮ ವಿಜಯಕುಮಾರ, ಪ್ರಕೃತಿ ಪದವಿ ಪೂರ್ವ ಕಾಲೇಜು ಆಡಳಿತಧಿಕಾರಿ ಡಾ. ಶ್ರೀನಿವಾಸ್, ಉಪನ್ಯಾಸಕ ಸುದರ್ಶನ್, ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಎಜುಕೇಷನಲ್ ಟ್ರಸ್ಟ್ ನ ಅಧ್ಯಕ್ಷೆ ಪಿ.ಎನ್.ಅಂಬಿಕ, ಎಂ. ಶಿವಪ್ಪ, ಸೋಮಶೇಖರ್, ರಾಮಸಮುದ್ರ ಕೆರೆ ಸಂಘದ ಸದಸ್ಯ ಡಿ. ವಿ.ಶ್ರೀನಿವಾಸ, ಗಣೇಶಪ್ಪ, ನರಸಿಂಹಪ್ಪ, ಗಂಗಾಧರ, ಮಾದೇವಿ, ಲಕ್ಷ್ಮಿ, ಕದಿರೇಶ್ವರಿ, ರಾಜು, ಭೀಮಪ್ಪ ಹಾಜರಿದ್ದರು.