Home News ವಿಶೇಷಚೇತನ ಮಕ್ಕಳಿಗಾಗಿ ಉಚಿತ ಆರೋಗ್ಯ ತಪಾಸಣೆ, ಮೌಲ್ಯಾಂಕನ ಶಿಬಿರ

ವಿಶೇಷಚೇತನ ಮಕ್ಕಳಿಗಾಗಿ ಉಚಿತ ಆರೋಗ್ಯ ತಪಾಸಣೆ, ಮೌಲ್ಯಾಂಕನ ಶಿಬಿರ

0
Sidlaghatta Specially abled Free Health camp

Sidlaghatta, chikkaballapur : ಶಿಡ್ಲಘಟ್ಟ ನಗರದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಪಿಎಬಿ ಅನುಮೋದಿತ ಸಮನ್ವಯ ಶಿಕ್ಷಣ ಕಾರ್ಯಕ್ರಮ ಮಧ್ಯವರ್ತನೆಯ ಚಟುವಟಿಕೆಗಳಡಿಯಲ್ಲಿ ಶಾಲಾ ಶಿಕ್ಷಣ ಇಲಾಖೆ, ಅಲ್ಮಿಕೋ ಸಂಸ್ಥೆ, ವಿಶೇಷಚೇತನ ಮಕ್ಕಳ ಚಂದನವನ ಇಕೋಕ್ಲಬ್‌ ಗಳ ಆಶ್ರಯದಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪೂರ್ವಪ್ರಾಥಮಿಕದಿಂದ 10 ನೇ ತರಗತಿಯವರೆಗೆ ಕಲಿಯುತ್ತಿರುವ ವಿಶೇಷಚೇತನ ಮಕ್ಕಳಿಗಾಗಿ ಉಚಿತ ವೈದ್ಯಕೀಯ ತಪಾಸಣೆ, ಮೌಲ್ಯಾಂಕನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಕ್ಷೇತ್ರಶಿಕ್ಷಣಾಧಿಕಾರಿ ಸಿ.ಎ.ನರೇಂದ್ರಕುಮಾರ್ ಮಾತನಾಡಿ, ತಾಲ್ಲೂಕಿನ ಎಲ್ಲಾ ಶಾಲೆಗಳಲ್ಲಿ ಕಲಿಯುತ್ತಿರುವ ವಿಶೇಷಚೇತನ ಮಕ್ಕಳಿಗಾಗಿ ಇಲಾಖೆಯು ಸಾಕಷ್ಟು ಸವಲತ್ತುಗಳನ್ನು ಒದಗಿಸುತ್ತಿದ್ದು ಆರೋಗ್ಯ ತಪಾಸಣೆಯ ಮೂಲಕ ಕೊರತೆಗಳನ್ನು ಗುರ್ತಿಸಿ ಅಗತ್ಯ ಸೌಲಭ್ಯಗಳನ್ನು, ಪರಿಕರಗಳನ್ನು ಒದಗಿಸಲಾಗುತ್ತಿದೆ. ಸಾಮಾನ್ಯ ಶಿಕ್ಷಣದಡಿಯಲ್ಲಿಯೇ ವಿಶೇಷಚೇತನ ಮಕ್ಕಳನ್ನು ತೊಡಗಿಸಿಕೊಂಡು ಉತ್ತಮ ಶಿಕ್ಷಣ ಕೊಡಿಸಲಾಗುತ್ತಿದೆ. ಹೋಬಳಿವಾರು ಕೇಂದ್ರಗಳನ್ನು ಸ್ಥಾಪಿಸಿ ತಾಲ್ಲೂಕಿನಲ್ಲಿ ವಿಶೇಷಚೇತನ ಮಕ್ಕಳಿಗೆ ಫಿಸಿಯೋತೆರಪಿ, ಸ್ಪೀಚ್‌ ತೆರಪಿಯಂತಹ ಕಾರ್ಯಾಗಾರಗಳ ಮೂಲಕ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದರು.

ಕ್ಷೇತ್ರಸಮನ್ವಯಾಧಿಕಾರಿ ಕೆ.ಎಚ್.ಪ್ರಸನ್ನಕುಮಾರ್ ಮಾತನಾಡಿ, ವಿಶೇಷಚೇತನಮಕ್ಕಳಿಗೆ ಅನುಕಂಪ ತೋರುವುದಕ್ಕಿಂತ ಅವಕಾಶಗಳನ್ನು ಒದಗಿಸಿ ಅವರೂ ಸಾಮಾನ್ಯರಂತೆ ಬದುಕಲು ಪ್ರೇರಣೆ, ಪ್ರೋತ್ಸಾಹ ನೀಡಬೇಕಿದೆ ಎಂದರು.

