Sidlaghatta : ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಶಿಡ್ಲಘಟ್ಟ ಕಚೇರಿಯಲ್ಲಿ ನಿರೀಕ್ಷಕರು ಕೆಲಸದ ಸಮಯದಲ್ಲಿ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ಮತ್ತು ನ್ಯಾಯಬೆಲೆ ಅಂಗಡಿಗಳ ಕೆಲ ಮಾಲೀಕರು ಹುಟ್ಟು ಹಬ್ಬವನ್ನು ಆಚರಿಸಿಕೊಂಡು ಸಂಭ್ರಮಿಸುತ್ತಿರುವ ಫೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ತಹಸೀಲ್ಧಾರ್ ಬಿ.ಎನ್.ಸ್ವಾಮಿ ಅವರು ಆಹಾರ ನಾಗರೀಕ ಪೂರೈಕೆ ಶಿರಸ್ತೇದಾರ್ ಧನಲಕ್ಷ್ಮಿ ರನ್ನು ಕರೆಸಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಕಚೇರಿಯಲ್ಲಿ ಕೆಲಸದ ವೇಳೆ ಯಾರೇ ಆಗಲಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವಂತಿಲ್ಲ. ನಿಮ್ಮ ಕಚೇರಿಯಲ್ಲಿ ಕೆಲಸದ ವೇಳೆ ಆಗುವ ಇಂತಹ ಎಲ್ಲ ಚಟುವಟಿಕೆ, ಘಟನೆಗಳಿಗೆ ನೀವೆ ಹೊಣೆ ಆಗಲಿದ್ದು ಘಟನೆ ಕುರಿತು ಲಿಖಿತ ಸಮಜಾಯಿಷಿ ನೀಡಿ ಎಂದು ಸೂಚಿಸಿದ್ದಾರೆ.
ಶಿಡ್ಲಘಟ್ಟ ತಾಲೂಕು ಕಚೇರಿಯಲ್ಲಿಂದು ವಿವಿಧ ಶಾಖೆಗಳ ಸಿಬ್ಬಂದಿಯ ಹುಟ್ಟು ಹಬ್ಬವನ್ನು ಕಚೇರಿ ಸಮಯದಲ್ಲಿ ಆಚರಣೆ ಮಾಡಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.