Sidlaghatta : ಶಿಡ್ಲಘಟ್ಟ ನಗರದ ಶಂಕರಮಠ ರಸ್ತೆಯಲ್ಲಿರುವ ಶ್ರೀ ಆದಿಶಂಕರ ಸಭಾ ಭವನ ಲೋಕಾರ್ಪಣಾ ಸಮಾರಂಭಕ್ಕೆ ಶುಕ್ರವಾರ ಆಗಮಿಸಿದ ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯ ಶೋಭಾಯಾತ್ರೆಯನ್ನು ನಗರದ ಕೋಟೆ ವೃತ್ತದಿಂದ ಶಂಕರಮಠದವರೆಗೂ ಆಯೋಜಿಸಲಾಗಿತ್ತು.
ಶ್ರೀ ಶೃಂಗೇರಿ ಶಂಕರಮಠ ಅಭಿವೃದ್ಧಿ ಮತ್ತು ಸೇವಾ ಟ್ರಸ್ಟ್ ಮತ್ತು ತಾಲ್ಲೂಕು ಬ್ರಾಹ್ಮಣ ಮಹಾ ಸಭಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರು ಶ್ರೀ ಆದಿಶಂಕರ ಸಭಾ ಭವನವನ್ನು ಲೋಕಾರ್ಪಣೆ ಮಾಡಿದರು.
ಧೂಳಿ ಪಾದಪೂಜೆ, ಟ್ರಸ್ಟ್ ವತಿಯಿಂದ ಫಲ ಸಮರ್ಪಣೆ, ಅನುಗ್ರಹ ಭಾಷಣ, ಶ್ರೀ ಶಾರದಾ ಚಂದ್ರಮೌಳೇಶ್ವರಸ್ವಾಮಿ ಪೂಜಾ ಕಾರ್ಯಕ್ರಮ ನಡೆಯಿತು.