ಬಿ.ಆರ್‌.ಸಿಯ ಸಂಪನ್ಮೂಲವ್ಯಕ್ತಿ ಬಿ.ಎಂ.ಜಗದೀಶ್‌ ಕುಮಾರ್ ಮಾತನಾಡಿ, ತಾಲ್ಲೂಕಿನಲ್ಲಿರುವ ಎಲ್ಲಾ ರೀತಿಯ ವಿಶೇಷಚೇತನರನ್ನು ಗುರ್ತಿಸಿ ಇಲಾಖೆಯಿಂದ ಬರುವ ಭತ್ಯೆ, ಸವಲತ್ತುಗಳನ್ನು ನೇರವಾಗಿ ಒದಗಿಸಲಾಗುತ್ತಿದೆ. ಅದರ ಜೊತೆಗೆ ವಿವಿಧ ಸಂಘಸಂಸ್ಥೆಗಳ ಮೂಲಕ ಅಂತಹ ಮಕ್ಕಳ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೆ ಪೂರಕವಾಗಿ ಸಮಾಲೋಚನೆ, ಕಾರ್ಯಾಗಾರ, ಶಿಬಿರ, ಕ್ರೀಡೆ, ಉಪಕರಣಗಳನ್ನು ಒದಗಿಸಲು ಯಶಸ್ವಿ ಪ್ರಯತ್ನ ನಡೆದಿದೆ ಎಂದರು.

ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ತಾಲ್ಲೂಕಿನ ವಿಶೇಷಚೇತನ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಯೋಗ, ಇಂಗ್ಲೀಷ್ ಸ್ಪೀಕಿಂಗ್ ಆನ್‌ಲೈನ್ ತರಗತಿಗಳನ್ನು ನಡೆಸುತ್ತಿದ್ದು, ಪ್ರಾಥಮಿಕದಿಂದ ಹಿಡಿದು ಉನ್ನತಶಿಕ್ಷಣದವರೆಗೆ ಎಲ್ಲಾ ರೀತಿಯ ಅಗತ್ಯ ಸೌಲಭ್ಯಗಳನ್ನು ವಿವಿಧ ಸಂಘಸಂಸ್ಥೆಗಳ ನೆರವಿನೊಂದಿಗೆ ಒದಗಿಸಿ ಯಶಸ್ವಿಯಾಗಿದ್ದು, ಮಕ್ಕಳ ಪೋಷಕರಲ್ಲಿ ಮಾನಸಿಕ ಸ್ಥೈರ್ಯತುಂಬಲು ಆಗಿಂದಾಗ್ಗೆ ಸಮಾಲೋಚನಾಶಿಬಿರಗಳನ್ನು ನಡೆಸುತ್ತಿರುವುದು ಪ್ರಶಂಸನೀಯವಾದುದು ಎಂದರು.

ಲೋಕೋಮೋಟಾರ್ ನ್ಯೂನತೆ, ಸೆರೆಬ್ರಲ್ ಪಾಲ್ಸಿ, ಪೂರ್ಣದೃಷ್ಟಿ ದೋಷ, ಭೌದ್ಧಿಕ ಅಸಮರ್ಥತೆ, ಶ್ರವಣದೋಷ, ಶ್ರವಣ ಮತ್ತು ಅಂಧತ್ವದೊಂದಿಗೆ ಬಹು ಅಂಗಾಂಗ ದೋಷವುಳ್ಳ ಸುಮಾರು 200 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ತಪಾಸಣೆ ಮಾಡಿ ಅಗತ್ಯ ಸವಲತ್ತುಗಳನ್ನು ವಿತರಿಸಲಾಯಿತು.

ಬಿ.ಆರ್‌.ಪಿ ಕೆ.ಮಂಜುನಾಥ್, ರಾಧಾ, ಚಂದ್ರಕಲಾ, ವೇಣುಮಾಧವಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶ್‌ ಮೂರ್ತಿ, ಶಿರಸ್ತೇದಾರ್ ಮಂಜುನಾಥ್, ನಗರಸಭಾ ಪರಿಸರ ಎಂಜಿನಿಯರ್ ಮೋಹನ್‌ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸರಸ್ವತಮ್ಮ, ಸುಂದರಾಚಾರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿದ್ಯಾ ವಸ್ತ್ರದ, ಆಪ್ತ ಸಮಾಲೋಚಕರಾದ ಡಾ.ಸುವರ್ಣ, ಡಾ.ರಾಜೇಶ್ವರಿ, ಡಾ.ಪೂರ್ಣಿಮಾ, ಡಾ.ಕೆ.ಲಕ್ಷ್ಮಣಗೌಡ, ಆಡಿಯಾಲಜಿಸ್ಟ್ ಡಾ.ಅಭಿಲಾಷ್, ಡಾ. ಮೋಹನ್‌ಕುಮಾರ್, ಡಿ.ಡಿ.ಆರ್‌.ಸಿ ನೋಡಲ್ ಅಧಿಕಾರಿ ಡಾ.ಗಣೇಶ್, ಡಿ.ಡಿ.ಆರ್‌.ಸಿಯ ಡಾ.ರಾಜೇಶ್ವರಿ, ಮನೋರೋಗ ತಜ್ಞರಾದ ಡಾ.ಹೇಮಂತ್, ಅನಿಲ್, ಅಲಮಿಕೋ ಸಂಸ್ಥೆಯ ಪ್ರತೀಕ್ಷ, ಡಾ.ಭಾವನಾ, ಎಂ.ಆರ್‌.ಡಬ್ಲ್ಯೂ ರಾಮಚಂದ್ರ ಹಾಜರಿದ್ದರು

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version